ದಿನ ಭವಿಷ್ಯ 19-7-2025: ಇವರಿಗೆ ಈ ದಿನ ಧನವರ್ಷ, ಇಲ್ಲಿದೆ ರಾಶಿ ಪ್ರಕಾರ ಭವಿಷ್ಯ
ನಾಳೆಯ ದಿನ ಭವಿಷ್ಯ 19-7-2025 ಶನಿವಾರ ಈ ರಾಶಿಗಳು ಇತರರಿಗೆ ಸ್ಫೂರ್ತಿಯಾಗುತ್ತಾರೆ - Daily Horoscope - Naleya Dina Bhavishya 19 July 2025

ದಿನ ಭವಿಷ್ಯ 19 ಜುಲೈ 2025
ಮೇಷ ರಾಶಿ (Aries): ಈ ದಿನ ಆರ್ಥಿಕವಾಗಿ ಸ್ವಲ್ಪ ಚಿಂತೆ ಉಂಟಾಗಬಹುದು. ಆದರೆ ಸರಿಯಾದ ನಿರ್ಧಾರದಿಂದ ಪರಿಹಾರ ಸಿಗಬಹುದು. ಕುಟುಂಬದಲ್ಲಿ ಕೆಲ ಬದಲಾವಣೆಗಳು ಉಂಟಾಗಬಹುದು. ಹಳೆಯ ಸ್ನೇಹಿತನಿಂದ ಶುಭ ವಾರ್ತೆಯ ನಿರೀಕ್ಷೆ ಇರಬಹುದು. ಧ್ಯಾನ ಅಥವಾ ಶಾಂತಿಯ ಚಟುವಟಿಕೆಗಳು ನಿಮಗೆ ಉತ್ತಮ ಪರಿಹಾರ ಆಗಬಹುದು. ಎಲ್ಲಾ ಸಮಯದಲ್ಲಿ ವ್ಯರ್ಥ ಚರ್ಚೆಗಳಿಂದ ದೂರವಿರಿ.
ವೃಷಭ ರಾಶಿ (Taurus): ಇಂದಿನ ದಿನ ನಿಮಗೆ ಆಂತರಿಕ ಶಕ್ತಿ ಹೆಚ್ಚಾಗಿರುತ್ತದೆ. ಮನಸ್ಸು ತುಸು ಭಾವನಾತ್ಮಕವಾಗಿರುವುದರಿಂದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಜೊತೆ ಒಳ್ಳೆಯ ಹೊಂದಾಣಿಕೆ ಸಾಧ್ಯ. ಶತ್ರುಗಳಿಂದ ದೂರವಿರಿ, ಹಣಕಾಸು ಲಾಭಗಳಿವೆ, ಆದರೆ ಖರ್ಚಿಗೂ ತಡೆ ಇಲ್ಲದಂತೆ ತೋರಬಹುದು. ಕುಟುಂಬದಲ್ಲಿ ಹಿರಿಯರ ಸಲಹೆ ಬಹುಮೂಲ್ಯವಾಗಿರುತ್ತದೆ.
ಮಿಥುನ ರಾಶಿ (Gemini): ಹೊಸ ವ್ಯವಹಾರಕ್ಕೆ ಈ ದಿನ ನಿಮಗೆ ಉತ್ತಮವಲ್ಲ. ಮನಸ್ಸು ಚಂಚಲವಾಗಿರಬಹುದು, ಆದರೆ ನೀವು ಶಾಂತ ಚಿಂತನೆ ಮಾಡಿದರೆ ಉತ್ತಮ ನಿರ್ಧಾರ ಕೈಗೊಳ್ಳಬಹುದು. ವಿದೇಶ ಸಂಪರ್ಕ ಅಥವಾ ದೂರದ ಸಂಬಂಧದಿಂದ ಶುಭ ಸುದ್ದಿ ಬರಬಹುದು. ಕುಟುಂಬದ ಜೊತೆ ಸಮಯ ಕಳೆಯುವುದು ಇಂದು ನಿಮಗೆ ಶಕ್ತಿ ನೀಡುತ್ತದೆ. ಹಣದ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರಿ.
ಕಟಕ ರಾಶಿ (Cancer): ನಿಮಗಿದು ಮುಖ್ಯವಾದ ಆರ್ಥಿಕ ಲಾಭದ ದಿನ. ಹೂಡಿಕೆ ಮಾಡಿದ್ದರೆ ಲಾಭವಾಗುವ ಸಂಭವವಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಬಹುದು. ಶುಭ ಕಾರ್ಯ ಅಥವಾ ಕುಟುಂಬ ಸಮಾರಂಭದ ಆಮಂತ್ರಣ ಬರಬಹುದು. ನೀವು ನಡೆಸುತ್ತಿರುವ ಕೆಲಸಗಳು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿವೆ. ಸ್ನೇಹಿತರೊಂದಿಗೆ ಸಮಯ ಕಳೆಯುವುದು ಸಂತೋಷ ತರಬಹುದು.
