ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ಸಿಗಲಿದೆ ಸಬ್ಸಿಡಿ ಸಾಲ ಸೌಲಭ್ಯ! ಮಾಹಿತಿ ಇಲ್ಲಿದೆ, ಅರ್ಜಿ ಸಲ್ಲಿಸಿ

ಸರ್ಕಾರದಿಂದ ಸಿಗುವ ಈ ಒಂದು ಸಾಲ ಸೌಲಭ್ಯ ಪಡೆಯುವುದರಿಂದ ಸಾಕಾಣಿಕೆ ಮಾಡಿ, ಒಳ್ಳೆಯ ಆದಾಯ ಗಳಿಸಬಹುದು. ಈ ಸಬ್ಸಿಡಿ ರಾಷ್ಟ್ರೀಯ ಜಾನುವಾರು ಮಿಶನ್ ಇಂದ ಕೊಡಲಾಗುತ್ತಿದೆ.

Bengaluru, Karnataka, India
Edited By: Satish Raj Goravigere

Loan : ರೈತರು ಕೃಷಿಯ ಜೊತೆಗೆ ಹೆಚ್ಚಿನ ಆದಾಯ ಗಳಿಸುವ ಸಲುವಾಗಿ ಇದೀಗ ಸರ್ಕಾರವು ಕುರಿ ಅಥವಾ ಕೋಳಿ ಸಾಕಾಣಿಕೆ ಮಾಡುವವರಿಗೆ ಸಬ್ಸಿಡಿ ಸಾಲ ಕೊಡುವುದಕ್ಕೆ ಮುಂದಾಗಿದೆ. ಹೌದು, ಸರ್ಕಾರದಿಂದ ಸಿಗುವ ಈ ಒಂದು ಸಾಲ ಸೌಲಭ್ಯ ಪಡೆಯುವುದರಿಂದ ಸಾಕಾಣಿಕೆ ಮಾಡಿ, ಒಳ್ಳೆಯ ಆದಾಯ ಗಳಿಸಬಹುದು. ಈ ಸಬ್ಸಿಡಿ ರಾಷ್ಟ್ರೀಯ ಜಾನುವಾರು ಮಿಶನ್ ಇಂದ ಕೊಡಲಾಗುತ್ತಿದೆ. ಇದರಲ್ಲಿ ಹಲವು sub category mission ಗಳು ಸಹ ಇದ್ದು, ಇದರಿಂದ ಸಾಲವನ್ನು ಯಾವುದಕ್ಕೆ ಕೊಡಲಾಗುತ್ತದೆ? ಸಾಲ ಪಡೆಯುವುದು ಹೇಗೆ ಎಂದು ಪೂರ್ತಿ ಮಾಹಿತಿ ತಿಳಿಯೋಣ..

ಜಾನುವಾರು ಹಾಗೂ ಕೋಳಿ ಸಾಕಾಣಿಕೆ: ರೈತರು ಆದಾಯ ಹೆಚ್ಚಿಸಲು ಲಾಭದಾಯಕ ತಳಿಯ ಕೋಳಿ ಹಾಗು ಜಾನುವಾರುಗಳನ್ನು ಸಾಕಲು ತರಬೇತಿ ಕೊಟ್ಟು, ಹಣಕಾಸಿನ ಸೌಲಭ್ಯ ಕೂಡ ಕೊಡಲಾಗುತ್ತದೆ.

Chicken and goat farming will get subsidy loan facility

ಈಶಾನ್ಯ ಪ್ರದೇಶದಲ್ಲಿ ಹಂದಿ ಸಾಕಾಣಿಕೆ: ಈಶಾನ್ಯದ ಪ್ರದೇಶಗಳಲ್ಲಿ ಹಂದಿ ಸಾಕಾಣಿಕೆಗೆ ಲಾಭವಿದೆ. ಹಾಗಾಗಿ ಆ ಪ್ರದೇಶದಲ್ಲಿ ಹಂದಿ ಸಾಕಾಣಿಕೆ ಹೆಚ್ಚಿಸಿ, ಆರ್ಥಿಕವಾಗಿ ಪ್ರಬಲರಾಗುವ ಹಾಗೆ ಮಾಡುವ ಮಿಷನ್ ಇದಾಗಿದೆ.

