Tomorrow HoroscopeDaily Horoscopeದಿನ ಭವಿಷ್ಯ 2025

ದಿನ ಭವಿಷ್ಯ 10-6-2025: ಇಂದಿನ ದಿನ ನಿಮಗೆ ಹೇಗಿರುತ್ತೆ? ಭವಿಷ್ಯ ನೋಡಿ ಪ್ಲ್ಯಾನ್ ಮಾಡಿ

ನಾಳೆಯ ದಿನ ಭವಿಷ್ಯ 10-6-2025 ಮಂಗಳವಾರ ಈ ರಾಶಿಗಳಿಗೆ ಗುರಿಗಳನ್ನು ಸಾಧಿಸುವ ಸಾಧ್ಯತೆ ಇದೆ - Daily Horoscope - Naleya Dina Bhavishya 10 June 2025

Publisher: Kannada News Today (Digital Media)

ದಿನ ಭವಿಷ್ಯ 10 ಜೂನ್ 2025

ಮೇಷ ರಾಶಿ (Aries): ಈ ದಿನ ಸ್ವಲ್ಪ ಗೊಂದಲದೊಂದಿಗೆ ಪ್ರಾರಂಭವಾಗಬಹುದು. ಕೆಲಸದ ಜವಾಬ್ದಾರಿಗಳು ಹೆಚ್ಚಾಗಬಹುದು. ನಿರ್ಧಾರ ತೆಗೆದುಕೊಳ್ಳುವಾಗ ತಾಳ್ಮೆ ಮುಖ್ಯ. ಆರೋಗ್ಯದ ಕಡೆ ಗಮನವಿರಲಿ. ಕುಟುಂಬದಲ್ಲಿ ಆತ್ಮೀಯರ ಮಾತು ಕೇಳಿ. ಹಣಕಾಸು ವಿಚಾರದಲ್ಲಿ ಜಾಣತನ ಅಗತ್ಯ. ವೃತ್ತಿಯಲ್ಲಿ ಬದಲಾವಣೆ ತರುವ ಸೂಚನೆ ಇದೆ. ಸಂಜೆವೇಳೆಗೆ ಮನಸ್ಸು ಶಾಂತಿವಾಗುವುದು.

ವೃಷಭ ರಾಶಿ (Taurus): ಹಳೆಯ ಬಾಕಿ ಕೆಲಸಗಳು ಮುಕ್ತಾಯವಾಗುವ ದಿನ. ಸ್ನೇಹಿತರ ಜೊತೆ ಸಮಯ ಕಳೆಯುವ ಸಂದರ್ಭ. ಕುಟುಂಬದಲ್ಲಿ ಸಂತೋಷದ ವಿಚಾರವೊಂದು ನಡೆಯಬಹುದು. ಭವಿಷ್ಯದ ಯೋಜನೆಗಳಿಗೆ ಚಾಲನೆ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ. ಮಾನಸಿಕ ಒತ್ತಡ ಕಡಿಮೆಯಾಗುವ ಲಕ್ಷಣ ಕಾಣುತ್ತಿದೆ. ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ.

ದಿನ ಭವಿಷ್ಯ 10-6-2025

ಮಿಥುನ ರಾಶಿ (Gemini): ಇಂದಿನ ದಿನ ವ್ಯವಹಾರದಲ್ಲಿ ಲಾಭದ ನಿರೀಕ್ಷೆ ಇದೆ. ಉದ್ಯೋಗದಲ್ಲಿ ಹಿರಿಯರಿಂದ ಮೆಚ್ಚುಗೆ ಸಿಗಬಹುದು.  ಹಳೆಯ ಸ್ನೇಹಿತರಿಂದ ಶುಭ ಸುದ್ದಿ ಬರಬಹುದು. ಸಾಮಾಜಿಕವಾಗಿ ನಿಮ್ಮ ಕೀರ್ತಿ ಹೆಚ್ಚಲಿದೆ. ಹಳೆಯ ವಿವಾದವೊಂದು ಬಗೆಹರಿಯುತ್ತದೆ, ಅದು ಸಂಬಂಧಗಳಲ್ಲಿ ಮಾಧುರ್ಯವನ್ನು ತರುತ್ತದೆ. ಹೊಸ ಉದ್ಯೋಗ ಅಥವಾ ಬಡ್ತಿಯ ಸಾಧ್ಯತೆ ಇದೆ.

ಕಟಕ ರಾಶಿ (Cancer): ಕಾಲ ನಿರೀಕ್ಷೆಯಂತೆ ಈ ದಿನ ಸಾಗದಿರಬಹುದು. ಸಹನೆ ಮತ್ತು ತಾಳ್ಮೆ ನಿಮಗೆ ಶಕ್ತಿ ನೀಡುತ್ತದೆ. ಸಹೋದ್ಯೋಗಿಗಳಿಂದ ಸಹಕಾರ ದೊರೆಯುವುದು. ಆರೋಗ್ಯ ಸಮಸ್ಯೆ ಸ್ವಲ್ಪ ಕಾಡಬಹುದು. ಹಣಕಾಸಿನಲ್ಲಿ ತಾತ್ಕಾಲಿಕ ಖರ್ಚು ಹೆಚ್ಚಬಹುದು. ಆತ್ಮೀಯರ ಮಾತು ನಿಮಗೆ ಶಾಂತಿ ನೀಡಬಹುದು. ವಿವಾದಾತ್ಮಕ ವಿಷಯಗಳಿಂದ ನಿಮ್ಮನ್ನು ದೂರವಿರಿಸಲು ನಿಮಗೆ ಸಾಧ್ಯವಾಗುತ್ತದೆ.

