ದಿನ ಭವಿಷ್ಯ 15-5-2025: ಹಣದ ಮಳೆಯಾಗೋದು ಖಚಿತ! ಈ ರಾಶಿಗಳಿಗೆ ಅಚ್ಚರಿಯ ತಿರುವು

ನಾಳೆಯ ದಿನ ಭವಿಷ್ಯ 15-5-2025 ಗುರುವಾರ ಈ ರಾಶಿಗಳಿಗೆ ಜೀವನದಲ್ಲಿ ಭಾರೀ ಬದಲಾವಣೆ - Daily Horoscope - Naleya Dina Bhavishya 15 May 2025

ದಿನ ಭವಿಷ್ಯ 15 ಮೇ 2025

ಮೇಷ ರಾಶಿ (Aries): ಈ ದಿನ ನಿಮ್ಮ ದೈನಂದಿನ ದಿನಚರಿಯನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವುದರಿಂದ, ನಿಮ್ಮ ಎಲ್ಲಾ ಕೆಲಸಗಳನ್ನು ನಿಮ್ಮ ಇಚ್ಛೆಯಂತೆ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ವ್ಯವಹಾರಗಳಲ್ಲಿ ನಂಬಿಕೆ ಕಳೆದುಕೊಳ್ಳಬಾರದು. ಆರೋಗ್ಯದಲ್ಲಿ ಹಳೆಯ ಸಮಸ್ಯೆ ಮತ್ತೆ ಕಾಡಬಹುದು. ಮಿತ್ರರ ಸಲಹೆ ಉಪಯುಕ್ತವಾಗಬಹುದು. ಅಹಂಕಾರದ ಮಾತುಗಳಿಂದ ದೂರವಿರಿ.

ವೃಷಭ ರಾಶಿ (Taurus): ಇವತ್ತಿನ ದಿನ ಆರ್ಥಿಕವಾಗಿ ಯೋಚಿಸುವ ಅಗತ್ಯವಿದೆ. ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ.
ಸಮಸ್ಯೆಗಳನ್ನು ಶಾಂತಿಯಿಂದ ನಿಭಾಯಿಸುವಿರಿ. ಹಳೆಯ ಸ್ನೇಹಿತರ ಸಂಪರ್ಕ ಪುನಃಸ್ಥಾಪನೆಯಾಗುತ್ತದೆ. ಒಂದು ಉತ್ತಮ ಸುದ್ದಿ ಕೇಳುವ ಅವಕಾಶವಿದೆ. ಆರ್ಥಿಕ ಲಾಭದ ಸೂಚನೆಗಳಿವೆ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ಅನುಗುಣ ಫಲ ಸಿಗಲಿದೆ. ಜಾಗೃತೆಯಿಂದ ವಾಹನ ಚಾಲನೆ ಮಾಡುವುದು ಉತ್ತಮ.

ಮಿಥುನ ರಾಶಿ (Gemini): ಅಪರಿಚಿತರೊಂದಿಗೆ ಮಾತನಾಡುವಾಗ ಜಾಗರೂಕರಾಗಿರಿ ಮತ್ತು ನಿಮ್ಮ ವೈಯಕ್ತಿಕ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಚಿಂತೆ ಮಾಡುವ ಬದಲು, ಸಮಸ್ಯೆಯನ್ನು ಶಾಂತವಾಗಿ ಪರಿಹರಿಸಿ. ಗಂಡ ಹೆಂಡತಿ ನಡುವೆ ಉತ್ತಮ ಹೊಂದಾಣಿಕೆ ಇರುತ್ತದೆ. ನಿಮ್ಮ ಆಲೋಚನೆಗಳು ಮತ್ತು ನಿರ್ಧಾರಗಳಲ್ಲಿ ನೀವು ಸ್ಪಷ್ಟವಾಗಿರಬೇಕು.

ಕಟಕ ರಾಶಿ (Cancer): ಮನೆಮಂದಿಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಆರ್ಥಿಕವಾಗಿ ಉತ್ತಮ ದಿನವಿದು.
ದೈಹಿಕ ಆರೋಗ್ಯದ ಕಡೆ ಗಮನ ಹರಿಸಿ. ಹೊಸ ಕೆಲಸ ಪ್ರಾರಂಭಕ್ಕೆ ಇದು ಉತ್ತಮ ಸಮಯ. ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳ ಸಾಧ್ಯತೆ. ವಿಶ್ವಾಸಪಾತ್ರ ವ್ಯಕ್ತಿಗಳಿಂದ ನೆರವು ಸಿಗಲಿದೆ. ನಿಮ್ಮ ಸಾಮರ್ಥ್ಯಗಳಲ್ಲಿ ವಿಶ್ವಾಸವಿಡಿ. ಕೆಲವು ವಿಷಯದಲ್ಲಿ ಹಠಾತ್ ಬದಲಾವಣೆಯಾಗಬಹುದು.

ಸಿಂಹ ರಾಶಿ (Leo): ವ್ಯವಹಾರದಲ್ಲಿ ಮುಂಚಿತ ಲಾಭದ ನಿರೀಕ್ಷೆ ಬೇಡ. ನಿಮ್ಮ ಮಾತುಗಳು ಇತರರಿಗೆ ಪ್ರೇರಣೆಯಾಗಬಹುದು. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಿ. ಆತ್ಮವಿಶ್ವಾಸ ಹೆಚ್ಚಾದರೂ ತಾಳ್ಮೆ ಅಗತ್ಯವಿದೆ. ನಿಮ್ಮ ಮೇಲೆ ಇಟ್ಟ ನಂಬಿಕೆಗೆ ನ್ಯಾಯ ತೀರಿಸಿ. ಅಲ್ಪಸ್ವಲ್ಪ ಆರೋಗ್ಯ ಸಮಸ್ಯೆ ಎದುರಾಗಬಹುದು. ಹಣದ ಖರ್ಚು ಸಮಂಜಸವಾಗಿರಲಿ.

ಕನ್ಯಾ ರಾಶಿ (Virgo): ನಿರ್ಧಾರಗಳನ್ನು ತೂಕದೊಂದಿಗೆ ತೆಗೆದುಕೊಳ್ಳಿ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ವೃತ್ತಿಪರ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಬರಬಹುದು. ಬದುಕಿಗೆ ಹೊಸ ಉತ್ಸಾಹ ನೀಡುವ ದಿನವಿದು. ಮಿತಭಾಷಿ ಆಗುವುದು ಉತ್ತಮ. ಸ್ನೇಹಿತರ ಜೊತೆ ಸಮಯ ಕಳೆಯುವುದು ಹಿತಕರ. ಬದಲಾವಣೆಯ ಚಿಂತನೆಯಲ್ಲಿ ಇಳಿಯುವಿರಿ.

ತುಲಾ ರಾಶಿ (Libra): ಸ್ನೇಹದಿಂದ ಎಲ್ಲವನ್ನೂ ಗೆಲ್ಲಬಹುದು. ಹಳೆಯ ಬಾಕಿ ಹಣ ಮರುಬರಲಿದೆ.
ಮನಸ್ಸಿಗೆ ನೆಮ್ಮದಿಯ ಸಮಯ ಸಿಗಬಹುದು. ಬಿಡುವಿನ ಸಮಯದಲ್ಲಿ ಸಂಗೀತ, ಓದು ಒಳ್ಳೆಯದು. ಮೌಲ್ಯಾಧಾರಿತ ನಿರ್ಧಾರ ನಿಮಗೆ ಗೌರವ ತರುತ್ತದೆ. ಮಿತವ್ಯಯೀ ಮನೋಭಾವಿ ಆಗಿ ಹಣದ ನಿಯಂತ್ರಣ ಸಾಧಿಸಿ. ದಿನದ ಮದ್ಯದಲ್ಲಿ ವಿಶ್ರಾಂತಿ ದೊರಕಬಹುದು.

ವೃಶ್ಚಿಕ ರಾಶಿ (Scorpio): ಚಿಂತೆಗಳು ತಾತ್ಕಾಲಿಕವಾಗಿರುತ್ತವೆ – ತಾಳ್ಮೆಯಿಂದಿರಿ. ಒಂದು ನಿರ್ಧಾರ ಜೀವನದ ದಿಕ್ಕು ಬದಲಿಸಬಹುದು. ನಿಮ್ಮ ಶ್ರಮಕ್ಕೆ ಇಂದು ಗೌರವ ಸಿಗುವುದು ಖಚಿತ. ಸಂತಾನ ವಿಷಯದಲ್ಲಿ ಸಂತೋಷದ ಸುದ್ದಿ ಸಿಗಬಹುದು. ದೂರದ ಬಂಧುಗಳಿಂದ ಸಂವಾದ ಸಂಭವಿಸಬಹುದು. ವಿವೇಕ ಮತ್ತು ಸಹನೆ ಎಲ್ಲವನ್ನೂ ಸರಿಪಡಿಸುತ್ತದೆ, ಆದ್ದರಿಂದ ಬುದ್ದಿವಂತಿಕೆ ಇರಲಿ.

