Tomorrow HoroscopeDaily Horoscopeದಿನ ಭವಿಷ್ಯ 2025

ದಿನ ಭವಿಷ್ಯ 15-4-2025: ಈ ರಾಶಿಗಳಿಗೆ ಆತುರವು ನಷ್ಟಕ್ಕೆ ಕಾರಣ, ಆದಾಯ ಇಳಿಕೆ

ನಾಳೆಯ ದಿನ ಭವಿಷ್ಯ 15-4-2025 ಮಂಗಳವಾರ ಈ ರಾಶಿಗಳಿಗೆ ಆಸ್ತಿಗೆ ಸಂಬಂಧಿಸಿದ ವಿಷಯದಲ್ಲಿ ಯಶಸ್ಸು ಸಿಗುತ್ತದೆ - Daily Horoscope - Naleya Dina Bhavishya 15 April 2025

Publisher: Kannada News Today (Digital Media)

ದಿನ ಭವಿಷ್ಯ 15 ಏಪ್ರಿಲ್ 2025

ಮೇಷ ರಾಶಿ (Aries): ದಿನವು ಶುಭಕಾರ್ಯಗಳಿಂದ ತುಂಬಿರಲಿದೆ. ಬಹುಕಾಲದಿಂದ ಬಾಕಿಯಾಗಿದ್ದ ಕೆಲಸಗಳು ಪೂರ್ತಿಯಾಗುವ ಸಾಧ್ಯತೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಕುಟುಂಬದಲ್ಲಿ ಹರ್ಷಮಯ ವಾತಾವರಣ ಉಂಟಾಗುತ್ತದೆ. ಒಂದು ಶುಭ ಸಂದೇಶ ನಿಮಗೆ ತಲುಪಬಹುದು. ಹಣಕಾಸು ಮಟ್ಟದಲ್ಲಿ ಏಳಿಗೆ ಕಾಣುತ್ತೀರಿ. ವ್ಯಾಪಾರದಲ್ಲಿ ಏಳಿಗೆ ಇದೆ.

ವೃಷಭ ರಾಶಿ (Taurus): ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆಯಿಂದ ಇರಬೇಕಾದ ದಿನ. ಕೆಲಸದ ಸ್ಥಳದಲ್ಲಿ ತೊಂದರೆ ಎದುರಾಗಬಹುದು. ಮನೆಗೆ ದೂರದ ಬಂಧುಗಳು ಭೇಟಿ ನೀಡಬಹುದು, ಈ ವೇಳೆ ಖರ್ಚು ಕೂಡ ಅಧಿಕವಾಗಬಹುದು. ಹಣದ ವ್ಯವಹಾರಗಳಲ್ಲಿ ಇತರರ ಸಲಹೆ ತೆಗೆದುಕೊಳ್ಳಿ. ಧಿಡೀರ್ ನಿರ್ಧಾರದಿಂದ ನಷ್ಟ ಆಗದಂತೆ ಮುನ್ನೆಚ್ಚರಿಕೆ ವಹಿಸಿ. ತಾಳ್ಮೆಯಿಂದ ನಿರ್ಧಾರ ಕೈಗೊಳ್ಳಿ.

ದಿನ ಭವಿಷ್ಯ 15-4-2025

ಮಿಥುನ ರಾಶಿ (Gemini): ಸಾಮಾಜಿಕವಾಗಿ ನಿಮ್ಮ ಸ್ಥಾನ ಹೆಚ್ಚಾಗಬಹುದು. ಶುಭ ಸುದ್ದಿಗಳು ಕೇಳಿ ಬರುತ್ತವೆ. ಕುಟುಂಬದಲ್ಲಿ ಖುಷಿಯ ಸಮಯ. ನಿರ್ಣಯ ತೆಗೆದುಕೊಳ್ಳುವ ಮೊದಲು ಎಲ್ಲ ಅಂಶಗಳನ್ನೂ ಪರಿಗಣಿಸಿ. ಒಳ್ಳೆಯ ಸುದ್ದಿ ಕೇಳುವ ಸಾಧ್ಯತೆ ಹೆಚ್ಚಿದೆ. ಸ್ನೇಹಿತರಿಂದ ಬೆಂಬಲ ದೊರಕುತ್ತದೆ. ಶಾಂತಿಯುತವಾಗಿ ಗುರಿ ತಲುಪಲು ಪ್ರಯತ್ನಿಸಿ. ಸಮಯ ನಿಮ್ಮ ಕಡೆ ಇದೆ.

