ಒಳ್ಳೆಯ ಆದಾಯ ಬೇಕು, ಆದರೆ ಏನು ಮಾಡೋದು ಗೊತ್ತಾಗ್ತಾ ಇಲ್ಲ, ಹೆಚ್ಚು ಬಂಡವಾಳ ಹಾಕೋಕೆ ಹಣವಿಲ್ಲ. ಏನು ಮಾಡೋದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ರೆ ನಿಮ್ಮ ಮನೆಯ ರೂಮ್ ನಲ್ಲೇ ಕೂತು ಈ ಒಂದು ಕೆಲಸ ಮಾಡಿ. ಪ್ರತಿ ತಿಂಗಳು ನೀವು ಅತಿಹೆಚ್ಚು ಆದಾಯ ಗಳಿಸುತ್ತೀರಿ. ತಿಂಗಳಿಗೆ 1 ಲಕ್ಷದವರೆಗೂ ಆದಾಯ ಪಡೆಯಬಹುದಾಗಿರುತ್ತದೆ. ಹಾಗಿದ್ದಲ್ಲಿ ಈ ಕೆಲಸ ಮಾಡುವುದು ಹೇಗೆ ಎಂದು ಸಂಪೂರ್ಣವಾಗಿ ತಿಳಿಯೋಣ…
ನಮಗೆಲ್ಲಾ ಗೊತ್ತಿರುವ ಹಾಗೆ ಈಗ ಹೆಚ್ಚು ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೌದು, ಹೆಚ್ಚಿನ ಜನರು ಆರೋಗ್ಯಕರವಾದ ಆಹಾರ ಸೇವನೆ ಮಾಡಬೇಕು ಎಂದುಕೊಳ್ಳುತ್ತಾರೆ. ಅದಕ್ಕಾಗಿ ಹೆಚ್ಚು ಹಣವನ್ನು ಖರ್ಚು ಮಾಡುವವರು ಕೂಡ ಇದ್ದಾರೆ. ಹಾಗಾಗಿ ನೀವು ಮೈಕ್ರೊಗ್ರೀನ್ ಕೃಷಿ ಶುರು ಮಾಡಬಹುದು. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಮಾಡುವಂಥ ಸಸ್ಯೆ ಆಗಿರುತ್ತದೆ.
ನಿಮ್ಮ ಹೆಂಡತಿ ಹೆಸರಲ್ಲಿ ಲೋನ್ ತಗೊಂಡ್ರೆ ಇಎಂಐ ಹೊರೆ ಕಡಿಮೆ ಆಗುತ್ತೆ! 7 ಲಕ್ಷ ಹಣ ಉಳಿತಾಯ
ಹೌದು, ಮೈಕ್ರೋಗ್ರೀನ್ ಗಳಿಗೆ ಈಗ ಭಾರಿ ಬೇಡಿಕೆ ಇದೆ. ಅವುಗಳ ಕೃಷಿಗೆ ಹೆಚ್ಚಾಗಿ ಖರ್ಚು ಮಾಡುವ ಅವಶ್ಯಕತೆ ಕೂಡ ಇರುವುದಿಲ್ಲ. ಈ ಮೈಕ್ರೋಗ್ರೀನ್ ಗಳನ್ನು ದೊಡ್ಡ ಜಾಗದ ಅವಶ್ಯಕತೆ ಇಲ್ಲದ ಕಾರಣ, ನಿಮ್ಮ ರೂಮ್ ನಲ್ಲೇ ಒಂದು ಕಡೆ ಬೆಳೆಯಬಹುದು. ಮೈಕ್ರೊಗ್ರೀನ್ ಗಳನ್ನು ಬೆಳೆಸಲು, 4 ರಿಂದ 6 ಇಂಚ್ ಉದ್ದದ ಯಾವುದಾದರು ಕಂಟೇನರ್ ಸಾಕು ಅಥವಾ ಇದನ್ನು ಬೆಳೆಯುವ ಸಲುವಾಗಿಯೇ ಸಿಗುವ ಕಂಟೇನರ್ ಗಳು ಕೂಡ ಲಭ್ಯವಿದೆ. ಅವುಗಳನ್ನು ಖರೀದಿ ಮಾಡಬಹುದು.
