Business News

ಯಾವುದೇ ಬ್ಯಾಂಕ್ ಅಕೌಂಟ್ ಇದ್ದು ಈ ರೂಲ್ಸ್ ಫಾಲೋ ಮಾಡಿಲ್ಲ ಅಂದ್ರೆ ನಿಮ್ಮ ಅಕೌಂಟ್ ಬಂದ್ ಆಗುತ್ತೆ!

ಈಗಿನ ಕಾಲದಲ್ಲಿ ಭಾರತ ಡಿಜಿಟಲ್ ಇಂಡಿಯಾ ಆಗುತ್ತಿರುವ ಕಾರಣ ಹೆಚ್ಚಿನ ಜನರು ಬ್ಯಾಂಕ್ ಅಕೌಂಟ್ ಹೊಂದಿದ್ದಾರೆ. ಯುಪಿಐ ಪೇಮೆಂಟ್ ಗಳು ಜಾಸ್ತಿ ಆಗುತ್ತಿದ್ದು, ಹೆಚ್ಚಿನ ಜನರು ಗೂಗಲ್ ಪೇ, ಫೋನ್ ಪೇ ಬಳಕೆ ಮಾಡುತ್ತಾ ಇದ್ದರೂ ಸಹ ಬ್ಯಾಂಕ್ ಅಕೌಂಟ್ ವ್ಯವಹಾರ ನೇರವಾಗಿ ಬ್ಯಾಂಕ್ ವ್ಯವಹಾರ ಮಾಡುವುದು ಕೂಡ ಅಷ್ಟೇ ಮುಖ್ಯ ಆಗಿರುತ್ತದೆ. ಬ್ಯಾಂಕ್ ಅಕೌಂಟ್ ಇರುವವರು ಬ್ಯಾಂಕ್ ನ ಈ ಕೆಲವು ನಿಯಮಗಳನ್ನು ಪಾಲಿಸುವುದು ಈಗ ಕಡ್ಡಾಯ ಆಗಿದೆ, ಇಲ್ಲದಿದ್ದರೆ ಬ್ಯಾಂಕ್ ನಿಮ್ಮ ಖಾತೆಯನ್ನು ಕ್ಲೋಸ್ ಮಾಡಬಹುದು..

ಸ್ಕಾಲರ್ಶಿಪ್ ಪಡೆಯುವುದಕ್ಕೆ, ಯೋಜನೆಯ ಹಣ, ಲೋನ್ ಪಾವತಿ ಮಾಡುವುದಕ್ಕೆ ಹೀಗೆ ಹಲವು ಕಾರಣಗಳಿಗೆ ಜನರು ಬ್ಯಾಂಕ್ ಅಕೌಂಟ್ ಅನ್ನು ಬಳಕೆ ಮಾಡುತ್ತಾರೆ. ಒಂದು ಸಮಯದಲ್ಲಿ ಬ್ಯಾಂಕ್ ಅಕೌಂಟ್ ತೆರೆದು, ನಂತರ ಅದನ್ನು ನಿರ್ವಹಿಸದೇ ಹಾಗೆಯೇ ಬಿಟ್ಟುಬಿಡುತ್ತಾರೆ. ಆ ರೀತಿ ಮಾಡುವುದು ತಪ್ಪು. ಬ್ಯಾಂಕ್ ಅಕೌಂಟ್ ಶುರು ಮಾಡಿದ ಮೇಲೆ ಅದನ್ನು ನಿರ್ವಹಿಸುವುದು ಬಹಳ ಮುಖ್ಯ ಆಗುತ್ತದೆ. ಮಿನಿಮಮ್ ಬ್ಯಾಲೆನ್ಸ್ ನಿರ್ವಹಿಸುವುದು, ಅಕೌಂಟ್ ಆಕ್ಟಿವ್ ಆಗಿರುವ ಹಾಗೆ ನೋಡಿಕೊಳ್ಳುವುದು ಮುಖ್ಯ.

If you have any bank account and do not follow these rules, your account will be closed

ಅಕಸ್ಮಾತ್ ನಿಮ್ಮ ಕಾರಿಗೆ ಹಸು-ಎಮ್ಮೆ ಗುದ್ದಿದ್ರೆ ಇನ್ಶೂರೆನ್ಸ್ ಕ್ಲೈಮ್ ಆಗುತ್ತಾ? ದುಡ್ಡು ಬರುತ್ತಾ? ಇಲ್ಲಿದೆ ಮಾಹಿತಿ

ಬ್ಯಾಂಕ್ ನಿಯಮಗಳು ಹಾಗು RBI ನಿಯಮಗಳನ್ನು ನಾವು ಪಾಲಿಸದೇ ಹೋದರೆ, ಬ್ಯಾಂಕ್ ಗಳು ನಮ್ಮ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡುವ ಸಾಧ್ಯತೆಗಳು ಕೂಡ ಇರುತ್ತದೆ..ಹಾಗಾಗಿ ನಾವು ಬ್ಯಾಂಕ್ ಖಾತೆಗೆ ಸಂಬಂಧಿಸಿದ ಹಾಗೆ ಹುಷಾರಾಗಿ ಇರಬೇಕು. ಖಾತೆಗೆ ಸಂಬಂಧಿಸಿದ ಹಾಗೆ ಬ್ಯಾಂಕ್ ಇಂದ ಜಾರಿಯಾಗಿರುವ ನಿಯಮಗಳು ಯಾವುವು? ಅವುಗಳನ್ನು ಯಾಕೆ ಪಾಲನೆ ಮಾಡಬೇಕು? ಈ ಎಲ್ಲಾ ವಿಷಯಗಳ ಬಗ್ಗೆ ಇಂದು ಪೂರ್ತಿಯಾಗಿ ತಿಳಿದುಕೊಳ್ಳೋಣ..

