ದಿನ ಭವಿಷ್ಯ 15-3-2025: ಶನೇಶ್ವರ ದೆಸೆ, ಈ ರಾಶಿಗಳಿಗೆ ಹಣಕಾಸಿನಲ್ಲಿ ಪ್ರಚಂಡ ಯೋಗ
ನಾಳೆಯ ದಿನ ಭವಿಷ್ಯ 15-3-2025 ಶನಿವಾರ ಈ ರಾಶಿಗಳು ಸಾಮರ್ಥ್ಯಗಳಲ್ಲಿ ನಂಬಿಕೆ ಇರಿಸಬೇಕು - Daily Horoscope - Naleya Dina Bhavishya 15 March 2025

ದಿನ ಭವಿಷ್ಯ 15 ಮಾರ್ಚ್ 2025
ಮೇಷ ರಾಶಿ (Aries): ಇಂದಿನ ದಿನ ಆರೋಗ್ಯದಲ್ಲಿ ಉತ್ತಮ ಸ್ಥಿತಿ. ಹೊಸ ವಸ್ತುಗಳು, ಆಭರಣಗಳ ಖರೀದಿಯ ಸಂಭ್ರಮ. ಕುಟುಂಬದಲ್ಲಿ ಸಂತೋಷದ ವಾತಾವರಣ. ಸಾಲಭಾದೆ ದೂರಾಗುವ ಸಾಧ್ಯತೆ. ಧೈರ್ಯ, ಸಾಹಸದಿಂದ ಮುಂದೆ ಸಾಗುವ ಸಮಯ. ತಕ್ಷಣ ಫಲ ನೀಡುವ ಪ್ರಯತ್ನಗಳು. ಆಕಸ್ಮಿಕ ಹಣಲಾಭ ಸಾಧ್ಯತೆ. ಹೊಸ ಕಾರ್ಯದಲ್ಲಿ ಅಡಚಣೆ ಇದ್ದರೂ ಒಳ್ಳೆಯ ಫಲಿತಾಂಶ. ಸ್ಥಳಾಂತರದ ಸಾಧ್ಯತೆ.
ವೃಷಭ ರಾಶಿ (Taurus): ಈ ದಿನ ಬಯಸಿದ್ದು ಒಂದು, ಆದರೆ ನಡೆಯುವದು ಮತ್ತೊಂದು! ಸಮಯ ಪಾಲನೆಗೆ ಗಮನಹರಿಸಬೇಕು. ಚಂಚಲತೆ ಸಮಸ್ಯೆ ತರುವ ಸಾಧ್ಯತೆ. ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ತೀಕ್ಷ್ಣ ಅನಾರೋಗ್ಯ ಸಮಸ್ಯೆ ಇಲ್ಲ, ಆದರೆ ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ. ಅನಗತ್ಯ ಪ್ರಯಾಣ ಬೇಡ. ಹಣ ವ್ಯಯ ಹೆಚ್ಚಾಗುವ ಸಾಧ್ಯತೆ.
ಮಿಥುನ ರಾಶಿ (Gemini): ಪಟ್ಟುಹಿಡಿದ ಕಾರ್ಯಗಳನ್ನು ಯಶಸ್ವಿಯಾಗಿ ಮುಗಿಸಬಲ್ಲಿರಿ. ಉದ್ಯೋಗ ಕ್ಷೇತ್ರದಲ್ಲಿ ಗೌರವ, ಮಾನ್ಯತೆ. ಕುಟುಂಬ ಪರಿಸ್ಥಿತಿಗಳು ಹಿತಕರ. ಸಂತೋಷದ ಕ್ಷಣಗಳ ಅನುಭವ. ಶುಭ ಸುದ್ದಿ ಕೇಳುವ ಸಾಧ್ಯತೆ. ವಿವಾಹ ಅಥವಾ ಶುಭ ಕಾರ್ಯದ ಯೋಗ. ನಿರೀಕ್ಷಿತ ಕಾರ್ಯ ಯಶಸ್ವಿಯಾಗುವ ಸಮಯ. ಸ್ವಲ್ಪ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಕಟಕ ರಾಶಿ (Cancer): ಎಲ್ಲಾ ಕ್ಷೇತ್ರದಲ್ಲಿ ಬೆಳವಣಿಗೆಯು ಕಾಣಿಸಿಕೊಳ್ಳುವ ಸಮಯ. ಆಕಸ್ಮಿಕ ಹಣಲಾಭ ಸಾಧ್ಯತೆ. ಕುಟುಂಬದಲ್ಲಿ ಹಬ್ಬದ ವಾತಾವರಣ. ಸ್ನೇಹಿತರು ಮತ್ತು ಸಂಬಂಧಿಕರ ಭೇಟಿ. ಸಮಾಜದಲ್ಲಿ ಗೌರವ ದೊರೆಯುವ ಸಾಧ್ಯತೆ. ಸಂಪೂರ್ಣ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ಮುಂದಿನ ದಿನಗಳಿಗಾಗಿ ಹೊಸ ಯೋಜನೆ ಮಾಡುವುದು ಉತ್ತಮ. ಹೊಸ ಅವಕಾಶಗಳ ಬಗ್ಗೆ ಮೊದಲು ಪರಿಶೀಲನೆ ನಡೆಸಿ.
