ದಿನ ಭವಿಷ್ಯ 16-5-2025: ಹಣ, ಪ್ರೀತಿ, ಯಶಸ್ಸು! ಈ ದಿನ ಯಾರಿಗೆ ಯಾವ ಫಲ

ನಾಳೆಯ ದಿನ ಭವಿಷ್ಯ 16-5-2025 ಶುಕ್ರವಾರ ಈ ರಾಶಿಗಳಿಗೆ ಮಿತ್ರರೊಂದಿಗೆ ಹೊಸ ಯೋಜನೆ - Daily Horoscope - Naleya Dina Bhavishya 16 May 2025

ದಿನ ಭವಿಷ್ಯ 16 ಮೇ 2025

ಮೇಷ ರಾಶಿ (Aries): ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಒಳ್ಳೆಯ ಅವಕಾಶಗಳು ಎದುರಾಗಬಹುದು. ಆರ್ಥಿಕ ವಿಚಾರದಲ್ಲಿ ಲಾಭದ ಚಿಹ್ನೆ. ಸ್ನೇಹಿತರೊಂದಿಗೆ ಉತ್ತಮ ಸಮಯ. ಮನಸ್ಸು ಸ್ಥಿರವಿರಿಸಲು ಯೋಗ ಸಹಾಯಕರಾಗುತ್ತದೆ. ಪೂರ್ವ ಪ್ಲ್ಯಾನ್ ಪ್ರಕಾರ ಕೆಲಸ ನಡೆಯಲಿದೆ. ಆಸಕ್ತಿಯ ಕೆಲಸಗಳಲ್ಲಿ ಯಶಸ್ಸು ಕಾಣಬಹುದು. ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ವೇಳೆ ಜಾಗರೂಕತೆ ಅಗತ್ಯ.

ವೃಷಭ ರಾಶಿ (Taurus): ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹೆಸರು–ಗೌರವದಲ್ಲಿ ವೃದ್ಧಿ ಸಂಭವ. ಆಫೀಸ್‌ನಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಆರ್ಥಿಕ ವ್ಯವಹಾರದಲ್ಲಿ ಚುರುಕು ತೋರಿಸಬೇಕು. ಪರಿವಾರದ ಸದಸ್ಯರೊಂದಿಗೆ ಸಮಯ ಕಳೆಯಿರಿ. ಹಳೆಯ ಸ್ನೇಹಿತರಿಂದ ಒಳ್ಳೆಯ ಸುದ್ಧಿ ಬರಬಹುದು. ಸಮಯದ ಮೌಲ್ಯ ತಿಳಿದು ಕಾರ್ಯ ನಿರ್ವಹಿಸಿ. ತಿನ್ನುವ ವಿಷಯದಲ್ಲಿ ಅಲಕ್ಷ್ಯ ಬೇಡ.

ಮಿಥುನ ರಾಶಿ (Gemini): ನಿಮ್ಮ ತಾಳ್ಮೆ ಪರೀಕ್ಷೆಯಾಗುವ ದಿನ. ವ್ಯಾಪಾರದಲ್ಲಿ ಲಾಭದ ಸಾಧ್ಯತೆ ಇದೆ. ಸಂವಾದಗಳಲ್ಲಿ ಸ್ಪಷ್ಟತೆಯ ಅಗತ್ಯವಿದೆ. ಒತ್ತಡದಿಂದ ದೂರವಿರಲು ಜಾಗೃತರಾಗಿ. ಸಹಜವಾಗಿ ನಡೆಯಲು ಪ್ರಯತ್ನಿಸಿ. ಆಧ್ಯಾತ್ಮಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಹುದು. ಸ್ನೇಹದಲ್ಲಿ ಹೊಸ ಸಂಪರ್ಕ ಸ್ಥಾಪನೆ. ನಿಮ್ಮ ಹಣದ ಯೋಜನೆಗಳನ್ನು ಯಶಸ್ವಿಗೊಳಿಸಲು ಇಂದು ಒಳ್ಳೆಯ ಸಮಯ.

ಕಟಕ ರಾಶಿ (Cancer): ದಿನದ ಆರಂಭದಲ್ಲಿ ಸಣ್ಣ ತೊಂದರೆಗಳು. ಮಧ್ಯಾಹ್ನದ ನಂತರ ಸುಧಾರಣೆ ಆಗಲಿದೆ.
ಉದ್ಯೋಗದಲ್ಲಿ ಒತ್ತಡ ಇರುವ ಸಾಧ್ಯತೆ. ಆರ್ಥಿಕ ಖರ್ಚು ಅಧಿಕವಾಗಬಹುದು. ಪಾರಿವಾರಿಕ ಕಲಹ ತಪ್ಪಿಸಲು ಸಂವಹನ ಅಗತ್ಯ. ಸ್ನೇಹಿತರಿಂದ ಧೈರ್ಯ ಸಿಗಲಿದೆ. ನಿಮ್ಮ ಗುರಿಗಳ ಬಗ್ಗೆ ಯೋಚಿಸಲು ಮತ್ತು ಮುಂದುವರಿಯಲು ಈ ಸಮಯವನ್ನು ಬಳಸಿಕೊಳ್ಳಿ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ.