ಧನು ರಾಶಿ (Sagittarius): ಆಸಕ್ತಿಯ ಕೆಲಸಗಳಲ್ಲಿ ಮುನ್ನುಗ್ಗುವಿರಿ. ವಿದ್ಯಾಭ್ಯಾಸದ ವಿಷಯದಲ್ಲಿ ಉತ್ತಮ ಪ್ರಗತಿ.
ಕನಿಷ್ಟ ಪರಿಶ್ರಮದಿಂದ ಉತ್ತಮ ಫಲ ಪಡೆಯುವಿರಿ. ಪೋಷಕರಿಂದ ಶ್ಲಾಘನೆ ಸಿಗಲಿದೆ. ಮನೆ ಖರೀದಿ ಅಥವಾ ಸುಧಾರಣೆಗೆ ಯೋಚನೆ. ಆದಾಯದಲ್ಲಿ ಏರಿಕೆ ಸಾಧ್ಯ. ಆರೋಗ್ಯ ಸುಧಾರಣೆಯ ಕಡೆ ಗಮನಹರಿಸಿ. ಅನಾವಶ್ಯಕ ವ್ಯಯಗಳಿಂದ ದೂರವಿರಿ.

ಮಕರ ರಾಶಿ (Capricorn): ಹೆಚ್ಚು ನಿರೀಕ್ಷೆ ಇಡುವುದು ಬೇಡ – ಶ್ರದ್ಧೆ ಮುಖ್ಯ. ನಿಮ್ಮ ಕೆಲಸವನ್ನು ಇತರರ ಜೊತೆ ಹೋಲಿಕೆಬೇಡ. ಸ್ನೇಹಿತರಿಂದ ನೆರವು ದೊರಕಲಿದೆ. ದೀರ್ಘಕಾಲದ ಯೋಜನೆಗೆ ಇದು ಸರಿಯಾದ ಸಮಯ. ಹಿತಚಿಂತಕರ ಮಾತುಗಳನ್ನು ಗಮನದಿಂದ ಆಲಿಸಿ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುತ್ತದೆ. ಅವಕಾಶಗಳಲ್ಲಿ ಹೆಚ್ಚಳ ಮತ್ತು ಆದಾಯದಲ್ಲಿ ಸ್ಥಿರತೆ ಇರುತ್ತದೆ.

ಕುಂಭ ರಾಶಿ (Aquarius): ಸಮಸ್ಯೆಗಳ ಮಧ್ಯೆಯೂ ಶಾಂತ ಮನಸ್ಸು ನಿಮ್ಮ ಬಲ. ಕೌಟುಂಬಿಕ ಸಂಪರ್ಕದಲ್ಲಿ ನವಚೈತನ್ಯ ಮೂಡಲಿದೆ. ನಿಮ್ಮ ಪ್ರಯತ್ನ ಇಂದು ಗುರುತಿಗೆ ತರುತ್ತದೆ. ಆರ್ಥಿಕ ವಿಚಾರಗಳಲ್ಲಿ ತಾಳ್ಮೆ ಇಡಿ. ಜೀವನದ ಕಡೆ ಹೊಸ ಚಿಂತನೆ ಶುರುವಾಗುತ್ತದೆ. ಸಹಪಾಠಿಗಳು ಅಥವಾ ಸಹೋದ್ಯೋಗಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಸಾಧ್ಯ.

ಮೀನ ರಾಶಿ (Pisces): ದಿನದ ಮೊದಲಾರ್ಧ ಶಾಂತವಾಗಿರುತ್ತದೆ. ಉದ್ಯೋಗದಲ್ಲಿ ಸಮಸ್ಯೆಗಳ ಪರಿಹಾರ ಸಿಗಲಿದೆ. ಆತ್ಮಸ್ಥೈರ್ಯದಿಂದ ಸಂಕಷ್ಟಗಳನ್ನು ಮೀರಿ ಹೋಗುವಿರಿ. ಸಂವಾದದಲ್ಲಿ ಸ್ಪಷ್ಟತೆ ಇರಲಿ. ಒಳ್ಳೆಯ ಸುದ್ದಿ ಸಿಕ್ಕು ನಿಮಗೊಂದಿಷ್ಟು ಶಕ್ತಿ ನೀಡಲಿದೆ. ಹಿರಿಯರ ಆಶೀರ್ವಾದ ಸಿಗಬಹುದು. ದೂರದ ಪ್ರಯಾಣ ಸಾಧ್ಯತೆಗಳಿವೆ. ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಿರಿ.

TRENDING ARTICLES1 / 8

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories