ದಿನ ಭವಿಷ್ಯ 17-6-2025: ಹಣ ಮತ್ತು ಅವಕಾಶದ ದಿನ, ಜೀವನದ ದಿಕ್ಕು ಬದಲಾಗೋ ಭವಿಷ್ಯ
ನಾಳೆಯ ದಿನ ಭವಿಷ್ಯ 17-6-2025 ಮಂಗಳವಾರ ಈ ರಾಶಿಗಳಿಗೆ ಆದಾಯ ಗಳಿಸಲು ಉತ್ತಮ ಸಮಯ - Daily Horoscope - Naleya Dina Bhavishya 17 June 2025
Publisher: Kannada News Today (Digital Media)
ದಿನ ಭವಿಷ್ಯ 17 ಜೂನ್ 2025
ಮೇಷ ರಾಶಿ (Aries): ಈ ದಿನ ನಿಮ್ಮ ಆತ್ಮವಿಶ್ವಾಸ ಪರೀಕ್ಷೆಗೆ ಒಳಗಾಗಬಹುದು. ಇಂದು ನಿಮ್ಮ ವೈಖರಿ ಕೆಲವರಿಗೆ ಅಸಹಜವಾಗಿ ಕಾಣಬಹುದು. ಚಿಕ್ಕ ಪ್ರಮಾದವು ದೊಡ್ಡ ಸಮಸ್ಯೆಯಾಗಿ ಮಾರ್ಪಡಬಹುದಾದ ದಿನ. ಹಣಕಾಸಿನಲ್ಲಿ ಎಚ್ಚರಿಕೆಯಿಂದ ಇರುವದು ಉತ್ತಮ. ಸ್ನೇಹಿತರೊಂದಿಗಿನ ಮಾತುಕತೆ ನಿರಾಶೆ ಉಂಟುಮಾಡಬಹುದು. ಯಾವುದೇ ನಿರ್ಧಾರಕ್ಕೆ ತಾತ್ವಿಕವಾಗಿ ಯೋಚಿಸಿ ತೀರ್ಮಾನಿಸಿ.
ವೃಷಭ ರಾಶಿ (Taurus): ಇದು ವೃತ್ತಿಪರ ಜೀವನದಲ್ಲಿ ಉತ್ಸಾಹದ ದಿನ. ಗೃಹಸ್ಥ ಜೀವನದಲ್ಲಿ ನೆಮ್ಮದಿ ಎದುರಾಗಬಹುದು. ಹಣಕಾಸು ವಿಚಾರದಲ್ಲಿ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವುದು ಉತ್ತಮ. ಆರೋಗ್ಯದ ಕಡೆ ತುಸು ಗಮನ ಇಡಿ. ಅತಿಯಾದ ತಿನ್ನುವುದು ತಪ್ಪಿಸಿ. ಹೊಸ ಅವಕಾಶಗಳು ಕಾದಿರಬಹುದು. ಧೈರ್ಯದಿಂದ ಮುಂದುವರಿಯಿರಿ. ತಾಳ್ಮೆಯಿಂದ ನಡೆದುಕೊಳ್ಳಿ.
ಮಿಥುನ ರಾಶಿ (Gemini): ಇಂದಿನ ದಿನ ನಿರೀಕ್ಷೆಗೂ ಹೆಚ್ಚು ಒತ್ತಡ ಎದುರಾಗಬಹುದು. ಮಾತುಗಳಲ್ಲಿ ತಾಳ್ಮೆ ಇರಿಸಿ. ಹಣಕಾಸಿನ ಲೆಕ್ಕಾಚಾರದಲ್ಲಿ ಸ್ಪಷ್ಟತೆ ಇರಲಿ. ಅನಾವಶ್ಯಕ ಖರ್ಚನ್ನು ನಿಯಂತ್ರಿಸಿ. ಸಾಮಾಜಿಕ ಜಾಲತಾಣದಿಂದ ದೂರವಿರುವುದು ಉತ್ತಮ. ನಿಶ್ಚಿತ ಅಭ್ಯಾಸಗಳೇ ಇಂದು ರಕ್ಷಣೆ ನೀಡಬಲ್ಲದು. ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಸಹ ನೀವು ಕಂಡುಕೊಳ್ಳುವಿರಿ.
ಕಟಕ ರಾಶಿ (Cancer): ಮನೆಯಲ್ಲಿ ಈ ದಿನ ಅಲ್ಪ ವ್ಯಾಜ್ಯಗಳು ಎದುರಾಗಬಹುದು. ಸಂಬಂಧದಲ್ಲಿ ತಿಳಿವಳಿಕೆ ಮತ್ತು ಮಾತುಕತೆ ಮುಖ್ಯ. ದೀರ್ಘಕಾಲದ ಯೋಜನೆಗಳ ಕುರಿತು ಚಿಂತನೆ ಆರಂಭವಾಗಬಹುದು. ನಿಮ್ಮ ಸನ್ನಿವೇಶಕ್ಕೆ ಅನುಗುಣವಾಗಿ ಬದಲಾಗುವುದು ಉತ್ತಮ. ಹಣದ ವಿಷಯಗಳಲ್ಲಿ ಯೋಚಿಸದೆ ಯಾರನ್ನೂ ನಂಬಬೇಡಿ. ಮಧ್ಯಾಹ್ನದ ವೇಳೆಗೆ ಆದಾಯ ಸಿಗುತ್ತದೆ
ಸಿಂಹ ರಾಶಿ (Leo): ಇಂದು ನಿಮ್ಮ ತೀರ್ಮಾನ ಶಕ್ತಿ ಕಠಿಣ ಪರೀಕ್ಷೆಗೆ ಒಳಪಡಬಹುದು. ನಿಮ್ಮ ನಿರ್ಧಾರಗಳನ್ನು ಮರುಪರಿಶೀಲಿಸದಿದ್ದರೆ ಹಿನ್ನಡೆಯ ಸಾಧ್ಯತೆ. ರಾಜಕೀಯ ಅಥವಾ ಸಾರ್ವಜನಿಕ ಚಟುವಟಿಕೆಗಳಲ್ಲಿ ನಿಮಗೊಂದು ಒಳ್ಳೆಯ ಅವಕಾಶ ಸಿಗಬಹುದು. ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುವುದು ಸಂತೋಷ ತರಬಹುದು. ಹೊಸ ಯೋಜನೆ ಆರಂಭಿಸುವ ಮೊದಲು ಯೋಚಿಸಿ ಮುಂದೆ ಹೋಗಿ.
ಕನ್ಯಾ ರಾಶಿ (Virgo): ವ್ಯಾಪಾರದಲ್ಲಿ ಲಾಭ ಮತ್ತು ನಷ್ಟ ಎರಡೂ ಸಾಧ್ಯ. ಆರೋಗ್ಯದಲ್ಲಿ ಚುರುಕು ಕಾಣಬಹುದು. ಧೈರ್ಯದಿಂದ ಕೆಲಸ ನಿಭಾಯಿಸಿ. ನಿಮ್ಮ ಮಾತು ಯಾರಿಗೂ ನೋವುಂಟುಮಾಡದಂತೆ ಇರಲಿ. ಹಣಕಾಸಿನಲ್ಲಿ ಅಲ್ಪ ನೆಮ್ಮದಿ. ಉದ್ಯೋಗದಲ್ಲಿ ನೀವು ತೋರಿದ ಶ್ರಮ ಫಲ ನೀಡಬಹುದು. ದಿನದ ಕೊನೆಯಲ್ಲಿ ಶಾಂತಿ ಮತ್ತು ವಿಶ್ರಾಂತಿಗೆ ಅವಕಾಶ ಸಿಗುತ್ತದೆ.
ತುಲಾ ರಾಶಿ (Libra): ಇಂದು ನಿಮ್ಮ ಚತುರತೆಯು ಯಶಸ್ಸಿಗೆ ಕಾರಣವಾಗಬಹುದು. ಉದ್ಯೋಗದಲ್ಲಿ ಹೆಚ್ಚಿನ ಹೊಣೆಗಾರಿಕೆ ಬರುತ್ತದೆ, ಅದಕ್ಕೆ ತಕ್ಕ ಮಟ್ಟದಲ್ಲಿ ಪ್ರಶಂಸೆಯೂ ಲಭಿಸಬಹುದು. ನಿಮ್ಮ ಕನಸುಗಳನ್ನು ವಾಸ್ತವಕ್ಕೆ ತರಲು ಈ ದಿನದ ಪ್ಲ್ಯಾನಿಂಗ್ ಸಹಾಯಕವಾಗಲಿದೆ. ಹಳೆಯ ಗೆಳೆಯರಿಂದ ಹೊಸ ಅವಕಾಶಗಳ ಸುದ್ದಿ ಬರುತ್ತದೆ. ಸಂವಹನ ಕೌಶಲ ಹೆಚ್ಚಿಸಿ. ಕುಟುಂಬದಲ್ಲಿ ಆನಂದದ ಕ್ಷಣ.
ವೃಶ್ಚಿಕ ರಾಶಿ (Scorpio): ಇಂದಿನ ದಿನದ ಆರಂಭ ಅಲ್ಪ ಗೊಂದಲದಿಂದ ಆರಂಭವಾಗಬಹುದು. ಆದರೆ ಮಧ್ಯಾಹ್ನದ ವೇಳೆಗೆ ಸ್ಥಿತಿ ಸುಧಾರಣೆ ಕಾಣಬಹುದು. ಹಣಕಾಸಿನ ವಿಷಯಗಳಲ್ಲಿ ಹಣ ಬಲವಾಗಿ ಉಳಿಯಬಹುದು. ಅನ್ಯರ ಮಾತುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಡಿ. ಕೆಲಸದಲ್ಲಿ ಹೊಸ ನಿರ್ವಹಣಾ ಶೈಲಿಗೆ ಅವಕಾಶ. ಕೆಲಸಗಳು ವೇಗವನ್ನು ಪಡೆಯುತ್ತವೆ. ಜೀವನವು ಸುಧಾರಿಸುತ್ತದೆ.
