Crime: ಆಸ್ತಿಗಾಗಿ ಮಗನ ಜೊತೆ ಸೇರಿ ಸ್ವಂತ ತಾಯಿ, ತಂಗಿಯನ್ನು ಕೊಂದ ವ್ಯಕ್ತಿ

Story Highlights

ಆಸ್ತಿಗಾಗಿ ವ್ಯಕ್ತಿಯೊಬ್ಬ ದುಷ್ಕೃತ್ಯ ಎಸಾಗಿದ್ದಾನೆ, ತನ್ನ ಮಗನೊಂದಿಗೆ ತನ್ನ ವಯಸ್ಸಾದ ತಾಯಿ ಮತ್ತು ಸಹೋದರಿಯನ್ನು ಕೊಂದಿದ್ದಾನೆ, ಡಿಶಾದ ಸಂಬಲ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಭುವನೇಶ್ವರ: ಈ ಸ್ಟೋರಿ ಓದಿದ ಮೇಲೆ ನಿಜಕ್ಕೂ ನೀವು, ಇಂತಹ ಮಕ್ಕಳು ಇರ್ತಾರ ಅಂತ ಶಾಕ್ ಆಗೋದು ನಿಜ, ಯಾಕಂದ್ರೆ ಆಸ್ತಿಗಾಗಿ ವ್ಯಕ್ತಿಯೊಬ್ಬ ಅಂತಹ ಕೃತ್ಯ ಎಸಗಿದ್ದಾನೆ. ತನ್ನ ಮಗನೊಂದಿಗೆ ಸೇರಿ ತನ್ನ ವಯಸ್ಸಾದ ತಾಯಿ ಮತ್ತು ತಂಗಿಯನ್ನು ಕೊಂದಿದ್ದಾನೆ (Double Murder) ಪಾಪಿ ಮಗ.

ಕೊಲೆ ಮಾಡಿ ನಂತರ ಬೆಂಕಿ ಹೊತ್ತಿಕೊಂಡು ಸತ್ತಿದ್ದಾರೆ ಎಂದು ನಂಬಿಸಲು ಯತ್ನಿಸಿದ್ದ, ಆದರೆ, ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬಿದ್ದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಒಡಿಶಾದ ಸಂಬಲ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನವೆಂಬರ್ 5 ರ ರಾತ್ರಿ ಕಟ್ಟಡದ ಮೊದಲ ಮಹಡಿಯಿಂದ ಬೆಂಕಿ ಮತ್ತು ಹೊಗೆ ಬರುತ್ತಿರುವುದನ್ನು ಸ್ಥಳೀಯರು ಗಮನಿಸಿದರು.

ಈ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತಲುಪಿದ್ದಾರೆ. ಅಲ್ಲಿ ವಾಸಿಸುವ 90 ವರ್ಷದ ಸ್ನೇಹಲತಾ ದೀಕ್ಷಿತ್ ಮತ್ತು ಅವರ ಮಗಳು ಸೈರೇಂದ್ರಿ ದೀಕ್ಷಿತ್ (62) ಅವರ ಸುಟ್ಟ ಶವಗಳು ಪತ್ತೆಯಾಗಿವೆ. ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.

ಈ ನಡುವೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಯೋಜನಾಬದ್ಧವಾಗಿ ಇಬ್ಬರು ಮಹಿಳೆಯರ ಕೊಲೆ ನಡೆದಿರುವುದು ಪೊಲೀಸರಿಗೆ ತಿಳಿದು ಬಂದಿದೆ. ಸ್ನೇಹಲತಾ ದೀಕ್ಷಿತ್ ಅವರ ಮಗ ಜಗನ್ನಾಥ್ ತನ್ನ ಮಗ ಸಂಕೇತ್ ಜೊತೆಗೆ ತನ್ನ ತಾಯಿ ಮತ್ತು ಸಹೋದರಿಯ ಕತ್ತು ಹಿಸುಕಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಳಿಕ  ದೇಹಕ್ಕೆ ಬೆಂಕಿ ಹಚ್ಚಿ ಬೆಂಕಿ ಹೊತ್ತಿಕೊಂಡು ಸತ್ತಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದಾನೆ. ಸ್ನೇಹಲತಾ ಅವರ ಕಿರಿಯ ಮಗಳ ದೂರಿನ ಆಧಾರದ ಮೇಲೆ ಕೊಲೆಗೆಡುಕ ಮಗ ಮತ್ತು ಮೊಮ್ಮಗನನ್ನು ಬಂಧಿಸಲಾಗಿದೆ.

Double Murder In Odisha, Father Son Kill Mother And Sister Over Property Dispute

Related Stories