ದಿನಕ್ಕೆ ಕೇವಲ 7 ರೂಪಾಯಿ ಇನ್ವೆಸ್ಟ್ ಮಾಡಿದ್ರೆ ಪ್ರತಿ ತಿಂಗಳು ₹5000 ಸಿಗುವ ಸ್ಕೀಮ್ ಇದು!
ತಿಂಗಳಿಗೆ ₹5000 ಪೆನ್ಶನ್ ಪಡೆಯಲು, 18 ವರ್ಷವಿದ್ದಾಗ ಹೂಡಿಕೆ ಶುರು ಮಾಡಿದರೆ, ತಿಂಗಳಿಗೆ ₹210 ರೂಪಾಯಿ ಡೆಪಾಸಿಟ್ ಮಾಡುತ್ತಾ ಬರಬೇಕು. ದಿನಕ್ಕೆ 7 ರೂಪಾಯಿ ಮಾತ್ರ ಹೂಡಿಕೆ ಮಾಡಿರುತ್ತೀರಿ
Pension Scheme : ಕೇಂದ್ರ ಸರ್ಕಾರವು ನಮ್ಮ ದೇಶದ ಜನರಿಗೆ ಅನುಕೂಲ ಅಗುವಂಥ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಪೈಕಿ ಇಂದು ನಾವು ತಿಳಿಸುವ ಯೋಜನೆ ಕೂಡ ಒಂದು. ಈ ಒಂದು ಯೋಜನೆಯ ಅಡಿಯಲ್ಲಿ ಜನರು ದಿನಕ್ಕೆ ಅತ್ಯಂತ ಕಡಿಮೆ ಹಣವನ್ನು ಹೂಡಿಕೆ ಮಾಡಿ, ವೃದ್ಧಾಪ್ಯದ ವೇಳೆ ಪ್ರತಿ ತಿಂಗಳು ₹5000 ರೂಪಾಯಿಗಳವರೆಗು ಹಣ ಪಡೆದುಕೊಳ್ಳಬಹುದು. ಇಷ್ಟು ಲಾಭ ತರುವಂಥ ಆ ಯೋಜನೆ ಯಾವುದು? ಯಾರೆಲ್ಲಾ ಇದಕ್ಕೆ ಅರ್ಹತೆ ಪಡೆಯುತ್ತಾರೆ? ಪೂರ್ತಿ ಮಾಹಿತಿ ತಿಳಿಯೋಣ..
ನಾವು ಹಣ ಸಂಪಾದನೆ ಮಾಡುವಾಗ, ಎಲ್ಲವನ್ನು ಖರ್ಚು ಮಾಡುವುದಕ್ಕಿಂತ ಸ್ವಲ್ಪ ಮೊತ್ತವನ್ನು ಉಳಿಸುವುದು ಒಳ್ಳೆಯದು. ಇದರಿಂದ ನಮಗೆ ಉತ್ತಮವಾದ ಆದಾಯ ಕೂಡ ಬರುತ್ತದೆ. ಎಲ್ಲೆಲ್ಲೋ ಹಣ ಇನ್ವೆಸ್ಟ್ ಮಾಡುವುದಕ್ಕಿಂತ ಸರ್ಕಾರದ ಯೋಜನೆಗಳಲ್ಲಿ ಹಣ ಇನ್ವೆಸ್ಟ್ ಮಾಡಿದರೆ, ಒಳ್ಳೆಯ ಆದಾಯ ಬರುವುದರ ಜೊತೆಗೆ ನಿಮ್ಮ ಹಣ ಕೂಡ ಸೇಫ್ ಆಗಿರುತ್ತದೆ. ಹಾಗಿದ್ದಲ್ಲಿ ಈ ಯೋಜನೆ ಯಾವುದು ಎಂದರೆ, ಇದು ಕೇಂದ್ರ ಸರ್ಕಾರದ ಅಟಲ್ ಪೆನ್ಶನ್ ಯೋಜನೆ ಆಗಿದೆ.
ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ಸಿಗಲಿದೆ ಸಬ್ಸಿಡಿ ಸಾಲ ಸೌಲಭ್ಯ! ಮಾಹಿತಿ ಇಲ್ಲಿದೆ, ಅರ್ಜಿ ಸಲ್ಲಿಸಿ
ನಿವೃತ್ತಿ ನಂತರ ನಿಶ್ಚಿಂತೆಯ ಜೀವನ ನಡೆಸಲಿ ಎಂದು ಕೇಂದ್ರ ಸರ್ಕಾರ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ. ಅಟಲ್ ಪೆನ್ಶನ್ ಯೋಜನೆಯಲ್ಲಿ ನೀವು ಚಿಕ್ಕ ವಯಸ್ಸಿನಲ್ಲಿ ಹೂಡಿಕೆ ಶುರು ಮಾಡಿ, 60 ವರ್ಷ ತುಂಬುವವರೆಗೂ ಪ್ರತಿ ತಿಂಗಳು ಇಂತಿಷ್ಟು ಎಂದು ಹೂಡಿಕೆ ಮಾಡಬೇಕು. ಇದರಿಂದಾಗಿ ನಿಮಗೆ ನಿವೃತ್ತಿ ನಂತರ ಒಳ್ಳೆಯ ಆದಾಯ ಅಂದರೆ ಪ್ರತಿ ತಿಂಗಳು ₹5000 ಪೆನ್ಶನ್ ರೂಪದಲ್ಲಿ ಸಿಗುತ್ತದೆ. ನೀವು ಎಷ್ಟು ಮೊತ್ತವನ್ನು ಪೆನ್ಶನ್ ಪಡೆಯುತ್ತೀರಿ ಎನ್ನುವುದು, ಯಾವ ವಯಸ್ಸಿನಲ್ಲಿ ಎಷ್ಟು ಹೂಡಿಕೆ ಮಾಡಿರುತ್ತೀರಿ ಎನ್ನುವುದರ ಮೇಲೆ ನಿರ್ಧಾರ ಆಗುತ್ತದೆ.
ಅಟಲ್ ಪೆನ್ಶನ್ ಯೋಜನೆಯ ಅಡಿಯಲ್ಲಿ, ನೀವು ನಿವೃತ್ತಿ ಹೊಂದಿದ ನಂತರ್ಸ್ ಪ್ರತೀ ತಿಂಗಳು ಕೂಡ 1000 ರೂಪಾಯಿ ಇಂದ 5000 ರೂಪಾಯಿಗಳವರೆಗು ಪೆನ್ಶನ್ ಪಡೆಯಬಹುದಾದ ಆಯ್ಕೆ ಇದೆ. 18, 20, 30 ವರ್ಷ ಹೀಗೆ ನೀವು ಯಾವಾಗ ಆದರು ಈ ಯೋಜನೆಯಲ್ಲಿ ಹೂಡಿಕೆ ಶುರು ಮಾಡಬಹುದು. ನಿಮಗೆ 60 ವರ್ಷವಾದ ನಂತರ ಪೆನ್ಶನ್ ಸಿಗುತ್ತದೆ. 60 ವರ್ಷದ ನಂತರ ತಿಂಗಳಿಗೆ ₹5000 ಪೆನ್ಶನ್ ಸಿಗಬೇಕು ಎಂದರೆ, ಎಷ್ಟು ಹಣ ಹೂಡಿಕೆ ಮಾಡಬೇಕು ಎಂದು ತಿಳಿಯೋಣ..
ನಿಮ್ಮ ಹೆಂಡತಿ ಹೆಸರಲ್ಲಿ ಲೋನ್ ತಗೊಂಡ್ರೆ ಇಎಂಐ ಹೊರೆ ಕಡಿಮೆ ಆಗುತ್ತೆ! 7 ಲಕ್ಷ ಹಣ ಉಳಿತಾಯ
ತಿಂಗಳಿಗೆ ₹5000 ಪೆನ್ಶನ್ ಪಡೆಯಲು, 18 ವರ್ಷವಿದ್ದಾಗ ಹೂಡಿಕೆ ಶುರು ಮಾಡಿದರೆ, ತಿಂಗಳಿಗೆ ₹210 ರೂಪಾಯಿ ಡೆಪಾಸಿಟ್ ಮಾಡುತ್ತಾ ಬರಬೇಕು. ದಿನಕ್ಕೆ 7 ರೂಪಾಯಿ ಮಾತ್ರ ಹೂಡಿಕೆ ಮಾಡಿರುತ್ತೀರಿ, ನಿಮಗೆ 60 ವರ್ಷ ಆಗುವವರೆಗು ಅಂದರೆ 42 ವರ್ಷಗಳು ಇಷ್ಟು ಹಣ ಹೂಡಿಕೆ ಮಾಡಿದರೆ, 60 ವರ್ಷವಾದ ನಂತರ ತಿಂಗಳಿಗೆ ₹5000 ಪೆನ್ಶನ್ ಪಡೆಯಬಹುದು. ಒಂದು ವೇಳೆ 30ನೇ ವಯಸ್ಸಿನಲ್ಲಿ ಹೂಡಿಕೆ ಶುರು ಮಾಡುವುದಾದರೆ, ಪ್ರತಿ ತಿಂಗಳು ₹577 ರೂಪಾಯಿ ಹೂಡಿಕೆ ಮಾಡಬೇಕು.
ನಿವೃತ್ತಿ ನಂತರ ಪ್ರತಿ ತಿಂಗಳು ಪೆನ್ಶನ್ ಪಡೆಯಲು, ಮಿನಿಮಮ್ 20 ವರ್ಷಗಳ ಕಾಲ ಹೂಡಿಕೆ ಮಾಡಬೇಕು. ಅಕಸ್ಮಾತ್ ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದ್ದ ವ್ಯಕ್ತಿಯ ಮರಣವಾದರೆ, 1000 ಪೆನ್ಶನ್ ಪಡೆಯುವ ವ್ಯಕ್ತಿ ನಾಮಿನಿ ಮಾಡಿರುವ ವ್ಯಕ್ತಿಗೆ ಸುಮಾರು 1.7 ಲಕ್ಷ ರೂಪಾಯಿ ಹಣ ಸೇರುತ್ತದೆ.. 5000 ಪೆನ್ಶನ್ ಪಡೆಯುವವರಾದರೆ 8.6 ಲಕ್ಷ ನಾಮಿನಿಗೆ ಸಿಗುತ್ತದೆ.
This is a scheme where you can get 5000 every month if you invest just 7 rupees a day