ಸಿಂಹ ರಾಶಿ (Leo): ವಿವಾಹ ಪ್ರಸ್ತಾಪಗಳಿಗೆ ಯೋಗ. ಪರೀಕ್ಷೆಗಳಿಗೆ ತಯಾರಿ ಉತ್ತಮವಾಗಿರುತ್ತದೆ. ಸ್ನೇಹಿತರಿಂದ ಸಂತಸದ ಸುದ್ದಿ. ಮನಸ್ಸು ಹರ್ಷದಿಂದ ತುಂಬಿರುತ್ತದೆ. ಆಧ್ಯಾತ್ಮದಲ್ಲಿ ಒಲವು ಹೆಚ್ಚಾಗುತ್ತದೆ. ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಭವಿಷ್ಯಕ್ಕಾಗಿ ತಯಾರಿ ನಡೆಸಲು ಇದು ಒಳ್ಳೆಯ ಸಮಯ. ಕಠಿಣ ಪರಿಶ್ರಮದಿಂದ ನಿಮ್ಮ ಗುರಿಯನ್ನು ಸಾಧಿಸುವಿರಿ.

ಕನ್ಯಾ ರಾಶಿ (Virgo): ಆರ್ಥಿಕ ವ್ಯವಹಾರದಲ್ಲಿ ಜಾಗರೂಕತೆ ಅಗತ್ಯ. ಹೊಸ ಕಾರ್ಯ ಪ್ರಾರಂಭಿಸಲು ಇಂದು ಯೋಗವಿಲ್ಲ. ಪರೀಕ್ಷೆ ಅಥವಾ ಸಂದರ್ಶನದಲ್ಲಿ ಒಳ್ಳೆಯ ಫಲಿತಾಂಶ. ಸೂಕ್ಷ್ಮ ವಿಷಯದಲ್ಲಿ ತಾಳ್ಮೆ ಅಗತ್ಯ.
ಆತ್ಮವಿಶ್ವಾಸದಿಂದ ಕೆಲಸ ಮುಂದುವರಿಸಿ. ಅಹಂಕಾರದಿಂದ ದೂರವಿರಿ. ನಿಮ್ಮ ಆರೋಗ್ಯಕ್ಕಾಗಿ ಸಮಯ ಕೊಡಿ. ಸಂಜೆ ಬಾಕಿ ಇರುವ ಕೆಲಸಗಳು ವೇಗ ಪಡೆಯುತ್ತವೆ.

ತುಲಾ ರಾಶಿ (Libra): ನಿಮ್ಮ ಶ್ರಮಕ್ಕೆ ಉತ್ತಮ ಫಲ. ಪ್ರಮೋಷನ್ ಅಥವಾ ಗುರುತಿನ ಸಾಧ್ಯತೆ. ಆರ್ಥಿಕವಾಗಿ ನೆಮ್ಮದಿಯ ದಿನ. ಬಹುತೇಕ ಕಾರ್ಯಗಳು ಯಶಸ್ಸು ಕೊಡುತ್ತವೆ. ಅನುಭವಿಗಳ ಸಲಹೆ ಅನುಸರಿಸಿ. ಶಕ್ತಿ ಮತ್ತು ಉತ್ಸಾಹ ಇರುತ್ತದೆ.
ಮಧ್ಯಾಹ್ನದ ನಂತರ ಖರ್ಚುಗಳು ಹೆಚ್ಚಾಗುತ್ತವೆ ಮತ್ತು ಮಾನಸಿಕ ಆತಂಕ ಉಂಟಾಗಬಹುದು. ವಾಹನಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.

ವೃಶ್ಚಿಕ ರಾಶಿ (Scorpio): ವ್ಯಕ್ತಿತ್ವ ಪ್ರಭಾವ ಬೀರುತ್ತದೆ. ಹಳೆಯ ತೊಂದರೆಗಳಿಗೆ ಪರಿಹಾರ ಸಿಗಲಿದೆ.
ಮನಸ್ಸು ಸ್ಥಿರವಾಗಿರುತ್ತದೆ. ಸಂಗೀತ ಅಥವಾ ಕಲೆಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಬೇರೆಯವರಿಂದ ಪ್ರೋತ್ಸಾಹ ಸಿಗುತ್ತದೆ.
ಆರ್ಥಿಕವಾಗಿ ಲಾಭದ ದಾರಿ ತೆರೆಯಬಹುದು. ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳಬಹುದು. ಈ ಸಮಯವು ಆದಾಯ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ.