ಕಟಕ ರಾಶಿ (Cancer): ದಿನವು ಮನಸ್ಸಿನಲ್ಲೊಂದು ಗೊಂದಲ ಉಂಟುಮಾಡಬಹುದು. ಮನೆ ಸಂಬಂಧಿತ ವಿಚಾರಗಳಲ್ಲಿ ನಿರ್ಧಾರ ತೀರ್ಮಾನಗೊಳ್ಳಲು ಸಮಯ ಬೇಕಾಗುತ್ತದೆ. ಕೆಲವೊಂದು ಕಾರ್ಯಗಳು ಮುಂದೂಡಬೇಕಾಗಬಹುದು. ಹಣದ ವ್ಯವಹಾರದಲ್ಲಿ ಆತುರ ತಪ್ಪಿಸಿ. ಆತ್ಮವಿಶ್ವಾಸ ಹೆಚ್ಚಿಸಿಕೊಂಡರೆ ಸಮಸ್ಯೆ ಪರಿಹಾರ ಸಿಗಬಹುದು. ಯಾರ ಮೇಲೂ ಟಿಕೆ ಮಾಡಬೇಡಿ.

ಸಿಂಹ ರಾಶಿ (Leo): ಆತಂಕ ಹಾಗೂ ಕೋಪ ನಿಯಂತ್ರಣದಲ್ಲಿ ಇಡಬೇಕು. ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಸಾಧ್ಯ. ಅಜಾಗರೂಕತೆ ನಿಮ್ಮ ಗುರಿಯಿಂದ ದೂರವಿರಿಸಬಹುದು. ಅತಿಯಾದ ಆಲೋಚನೆ ತಪ್ಪಿಸಿ ದೃಢ ನಿರ್ಧಾರ ತೆಗೆದುಕೊಳ್ಳಿ. ಹಿರಿಯರ ಸಲಹೆ ನಿಮಗೆ ಒಳಿತಾಗಿಸಬಹುದು. ಧೈರ್ಯದಿಂದ ಮುಂದೆ ಸಾಗಿದರೆ ಲಾಭ ಕಾಣಬಹುದು. ಆದರೆ ಪ್ರಾಮಾಣಿಕತನ ಇರಲಿ.

ಕನ್ಯಾ ರಾಶಿ (Virgo): ದಿನವು ಕೆಲವು ಅಡಚಣೆಗಳನ್ನು ತರಬಹುದು. ಆಸ್ತಿ ಸಂಬಂಧಿ ಸಮಸ್ಯೆ ಎದುರಾಗಬಹುದು. ಮೋಸ ಹೋಗಬಹುದಾದ ಸಾಧ್ಯತೆ ಹೆಚ್ಚಿದೆ, ಆದ್ದರಿಂದ ಅಪರಿಚಿತರಿಂದ ದೂರವಿರಿ. ಹೊಸ ಕಾರ್ಯ ಆರಂಭಿಸಲು ಇದು ಯೋಗ್ಯ ಕಾಲವಲ್ಲ. ಆತ್ಮಸ್ಥೈರ್ಯ ಕಳೆದುಕೊಂಡರೆ ಶಕ್ತಿಯ ಹಿನ್ನಡೆ ಆಗಬಹುದು. ಆಸ್ತಿ ವ್ಯವಹಾರಗಳ ಕುರಿತು ಎಚ್ಚರಿಕೆ ಅಗತ್ಯ.

ತುಲಾ ರಾಶಿ (Libra): ಉತ್ಸಾಹ, ಮನಸ್ಸಿನಲ್ಲಿ ಶಾಂತಿ – ಈ ಎರಡು ನಿಮಗೆ ಈ ದಿನ ಹೊಸ ಶಕ್ತಿ ನೀಡಲಿದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವ ಸಾಧ್ಯತೆ ಇದೆ. ಆರ್ಥಿಕ ಲಾಭ ಸಂಭವಿಸಬಹುದು. ಖರೀದಿ ಅಥವಾ ಅಲಂಕಾರಿಕ ವಸ್ತು ಖರೀದಿಸುವ ಸಾಧ್ಯತೆ ಇದೆ. ಎಲ್ಲಾ ಪ್ರಯತ್ನಗಳು ನಿಮಗೆ ಒಳ್ಳೆಯ ಫಲಿತಾಂಶ ನೀಡಬಹುದು.

ವೃಶ್ಚಿಕ ರಾಶಿ (Scorpio): ಶರೀರ ಅಥವಾ ಮನಸ್ಸಿನಲ್ಲಿ ಸ್ವಲ್ಪ ಅಸೌಖ್ಯ ಅನುಭವಿಸುವ ಸಾಧ್ಯತೆ ಇದೆ. ಈ ದಿನ ನಿಮಗೆ ಬದಲಾವಣೆಗಳ ಸಮಯ. ಹೊಸ ಜನರ ಪರಿಚಯದಿಂದ ಹೊಸ ವಿಚಾರಗಳು ಬರುತ್ತವೆ. ಈ ವೇಳೆ ಕುಟುಂಬದಲ್ಲಿ ಗೊಂದಲಗಳನ್ನು ದೂರ ಇಡಲು ಯತ್ನಿಸಿ. ಹಣಕಾಸು ವಿಷಯಗಳಲ್ಲಿ ಲಾಭ ಕಾಣಬಹುದು. ಕೆಲಸ ಬದಲಾವಣೆ ಸಾಧ್ಯತೆ ಇದೆ.