ಸಿಂಹ ರಾಶಿ (Leo): ಸಮಯ ನಿಮ್ಮ ಪರಿಯಾಗಿದೆ. ಹೊಸ ಅವಕಾಶಗಳು ಮನಸ್ಸು ಉಲ್ಲಾಸದಿಂದ ತುಂಬಲಿದೆ. ಈ ದಿನ ಕೆಲವು ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಸಾಲ ಅಥವಾ ಲೋನ್ ವಿಚಾರ ತಾಳ್ಮೆಯಿಂದ ನಿರ್ವಹಿಸಿ. ಆರೋಗ್ಯ ಸ್ಥಿರವಾಗಿರುತ್ತದೆ. ಕಚೇರಿಯಲ್ಲಿ ನಿಮ್ಮ ಕೆಲಸ ಗಮನ ಸೆಳೆಯಲಿದೆ. ಕುಟುಂಬದಲ್ಲಿ ನಿಮಗೆ ಧೈರ್ಯದ ಬೆಂಬಲ ಸಿಗಲಿದೆ. ಚಿಂತೆಯಿಲ್ಲದ ಸಂಜೆ ಕಳೆಯಬಹುದು.

ಕನ್ಯಾ ರಾಶಿ (Virgo): ದಿನದ ಆರಂಭದಲ್ಲಿ ಕೆಲ ಗೊಂದಲಗಳು ಇರಬಹುದು. ಕೆಲಸದಲ್ಲಿ ಮುಂದಾಲೋಚನೆ ಮುಖ್ಯ. ಹಣಕಾಸಿನ ಲೆಕ್ಕಾಚಾರ ಸರಿದೂಗಿಸಬಹುದು. ಬಂಧುಮಿತ್ರರಿಂದ ಹೊಸ ಉಪಯುಕ್ತ ಮಾಹಿತಿ ಸಿಗಬಹುದು. ಮನಸ್ಸಿಗೆ ನೆಮ್ಮದಿ ತರಲು ಪ್ರವಾಸ ಯೋಚನೆ ಬರಬಹುದು. ಸ್ನೇಹಿತರೊಂದಿಗೆ ಸಮಯ ಕಳೆಯುವುದು ಲಾಭಕಾರಿಯಾಗಲಿದೆ. ಯಾವುದೇ ತೀರ್ಮಾನಕ್ಕೂ ಮೊದಲು ವಿಶ್ಲೇಷಣೆ ಮಾಡಿ. ಧೈರ್ಯದಿಂದ ಮುಂದುವರಿಯಿರಿ.

Daily Horoscope for 10 June 2025

ತುಲಾ ರಾಶಿ (Libra): ನಿಮ್ಮ ಶ್ರಮ ಫಲ ನೀಡುವ ದಿನ. ಅಧಿಕಾರಿಗಳ ಗಮನ ಸೆಳೆಯುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಮನೆಯಲ್ಲಿ ಸಂಭ್ರಮದ ವಿಚಾರವಿದೆ. ಹಣಕಾಸಿನಲ್ಲಿ ಹೊಸ ಸುಧಾರಣೆ ಕಾಣಬಹುದು. ಬುದ್ಧಿವಂತಿಕೆ ನಿಮ್ಮ ಶಕ್ತಿಯಾಗಲಿದೆ. ನೀವು ಹಾಕಿದ ಯೋಜನೆಗಳಿಗೆ ಚಾಲನೆ ಸಿಗಲಿದೆ. ಉದ್ಯೋಗದಲ್ಲಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ. ತಾಳ್ಮೆಯಿಂದ ಕೆಲಸ ಮಾಡಿದರೆ ವ್ಯವಹಾರದಲ್ಲಿ ಲಾಭ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ (Scorpio): ಪುನಃಪ್ರಯತ್ನದ ಮೂಲಕ ಯಶಸ್ಸು ಸಾಧ್ಯ. ಹಳೆಯ ತಪ್ಪುಗಳಿಂದ ಪಾಠ ಕಲಿಯುವ ಅವಕಾಶ. ಆರ್ಥಿಕವಾಗಿ ಇಂದು ಉತ್ತಮ ಸ್ಥಿತಿ. ಸಂಬಂಧಗಳಲ್ಲಿ ಸ್ಪಷ್ಟತೆ ತರಲು ಯತ್ನಿಸಿ. ಕುಟುಂಬದ ಸದಸ್ಯರು ನಿಮ್ಮ ನೆರವಾಗಿ ಇರುತ್ತಾರೆ. ಕೆಲಸದಲ್ಲಿ ಸ್ವಲ್ಪ ಸ್ಪರ್ಧಾತ್ಮಕತೆ ಇದೆ. ದೈವಿಕ ನಂಬಿಕೆ ನಿಮ್ಮ ಗೆಲುವಿಗೆ ಬಲ. ಸಂಯಮದಿಂದ ದಿನವನ್ನಾಳುವುದು ಸೂಕ್ತ.

ಧನು ರಾಶಿ (Sagittarius): ಪ್ರಯತ್ನಗಳ ಮೂಲಕ ಯಶಸ್ಸು ಸಾಧ್ಯ. ಉದ್ಯೋಗ ಬದಲಾವಣೆ ಯೋಚನೆ ಮಾಡಬಹುದಾದ ದಿನ. ಮನಸ್ಸಿಗೆ ನೆಮ್ಮದಿ ತರಲು ಸಂಗೀತ ಕೇಳಿ. ಹೊಸ ತಂತ್ರಜ್ಞಾನ ತಿಳಿದುಕೊಳ್ಳುವ ಅವಕಾಶ. ಹಣದ ವಿಚಾರದಲ್ಲಿ ಜಾಣತನ ತೋರಿಸಿ. ಹೊಸ ವ್ಯಕ್ತಿಗಳ ಪರಿಚಯ ಲಾಭಕಾರಿಯಾಗಬಹುದು. ಹತ್ತಿರದವರ ಸಲಹೆ ಉಪಯುಕ್ತ. ಆದರೆ ಹೆಚ್ಚು ಶ್ರಮಿಸಬೇಕಾಗಬಹುದು.

ಮಕರ ರಾಶಿ (Capricorn): ಧೈರ್ಯದಿಂದ ಕಾರ್ಯ ನಿರ್ವಹಿಸುವ ದಿನ. ಆರ್ಥಿಕವಾಗಿ ಸಮಾಧಾನಕಾರಿ ಬೆಳವಣಿಗೆ. ಹಿರಿಯರೊಂದಿಗೆ ಮಾತುಕತೆ ನಡೆಸುವುದು ಲಾಭಕಾರಿಯಾಗಿದೆ. ವ್ಯವಹಾರದಲ್ಲಿ ಲಾಭದ ಸೂಚನೆ ಇದೆ. ನವೀನ ಐಡಿಯಾಗಳಿಗೆ ಅವಕಾಶ. ಆರೋಗ್ಯದ ಕಡೆ ಜಾಗೃತಿ ಅಗತ್ಯ. ಗುರಿಯತ್ತ ದಿಟ್ಟ ಹೆಜ್ಜೆ ಇಡಿ. ಆತ್ಮಚಿಂತನೆ ನಿಮಗೆ ಸ್ಪಷ್ಟ ದಿಕ್ಕು ತೋರಿಸುತ್ತದೆ.

ಕುಂಭ ರಾಶಿ (Aquarius): ಕೆಲಸದಲ್ಲಿ ಪ್ರಗತಿ ಕಾಣಬಹುದು. ಹಣಕಾಸು ಸ್ಥಿತಿ ಸ್ಥಿರವಾಗುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯುವ ಖುಷಿ. ಸಣ್ಣ ಪ್ರಯಾಣದ ಯೋಚನೆ ಯಶಸ್ವಿಯಾಗಲಿದೆ. ಸ್ನೇಹಿತರಿಂದ ಉತ್ತಮ ಸಪೋರ್ಟ್ ಸಿಗಲಿದೆ. ತೊಂದರೆ ಎದುರಾದರೂ ನೀವು ನಿಂತುಕೊಳ್ಳುತ್ತೀರಿ. ಧೈರ್ಯ ಮತ್ತು ವಿಶ್ವಾಸ ನಿಮ್ಮ ಶಕ್ತಿ. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಅತ್ಯುತ್ತಮವಾಗಿರುತ್ತದೆ.

ಮೀನ ರಾಶಿ (Pisces): ಸಮಯ ತಾಳ್ಮೆ ಪರೀಕ್ಷಿಸುತ್ತಿದೆ. ಧೈರ್ಯದಿಂದ ಪ್ರತಿಯೊಂದು ಹಂತ ಸಾಗಿಸಿ. ಕೆಲಸದಲ್ಲಿ ಬದಲಾವಣೆಗಳ ಸಾಧ್ಯತೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದ ಸಮರ್ಥನೆ ನಿಮಗೆ ಶಕ್ತಿ. ದೈನಂದಿನ ಜವಾಬ್ದಾರಿ ಚೆನ್ನಾಗಿ ನಿಭಾಯಿಸುತ್ತೀರಿ. ಆತ್ಮವಿಶ್ವಾಸ ಹೆಚ್ಚಾಗುತ್ತಿದೆ. ಸಂಜೆ ಸಮಯದಲ್ಲಿ ಶಾಂತಿ ಸಿಗಲಿದೆ. ಸಮಯದ ವೇಗವು ಹಠಾತ್ ಆರ್ಥಿಕ ಲಾಭಗಳನ್ನು ಸೂಚಿಸುತ್ತದೆ

Our Whatsapp Channel is Live Now 👇

Whatsapp Channel

Related Stories