ಹೆಚ್ಚೇನೂ ಬೇಡ ನಿಮ್ಮ ರೂಮ್ ನಲ್ಲೇ ಈ ಗಿಡ ಬೆಳೆಸಿ ಸಾಕು! ತಿಂಗಳಿಗೆ ಲಕ್ಷ ಆದಾಯ ಗ್ಯಾರೆಂಟಿ!

ಫೀಡ್ ಹಾಗೂ ಫಾಡರ್ ಅಬ್ಬಿವೃದ್ದಿ: ಈ ಮಿಷನ್ ಮೂಲಕ ಸಾಕುವ ಎಲ್ಲಾ ಜಾನುವಾರುಗಳಿಗೆ ಮೇವು ಹಾಗೂ ಮೇವಿನ ಘಟಕ ಸ್ಥಾಪನೆ ಮಾಡುವುದಕ್ಕೆ ನೆರವು ನೀಡಲಾಗುತ್ತದೆ.

ಕೌಶಲ್ಯ ಅಭಿವೃದ್ಧಿ ಹಾಗೂ ತಂತ್ರಜ್ಞಾನ ವರ್ಗಾವಣೆ: ಇದರಲ್ಲಿ ರೈತರಿಗೆ ಕೃಷಿ ವಿಷಯದಲ್ಲಿ ಗೊತ್ತಿರಬೇಕಾದ ಟೆಕ್ನಿಕಲ್ ಸ್ಕಿಲ್ ಗಳನ್ನು ತಿಳಿಸಿಕೊಡಲಾಗುತ್ತದೆ. ಯಾವ ಪದ್ಧತಿ ಬಳಸಿದರೆ, ಜಾನುವಾರು ಸಾಕಾಣಿಕೆಯಲ್ಲಿ ಲಾಭ ಗಳಿಸಬಹುದು ಎಂದು ತಿಳಿಸಲಾಗುತ್ತದೆ.
ಸಬ್ಸಿಡಿ ಹಾಗೂ ಹಣಕಾಸಿನ ಸಹಾಯ: ರೈತರಿಗೆ ಜಾನುವಾರು ಸಾಕಾಣಿಕೆ ವಿಷಯದಲ್ಲಿ ಹಣಕಾಸಿನ ಸಹಾಯದ ಜೊತೆಗೆ ಸಬ್ಸಿಡಿ ಕೂಡ ಕೊಡಲಾಗುತ್ತದೆ. ಅವುಗಳ ಬಗ್ಗೆ ತಿಳಿಯುವುದಾದರೆ..

ಕೋಳಿ ಫಾರ್ಮ್ ಹೌಸ್: ಕೋಳಿಗಳನ್ನು ಸಾಕಾಣಿಕೆ ಮಾಡುವ ಘಟಕ ಇದು. ಇದರ ಸ್ಥಾಪನೆಗಾಗಿ ಸುಮಾರು 25 ಲಕ್ಷದವರೆಗೂ ಸಾಲ ಸೌಲಭ್ಯ ಸಿಗುತ್ತದೆ. ಈ ಪ್ರಯೋಜನ ಪಡೆಯುವ ರೈತರಿಗೆ ಹಣಕಾಸಿನ ವಿಷಯದಲ್ಲಿ ಇದು ದೊಡ್ಡ ಸಹಾಯ ಎಂದು ಹೇಳಿದರೆ ಖಂಡಿತ ತಪ್ಪಲ್ಲ.

ನಿಮ್ಮ ಹೆಂಡತಿ ಹೆಸರಲ್ಲಿ ಲೋನ್ ತಗೊಂಡ್ರೆ ಇಎಂಐ ಹೊರೆ ಕಡಿಮೆ ಆಗುತ್ತೆ! 7 ಲಕ್ಷ ಹಣ ಉಳಿತಾಯ

ಕುರಿ ಮೇಕೆ ಸಾಕಾಣಿಕೆ: ರೈತರು ಕುರಿ ಮೇಕೆ ಸಾಕಾಣಿಕೆ ಇಂದ ಕೂಡ ಹೆಚ್ಚು ಲಾಭ ಪಡೆಯಬಹುದು. ಕುರಿ ಮೇಕೆ ಸಾಕಾಣಿಕೆ ಘಟಕ ಸ್ಥಾಪನೆ ಮಾಡುವುದಕ್ಕಾಗಿ 50 ಲಕ್ಷದವರೆಗು ಸಾಲ ಸೌಲಭ್ಯ ಸಿಗುತ್ತದೆ.