ಧನು ರಾಶಿ (Sagittarius): ಸೋಮಾರಿತನದಿಂದ ಕೆಲವೊಂದು ಕೆಲಸಗಳು ಸ್ಥಗಿತಗೊಳ್ಳಬಹುದು. ಸೋಮಾರಿತನದಿಂದ ನಿಮ್ಮ ಸಮಯ ವ್ಯರ್ಥವಾಗಬಾರದು. ಮಕ್ಕಳ ವಿಚಾರದಲ್ಲಿ ಹೆಚ್ಚು ಸಮಯ ವಹಿಸುವ ಅವಶ್ಯಕತೆ ಇದೆ. ಹಣಕಾಸು ಸ್ಥಿತಿ ಸ್ಥಿರವಾಗಿರುತ್ತದೆ. ಯಾವುದೇ ತೀರ್ಮಾನದಲ್ಲಿ ಸ್ಪಷ್ಟತೆ ಇರಲಿ. ಕಳೆದ ಕೆಲ ದಿನಗಳಿಂದ ಎದುರು ನೋಡಿದ ಕೆಲಸಗಳು ಸರಾಗವಾಗುತ್ತವೆ.

ಮಕರ ರಾಶಿ (Capricorn): ಸಾಮಾಜಿಕವಾಗಿ ನಿಮಗೆ ಗೌರವ ಸಿಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಪ್ರಾಯಾಣಿಸುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಮಿತ್ರರಿಂದ ಸಂತೋಷದ ಸುದ್ದಿ ಕೇಳಬಹುದು. ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಕಾಣುವ ಎಲ್ಲಾ ಸಾಧ್ಯತೆಗಳಿವೆ. ಒಟ್ಟಾರೆ ಒಳ್ಳೆಯ ದಿನ.

ಕುಂಭ ರಾಶಿ (Aquarius): ಹೊಸ ಪರಿಚಯಗಳು ಉಂಟಾಗುತ್ತವೆ. ಈ ದಿನ ಖರ್ಚು ಹೆಚ್ಚಾಗಬಹುದು. ಬಂಧು ಮಿತ್ರರೊಂದಿಗೆ ಒಳ್ಳೆಯ ಸಂಬಂಧ ಉಳಿಸಿಕೊಳ್ಳಿ. ಜೊತೆಗೆ ನೀವು ಸಮಯದ ಮೌಲ್ಯ ತಿಳಿಯಬೇಕು. ಸೋಮಾರಿತನದಿಂದ ಯಾವುದೇ ಅವಕಾಶ ತಪ್ಪುವಂತೆ ಮಾಡಿಕೊಳ್ಳಬೇಡಿ. ನಿಮ್ಮ ಶ್ರಮಕ್ಕೆ ಖಂಡಿತ ನೀವು ಫಲಿತಾಂಶ ಪಡೆಯುತ್ತೀರಿ.

ಮೀನ ರಾಶಿ (Pisces): ಈ ದಿನ ಒಳ್ಳೆಯ ವ್ಯಕ್ತಿಗಳ ಪರಿಚಯದಿಂದ ಲಾಭ ಸಿಗಬಹುದು. ಗೃಹದಲ್ಲಿ ಸಂಭ್ರಮ. ಸ್ತ್ರೀಯರ ಮೂಲಕ ಸಹಾಯ ಲಭಿಸುತ್ತದೆ. ಕುಟುಂಬದಲ್ಲಿ ಹೆಚ್ಚು ನೆಮ್ಮದಿ ಅನುಭವಿಸುತ್ತೀರಿ. ಶ್ರದ್ಧಾ, ನಂಬಿಕೆಯಿಂದ ನಿಮ್ಮ ಕಾರ್ಯಗಳು ಯಶಸ್ವಿಯಾಗುತ್ತವೆ. ನಿಮ್ಮ ಗುರಿಗಳ ಸಾಧನೆಗೆ ನೀವು ಈ ದಿನ ಅಡಿಪಾಯ ಹಾಕುತ್ತಿರಿ. ಕಾರ್ಯಗಳು ಫಲಿಸುತ್ತವೆ.

Our Whatsapp Channel is Live Now 👇

Whatsapp Channel

Related Stories