Yamaha RX 100: ಯುವ ಪೀಳಿಗೆಯ ಫೇವರೇಟ್ ಯಮಹಾ RX 100 ಮತ್ತೆ ಮಾರುಕಟ್ಟೆಗೆ ಬರಲಿದೆ, ಈ ಬಾರೀ ಇನ್ನಷ್ಟು ವೈಶಿಷ್ಟ್ಯಗಳೊಂದಿಗೆ ಧೂಳೆಬ್ಬಿಸಲಿದೆ! ಇಲ್ಲಿದೆ ಸಂಪೂರ್ಣ ವಿವರ
Yamaha RX 100 Bike : ಹಳೆಯ ಯಮಹಾ ಬೈಕ್ ಗಾಗಿ (Yamaha Bike) ಇಂದಿಗೂ ಆನ್ಲೈನ್ ನಲ್ಲಿ (Online) ಹುಡುಕಾಡುತ್ತಿದ್ದಾರೆ, ಅಂತಹ ಬೈಕ್ ಪ್ರೇಮಿಗಳಿಗೆ ಇದು ಸಂತಸದ ಸುದ್ದಿ ಎಂದೇ ಹೇಳಬೇಕು. ಅಂತಹವರಿಗಾಗಿ ನೂತನ ವಿನ್ಯಾಸದೊಂದಿಗೆ ಯಮಹಾ ಬೈಕ್ ಮತ್ತೆ ಮಾರುಕಟ್ಟೆ ಪ್ರವೇಶಿಸಲಿದೆ.
Yamaha RX 100 Bike : ಯುವ ಪೀಳಿಗೆಯ ಹೃದಯ ಕದಿಯಲು ಯಮಹಾ ಆರ್‌ಎಕ್ಸ್ 100 ಹೊಸದಾಗಿ ಮಾರುಕಟ್ಟೆಗೆ ಬರುತ್ತಿದೆ. ಹಿಂದಿನ ದಿನಗಳಲ್ಲಿ ಈ ಬೈಕ್ ತನ್ನದೇ ಆದ ಛಾಪು ಮೂಡಿಸಿತ್ತು. ಇದರ ಕ್ರೇಜ್ ಇಂದಿಗೂ ಎಷ್ಟಿದೆ ಎಂದು ಹೇಳಬೇಕಿಲ್ಲ, ಯುವಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೈಕ್ ಖರೀದಿಸುತ್ತಿದ್ದಾರೆ.
ಈಗ ಎಲೆಕ್ಟ್ರಿಕ್ ವಾಹನಗಳ ಜಮಾನ ನಡೆಯುತ್ತಿದೆ, ಎಲೆಕ್ಟ್ರಿಕ್ ಸ್ಕೂಟರ್ (Electric Scooter), ಎಲೆಕ್ಟ್ರಿಕ್ ಬೈಕ್ (Electric Bike), ಎಲೆಕ್ಟ್ರಿಕ್ ಕಾರುಗಳ (Electric Car) ಖರೀದಿ ಜೋರಾಗಿದೆ, ಆದರೂ ಈ ಹಿಂದೆ ಯಮಹಾ ಸೃಷ್ಟಿ ಮಾಡಿದ್ದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ.
ಮತ್ತೆ ಬರ್ತಾಯಿದೆ Yamaha RX100, ಭಾರತಕ್ಕೆ ರೀ ಎಂಟ್ರಿ ಕೊಡ್ತಾಯಿರೋ ಈ ಬೈಕ್ ಬೆಲೆ, ಬಿಡುಗಡೆ ಯಾವಾಗ ಗೊತ್ತಾ?
ಹಳೆಯ ಯಮಹಾ ಬೈಕ್ ಗಾಗಿ (Yamaha Bike) ಇಂದಿಗೂ ಆನ್ಲೈನ್ ನಲ್ಲಿ (Online) ಹುಡುಕಾಡುತ್ತಿದ್ದಾರೆ, ಅಂತಹ ಬೈಕ್ ಪ್ರೇಮಿಗಳಿಗೆ ಇದು ಸಂತಸದ ಸುದ್ದಿ ಎಂದೇ ಹೇಳಬೇಕು. ಅಂತಹವರಿಗಾಗಿ ನೂತನ ವಿನ್ಯಾಸದೊಂದಿಗೆ ಯಮಹಾ ಬೈಕ್ ಮತ್ತೆ ಮಾರುಕಟ್ಟೆ ಪ್ರವೇಶಿಸಲಿದೆ.
