ದಿನ ಭವಿಷ್ಯ 23-5-2025: ಇಂದಿನ ಭವಿಷ್ಯ ಹೇಳ್ತಿದೆ ಈ ರಾಶಿಗಳಿಗೆ ಭಾರೀ ಧನಲಾಭ
ನಾಳೆಯ ದಿನ ಭವಿಷ್ಯ 23-5-2025 ಶುಕ್ರವಾರ ಈ ರಾಶಿಗಳ ಆದಾಯಕ್ಕೆ ವಿಶೇಷವಾಗಿ ಶುಭ - Daily Horoscope - Naleya Dina Bhavishya 23 May 2025

ದಿನ ಭವಿಷ್ಯ 23 ಮೇ 2025
ಮೇಷ ರಾಶಿ (Aries): ಈ ದಿನ ನಿಮ್ಮಲ್ಲಿ ಎದ್ದು ಕಾಣುವ ವಿಷೇಶ ಲಕ್ಷಣ ಎಂದರೆ ಧೈರ್ಯ. ಕೆಲವರು ನಿಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಬಹುದು, ಆದರೆ ನೀವು ಸತ್ಯವನ್ನೇ ಹೇಳುತ್ತಿರುವಿರಿ ಎಂಬ ನಂಬಿಕೆ ಉಳಿಸಿಕೊಳ್ಳಿ. ಹಣಕಾಸು ವಿಚಾರಗಳಲ್ಲಿ ಅಲ್ಪ ಒತ್ತಡ ಇದ್ದರೂ, ಸಂಜೆ ವೇಳೆಗೆ ಬದಲಾವಣೆ ಆಗುವುದು ಖಚಿತ. ಇಂದು ನೀವು ನಿಮ್ಮತನವನ್ನು ಉಳಿಸಿಕೊಂಡಾಗ ಮಾತ್ರ ದಿನ ಸುಗಮವಾಗುತ್ತದೆ.
ವೃಷಭ ರಾಶಿ (Taurus): ನಂಬಿಕೆ ಇಟ್ಟು ಮುಂದುವರಿಯಬೇಕಾದ ದಿನ. ಕೌಟುಂಬಿಕ ವಿಚಾರಗಳಲ್ಲಿ ಒತ್ತಡ ಬರಬಹುದಾದರೂ, ನಿಮ್ಮ ಸಂಯಮದಿಂದಲೇ ಸಮಸ್ಯೆ ನಿವಾರಣೆಯಾಗುತ್ತದೆ. ಹಣಕಾಸಿನಲ್ಲಿ ಯೋಚಿಸಿ ಮುನ್ನಡೆಯಿರಿ, ತೀವ್ರ ಖರ್ಚು ತಪ್ಪಿಸಿ. ಕೆಲಸದಲ್ಲಿ ಏರುಪೇರುಗಳಾದರೂ, ನಿಮ್ಮ ಶ್ರಮವನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ನಿಮ್ಮೊಳಗಿನ ಶ್ರದ್ಧೆ ನಿಮಗೆ ಬೆಂಬಲ ನೀಡುತ್ತದೆ.
ಮಿಥುನ ರಾಶಿ (Gemini): ಹೊಸ ಆಲೋಚನೆಗಳಿಗೆ ಇಂದಿನ ದಿನ ಸೂಕ್ತವಾಗಿದೆ. ವಾದವಿವಾದಗಳಲ್ಲಿ ತಲೆ ಹಾಕಬೇಡಿ, ಶಾಂತವಾಗಿ ದೂರ ನಿಲ್ಲಿ. ಹಣಕಾಸಿನ ವಿಷಯಗಳಲ್ಲಿ ಇದ್ದಕ್ಕಿದ್ದಂತೆ ನಿರ್ಧಾರ ಮಾಡಬೇಡಿ. ಮನೆಯವರು ನಿಮ್ಮಿಂದ ಬೆಂಬಲ ನಿರೀಕ್ಷಿಸುತ್ತಿದ್ದಾರೆ, ಸಮಯ ಕೊಡಿ. ಹೊಸ ವಿಷಯ ಕಲಿಯಲು ದಿನ ಸೂಕ್ತವಾಗಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ.
ಕಟಕ ರಾಶಿ (Cancer): ಇಂದಿನ ದಿನ ಲಾಭ ಗಳಿಸುವ ಅವಕಾಶವಿರುತ್ತದೆ. ಹಳೆಯ ವಿವಾದಗಳನ್ನು ಪರಿಹರಿಸಬಹುದು. ಹಣಕಾಸಿನ ವಿಷಯಗಳಲ್ಲಿ ಹೊಸ ಯೋಜನೆಗಳನ್ನು ಮಾಡಬಹುದು, ಹೊಸ ಅವಕಾಶಗಳು ಮತ್ತು ಪ್ರಗತಿಯ ಮಾರ್ಗಗಳು ತೆರೆದುