ದಿನ ಭವಿಷ್ಯ 23-7-2025: ದಿನ ಸುಖದಂತೆ ಕಂಡರೂ ಈ 3 ರಾಶಿಗೆ ಭವಿಷ್ಯ ಎಚ್ಚರಿಕೆ ನೀಡ್ತಿದೆ - Horoscope Today

ನಾಳೆಯ ದಿನ ಭವಿಷ್ಯ 23-7-2025 ಬುಧವಾರ ಈ ರಾಶಿಗಳಿಗೆ ದೇವರ ನಾಮಸ್ಮರಣೆ ನೆಮ್ಮದಿ ತರುತ್ತದೆ - Daily Horoscope - Naleya Dina Bhavishya 23 July 2025

ದಿನ ಭವಿಷ್ಯ 23 ಜುಲೈ 2025

ಮೇಷ ರಾಶಿ (Aries): ಈ ದಿನ ನಿಮ್ಮ ನಡವಳಿಕೆ ಹಾಗೂ ಮಾತಿನಲ್ಲಿ ಸೌಮ್ಯತೆ ಇರಲಿ. ಉದ್ಯೋಗದಲ್ಲಿ ಕೆಲ ಮಹತ್ವದ ಕೆಲಸಗಳನ್ನು ನಿರ್ವಹಿಸಬೇಕಾಗಬಹುದು. ಹಣದ ವ್ಯವಹಾರದಲ್ಲಿ ಎಚ್ಚರಿಕೆ ಬೇಕು. ಮನೆಯಲ್ಲಿ ನೆಮ್ಮದಿ ಇರಬಹುದು. ತಾಂತ್ರಿಕ ವಿಚಾರಗಳಲ್ಲಿ ಯಶಸ್ಸು. ಹಿರಿಯರ ಸಲಹೆಗಳು ನೆರವಾಗಬಹುದು. ಯಾತ್ರೆಗೆ ಅವಕಾಶಗಳಿವೆ. ಸಾಯಂಕಾಲ ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ.

ವೃಷಭ ರಾಶಿ (Taurus): ಇಂದಿನ ದಿನ ಹಣಕಾಸು ವ್ಯವಹಾರದಲ್ಲಿ ತಾಳ್ಮೆ ಅಗತ್ಯ. ಕುಟುಂಬದಲ್ಲಿ ಕೆಲ ವಿಚಾರಗಳಲ್ಲಿ ತಲೆನೋವು. ಹಳೆಯ ಸ್ನೇಹಿತನ ಭೇಟಿಯಿಂದ ಹರ್ಷ. ವಾಹನ ಸಂಬಂಧಿತ ವ್ಯಯ ಸಂಭವಿಸಬಹುದು. ವ್ಯವಹಾರದಲ್ಲಿ ನಿಧಾನಗತಿಯಾಗಬಹುದು. ಆರೋಗ್ಯದಲ್ಲಿ ಚಿಕ್ಕ ಏರುಪೇರು. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಸಂತೋಷ. ದೇವರ ಧ್ಯಾನದಿಂದ ಶಾಂತಿ ಸಿಗಲಿದೆ.

ಮಿಥುನ ರಾಶಿ (Gemini): ಒಂದು ರೀತಿಯ ಗಾಬರಿಯಿಂದ ದಿನ ಎನಿಸಬಹುದು. ಕೆಲಸದಲ್ಲಿ ಆಕಸ್ಮಿಕ ಬದಲಾವಣೆಗಳು. ಹಣದ ಖರ್ಚು ನಿಯಂತ್ರಣದಲ್ಲಿಡಿ. ಹಳೆಯ ಸಾಲ ಒತ್ತಡ ತರಬಹುದು. ಇದೆಲ್ಲದರ ನಡುವೆ, ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ನಿಭಾಯಿಸಬಹುದು. ಕುಟುಂಬದಲ್ಲಿ ಒಡನಾಟ ಹೆಚ್ಚಾಗುವುದು. ಗೃಹಪ್ರವೇಶ, ಶುಭಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ.

ಕಟಕ ರಾಶಿ (Cancer): ನಿಮ್ಮ ಧೈರ್ಯ ಮತ್ತು ಸಂಕಲ್ಪ ಶಕ್ತಿಗೆ ಪರೀಕ್ಷೆಯ ದಿನ. ನಿಮ್ಮ ಮಾತು ಎಂತಹವರನ್ನೂ ಆಕರ್ಷಿಸುತ್ತದೆ. ಜಾಗೃತೆಯಿಂದ ದಿನ ನಡೆಸಿ. ನಿಮ್ಮ ಮಾನಸಿಕ ಶಕ್ತಿಯು ಯಶಸ್ಸಿಗೆ ದಾರಿ ಮಾಡುತ್ತದೆ. ಉದ್ಯೋಗದಲ್ಲಿ ಉನ್ನತಿ ಸಾಧ್ಯ. ಹಠದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಹಣದ ಲೆಕ್ಕಪತ್ರ ಸರಿಯಾಗಿ ನೋಡಿಕೊಳ್ಳಿ. ಕುಟುಂಬದ ಹಿರಿಯರಿಂದ ಆಶೀರ್ವಾದ. ಮಕ್ಕಳ ವಿಚಾರದಲ್ಲಿ ಸಂತೋಷದ ಸುದ್ದಿಯಿರುವ ಸಾಧ್ಯತೆ.

ಸಿಂಹ ರಾಶಿ (Leo): ಇಂದು ನೀವು ದಿಟ್ಟ ನಿರ್ಧಾರ ತೆಗೆದುಕೊಳ್ಳುವ ದಿನ. ಹೊಸ ಪ್ರಾಜೆಕ್ಟ್ ಅಥವಾ ಉದ್ಯೋಗ ಅವಕಾಶಗಳು ಸಿಗಬಹುದು. ಹಣದ ಒತ್ತಡ ಕಡಿಮೆಯಾಗಲಿದೆ. ನಿಮ್ಮ ಕೆಲಸಕ್ಕೆ ಶ್ಲಾಘನೆ ಸಿಗಲಿದೆ. ಸ್ನೇಹಿತರಿಂದ ಬೆಂಬಲ ಇರುತ್ತದೆ. ಆರೋಗ್ಯದಲ್ಲಿ ಚಿಕ್ಕ ಸಮಸ್ಯೆ, ಇಗ್ನೋರ್ ಮಾಡಬೇಡಿ. ಭವಿಷ್ಯದ ಯೋಜನೆಗಳನ್ನು ಪ್ರಾರಂಭಿಸಬಹುದಾದ ದಿನ. ದೇವರ ನಾಮಸ್ಮರಣೆ ನಿಮ್ಮ ಚಿಂತೆಗೆ ಪರಿಹಾರ.

ಕನ್ಯಾ ರಾಶಿ (Virgo): ಇಂದು ಕಾರ್ಯಗಳಲ್ಲಿ ವ್ಯತ್ಯಯ ಉಂಟಾಗಬಹುದು. ಯೋಜನೆಗೂ ಅನುಭವಕ್ಕೂ ವ್ಯತ್ಯಾಸ ಕಂಡುಬರಬಹುದು. ಕುಟುಂಬದಲ್ಲಿ ನಿರ್ಣಯದ ಬದಲಾವಣೆಗೆ ಅವಕಾಶ. ಹಣಕಾಸಿನಲ್ಲಿ ಚಿಕ್ಕ ಲಾಭ. ವ್ಯಾಪಾರಿಗಳಿಗೆ ಮಧ್ಯಮ ದಿನ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಹೊಸ ವಿಷಯ ಕಲಿಯುವ ಉತ್ಸಾಹ. ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಫಲಿತಾಂಶ. ಸಂಜೆ ವೇಳೆಗೆ ಮನಸ್ಸು ಹಗುರವಾಗುತ್ತದೆ.

Daily Horoscope for 23 July 2025

ತುಲಾ ರಾಶಿ (Libra): ಇಂದು ಹಣದ ವ್ಯವಹಾರದಲ್ಲಿ ಲಾಭದ ಸೂಚನೆ. ಮನೆಯ ಒಳಗಿನ ವಿಷಯಗಳಲ್ಲಿ ನಿರ್ಣಯ ತೆಗೆದುಕೊಳ್ಳುವ ಸಮಯ. ಹಿರಿಯರೊಂದಿಗೆ ಕಲಹವಿಲ್ಲದಂತೆ ನೋಡಿಕೊಳ್ಳಿ. ನಿಮ್ಮ ಮಾತುಗಳಿಂದ ಇತರರನ್ನು ಪ್ರೇರೇಪಿಸಬಹುದು. ಆರೋಗ್ಯ ಸುಧಾರಣೆಯ ದಿಕ್ಕಿನಲ್ಲಿ ಇದೆ. ಮಿತ್ರರಿಂದ ಬೆಂಬಲ. ದೇವಾಲಯ ಭೇಟಿ ಮಾಡುವುದು ಮನಸ್ಸಿಗೆ ನೆಮ್ಮದಿ ತರುತ್ತದೆ.

ವೃಶ್ಚಿಕ ರಾಶಿ (Scorpio): ಇಂದು ನಿಮಗೆ ಗಂಭೀರವಾದ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ. ಉದ್ಯೋಗದಲ್ಲಿ ಬದಲಾವಣೆ ಅಥವಾ ಸ್ಥಳಾಂತರ ಸಾಧ್ಯತೆ. ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ಎಚ್ಚರಿಕೆ ಬೇಕು. ಕುಟುಂಬದ ಒಡನಾಟ ಉತ್ತಮವಾಗಿರುತ್ತದೆ. ತಾಯಿ ಆರೋಗ್ಯದ ಕಡೆ ಗಮನವಿರಲಿ. ಪತ್ನಿ ಅಥವಾ ಪತಿಯೊಂದಿಗೆ ಮನಸ್ಸು ಹಂಚಿಕೊಳ್ಳಿ. ಅಹಂಕಾರದ ಮಾತು ತಪ್ಪಿಸಿ. ದೇವರ ಆರಾಧನೆ ನಿಮಗೆ ಶಕ್ತಿ ನೀಡಲಿದೆ.

ಧನು ರಾಶಿ (Sagittarius): ಇಂದು ಪ್ರಯಾಣದ ಯೋಗ. ವ್ಯವಹಾರ ಅಥವಾ ಉದ್ಯೋಗ ಸಂಬಂಧಿ ಯಾತ್ರೆ ಸಾರ್ಥಕವಾಗಲಿದೆ. ಹೊಸ ವ್ಯಕ್ತಿಗಳ ಪರಿಚಯದಿಂದ ಲಾಭ. ಹಣಕಾಸಿನ ವಿಚಾರದಲ್ಲಿ ಚಿಂತೆಯಿಲ್ಲ. ಬಂಧುಗಳೊಂದಿಗೆ ಸಾಂಘಿಕ ಚಟುವಟಿಕೆ. ಆರೋಗ್ಯದಲ್ಲಿ ಬದಲಾವಣೆ – ಜ್ವರ ಅಥವಾ ಅನಾರೋಗ್ಯ. ಮಕ್ಕಳ ವಿಷಯದಲ್ಲಿ ಪ್ರಗತಿ.. ತಾತ್ಕಾಲಿಕ ಒತ್ತಡ. ಸಂಜೆ ವೇಳೆಗೆ ಆನಂದಕರ.

ಮಕರ ರಾಶಿ (Capricorn): ಇಂದು ನೀವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ಹೃದಯಸಂಬಂಧಿತ ವಿಷಯಗಳಲ್ಲಿ ಎಚ್ಚರಿಕೆ ಇರಲಿ. ಹಣದ ವ್ಯವಹಾರದಲ್ಲಿ ಲಾಭವಿರುವ ಸಾಧ್ಯತೆ. ಉದ್ಯೋಗದಲ್ಲಿ ಸಮಸ್ಯೆ, ಆದರೆ ನಿಮ್ಮ ತಾಳ್ಮೆ ಗೆಲ್ಲಿಸಬಹುದು. ಕುಟುಂಬದ ಸಹಕಾರ ಉತ್ತಮ. ವಿದ್ಯಾರ್ಥಿಗಳಿಗೆ ಹೊಸ ಅವಕಾಶ. ತಾಂತ್ರಿಕ ಕೆಲಸದಲ್ಲಿ ಯಶಸ್ಸು. ನಿಮ್ಮ ಶ್ರದ್ಧೆ ಫಲ ನೀಡಲಿದೆ.

ಕುಂಭ ರಾಶಿ (Aquarius): ಇಂದು ನಿಮ್ಮ ಭಾವನೆಗಳ ಹತೋಟಿಗೆ ಸವಾಲು. ಮಾತಿನಲ್ಲಿ ಮೃದುತ್ವ ಇರಲಿ. ಹಣದ ವ್ಯವಹಾರಗಳಲ್ಲಿ ಸಹಜತೆ ಇರಲಿ. ಉದ್ಯೋಗದಲ್ಲಿ ತಾತ್ಕಾಲಿಕ ಅಡೆತಡೆ. ಕೆಲಸದಲ್ಲಿ ಯಶಸ್ಸು. ಬಂಧುಗಳಿಂದ ಭಿನ್ನಾಭಿಪ್ರಾಯ. ಆರೋಗ್ಯದಲ್ಲಿ ಸುಧಾರಣೆ. ಓದುಗರಿಗೆ ಉತ್ತಮ ಸಮಯ. ಸಂಯಮದ ಪ್ರಯೋಗದಿಂದ ನಿಮ್ಮ ದಿನ ಸುಖಕರವಾಗುತ್ತದೆ.

ಮೀನ ರಾಶಿ (Pisces): ಹಣಕಾಸಿನಲ್ಲಿ ಚಿಕ್ಕ ಲಾಭದ ಅವಕಾಶ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಆದರೆ, ವಾದವಿವಾದ ತಪ್ಪಿಸಿ. ಆರೋಗ್ಯದಲ್ಲಿ ಉತ್ತಮ ಬದಲಾವಣೆ. ಹಳೆಯ ಗೆಳೆಯರ ಸಂಪರ್ಕ ಸಾಧ್ಯ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಹೊಸ ಯೋಜನೆ ಪ್ರಾರಂಭಕ್ಕೆ ಸೂಕ್ತ ದಿನ. ದೇವರ ಆಶೀರ್ವಾದದಿಂದ ಸಮಸ್ಯೆಗಳು ದೂರ. ತಾಳ್ಮೆಯಿಂದ ದಿನ ಸಾಗಲಿದೆ

ಇದೆ ರೀತಿಯ ವಿಶ್ವಾಸಾರ್ಹ ಸುದ್ದಿಗಳಿಗಾಗಿ ತಪ್ಪದೆ Kannada News Today ಭೇಟಿ ನೀಡಿ.

======== Story End ========

Writer of This Story

Author of the Story
About Author:

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದುಗರಿಗೆ ಒದಗಿಸುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರ ಆಧುನಿಕ ಬರಹ ಶೈಲಿಯೇ ಅವರ ವಿಶೇಷತೆ... ಇನ್ನಷ್ಟು ಓದಿ

✉︎ Feedback: savitha@kannadanews.today

For Article Corrections/Report Issues Click here

Related Stories