ಈ ಬೈಕು ಅದರ ಉತ್ತಮ ಕಾರ್ಯಕ್ಷಮತೆಯಿಂದಾಗಿ ಹೆಸರು ಮಾಡಿತ್ತು. ಅತ್ಯಂತ ಜನಪ್ರಿಯ ಪಿಕ್-ಅಪ್ ಹೊಂದಿರುವ ಸಕತ್ ಬೈಕ್ ಇದಾಗಿದೆ. ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಯಮಹಾ RX 100 ಬೈಕ್‌ನ ಉತ್ಪಾದನೆಯನ್ನು 1996 ರಲ್ಲಿ ಮುಚ್ಚಲಾಯಿತು.
ಇನ್ನೂ ಹೆಚ್ಚಿನ ಸಂಖ್ಯೆಯ ಗ್ರಾಹಕರು ಈ ಬೈಕ್ ಅನ್ನು ಮತ್ತೆ ಭಾರತೀಯ ಮಾರುಕಟ್ಟೆಗೆ ತರಲು ಕಾತರದಿಂದ ಕಾಯುತ್ತಿದ್ದಾರೆ. ಕಾಲಕಾಲಕ್ಕೆ ಕಂಪನಿಯು ಅಂತಹ ಬೈಕ್ ತರಲು ಹೊರಟಿದೆ ಎಂಬ ಸುದ್ದಿಯೂ ಇದೆ. ಈಗ ಇತ್ತೀಚಿನ ವರದಿಯಲ್ಲಿ, ನಾವು ನಿಮಗೆ ಹೇಳಲಿರುವ ಈ ಬೈಕ್‌ನ ಪುನರಾಗಮನಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳು ಸ್ಪಷ್ಟವಾಗಿದೆ.
ಮಾಧ್ಯಮ ವರದಿಗಳಲ್ಲಿ, ಭಾರತೀಯ ಮಾರುಕಟ್ಟೆಯಲ್ಲಿ ಬೈಕ್ ಇನ್ನೂ ಅಭಿಮಾನಿಗಳನ್ನು ಹೊಂದಿದೆ ಎಂದು ಕಂಪನಿ ಅರ್ಥ ಮಾಡಿಕೊಂಡಿದೆ. ಕಂಪನಿಯು ಅದರ ಉತ್ತರಾಧಿಕಾರಿ ಮಾದರಿಯಲ್ಲಿ ಕೆಲಸ ಮಾಡುತ್ತಿದೆ.
ಆದರೆ, ಇದು ಯಾವಾಗ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ. ಬಿಡುಗಡೆಗೆ ಸಮಯ ತೆಗೆದುಕೊಳ್ಳಬಹುದು. ಆದರೆ ಇಲ್ಲೊಂದು ಗುಡ್ ನ್ಯೂಸ್.. ಯಮಹಾದ RX 100 ಸಕ್ಸೆಸರ್ ಮಾಡೆಲ್ ಅನ್ನು ನೀವು ಖಂಡಿತವಾಗಿಯೂ ಶೀಘ್ರದಲ್ಲೇ ನೋಡಬಹುದು.
ಯಮಹಾ ಇಂಡಿಯಾ ಚೇರ್ಮನ್ ಇಶಿನ್ ಚಿಹಾನಾ ಆಟೋಕಾರ್ ಪ್ರೊಫೆಷನಲ್‌ಗೆ ತಿಳಿಸಿದಂತೆ.. “ಯಮಹಾ RX100 ಭಾರತಕ್ಕೆ ಅತ್ಯಂತ ವಿಶಿಷ್ಟ ಮಾದರಿಯಾಗಿದೆ. ಅದರ ಸ್ಟೈಲಿಂಗ್, ಕಡಿಮೆ ತೂಕ, ಶಕ್ತಿ ಮತ್ತು ಧ್ವನಿಗಾಗಿ ಇದು ವಿಶೇಷವಾಗಿದೆ ಎಂದು ಹೇಳಲಾಗುತ್ತದೆ. ಮತ್ತೆ ಅದೇ ಮಟ್ಟದಲ್ಲಿ ಮಾರುಕಟ್ಟೆಗೆ ತರಲು ಇನ್ನೂ ಸ್ವಲ್ಪ ಸಮಯ ಹಿಡಿಯಲಿದೆ ಎಂದರು. ಆದರೆ, ಮುಂದಿನ ದಿನಗಳಲ್ಲಿ ಕನಿಷ್ಠ 200 ಸಿ.ಸಿ. ಬೈಕ್ ಹೊರ ತರಲು ಚಿಂತಿಸಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಪ್ರಕಾರ ಯಮಹಾ ಬೈಕ್ (Yamaha New Bike) ಶೀಘ್ರದಲ್ಲೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.
Yamaha Company to launch next generation Yamaha RX100 Bike Soon