ಹಂದಿ ಸಾಕಾಣಿಕೆ: ಈ ಒಂದು ಕೆಲಸ ಮಾಡುವುದಕ್ಕಾಗಿ ಸರ್ಕಾರದಿಂದ ನಿಮಗೆ 30 ಲಕ್ಷದವರೆಗು ಆರ್ಥಿಕ ಸಹಾಯ ಸಿಗುತ್ತದೆ. ಇದು ರೈತರಿಗೆ ಹಣ ಗಳಿಸಲು, ಒಳ್ಳೆಯ ಮಾರ್ಗ ಆಗಿರುತ್ತದೆ.

ಮೇವು ಸಂಗ್ರಹಣಾ ಸೌಲಭ್ಯ: ಜಾನುವಾರುಗಳಿಗೆ ಬೇಕಾದ ಮೇವುಗಳನ್ನು ಸಂಗ್ರಹ ಮಾಡುವುದಕ್ಕೆ ಸರ್ಕಾರದ ಕಡೆಯಿಂದ 50 ಲಕ್ಷದವರೆಗು ಹಣ ಸಹಾಯ ಸಿಗುತ್ತದೆ.

ವಿಶೇಷ ತಳಿಯ ಜಾನುವಾರು ಸಾಕಾಣಿಕೆ: ಇಲ್ಲಿ ನಾವು ಬೇರೆ ಪ್ರಾಣಿಗಳ ಸಾಕಾಣಿಕೆ ಮಾಡುವ ಬಗ್ಗೆ ತಿಳಿಸುತ್ತೇವೆ, ಕುದುರೆ, ಕತ್ತೆ, ಹೇಸರಗತ್ತೆ, ಒಂಟೆ ಇವುಗಳ ಸಾಕಾಣಿಕೆಗೆ 5೦% ವರೆಗು ಸರ್ಕಾರ ಸಹಾಯ ಮಾಡುತ್ತದೆ.

ಮನೆ ಮೇಲೆ ಖಾಲಿ ಟೆರೆಸ್‌ ಇದ್ರೆ ಸಾಕು, ಟವರ್ ಹಾಕಿಸಿ ಪ್ರತಿ ತಿಂಗಳು ₹60 ಸಾವಿರ ಸಂಪಾದನೆ ಮಾಡಿ!

ಈ ಸೌಲಭ್ಯಗಳನ್ನು ಸರ್ಕಾರವು ವಿವಿಧ ಗುಂಪುಗಳಿಗೆ ಕೊಡುತ್ತಿದೆ. ಅವುಗಳು ಯಾವುವು ಎಂದರೆ, ಯಾವುದೇ ಖಾಸಗಿ ವ್ಯಕ್ತಿ, ಸ್ವಸಹಾಯ ಸಂಘದ ಗುಂಪುಗಳು, ರೈತ ಉತ್ಪಾದಕ ಸಂಸ್ಥೆಗಳು, ರೈತ ಸಹಕಾರಿಗಳು, ಜಂಟಿ ಹೊಣೆಗಾರಿಕೆ ಗುಂಪುಗಳು ಸೇರಿದಂತೆ ಇನ್ನು ಅನೇಕ ರೀತಿಯ ಗುಂಪುಗಳಿಗೆ ಈ ಸೌಲಭ್ಯ ಸಿಗುತ್ತದೆ. ರೈತರ ಆದಾಯದಲ್ಲಿ ಏರಿಕೆ ಆಗಲಿ, ಅವರು ಉತ್ತಮವಾಗಿ ಹಣ ಸಂಪಾದನೆ ಮಾಡಲಿ ಎನ್ನುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

Chicken and goat farming will get subsidy loan facility