ದಿನ ಭವಿಷ್ಯ 18-6-2025: ಇವತ್ತು ದಿನ ಹೇಗಿರುತ್ತೆ? ಅಚ್ಚರಿ ಸಂಗತಿ ತಂದಿದೆ ಭವಿಷ್ಯ
ನಾಳೆಯ ದಿನ ಭವಿಷ್ಯ 18-6-2025 ಬುಧವಾರ ಈ ರಾಶಿಗಳಿಗೆ ಚಿಂತೆಗಳು ಕಡಿಮೆಯಾಗಿ ಉತ್ಸಾಹ ಹೆಚ್ಚಾಗುತ್ತದೆ - Daily Horoscope - Naleya Dina Bhavishya 18 June 2025
Publisher: Kannada News Today (Digital Media)
ದಿನ ಭವಿಷ್ಯ 18 ಜೂನ್ 2025
ಮೇಷ ರಾಶಿ (Aries): ಈ ದಿನ ನಿಮ್ಮ ಕೆಲಸಗಳಲ್ಲಿ ಒಳ್ಳೆಯ ಫಲಿತಾಂಶ ಕಾಣಬಹುದು. ಕೆಲವರು ನಿಮ್ಮ ಪ್ರತಿಭೆಯನ್ನು ಗುರುತಿಸುತ್ತಾರೆ. ಆತ್ಮವಿಶ್ವಾಸದಿಂದ ಮುಂದೆ ಸಾಗಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಕುಟುಂಬದ ವಿಚಾರಗಳಲ್ಲಿ ಸಮಾಧಾನಕರ ದಿನ. ಮಿತವಾಗಿ ಮಾತನಾಡಿ, ಬೇರೆಯವರಿಗೆ ವಿಷಯಗಳು ತಪ್ಪಾಗಿ ಅರ್ಥವಾಗಬಹುದು. ಹೊಸ ವಿಷಯಗಳಿಗೆ ಇಂದು ಶುಭ ಸಮಯವಲ್ಲ.
ವೃಷಭ ರಾಶಿ (Taurus): ಕೆಲವು ಅಚ್ಚರಿಯ ಅನುಭವಗಳನ್ನು ಈ ದಿನ ತರಬಹುದು. ಸ್ನೇಹಿತರಿಂದ ನೆರವು ಸಿಗಬಹುದು. ಭವಿಷ್ಯದ ಬಗ್ಗೆ ಚಿಂತೆ ಮಾಡದಿರಿ, ಕಾಲ ಸರಿದಂತೆ ಪರಿಹಾರ ಸಿಗುತ್ತದೆ. ಸಂಜೆ ಸಮಯದಲ್ಲಿ ಮನಸ್ಸಿಗೆ ನೆಮ್ಮದಿ ಸಿಗಬಹುದು. ಶಾಂತಿ ಮತ್ತು ತಾಳ್ಮೆಯಿಂದ ಪರಿಸ್ಥಿತಿ ಸುಧಾರಿಸಬಹುದು. ವ್ಯಾಪಾರ ಪ್ರವಾಸದ ಸಾಧ್ಯತೆ ಇದೆ. ನೀವು ನಿಮ್ಮ ಕೆಲಸದಲ್ಲಿ ಬ್ಯುಸಿಯಾಗಿರುತ್ತೀರಿ.
ಮಿಥುನ ರಾಶಿ (Gemini): ನಿಮ್ಮ ಮಾತುಗಳು ಇತರರ ಮೇಲೆ ಪ್ರಭಾವ ಬೀರಬಹುದಾದ ದಿನ. ಸಮಾಜದಲ್ಲಿ ಮಾನಸಿಕವಾಗಿ ಸಬಲೀಕರಣದ ದಿನ. ಸ್ನೇಹಿತರೊಂದಿಗೆ ಉತ್ತಮ ಸಂಪರ್ಕ ಸಾಧ್ಯ. ಕೆಲಸದಲ್ಲಿ ಬದಲಾವಣೆ ಅಥವಾ ಹೊಸ ಅವಕಾಶ ಸಿಗಬಹುದು. ಹಣಕಾಸಿನ ವಿಷಯಗಳಲ್ಲಿ ತಾಳ್ಮೆಯಿಂದ ನಡೆದುಕೊಳ್ಳಿ. ಪ್ರಯಾಣ ಯೋಚನೆ ಇದ್ದರೆ ಮುಂದೂಡುವುದು ಉತ್ತಮ. ಸಂಬಂಧಗಳಲ್ಲಿ ಸ್ಪಷ್ಟತೆ ಇರಲಿ.
ಕಟಕ ರಾಶಿ (Cancer): ಇಂದಿನ ದಿನ ಆಧ್ಯಾತ್ಮದತ್ತ ನಿನ್ನ ಒಲವು ಹೆಚ್ಚಾಗುತ್ತದೆ. ಮನಸ್ಸು ಶಾಂತಿಯಾಗಿರಲಿದೆ. ನಿಮ್ಮ ಕಾರ್ಯಕ್ಷಮತೆ ಇತರರನ್ನು ಪ್ರಭಾವಿತ ಮಾಡುತ್ತದೆ. ಹಿರಿಯರಿಂದ ಮೆಚ್ಚುಗೆ ಸಿಗಬಹುದು. ಹಣಕಾಸಿನ ಪರಿಸ್ಥಿತಿ ಸಮೃದ್ಧವಾಗಬಹುದು. ನಿಮ್ಮ ನಿರ್ಧಾರಗಳು ನಿಮ್ಮ ಭವಿಷ್ಯ ರೂಪಿಸುತ್ತದೆ. ಯೋಜನೆಗಳು ಯಶಸ್ವಿಯಾಗುತ್ತವೆ ಮತ್ತು ಆದಾಯ ಹೆಚ್ಚಾಗುತ್ತದೆ.
ಸಿಂಹ ರಾಶಿ (Leo): ಹೊಸ ಸಂಪರ್ಕಗಳು ಪ್ರಯೋಜನಕಾರಿಯಾಗಿ ಪರಿಣಮಿಸಬಹುದು. ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ. ಯೋಜನೆಯಂತೆ ಕೆಲಸವು ಯಶಸ್ವಿಯಾಗುತ್ತದೆ. ಸಹೋದರರಿಂದ ಬೆಂಬಲ ಸಿಗುತ್ತದೆ. ನಿಮ್ಮ ವಿರೋಧಿಗಳ ಮೇಲೆ ನೀವು ವಿಜಯಶಾಲಿಯಾಗುತ್ತೀರಿ. ಧೈರ್ಯದಿಂದ ನಡೆಯಿರಿ, ಯಶಸ್ಸು ನಿಮ್ಮ ಹಾದಿಯಲ್ಲಿದೆ. ವ್ಯವಹಾರದಲ್ಲಿ ಬೆಳವಣಿಗೆ ಇರುತ್ತದೆ.
ಕನ್ಯಾ ರಾಶಿ (Virgo): ಸಮಯ tಸಂಪೂರ್ಣವಾಗಿ ನಿಮ್ಮ ಹಿತಕ್ಕಾಗಿ ಕೆಲಸ ಮಾಡುತ್ತದೆ. ಕೆಲಸಗಳಲ್ಲಿ ವಿಶಿಷ್ಟ ಯಶಸ್ಸುಗಳು ಸಂಭವಿಸಬಹುದು. ಆದರೆ, ಕೆಲಸದ ಒತ್ತಡ ಜಾಸ್ತಿಯಾಗಬಹುದು. ಹಣದ ವ್ಯವಹಾರಗಳಲ್ಲಿ ನಿರ್ಣಯ ದೃಢವಾಗಿರಲಿ. ಸ್ನೇಹಿತರಿಂದ ಆರ್ಥಿಕ ನೆರವು ದೊರಕಬಹುದು. ಭರವಸೆ ಮೂಡಿಸುವ ಕರೆ ಅಥವಾ ಸಂದೇಶ ಸಿಗಬಹುದು. ಮಿತಭಾಷೆಯೇ ಶ್ರೇಷ್ಠ ಮಾರ್ಗ.
ತುಲಾ ರಾಶಿ (Libra): ವಹಾರಗಳಲ್ಲಿ ಸ್ಪಷ್ಟತೆ ಇರಲಿ. ಹಳೆಯ ಸಾಲಗಳ ಪರಿಹಾರ ಸಾಧ್ಯ. ಹಣಕಾಸಿನಲ್ಲಿ ಸುಧಾರಣೆ ಕಾಣಬಹುದು. ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ, ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯುತ್ತದೆ. ಒಟ್ಟಾರೆ ಈ ದಿನ ನಿಮಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಕೆಲಸ ಮತ್ತು ಆದಾಯದಲ್ಲಿ ಯಶಸ್ಸು ಸಿಗುತ್ತದೆ. ಕುಟುಂಬದೊಂದಿಗೆ ಪ್ರಯಾಣ ಸಾಧ್ಯ.
ವೃಶ್ಚಿಕ ರಾಶಿ (Scorpio): ಕೆಲಸದಲ್ಲಿ ಸಮಾಧಾನ ತರುವ ಬೆಳವಣಿಗೆ. ಆದರೆ, ನಿಮ್ಮ ಉತ್ಸಾಹವನ್ನು ಉಳಿಸಿಕೊಂಡು ಮುಂದೆ ಸಾಗಬೇಕು. ಹಣಕಾಸಿನ ಚಿಂತೆ ಇತ್ತು ಸಹ ಪರಿಹಾರ ದೊರೆಯಬಹುದು. ಕುಟುಂಬದಿಂದ ಸಹಕಾರ ಸಿಗಲಿದೆ. ನಿಮ್ಮ ಶಕ್ತಿ ಮತ್ತು ಆಂತರಿಕ ಶಾಂತಿಯ ಮೇಲೆ ನಂಬಿಕೆ ಇಡಿ. ಇಂದು ಧೈರ್ಯದಿಂದ ಒಂದು ಹೊಸ ಮೆಟ್ಟಿಲು ಏರಬಹುದು.
ಧನು ರಾಶಿ (Sagittarius): ಹೊಸ ಪ್ರಾರಂಭಗಳಿಗೆ ಇದು ಪೂರಕ ದಿನವಾಗಿದೆ. ನಿಮ್ಮ ಉತ್ಸಾಹ ಇತರರನ್ನೂ ಪ್ರೇರೇಪಿಸಬಹುದು. ಕೆಲಸಗಳಲ್ಲಿ ಹೆಚ್ಚಿನ ಗಮನ ಬೇಕಾಗಿರುತ್ತದೆ. ಆದರೆ, ಸಮಯ ಸರಿಯಾಗಿ ಬಳಸಿಕೊಳ್ಳುವುದು ಮುಖ್ಯ. ಹಣದ ವಿಚಾರದಲ್ಲಿ ನಿರ್ಧಾರ ಸರಿಯಾಗಿ ತೆಗೆದುಕೊಳ್ಳಿ. ಸ್ನೇಹಿತರಿಂದ ಸಹಾಯ ಅಥವಾ ಸಲಹೆ ಸಿಗಬಹುದು. ಕುಟುಂಬದೊಂದಿಗೆ ಕ್ಷಣಗಳನ್ನು ಕಳೆಯಿರಿ.
ಮಕರ ರಾಶಿ (Capricorn): ನಿಮ್ಮ ಶ್ರಮಕ್ಕೆ ಫಲ ತಡವಾಗಿ ಸಿಗಬಹುದು. ಆದರೆ ಪ್ರಯತ್ನ ಬಿಡಬೇಡಿ. ಕೆಲಸದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಸಿಗಬಹುದು. ಮನಸ್ಸಿನಲ್ಲಿ ಗಾಬರಿಯ ಸ್ಥಿತಿಯನ್ನು ನಿವಾರಿಸಿಕೊಳ್ಳಿ. ಮನೆಯಲ್ಲಿನ ಪರಿಸ್ಥಿತಿಯಲ್ಲಿ ಸುಧಾರಣೆ ಸಾಧ್ಯ. ಆರೋಗ್ಯದಲ್ಲಿ ಚೇತರಿಕೆ ನಿಮ್ಮ ಶಕ್ತಿಯನ್ನು ಪ್ರಭಾವಶಾಲಿಯಾಗಿ ಬಳಸಿಕೊಳ್ಳಿ. ಸಾಧನೆಗಳಿಗೆ ಪ್ರಾರಂಭ ಇವತ್ತಿಂದಲೇ.
ಕುಂಭ ರಾಶಿ (Aquarius): ನಿಮ್ಮ ಕಲ್ಪನೆಗಳು ವಾಸ್ತವಕ್ಕೆ ಬರುವುದು ಸಾಧ್ಯವಿದೆ. ಹೊಸ ಐಡಿಯಾಗಳು ನಿಮ್ಮನ್ನು ಬೇರೆಯರಿಗಿಂತ ವಿಭಿನ್ನವನ್ನಾಗಿ ತೋರಿಸಬಹುದು. ಆದರೆ, ಪ್ರತಿಯೊಂದು ಮಾತು ಎಣಿಕೆಯಿಂದ ಮಾತಾಡಿ. ಹಣಕಾಸಿನಲ್ಲಿ ಹೊಸ ದಿಕ್ಕು ಕಂಡುಬರುವ ಸಾಧ್ಯತೆ ಇದೆ. ಸ್ನೇಹಿತರಿಂದ ಪ್ರೋತ್ಸಾಹ ಸಿಗಬಹುದು. ಕೆಲಸದಲ್ಲಿ ಹೆಚ್ಚಿನ ಹೊಣೆಗಾರಿಕೆ ಬರುವ ಸಾಧ್ಯತೆ.
ಮೀನ ರಾಶಿ (Pisces): ಸಂವಹನದಲ್ಲಿ ಸೌಮ್ಯತೆ ಇರಲಿ. ಇಂದು ಮುಂದಿನ ಹಾದಿಗೆ ದಾರಿ ತೋರುವ ದಿನ. ಆದರೆ ಕೆಲವೊಮ್ಮೆ ಒತ್ತಡದ ಸಂದರ್ಭಗಳು ಎದುರಾಗಬಹುದು. ಆದರೆ, ನಿಮ್ಮ ಆಂತರಿಕ ಶಕ್ತಿ ಅದನ್ನು ನಿಭಾಯಿಸಬಲ್ಲದು. ಹಣದ ವ್ಯವಹಾರಗಳಲ್ಲಿ ದೃಢವಾಗಿರಿ. ಆತ್ಮೀಯರಿಂದ ನೆರವು ಸಿಗಬಹುದು. ನಿಮ್ಮ ಕನಸುಗಳನ್ನು ಹುಟ್ಟುಹಾಕಲು ಪ್ರೇರಣೆಯ ದಿನ.