ಸಿಂಹ ರಾಶಿ (Leo): ಅವಸರದ ನಿರ್ಧಾರಗಳು ನಷ್ಟವನ್ನು ತರಬಹುದು, ಜೊತೆಗೆ ಅಹಂಕಾರದಿಂದ ದೂರವಿರಿ. ವ್ಯಾಪಾರದಲ್ಲಿ ಹೊಸ ಅವಕಾಶಗಳು ಎದುರಾಗಬಹುದು, ಆದರೆ ಸರಿಯಾದ ಗ್ರಾಹಕ ಆಯ್ಕೆ ಅಗತ್ಯ. ಸ್ನೇಹಿತರ ಸಹಕಾರದಿಂದ ಕೆಲಸ ಮುಗಿಯುವ ಸಾಧ್ಯತೆ. ಕುಟುಂಬದಲ್ಲಿ ಚಿಕ್ಕಚಿಕ್ಕ ವಿವಾದಗಳು ಸಾಧ್ಯ, ಶಾಂತತೆ ಕಾಪಾಡಿ. ಸ್ವಲ್ಪ ವಿಲಾಸಿ ಖರ್ಚು ಇರಬಹುದು.
ಕನ್ಯಾ ರಾಶಿ (Virgo): ದಿನದ ಆರಂಭ ನಿಧಾನವಾಗಬಹುದು, ಆದರೆ ಮಧ್ಯಾಹ್ನದ ನಂತರ ಉತ್ತಮ. ಅಧಿಕ ಕೆಲಸದಿಂದ ದೇಹದಲ್ಲಿ అలಸ್ಯ ಉಂಟಾಗಬಹುದು. ತೊಂದರೆ ಬಂದರೆ ಅದನ್ನು ಚಿಕ್ಕದಾಗಿ ಪರಿಗಣಿಸಿ ಮುಂದುವರಿಯಿರಿ. ಹಣಕಾಸು ಸಧಾರಣೆಯಲ್ಲಿದೆ – ಹಳೆಯ ಸಾಲ ಪಾವತಿಗೆ ಯೋಜನೆ ಮಾಡಿ. ನಿಮ್ಮ ವಿಚಾರಗಳು ಇತರರಿಗೆ ಸ್ಪಷ್ಟವಾಗಬೇಕಾದ ಸಮಯ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಸಂಭವ – ಶಾಂತವಾಗಿ ಚರ್ಚಿಸಿ.
ತುಲಾ ರಾಶಿ (Libra): ಆತ್ಮವಿಶ್ವಾಸ ನಿಮ್ಮ ದೊಡ್ಡ ಶಕ್ತಿ. ಹಣಕಾಸಿನಲ್ಲಿ ನಷ್ಟವಿಲ್ಲ, ಆದರೆ ಖರ್ಚು ನಿರ್ವಹಣೆಯಲ್ಲಿ ಇರಲಿ. ಮಿತ್ರರೊಂದಿಗೆ ಸುದೀರ್ಘ ಮಾತುಕತೆ ಸಂಭವ. ಆರೋಗ್ಯ ಚೇತರಿಕೆಯಲ್ಲಿ ಇದೆ. ಸಂಧ್ಯಾ ಸಮಯದಲ್ಲಿ ಧ್ಯಾನ ಅಥವಾ ಪ್ರಾರ್ಥನೆ ಶ್ರೇಷ್ಠ ಫಲ ನೀಡುತ್ತದೆ. ಆಸ್ತಿ ವಿಚಾರಗಳು ಬಗೆಹರಿಯುತ್ತವೆ. ಸಹೋದರರು ನಿಮ್ಮ ಮಾತಿಗೆ ಬೆಂಬಲ ಸೂಚಿಸುತ್ತಾರೆ.
ವೃಶ್ಚಿಕ ರಾಶಿ (Scorpio): ಉದ್ಯೋಗದಲ್ಲಿ ಹೊಸ ಜವಾಬ್ದಾರಿಯ ಶ್ರೇಯಸ್ಸು ಸಿಗಬಹುದು. ಹಣಕಾಸು ಸ್ಥಿತಿ ಲಾಭದಾಯಕವಾಗಿದ್ದು, ಹೂಡಿಕೆಗೆ ಉತ್ತಮ ಸಮಯ. ಸ್ನೇಹಿತನೊಂದಿಗೆ ಒಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ಸಂಗಾತಿಯೊಂದಿಗೆ ಒಳ್ಳೆಯ ಸಮಯ ಕಳೆಯಬಹುದು. ವಿದ್ಯಾರ್ಥಿಗಳು ಓದಿನಲ್ಲಿ ಇನ್ನಷ್ಟು ಶ್ರಮವಹಿಸಬೇಕು.
ಧನು ರಾಶಿ (Sagittarius): ಪ್ರಯತ್ನಗಳು ಇಂದು ಫಲ ಕೊಡಲಿವೆ. ದೂರದ ಪ್ರಯಾಣದ ಯೋಜನೆಯಲ್ಲಿ ಯಶಸ್ಸು ಕಾಣಬಹುದು. ಹಳೆಯ ಕೆಲಸ ಪುನಃ ಆರಂಭ. ಸ್ನೇಹಿತರಿಂದ ಹಣಕಾಸು ನೆರವು ನಿರೀಕ್ಷಿಸಬಹುದಾದ ದಿನ. ಕೆಲವು ಸಮಯದಿಂದ ನಡೆಯುತ್ತಿರುವ ಸಮಸ್ಯೆ ಇಂದು ಬಗೆಹರಿಯಲಿದೆ. ನಿಮ್ಮ ಸಂಪರ್ಕಗಳು ಸಹ ನಿಮಗೆ ಸಹಾಯ ಮಾಡಬಹುದು.
ಮಕರ ರಾಶಿ (Capricorn): ಮಧ್ಯಾಹ್ನದ ನಂತರ ಕೆಲಸವು ಸುಧಾರಿಸುತ್ತದೆ. ಯೋಜನೆಗಳಿಂದ ನಿಮಗೆ ಲಾಭವಾಗುತ್ತದೆ . ಹಣ ಬರುತ್ತದೆ. ನಿಮ್ಮ ಶತ್ರುಗಳನ್ನು ತಡೆಯುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಸಂಜೆ ಸಮಯವೂ ಅನುಕೂಲಕರವಾಗಿರುತ್ತದೆ. ಮಕ್ಕಳಿಂದ ಬೆಂಬಲ ಸಿಗುತ್ತದೆ. ದಾಂಪತ್ಯ ಜೀವನದಲ್ಲಿ ಮಾಧುರ್ಯ ಇರುತ್ತದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತೀರಿ.
ಕುಂಭ ರಾಶಿ (Aquarius): ಇಂದು ವಿವಾದಗಳಲ್ಲಿ ವಿಜಯಶಾಲಿಯಾಗುತ್ತೀರಿ. ಮಧ್ಯಾಹ್ನದ ಸಮಯವು ಎಲ್ಲಾ ರೀತಿಯಲ್ಲೂ ಅನುಕೂಲಕರವಾಗಿರುತ್ತದೆ. ಯಾವುದೇ ರೀತಿಯ ಸಮಸ್ಯೆಯ ಸಾಧ್ಯತೆಯಿಲ್ಲ. ಆದಾಯವು ಉತ್ತಮವಾಗಿರುತ್ತದೆ ಮತ್ತು ಬೆಂಬಲವೂ ಸಿಗುತ್ತದೆ. ಇಂದು ನಿನ್ನದಾದ ಆಲೋಚನೆಗೆ ಸ್ಪಷ್ಟತೆ ಬೇಕಾದ ದಿನ. ವ್ಯವಹಾರವನ್ನು ವಿಸ್ತರಿಸುವ ಚಿಂತನೆ ಇರುತ್ತದೆ.
ಮೀನ ರಾಶಿ (Pisces): ನೀವು ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಶಸ್ವಿ ಕೆಲಸಗಳಿಗೆ ನಿಮಗೆ ಪ್ರಾತಿನಿಧ್ಯ ಸಿಗುತ್ತದೆ. ನಾಯಕತ್ವ ಕೌಶಲ್ಯಗಳು ಅಭಿವೃದ್ಧಿಗೊಳ್ಳುತ್ತವೆ. ಆದಾಯವು ಸುಧಾರಿಸುತ್ತದೆ ಮತ್ತು ಯೋಜನೆಗಳಿಂದ ನಿಮಗೆ ಪ್ರಯೋಜನಗಳು ದೊರೆಯುತ್ತವೆ . ಮಧ್ಯಾಹ್ನದ ಸಮಯವೂ ಉತ್ತಮವಾಗಿರುತ್ತದೆ. ಆದಾಯದಲ್ಲಿ ಹೆಚ್ಚಳದ ಜೊತೆಗೆ ನಿಮಗೆ ಬೆಂಬಲವೂ ಸಿಗುತ್ತದೆ.