ಸಿಂಹ ರಾಶಿ (Leo): ಮೋಸ ಹೋಗುವ ಸಾಧ್ಯತೆ ಇದೆ, ಎಚ್ಚರ! ಹಣಕಾಸು ಸ್ಥಿತಿಯ ಬಗ್ಗೆ ಕಾಳಜಿ ಅಗತ್ಯ. ಹೊಸ ಕಾರ್ಯ ಪ್ರಾರಂಭಿಸುವುದು ಸೂಕ್ತವಲ್ಲ. ಅನಿವಾರ್ಯ ಪ್ರಯಾಣಗಳು. ಚಂಚಲತೆ ನಿಮಗೆ ಅನಾನುಕೂಲ ತರುವ ಸಾಧ್ಯತೆ. ಹೊಸ ಪರಿಚಯಗಳಿಗೆ ಹೆಚ್ಚು ಮಹತ್ವ ನೀಡಬೇಡಿ. ಧೈರ್ಯ ಮತ್ತು ತಾಳ್ಮೆಯಿಂದ ಎಲ್ಲಾ ಸಮಸ್ಯೆಗಳನ್ನು ಎದುರಿಸಿ. ದಿನದ ಅಂತ್ಯದ ವೇಳೆಗೆ ಶುಭ ಸುದ್ದಿ ಕೇಳುವಿರಿ.
ಕನ್ಯಾ ರಾಶಿ (Virgo): ಸಣ್ಣ ವಿಷಯಗಳಲ್ಲಿಯೇ ಆಲೋಚನೆಗೆ ಒಳಗಾಗುವಿರಿ. ಉದ್ಯೋಗ ಕ್ಷೇತ್ರದಲ್ಲಿ ಎಚ್ಚರಿಕೆ ಅಗತ್ಯ. ಶಾಂತಿ ಮತ್ತು ಸಹನೆಯಿಂದ ಯಶಸ್ಸು. ಆವೇಶಕ್ಕೆ ಒಳಗಾದರೆ ಸಮಸ್ಯೆಗಳು ಉಂಟಾಗಬಹುದು. ಅನಿರೀಕ್ಷಿತ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶ. ಆಪ್ತರನ್ನು ಭೇಟಿಯಾಗಲು ಸಾಧ್ಯವಾಗದೆ ಖಿನ್ನತೆ. ಹೊಸ ಸ್ನೇಹಗಳು ನಂಬಿಕೆ ಸಂಪಾದಿಸುವ ಮೂಲಕ ಯಶಸ್ಸು ತರಬಹುದು.

ವೃಶ್ಚಿಕ ರಾಶಿ (Scorpio): ಕೈಗೊಂಡ ಕೆಲಸದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಹೊಸ ಕಾರ್ಯ ಪ್ರಾರಂಭಿಸುವುದು ಸೂಕ್ತವಲ್ಲ. ಅನಿವಾರ್ಯ ಪ್ರಯಾಣಗಳಲ್ಲಿ ಎಚ್ಚರವಿರಲಿ. ಭಯ ಮತ್ತು ಆತಂಕ ಕಡಿಮೆಯಾಗಲಿದೆ. ಸಾಲಭಾದೆ ನಿವಾರಣೆ ಹೊಂದುತ್ತದೆ, ಆದರೆ ಸ್ವಲ್ಪ ಸಮಯ ಬೇಕು. ಹಣಕಾಸಿನ ನಿರ್ವಹಣೆಯಲ್ಲಿ ಹೆಚ್ಚು ತಾಳ್ಮೆ ಅಗತ್ಯ. ಕ್ರಮೇಣ ಎಲ್ಲವೂ ಸರಿಹೊಂದುತ್ತದೆ.
ಧನು ರಾಶಿ (Sagittarius): ಈಗಿನವರೆಗೂ ಅನುಭವಿಸಿದ ಕಷ್ಟಗಳು ಹಿಮ್ಮೆಟ್ಟುವ ಸಾಧ್ಯತೆ. ಹೊಸ ಕಾರ್ಯ ಆರಂಭಿಸಲು ಯೋಗ್ಯ ಸಮಯ. ಕುಟುಂಬದಲ್ಲಿ ಹಿತಕರ ವಾತಾವರಣ. ಸ್ನೇಹಿತರೊಂದಿಗೆ ಸಂತೋಷದ ಸಮಯ. ಆಕಸ್ಮಿಕ ಹಣಲಾಭ. ಮುಖ್ಯ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ. ಉದ್ಯೋಗ, ವೃತ್ತಿಯಲ್ಲಿ ನಿರೀಕ್ಷಿತ ಯಶಸ್ಸು. ಪ್ರಮುಖ ಕೆಲಸಗಳು ಮುಗಿಯುವ ನಿರೀಕ್ಷೆ. ಹಳೆಯ ಸಮಸ್ಯೆಗಳಿಗೆ ಸಮಾಧಾನಕರ ಪರಿಹಾರ.