ಧನು ರಾಶಿ (Sagittarius): ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಉತ್ತಮ ಸಮಯ. ವಿದೇಶ ಸಂಭಂಧಿತ ಕೆಲಸಗಳಿಗೆ ಯೋಗ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ದಿನಚರಿಯ ಸರಿಯಾದ ಪ್ಲಾನಿಂಗ್ ಅಗತ್ಯ. ಆರ್ಥಿಕವಾಗಿ ನಿಧಾನ ಪ್ರಗತಿ. ಆರೋಗ್ಯದಲ್ಲಿ ಸಮತೋಲನ ಅಗತ್ಯ. ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ ಮತ್ತು ಅಡೆತಡೆಗಳನ್ನು ಸೃಷ್ಟಿಸುವವರು ಹಿಂದೆ ಸರಿಯುತ್ತಾರೆ. ನಿಮ್ಮ ಮಕ್ಕಳಿಂದ ನಿಮಗೆ ಬೆಂಬಲ ಸಿಗುತ್ತದೆ

ಮಕರ ರಾಶಿ (Capricorn): ದಿನ ಶುಭವಾಗಿದೆ. ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ. ಸಣ್ಣ ಪ್ರಯತ್ನಕ್ಕೂ ಉತ್ತಮ ಫಲ. ಆರ್ಥಿಕವಾಗಿ ಉನ್ನತಿ ಕಾಣಬಹುದು. ಸಹೋದರರೊಂದಿಗೆ ಬಾಂಧವ್ಯ ಬಲವಾಗುತ್ತದೆ. ಪ್ರಾಮಾಣಿಕತೆಗೆ ಸದುಪಯೋಗವಾಗುವ ದಿನ. ಆದಾಯ ಸುಧಾರಿಸುತ್ತದೆ ಮತ್ತು ಬೆಂಬಲ ಸಿಗುತ್ತದೆ. ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ

ಕುಂಭ ರಾಶಿ (Aquarius): ಪ್ರಮುಖ ನಿರ್ಧಾರಗಳನ್ನು ಮುಂದೂಡುವುದು ಒಳಿತು. ಅನಿರೀಕ್ಷಿತ ವೆಚ್ಚ ಸಂಭವಿಸಬಹುದು.
ಮನಸ್ಸಿನಲ್ಲಿ ಗೊಂದಲ ಉಂಟಾಗಬಹುದು. ಮಿತ್ರರ ಸಲಹೆಗೆ ಗೌರವ ನೀಡಿ. ಆರೋಗ್ಯಕ್ಕೆ ಹೆಚ್ಚು ಗಮನವಿಡಿ. ಆಧ್ಯಾತ್ಮಿಕ ಚಟುವಟಿಕೆಯಿಂದ ಶಾಂತಿ. ಇಂದು ಹೊಸ ಜವಾಬ್ದಾರಿ ಬರಬಹುದು. ನಿಮ್ಮ ಸಂಪರ್ಕಗಳಿಂದ ನಿಮಗೆ ಲಾಭವಾಗುತ್ತದೆ. ವ್ಯವಹಾರದಲ್ಲಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ.

ಮೀನ ರಾಶಿ (Pisces):  ಆದಾಯ ಮತ್ತು ಲಾಭ ಹೆಚ್ಚಾಗುವ ಸಾಧ್ಯತೆಯಿದೆ . ಕೆಲಸಗಳು ಸುಗಮವಾಗಿ ನಡೆಯಲಿವೆ. ನಿಮ್ಮ ವಿರೋಧಿಗಳ ಮೇಲೆ ನೀವು ಜಯ ಸಾಧಿಸುವಿರಿ. ಮಧ್ಯಾಹ್ನದ ವೇಳೆಗೆ ಸಮಸ್ಯೆಗಳು ಉದ್ಭವಿಸಬಹುದು; ವಿವಾದಗಳು ಮತ್ತು ವೆಚ್ಚಗಳು ಹೆಚ್ಚು ಇರುತ್ತದೆ. ನಿಮ್ಮ ಸ್ವಂತ ಕೋಪದಿಂದಾಗಿ ಸಮಸ್ಯೆಗಳು ಹೆಚ್ಚಾಗಬಹುದು. ಸಂಜೆಯ ಹೊತ್ತಿಗೆ ಪರಿಸ್ಥಿತಿ ಶಾಂತವಾಗುತ್ತದೆ

TRENDING ARTICLES1 / 8

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories