ನಿಮ್ಮ ಹೆಂಡತಿ ಹೆಸರಲ್ಲಿ ಲೋನ್ ತಗೊಂಡ್ರೆ ಇಎಂಐ ಹೊರೆ ಕಡಿಮೆ ಆಗುತ್ತೆ! 7 ಲಕ್ಷ ಹಣ ಉಳಿತಾಯ

Loan EMI : ಸಾಮಾನ್ಯವಾಗಿ ಯಾವ ಬ್ಯಾಂಕ್ ನಲ್ಲಿ ಬಡ್ಡಿ ಕಡಿಮೆ ಇರುತ್ತದೆಯೋ ನಾವು ಅಲ್ಲಿಯೇ ಲೋನ್ (Bank Loan) ಪಡೆಯುತ್ತೇವೆ. ಇಲ್ಲಿ ನಾವು ತಿಳಿಯಬೇಕಾದ ಇನ್ನೊಂದು ವಿಷಯ ಕೂಡ ಇದೆ

Bengaluru, Karnataka, India
Edited By: Satish Raj Goravigere

Loan EMI : ಸಾಮಾನ್ಯವಾಗಿ ನಾವು ಬ್ಯಾಂಕ್ ಗಳಲ್ಲಿ ಸಾಲ ಪಡೆಯುತ್ತೇವೆ. ಹೋಮ್ ಲೋನ್ (Home Loan), ಪರ್ಸನಲ್ ಲೋನ್ (Personal Loan) ಈ ರೀತಿ ವಿವಿಧ ರೀತಿಯ ಸಾಲಗಳನ್ನು ಪಡೆಯುತ್ತೇವೆ. ಈ ರೀತಿಯಾಗಿ ಸಾಲ ಪಡೆಯುವಾಗ, ನಾವು ಪ್ರಮುಖವಾಗಿ ಗಮನಿಸಬೇಕಾಗಿರುವುದು ನಾವು ಪಾವತಿ ಮಾಡಬೇಕಿರುವ ಬಡ್ಡಿ ಮೊತ್ತದ ಬಗ್ಗೆ.

ಹೌದು, ಸಾಮಾನ್ಯವಾಗಿ ಯಾವ ಬ್ಯಾಂಕ್ ನಲ್ಲಿ ಬಡ್ಡಿ ಕಡಿಮೆ ಇರುತ್ತದೆಯೋ ನಾವು ಅಲ್ಲಿಯೇ ಲೋನ್ (Bank Loan) ಪಡೆಯುತ್ತೇವೆ. ಇಲ್ಲಿ ನಾವು ತಿಳಿಯಬೇಕಾದ ಇನ್ನೊಂದು ವಿಷಯ ಕೂಡ ಇದೆ…

If you get a loan in your wife's name, the EMI burden will be reduced

ನೀವು ಲೋನ್ ಪಡೆಯುವಾಗ, ನಿಮ್ಮ ಪತ್ನಿಯನ್ನು ಜೊತೆಗೆ ಸೇರಿಸಿಕೊಂಡು ಲೋನ್ ಪಡೆದರೆ, ಅದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಹೌದು ನೀವಿಬ್ಬರೂ ಜೊತೆಯಾಗಿ ಜಂಟಿ ಖಾತೆಯ ಮೂಲಕ ಲೋನ್ ಪಡೆದರೆ, ನಿಮಗೆ ಬಹಳಷ್ಟು ಪ್ರಯೋಜನಗಳು ಸಿಗುತ್ತದೆ. ಅವುಗಳು ಏನೇನು ಎಂದು ನೋಡುವುದಾದರೆ.. ಮೊದಲನೆಯದಾಗಿ ನೀವು ಪಾವತಿ ಮಾಡುವ ಬಡ್ಡಿದರದ ಮೇಲೆ ವಿನಾಯಿತಿ ಸಿಗುತ್ತದೆ. ಇದು ಪ್ರಮುಖವಾದ ವಿಷಯ ಆಗಿದೆ.

ಮನೆ ಮೇಲೆ ಖಾಲಿ ಟೆರೆಸ್‌ ಇದ್ರೆ ಸಾಕು, ಟವರ್ ಹಾಕಿಸಿ ಪ್ರತಿ ತಿಂಗಳು ₹60 ಸಾವಿರ ಸಂಪಾದನೆ ಮಾಡಿ!