ಮೈಕ್ರೊಗ್ರೀನ್ ಗಳನ್ನು ಬೆಳೆಯಲು ವಿಶೇಷವಾದ ಬೆಳಕಿನ ಅವಶ್ಯಕತೆ ಇಲ್ಲ. ಸೂರ್ಯನ ಕಿರಣ ಬೀಳುವ ಹಾಗಿದ್ರೆ ಸಾಕು, ಕೃತಕ ಬೆಳಕಿನ ಸಹಾಯ ಕೂಡ ಪಡೆಯಬಹುದು. ಹಾಗೆಯೇ ಇವುಗಳನ್ನು ಬೆಳೆದು, ಇಳುವರಿ ಪಡೆಯುವುದಕ್ಕೆ ಹೆಚ್ಚಿನ ಸಮಯ ಬೇಕು ಎಂದೇನು ಇಲ್ಲ. ಕೆಲವೇ ದಿನಗಳಲ್ಲಿ ಈ ಬೆಳೆ ನಿಮ್ಮ ಕೈಗೆ ಬರುತ್ತದೆ. ಹೌದು, ಇದು ಬಹಳ ಸುಲಭವಾಗಿ ಕಡಿಮೆ ಸಮಯದಲ್ಲಿ ನಿಮ್ಮ ಕೈಗೆ ಸಿಗುವ ಬೆಳೆ ಆಗಿದೆ. ಇವುಗಳನ್ನು ಕಮರ್ಷಿಯಲ್ ಆಗಿ ಬೆಳೆಯುತ್ತೀರಿ ಎಂದರೆ, ನಿಮ್ಮ ರೂಮ್ ನಲ್ಲೇ ಇದಕ್ಕಾಗಿ ಒಂದು ಸಣ್ಣ ಘಟಕ ಸ್ಥಾಪಿಸಬಹುದು.
ಮನೆ ಮೇಲೆ ಖಾಲಿ ಟೆರೆಸ್ ಇದ್ರೆ ಸಾಕು, ಟವರ್ ಹಾಕಿಸಿ ಪ್ರತಿ ತಿಂಗಳು ₹60 ಸಾವಿರ ಸಂಪಾದನೆ ಮಾಡಿ!
ಇದಕ್ಕಾಗಿ 10*10 ಜಾಗ ಕೊಟ್ಟರೂ ಸಾಕು. ಮೈಕ್ರೊಗ್ರೀನ್ ಗಳನ್ನು ಬೆಳೆದು, ಅವುಗಳನ್ನು ದೊಡ್ಡ ರೆಸ್ಟೋರೆಂಟ್ ಗಳಿಗೆ ಸರಬರಾಜು ಮಾಡಬಹುದು. ಅಥವಾ ನಿಮಗೆ ಹತ್ತಿರ ಇರುವ ಮಾಲ್, ಸೂಪರ್ ಮಾರ್ಕೆಟ್ ಗಳಿಗೂ ಸರಬರಾಜು ಮಾಡಿ, ಒಳ್ಳೆಯ ಆದಾಯ ಪಡೆಯಬಹುದು. ಅಥವಾ ಮನೆಯ ಹತ್ತಿರ ಅಪಾರ್ಟ್ಮೆಂಟ್ ಇದ್ದರೆ, ಅಲ್ಲಿನ ಜನರ ಜೊತೆಗೆ ಮಾತನಾಡಿ, ಮೈಕ್ರೊಗ್ರೀನ್ ಗಳನ್ನು ಮಾರಾಟ ಮಾಡಬಹುದು. ಈ ರೀತಿಯಾಗಿ ಸುಲಭವಾಗಿ ಪ್ರತಿ ತಿಂಗಳು ಕೂಡ ಲಕ್ಷ ರೂಪಾಯಿಯವರೆಗು ಸಂಪಾದನೆ ಮಾಡಬಹುದು.
It is enough to grow this plant in your room, Guaranteed income of lakhs per month
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.