ಮಕರ ರಾಶಿ (Capricorn): ಪ್ರಯಾಣಗಳ ಸಮಯದಲ್ಲಿ ಎಚ್ಚರ. ಹಣಕಾಸು ಸಮಸ್ಯೆ ಪರಿಹರಿಸಲು ಸಾಲ ವ್ಯವಸ್ಥೆ ಮಾಡಬೇಕಾಗಬಹುದು. ಬಂಧು-ಮಿತ್ರರಿಂದ ನೆರವು ನಿರೀಕ್ಷೆಗಿಂತ ತಡವಾಗಬಹುದು. ಹೊಸ ಕೆಲಸಗಳು ವಿಳಂಬವಾಗಬಹುದು. ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಹೊಸ ನಿರ್ಧಾರ ತೆಗೆದುಕೊಳ್ಳುವ ಮುನ್ನ ಪುನರ್ವಿಮರ್ಶೆ ಮಾಡುವುದು ಒಳಿತು.
ಕುಂಭ ರಾಶಿ (Aquarius): ಸ್ನೇಹಿತರು, ಸಂಬಂಧಿಕರ ಜತೆಗೆ ಅಸಹಕಾರ ತೋರಿಸದಿರಿ. ಹಣಕಾಸು ಅಡಚಣೆ ಎದುರಾಗಬಹುದು. ಸ್ವಲ್ಪ ಆರೋಗ್ಯ ಸಮಸ್ಯೆಗಳು ಕಾಣಬಹುದು. ವೃತ್ತಿ-ಉದ್ಯೋಗದಲ್ಲಿ ಪ್ರಗತಿ. ಮನೋಸ್ಥಿತಿ ಸ್ವಲ್ಪ ಸ್ಥಿರವಾಗದ ಸಮಯ. ಪ್ರಯತ್ನಿಸಿದ್ದರೂ ಕೆಲವು ಕೆಲಸಗಳು ವಿಳಂಬವಾಗಬಹುದು. ಹೊಸ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ಅಗತ್ಯ. ಹಳೆಯ ಕೆಲಸಗಳಿಗೆ ಮತ್ತೆ ಶ್ರಮವಹಿಸುವ ಅಗತ್ಯ.
ಮೀನ ರಾಶಿ (Pisces): ಅನಗತ್ಯ ಭಯ, ಆತಂಕ ದೂರವಾಗಲಿದೆ. ಪ್ರಯಾಣದ ವೇಳೆ ಎಚ್ಚರ. ವೃತ್ತಿ-ಉದ್ಯೋಗದಲ್ಲಿ ಹೊಸ ಅವಕಾಶ. ಹಣಕಾಸು ಸ್ಥಿತಿಯಲ್ಲಿ ಬದಲಾವಣೆ. ಸಾಲ ಪಡೆಯುವ ಯತ್ನ. ಸ್ನೇಹಿತರಿಂದ ಸಹಾಯ ವಿಳಂಬ. ಎಲ್ಲೆಡೆ ಅನುಕೂಲಕರ ವಾತಾವರಣ. ಇತರರಿಗೆ ಸಹಾಯ ಮಾಡಲು ಸಿದ್ಧರಾಗಿರಿ. ಹೊಸ ನಿರ್ಧಾರಗಳೊಂದಿಗೆ ಮುನ್ನಡೆಸುವ ಸಮಯ. ದೈನಂದಿನ ಚಟುವಟಿಕೆಗಳಲ್ಲಿ ಹೊಸತನ ತರುವ ಯತ್ನ.
- ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ.
- ಯಾವುದೇ ಜ್ಯೋತಿಷಿಗಳಿಂದ ಸರಿಯಾದ ಸಮಾಧಾನ ಸಿಗದಿದ್ದರೆ, ಇಲ್ಲಿ ಖಚಿತ ಪರಿಹಾರ.
ದೈವಜ್ಞ ಪಂಡಿತ್ ಕೃಷ್ಣ ಭಟ್
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠಂ
ದೂರವಾಣಿ : 9535156490
ಮಳೆ ಜೊತೆ ಮೈ ನಡುಗಿಸುವ ಚಳಿ! ಬೆಂಗಳೂರು ಸೇರಿ 2 ದಿನಗಳ ಕರ್ನಾಟಕ ಹವಾಮಾನ ಮುನ್ಸೂಚನೆ ಹೀಗಿದೆ
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
ಇನ್ನು ಮೂರೇ ದಿನ ಗಡುವು! ನವೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ಹೊಸ ನಿಯಮ
Read the story
ರೈತರಿಗೆ ಅನುಗ್ರಹ ಯೋಜನೆ ಹಣ ಬಿಡುಗಡೆ! ಬಾಕಿ ಉಳಿದಿದ್ದ ಪರಿಹಾರ ಮೊತ್ತ ಖಾತೆಗೆ ಜಮಾ
Read the story
ಇನ್ನು 2 ದಿನಗಳಲ್ಲಿ ರೈತರ ಖಾತೆಗೆ 2 ಸಾವಿರ ಜಮಾ; ಗುಡ್ ನ್ಯೂಸ್ ಕೊಟ್ಟ ಮೋದಿಜಿ
Read the story





