Crime News: ಕೌಟುಂಬಿಕ ಕಲಹದಿಂದ ಕತ್ತು ಹಿಸುಕಿ ಮಹಿಳೆ ಹತ್ಯೆ, ಪತಿ ಬಂಧನ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯ ಕತ್ತು ಹಿಸುಕಿ ಕೊಂದ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ಹಾಸನ (Hassan): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯ ಕತ್ತು ಹಿಸುಕಿ ಕೊಂದ ಪತಿಯನ್ನು (Husband Kills Wife) ಪೊಲೀಸರು ಬಂಧಿಸಿರುವ ಘಟನೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ಉಮೇಶ್ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಗ್ರಾಮದವರು. ಇವರ ಪತ್ನಿ ವಿದ್ಯಾ (24 ವರ್ಷ). ಕಳೆದ 15 ದಿನಗಳಿಂದ ವಿದ್ಯಾ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ತವರು ಮನೆಗೆ ತೆರಳಿದ್ದರು. 2 ದಿನಗಳ ಹಿಂದೆ ವಿದ್ಯಾ ಆರೋಗ್ಯದಲ್ಲಿ ಚೇತರಿಸಿಕೊಂಡು ಗಂಡನ ಮನೆಗೆ ಮರಳಿದ್ದರು.

ಈ ಸಂದರ್ಭದಲ್ಲಿ 26ರಂದು ರಾತ್ರಿ ಪತಿ-ಪತ್ನಿಯ ನಡುವೆ ಜಗಳ ನಡೆದಿದೆ. ನಂತರ ಇಬ್ಬರೂ ನಿದ್ದೆಗೆ ಜಾರಿದರು. ಮಧ್ಯರಾತ್ರಿ ಎಚ್ಚೆತ್ತುಕೊಂಡ ಉಮೇಶ್ ಕೋಪದ ಭರದಲ್ಲಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

Crime News: ಕೌಟುಂಬಿಕ ಕಲಹದಿಂದ ಕತ್ತು ಹಿಸುಕಿ ಮಹಿಳೆ ಹತ್ಯೆ, ಪತಿ ಬಂಧನ - Kannada News

ಕತ್ತು ಹಿಸುಕಿ ಕೊಲೆ

ಬಳಿಕ ವಿದ್ಯಾಳ ಪೋಷಕರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ, ವಿದ್ಯಾ ಹಠಾತ್ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾನೆ. ಅದನ್ನು ಕೇಳಿ ಬೆಚ್ಚಿಬಿದ್ದ ಅವರು ಬಳಿಕ ಸಕಲೇಶಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ವಿದ್ಯಾಳ ಮೃತದೇಹವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಬಳಿಕ ಪೊಲೀಸರು ಉಮೇಶ್ ನನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ವಿದ್ಯಾಳನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ನಂತರ ಪೊಲೀಸರು ಉಮೇಶ್‌ನನ್ನು ಬಂಧಿಸಿದ್ದಾರೆ.

ನಂತರ ವಿದ್ಯಾಳ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಆ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.

husband Arrested who killed the Wife in a family dispute

Follow us On

FaceBook Google News

husband Arrested who killed the Wife in a family dispute

Read More News Today