ಧನು ರಾಶಿ (Sagittarius): ಅತಿಯಾದ ಆತುರದಿಂದ ತಪ್ಪು ನಡೆಯಬಹುದು. ಹಿರಿಯರ ಸಲಹೆ ನಿಮಗೆ ನೆರವಾಗಬಹುದು. ಮಿತ್ರರ ಜೊತೆ ಸಮಯ ಕಳೆಯುವುದರಿಂದ ಮನಸ್ಸು ಹಗುರವಾಗಬಹುದು. ಹಣಕಾಸಿನಲ್ಲಿ ಗುರಿಯಿಟ್ಟು ಸಾಗುವುದು ಶ್ರೇಯಸ್ಕರ. ದೀರ್ಘಾವಧಿಯ ಯೋಜನೆ ಆರಂಭಕ್ಕೆ ಅನುಕೂಲ ದಿನ. ಹೊಸ ವ್ಯವಹಾರ ಬಗ್ಗೆ ಯೋಚನೆ ಶುರುಮಾಡಿ. ಶ್ರಮಿಸಿ, ಫಲ ಕಾಣುತ್ತೀರಿ.
ಮಕರ ರಾಶಿ (Capricorn): ಇಂದು ಕುಟುಂಬದಲ್ಲಿ ಖುಷಿಯ ವಾತಾವರಣ ನಿರ್ಮಾಣವಾಗಬಹುದು. ಹಿರಿಯರೊಂದಿಗೆ ಕಾಲ ಕಳೆಯುವುದು ನೆಮ್ಮದಿ ತರಬಹುದು. ವ್ಯಾಪಾರ ಅಥವಾ ಉದ್ಯೋಗದಲ್ಲಿ ನಿರೀಕ್ಷೆಯ ಮಟ್ಟದಲ್ಲಿ ಪ್ರಗತಿ. ಹೊಸ ಒಪ್ಪಂದ ಅಥವಾ ಕೆಲಸದ ನಿರ್ಧಾರಕ್ಕೆ ಅನುಕೂಲ ಸಮಯ. ಆರೋಗ್ಯದಲ್ಲಿ ಸಣ್ಣ ಸಮಸ್ಯೆಗಳಿದ್ದರೂ ತ್ವರಿತ ಚೇತರಿಕೆ ಸಾಧ್ಯ. ಸ್ನೇಹಿತರಿಂದ ಬೆಂಬಲ ಸಿಗುತ್ತದೆ.
ಕುಂಭ ರಾಶಿ (Aquarius): ಇಂದು ಕಲಿಕೆ ಮತ್ತು ಜ್ಞಾನ ಕೌಶಲಗಳನ್ನು ಅಭಿವೃದ್ಧಿಪಡಿಸಲು ಉತ್ತಮ ಸಮಯ. ಹೊಸ ವಿಷಯ ತಿಳಿಯಲು ಒತ್ತಾಸೆ ಇರುತ್ತದೆ. ಸಂಗಾತಿಯಿಂದ ಸ್ಫೂರ್ತಿ ಸಿಗಬಹುದು. ಉದ್ಯೋಗದಲ್ಲಿ ನಿರಂತರ ಪ್ರಯತ್ನ ಅಗತ್ಯ. ಹಣಕಾಸಿನಲ್ಲಿ ಜೋತೆಗೆ ಇರುವವರಿಂದ ಸಲಹೆ ಪಡೆಯಿರಿ. ಆಂತರಿಕ ಶಕ್ತಿ ಹೆಚ್ಚಾಗುತ್ತದೆ. ಯೋಗ ಅಥವಾ ಧ್ಯಾನ ಪ್ರಯೋಜನಕಾರಿಯಾಗಬಹುದು.
ಮೀನ ರಾಶಿ (Pisces): ಹಣಕಾಸಿನ ವಿಚಾರದಲ್ಲಿ ಸಮತೋಲನೆ ಅಗತ್ಯ. ಅತಿಯಾಗಿ ಖರ್ಚು ಮಾಡುವುದು ತಪ್ಪು. ಮನಸ್ಸಿನಲ್ಲಿ ತಾಕಲಾಟ ಇದ್ದರೂ ಧೈರ್ಯದಿಂದ ಮುನ್ನಡೆದು ಹೋಗಿ. ಪೈಪೋಟಿಯ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಬೇಕು. ಆರೋಗ್ಯದ ಕಡೆ ಗಮನ ಹರಿಸಿ. ಈ ಸಮಯದಲ್ಲಿ ಸಾಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತವೆ. ದಿನದ ಕೊನೆಯಲ್ಲಿ, ಲಾಭದಾಯಕ ಪರಿಸ್ಥಿತಿ.