ಸಾಮಾನ್ಯವಾಗಿ ನಮಗೆ ಸಾಲದ ಮೇಲೆ ಎಷ್ಟು ಬಡ್ಡಿದರ ಬೀಳುತ್ತದೆಯೋ, ಮಹಿಳೆಯನ್ನು ಅಂದರೆ ಪತ್ನಿಯನ್ನು ಜೊತೆಗೆ ಸೇರಿಸಿಕೊಂಡರೆ ಆ ಬಡ್ಡಿದರದ ಮೇಲೆ 5 ಬೇಸಿಸ್ ಪಾಯಿಂಟ್ಸ್ ಕಡಿಮೆ ಆಗುತ್ತದೆ. ಅಂದರೆ 0.05% ಕಡಿಮೆ ಆಗಲಿದ್ದು, ಬಡ್ಡಿದರ ಕಡಿಮೆ ಆದರೆ ನೀವು ಪಾವತಿ ಮಾಡಬೇಕಾದ ಇಎಂಐ ಮೊತ್ತ ಕೂಡ ಕಡಿಮೆ ಆಗಿ, ಇದರಿಂದ ನೀವು ಹೆಚ್ಚಿನ ಒತ್ತಡ ಇಲ್ಲದೇ ಲೋನ್ ಇಎಂಐ ಅನ್ನು ಪ್ರತಿ ತಿಂಗಳು ಪಾವತಿ ಮಾಡಿಕೊಂಡು ಹೋಗಬಹುದು.

ಹಾಗೆಯೇ ಇಬ್ಬರು ಜೊತೆಯಾಗಿ ಲೋನ್ ಪಡೆಯುವುದರಿಂದ 7 ಲಕ್ಷದವರೆಗು ತೆರಿಗೆ ವಿನಾಯಿತಿ ಪಡೆಯಬಹುದು. ಸೆಕ್ಷನ್ 80ಸಿ ಅಡಿಯಲ್ಲಿ ಇಬ್ಬರಿಗೂ 1.5 ಲಕ್ಷ ತೆರಿಗೆ ವಿನಾಯಿತಿ ಸಿಗುತ್ತದೆ. ಇನ್ನು ಸೆಕ್ಷನ್ 24 ಅಡಿಯಲ್ಲಿ ಇಬ್ಬರಿಗೂ 2 ಲಕ್ಷದವರೆಗು ತೆರಿಗೆ ವಿನಾಯಿತಿ ಸಿಗುತ್ತದೆ.

ಇಷ್ಟು ಸೌಲಭ್ಯ ನಿಮಗೆ ಸಿಗುವುದು ನಿಮ್ಮಿಬ್ಬರ ಹೆಸರಿನಲ್ಲಿಯೂ ಮನೆ ಅಥವಾ ಆಸ್ತಿ ರಿಜಿಸ್ಟರ್ ಆಗಿದ್ದಾಗ ಮಾತ್ರ. ಇಬ್ಬರು ಕೂಡ ಓನರ್ ಗಳಾಗಿರಬೇಕು. ಕ್ರೆಡಿಟ್ ಸ್ಕೋರ್, ಸಿಬಿಲ್ ಸ್ಕೋರ್ ಕಡಿಮೆ ಇದೆ, ಲೋನ್ ಸಿಗೋದಿಲ್ಲ ಎಂದು ತೊಂದರೆ ಪಡುತ್ತಿರುವವರು ಈ ಒಂದು ಕೆಲಸ ಮಾಡಬಹುದು.

ಸ್ಟೇಟ್ ಬ್ಯಾಂಕಿನಲ್ಲಿ ಅತಿ ಹೆಚ್ಚು ಬಡ್ಡಿ ನೀಡುವ ಎಫ್‌ಡಿ ಯೋಜನೆ ಶುರು! ಈಗಲೇ ಡೆಪಾಸಿಟ್ ಮಾಡಿ

ಹೌದು, ಕ್ರೆಡಿಟ್ ಸ್ಕೋರ್ ಸಮಸ್ಯೆ ಇದ್ದಾಗ, ನೀವು ಪತ್ನಿಯ ಜೊತೆಗೆ ಸಹಭಾಗಿತ್ವದಲ್ಲಿ ಲೋನ್ ಪಡೆದರೆ, ಲೋನ್ ಸುಲಭವಾಗಿ ಸಿಗುತ್ತದೆ. ಅವರಿಗೆ ಇಎಂಐ ಕಟ್ಟುವ ಅರ್ಹತೆ ಇದೆ ಎಂದರೆ, ಲೋನ್ ಸಿಗುವುದು ಸುಲಭ ಆಗುತ್ತದೆ.

ಜಾಯಿಂಟ್ ಲೋನ್ ಪಡೆಯುವ ವೇಳೆ ನೀವು ಇಬ್ಬರು ವ್ಯಕ್ತಿಗಳ ಆದಾಯ ಹೇಗಿದೆ ಎನ್ನುವುದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಜಾಯಿಂಟ್ ಲೋನ್ ನಲ್ಲಿ ಹೆಚ್ಚು ಮೊತ್ತದ ಸಾಲವನ್ನು ಕೂಡ ಪಡೆಯಬಹುದು. ಇದಕ್ಕಾಗಿ ಅರ್ಜಿ ಹಾಕುವವರ ಇಬ್ಬರ ಆದಾಯ ಅನುಪಾತ 50 ಅಥವಾ 60% ಗಿಂತ ಜಾಸ್ತಿ ಇರಬಾರದು ಎಂದು ಹೇಳಲಾಗುತ್ತದೆ.

If you get a loan in your wife’s name, the EMI burden will be reduced