ಕೆಲವು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಎಲ್ಲರೂ ಕೂಡ LPG ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡುತ್ತಾ ಇರಲಿಲ್ಲ. ಸಾಮಾನ್ಯವಾಗಿ ಸಿಟಿಗಳಲ್ಲಿ ವಾಸ ಮಾಡುವ ಜನರು LPG ಗ್ಯಾಸ್ ಸಿಲಿಂಡರ್ ಬಳಕೆ ಮಾಡಿ ಅಡುಗೆ ಮಾಡುತ್ತಿದ್ದರು, ಆದರೆ ಹಳ್ಳಿಗಳಲ್ಲಿ ವಾಸ ಮಾಡುವ ಜನರು ಒಲೆಗಳಲ್ಲೇ ಅಡುಗೆ ಮಾಡುತ್ತಿದ್ದರು. ಒಲೆಯಿಂದ ಬರುವ ಹೊಗೆ ಇಂದ, ಆರೋಗ್ಯಕ್ಕೆ ಕೂಡ ಸಮಸ್ಯೆ ಆಗುತ್ತಿತ್ತು, ಈ ಕಾರಣಕ್ಕೆ ಜನರ ಹಿತಾಸಕ್ತಿಯನ್ನು ಕೂಡ ಗಮನದಲ್ಲಿ ಇಟ್ಟುಕೊಂಡು ಪಿಎಮ್ ನರೇಂದ್ರ ಮೋದಿ ಅವರು ಪಿಎಮ್ ಉಜ್ವಲಾ ಯೋಜನೆಯನ್ನು ಜಾರಿಗೆ ತಂದರು.
ಈ ಒಂದು ಯೋಜನೆಯನ್ನು ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೊದಲ ಸಾರಿ ಜಾರಿಗೆ ತರಲಾಯಿತು. ಉಜ್ಬಲಾ ಯೋಜನೆ ಮೊದಲ ಸಾರಿ ಜಾರಿಗೆ ಬಂದು, ಜನರು ಆ ಯೋಜನೆಯ ಸೌಲಭ್ಯ ಪಡೆಯಲು ಶುರುವಾದಾಗ, ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಸಿಗುವುದರ ಜೊತೆಗೆ ಕೇವಲ 300 ರೂಪಾಯಿಗೆ ಗ್ಯಾಸ್ ಸಿಪಿಂಡರ್ ಗಳನ್ನು ಕೊಡಲಾಗುತ್ತಿತ್ತು. ಈಗಾಗಲೇ ಕೋಟ್ಯಾಂತರ ಕುಟುಂಬಗಳು ಉಜ್ವಲಾ ಯೋಜನೆಯ ಮೂಲಕ ಗ್ಯಾಸ್ ಸಿಲಿಂಡರ್ ಗಳನ್ನು ಪಡೆದು, ಗ್ಯಾಸ್ ಕನೆಕ್ಷನ್ ಕೂಡ ಪಡೆದುಕೊಂಡಿದ್ದಾರೆ..
ದಿನಕ್ಕೆ ಕೇವಲ 7 ರೂಪಾಯಿ ಇನ್ವೆಸ್ಟ್ ಮಾಡಿದ್ರೆ ಪ್ರತಿ ತಿಂಗಳು ₹5000 ಸಿಗುವ ಸ್ಕೀಮ್ ಇದು!
ಇದೆಲ್ಲವೂ ಜನರಿಗೆ ಅನುಕೂಲ ಆಗಲಿ, ಕಡಿಮೆ ಖರ್ಚಿನಲ್ಲಿ ಅಡುಗೆ ಮಾಡುವುದರ ಜೊತೆಗೆ, ಅವರ ಆರೋಗ್ಯ ಕೂಡ ಚೆನ್ನಾಗಿರಲಿ ಎನ್ನುವುದು ಸರ್ಕಾರದ ಉದ್ದೇಶ ಆಗಿದೆ. ಈ ಯೋಜನೆಗೆ ಸಂಬಂಧಿಸಿದ ಹಾಗೆ ಹರಿಯಾಣ ರಾಜ್ಯ ಸರ್ಕಾರದ ಸಿಎಂ ಆಗಿರುವ ನಯೆಬ್ ಸೈನಿ ಅವರು ಹೊಸದೊಂದು ಘೋಷಣೆ ಮಾಡಿ, ಹರಿಯಾಣ ರಾಜ್ಯದ ಜನರಿಗೆ ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಅದೇನು ಎಂದು ನೋಡುವುದಾದರೆ..
ನಯೆಬ್ ಸೈನಿ ಅವರು ಹೇಳಿರುವ ಮಾತಿನ ಅನುಸಾರ, ಹರಿಯಾಣ ರಾಜ್ಯದ ಜನರಿಗೆ ಪಿಎಮ್ ಉಜ್ವಲಾ ಯೋಜನೆಯ ಅಡಿಯಲ್ಲಿ ಇನ್ನುಮುಂದೆ ₹500 ರೂಪಾಯಿಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಸಿಗುತ್ತದೆ ಎಂದು ತಿಳಿಸಿದ್ದಾರೆ. ಈ ಯೋಜನೆಯನ್ನು ಈ ವರ್ಷ ಅಂದರೆ 2024ರ ಮೇ 31ರಂದು ಮತ್ತೆ ಶುರು ಮಾಡಲಾಗಿದ್ದು, ಸಿಎಂ ಅವರ ಮಾತಿನ ಪ್ರಕಾರ ಜನರಿಗೆ 300 ರೂಪಾಯಿ ಸಬ್ಸಿಡಿ ಸಿಗಲಿದ್ದು, ಇದು ಸರ್ಕಾರದ ಕಡೆಯಿಂದ ಮಾತ್ರ ಸಿಗುವ ಸೌಲಭ್ಯ ಆಗಿರುತ್ತದೆ..
ನಿಮ್ಮ ಹೆಂಡತಿ ಹೆಸರಲ್ಲಿ ಲೋನ್ ತಗೊಂಡ್ರೆ ಇಎಂಐ ಹೊರೆ ಕಡಿಮೆ ಆಗುತ್ತೆ! 7 ಲಕ್ಷ ಹಣ ಉಳಿತಾಯ
ಇದರಿಂದ ಹರಿಯಾಣ ರಾಜ್ಯದ ಜನತೆಗೆ ಅನುಕೂಲ ಆಗಿದೆ. ಇದು ಪಿಎಮ್ ಉಜ್ಬಲಾ ಯೋಜನೆ 2.0 ಎಂದು ಹೇಳಲಾಗುತ್ತಿದ್ದು, ಪ್ರಸ್ತುತ ಹರಿಯಾಣ ರಾಜ್ಯದಲ್ಲಿ ಈ ಒಂದು ಸೌಲಭ್ಯ ಸಿಗುತ್ತಿದ್ದು, ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಕೂಡ ಈ ಒಂದು ಸೌಲಭ್ಯ ಶುರುವಾಗಬಹುದು ಎಂದು ಮಾಹಿತಿ ಸಿಕ್ಕಿದೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗೆ ಅನುಕೂಲ ಆಗುವ ಹಾಗೆ ಅನೇಕ ಯೋಜನೆಗಳನ್ನು ಜಾರಿಗೆ ತಾರುತ್ತಲಿದೆ..
In this scheme, the price of a gas cylinder is only 500 rupees, Apply today
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.