ಬೆಂಗಳೂರು ಹೊರವಲಯದಲ್ಲಿ ಜೋಡಿಕೊಲೆ, ಬಾಗಲೂರು ಪೊಲೀಸರು ಪ್ರಕರಣ ದಾಖಲು
ಹತ್ಯೆ ಮಾಡಿದವರು ಯಾರು ಮತ್ತು ಏಕೆ ಎಂದು ತಿಳಿಯಬೇಕಿದೆ. ಬಾಗಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನ (Bengaluru) ಹೊರವಲಯದ ಸಿಂಗನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಜೋಡಿಕೊಲೆ ನಡೆದಿದೆ. ಎಸ್ ಆರ್ ಎಸ್ ಟ್ರಾವೆಲ್ಸ್ ಬಸ್ ನಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ (51) ಮತ್ತು ಮಂಜುನಾಥ್ (50) ಕೊಲೆಯಾದವರು.
ಇವರಿಬ್ಬರನ್ನೂ ದುಷ್ಕರ್ಮಿಗಳು ಕೆಲಸ ಮಾಡುತ್ತಿದ್ದ ಶೆಡ್‌ನಲ್ಲಿಯೇ ಚಾಕುವಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹತ್ಯೆ ಮಾಡಿದವರು ಯಾರು ಮತ್ತು ಏಕೆ ಎಂದು ತಿಳಿಯಬೇಕಿದೆ. ಬಾಗಲೂರು ಪೊಲೀಸರು (Bagaluru Police) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ನಿ ಮತ್ತು ಮಗನನ್ನು ಕೊಂದು ಪತಿ ಆತ್ಮಹತ್ಯೆ
ಅಪರಿಚಿತರ ಕೈವಾಡ ಇರಬಹುದಾ ಅಥವಾ ತಿಳಿದವರೇ ಈ ಕೃತ್ಯ ಎಸಗಿ ಪರಾರಿಯಾಗಿದ್ದಾರಾ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಇನ್ನು ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ.
Double murder in Bengaluru, Bagaluru police registered a case