ಬ್ಯಾಂಕ್ ರೂಲ್ಸ್ ಫಾಲೋ ಮಾಡಲೇಬೇಕು:

ಒಂದು ವೇಳೆ ನೀವು ಬ್ಯಾಂಕ್ ಇಂದ ಯಾವುದೇ ಥರದ ವೆಹಿಕಲ್ ಲೋನ್ (Vehicle Loan), ಹೋಮ್ ಲೋನ್ (Home Loan) ಯಾವುದನ್ನೇ ಪಡೆದುಕೊಂಡಿದ್ದರು ಸಹ, ಪ್ರತಿ ತಿಂಗಳು ಆ ಲೋನ್ ಗೆ ಇಎಂಐ ಡಿಡಕ್ಟ್ ಆಗುವಷ್ಟು ಮೊತ್ತವನ್ನು ಬ್ಯಾಂಕ್ ಅಕೌಂಟ್ ನಲ್ಲಿ (Bank Account) ಇಟ್ಟಿರಬೇಕು. ಇದು ಬ್ಯಾಂಕ್ ನ ಪ್ರಮುಖ ನಿಯಮ, ಅಗತ್ಯವಿರುವಷ್ಟು ಮೊತ್ತ ಅಕೌಂಟ್ ನಲ್ಲಿ ಇಲ್ಲ ಎಂದರೆ, ಆಗ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಕೂಡ ಇಳಿಕೆ ಆಗುತ್ತದೆ. ಹಾಗಾಗಿ ಬ್ಯಾಂಕ್ ಅಕೌಂಟ್ ನಲ್ಲಿ ಇರಬೇಕಾದಷ್ಟು ಹಣವನ್ನು ನಿರ್ವಹಿಸುವುದು ತುಂಬಾ ಮುಖ್ಯ ಆಗುತ್ತದೆ.

ನೀವು ಬ್ಯಾಂಕಿನಲ್ಲಿ ಇಟ್ಟ ನಿಮ್ಮ ಫಿಕ್ಸೆಡ್ ಹಣಕ್ಕೆ ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿ ಸಿಗುತ್ತೆ ನೋಡಿ!

ಮಿನಿಮಮ್ ಬ್ಯಾಲೆನ್ಸ್ ಮುಖ್ಯ:

ಎಲ್ಲಾ ಬ್ಯಾಂಕ್ ಗಳಲ್ಲಿ ಕೂಡ ಇಷ್ಟೇ ಮಿನಿಮಮ್ ಬ್ಯಾಲೆನ್ಸ್ (Bank Balance) ನಿರ್ವಹಿಸಬೇಕು ಎಂದು ಒಂದು ನಿಯಮವನ್ನು ಮಾಡಲಾಗಿರುತ್ತದೆ. ಅಷ್ಟು ಮಿನಿಮಮ್ ಬ್ಯಾಲೆನ್ಸ್ ಅನ್ನು ನಾವು ನಿರ್ವಹಿಸಲೇಬೇಕು. ಪಿಎಮ್ ಅವರಿಂದ ಜಾರಿಗೆ ಬಂದಿರುವ ಜನ್ ಧನ್ ಖಾತೆ ಹೊಂದಿರುವವರಿಗೆ ಮಾತ್ರ ಜೀರೋ ಬ್ಯಾಲೆನ್ಸ್ ಇದ್ದರು ಏನು ಆಗುವುದಿಲ್ಲ.

ಆದರೆ ಬ್ಯಾಂಕ್ ಗಳಲ್ಲಿ ಸಾಮಾನ್ಯ ಸೇವಿಂಗ್ಸ್ ಅಕೌಂಟ್ ಹೊಂದಿರುವವರು ಮಿನಿಮಮ್ ಬ್ಯಾಲೆನ್ಸ್ ನಿರ್ವಹಿಸುವುದು ಕಡ್ಡಾಯ. ಹಾಗೆಯೇ ನಿಮ್ಮ ಬಳಿ ಹೆಚ್ಚು ಹಣ ಇದ್ದರೆ, ಅದನ್ನು ಸೇವಿಂಗ್ಸ್ ಅಕೌಂಟ್ ನಲ್ಲಿ ಇಡುವುದಕ್ಕಿಂತ ಹೂಡಿಕೆ ಮಾಡಿ, ಒಳ್ಳೆಯ ಲಾಭ ಪಡೆಯುವುದು ಉತ್ತಮವಾದ ಆಯ್ಕೆ ಆಗಿರುತ್ತದೆ.

If you have any bank account and do not follow these rules, your account will be closed

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories