ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ರೆ ಥೈಲ್ಯಾಂಡ್ ಪ್ರವಾಸ ಉಚಿತ, ಗಾಡಿ ಖರೀದಿಸಿ ಫ್ರೀ ಟ್ರಿಪ್ ಎಂಜಾಯ್ ಮಾಡಿ! ಇಲ್ಲಿದೆ ಸಂಪೂರ್ಣ ವಿವರ

Okaya Monsoon Offers: ಈಗೆಲ್ಲಾ ಎಲೆಕ್ಟ್ರಿಕ್ ವಾಹನಗಳದ್ದೇ ಕಾರುಬಾರು, ಎಲೆಕ್ಟ್ರಿಕ್ ಸ್ಕೂಟರ್ (Electric Scooter), ಎಲೆಕ್ಟ್ರಿಕ್ ಬೈಕ್ (Electric Bike), ಎಲೆಕ್ಟ್ರಿಕ್ ಕಾರುಗಳು (Electric Car) ಭಾರೀ ಬೇಡಿಕೆ ಸೃಷ್ಟಿಸಿಕೊಂಡಿವೆ. ಏರುತ್ತಿರುವ ಪೆಟ್ರೋಲ್ ಬೆಲೆ (Petrol Price) ಹಾಗೂ ನಿರ್ವಹಣಾ ವೆಚ್ಚದಂತಹ ಕಾರಣಗಳಿಂದ ಎಲೆಕ್ಟ್ರಿಕ್ ವಾಹನಗಳ ಆಕರ್ಷಣೆ ಹೆಚ್ಚಿದೆ.
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ EV ಗಳ ಖರೀದಿ ವೇಗವು ಗಣನೀಯವಾಗಿ ಹೆಚ್ಚಿದೆ. ಅಮೆರಿಕ ಮತ್ತು ಚೀನಾದ ನಂತರ ಹೆಚ್ಚಿನ ಇವಿ ವಾಹನಗಳು ಭಾರತದಲ್ಲಿ ಮಾರಾಟವಾಗುತ್ತವೆ. ಇದರೊಂದಿಗೆ, ಖರೀದಿದಾರರನ್ನು ಮೆಚ್ಚಿಸಲು ಕಂಪನಿಗಳು ಕಾಲಕಾಲಕ್ಕೆ ಹೊಸ ಮಾದರಿಯ ಇವಿಗಳನ್ನು ಬಿಡುಗಡೆ ಮಾಡುತ್ತಿವೆ.
ಅದರಲ್ಲೂ ಮಧ್ಯಮ ವರ್ಗದ ಜನರು ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಯಿಂದ ಇವಿಗಳತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಧ್ಯಮ ವರ್ಗವನ್ನು ಮೆಚ್ಚಿಸಲು ಕಂಪನಿಗಳು ಕಾಲಕಾಲಕ್ಕೆ EV ಗಳ ಮೇಲೆ ಹೊಸ ಕೊಡುಗೆಗಳನ್ನು ನೀಡುತ್ತಿವೆ.
ಇತ್ತೀಚೆಗೆ EV ಸ್ಕೂಟರ್‌ಗಳ ಪ್ರಮುಖ ತಯಾರಕ ಒಕಾಯಾ (Okaya Electric Scooter) ಹೊಸ ಕೊಡುಗೆಯೊಂದಿಗೆ ಬಂದಿದೆ. ಮಾನ್ಸೂನ್ ಕೊಡುಗೆಗಳ ಭಾಗವಾಗಿ (Okaya EV Monsoon Offer), EV ಸ್ಕೂಟರ್ ಖರೀದಿದಾರರಿಗೆ ರೂ.50,000 ಮೌಲ್ಯದ ಥೈಲ್ಯಾಂಡ್ ಪ್ರವಾಸವನ್ನು (Thailand Trip) ನೀಡಲಾಗುತ್ತದೆ.
ಅಷ್ಟೇ ಅಲ್ಲ ಕ್ಯಾಶ್ ಬ್ಯಾಕ್ ರಿವಾರ್ಡ್ (Cash Back Reward) ಕೂಡ ನೀಡುತ್ತದೆ. ಈ ಮಾನ್ಸೂನ್ ಕೊಡುಗೆಗಳು ಜುಲೈ 31, 2023 ರವರೆಗೆ ಲಭ್ಯವಿರುತ್ತವೆ ಎಂದು ಕಂಪನಿಯ ಪ್ರತಿನಿಧಿಗಳು ಹೇಳುತ್ತಾರೆ. ಹಾಗಾದರೆ ಈ ಆಫರ್ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ.
Okaya Fast ಸರಣಿಯ EV ಸ್ಕೂಟರ್‌ಗಳನ್ನು ಖರೀದಿಸಿದವರಿಗೆ ಮಾತ್ರ ಇತ್ತೀಚಿನ ಕೊಡುಗೆ ಲಭ್ಯವಿದೆ. ಫಾಸ್ಟ್ ಎಫ್4, ಫಾಸ್ಟ್ ಎಫ್3, ಫಾಸ್ಟ್ ಎಫ್2ಬಿ ಮತ್ತು ಫಾಸ್ಟ್ ಎಫ್2ಟಿ ಸ್ಕೂಟರ್‌ಗಳನ್ನು ಖರೀದಿಸಿದರೆ, ನೀವು ರೂ.500 ರಿಂದ ರೂ.5000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಥೈಲ್ಯಾಂಡ್ ಪ್ರವಾಸ – Thailand Trip Package
ಅಲ್ಲದೆ, ಪ್ರತಿ ವ್ಯಕ್ತಿಗೆ ರೂ.50 ಸಾವಿರ ಮೌಲ್ಯದ ಥೈಲ್ಯಾಂಡ್ ಪ್ರವಾಸವನ್ನು (Thailand Trip Package) ಕಂಪನಿ ನೀಡುತ್ತದೆ. ಆದರೆ ಇತ್ತೀಚೆಗೆ, ಕೇಂದ್ರ ಸರ್ಕಾರವು ಫೇಮ್ 2 ಮಾನದಂಡಗಳನ್ನು ಸಡಿಲಿಸಿರುವುದರಿಂದ ಮತ್ತು ಅನೇಕ ಸಬ್ಸಿಡಿಗಳನ್ನು ತೆಗೆದುಹಾಕಿರುವುದರಿಂದ ಓಕಾಯಾ ಫಾಸ್ಟ್ ಸ್ಕೂಟರ್‌ಗಳ (Okaya Fast Scooters) ಬೆಲೆಗಳು ಭಾರಿ ಏರಿಕೆಯಾಗಿದೆ.
ಸತತ 2ನೇ ದಿನವೂ ಚಿನ್ನದ ಬೆಲೆ ಕುಸಿತ, 200 ರೂಪಾಯಿ ಇಳಿಕೆ! ಪ್ರಸ್ತುತ ಹೇಗಿದೆ ಇಂದಿನ ಚಿನ್ನ ಬೆಳ್ಳಿ ದರಗಳು?
ಕಂಪನಿಯು ಇತ್ತೀಚೆಗಷ್ಟೇ ಫಾಸ್ಟ್ ಎಫ್4, ಫಾಸ್ಟ್ ಎಫ್3, ಫಾಸ್ಟ್ ಎಫ್2ಬಿ ಮತ್ತು ಫಾಸ್ಟ್ ಎಫ್2ಟಿ ಸ್ಕೂಟರ್‌ಗಳ ಬೆಲೆಯಲ್ಲಿ ಗಮನಾರ್ಹ ಏರಿಕೆಯನ್ನು ಘೋಷಿಸಿದೆ. ರೂ.1,13,999 ಇದ್ದ ಒಕಾಯಾ ಫಾಸ್ಟ್ ಎಫ್4 ಬೆಲೆ ಈಗ ರೂ.1,39,951 ತಲುಪಿದೆ.
ಹಾಗೆಯೇ ಫಾಸ್ಟ್ ಎಫ್3 ಬೆಲೆ ರೂ.1,04,999 ಆಗಿದ್ದರೆ, ಇದೀಗ ರೂ.1,29,948 ತಲುಪಿದೆ. Okaya Fast F2B ಬೆಲೆ ರೂ.1,10,745 ತಲುಪಿದೆ. ಫಾಸ್ಟ್ ಎಫ್2ಟಿ ಬೆಲೆ ರೂ.1,07,903 ತಲುಪಿದೆ.
ಆದರೆ ಈ ಹಿಂದೆ ಆ ಸ್ಕೂಟರ್ ಗಳ ಮೇಲೆ 66 ಸಾವಿರ ರೂ.ವರೆಗೆ ಸಬ್ಸಿಡಿ ಸಿಗುತ್ತಿತ್ತು. ಆದರೆ ಈ ಸಬ್ಸಿಡಿಯನ್ನು ಪ್ರಸ್ತುತ 22,500 ರೂ.ಗೆ ನಿಗದಿಪಡಿಸಿರುವುದರಿಂದ ಬೆಲೆಗಳು ಹೆಚ್ಚಾಗಿದೆ. ಆದರೆ, ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮಾರಾಟ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಹೊಸ ಆಫರ್ ಗಳನ್ನು ಪ್ರಕಟಿಸಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
You will get a Thailand Trip Package If you buy an Okaya EV scooter



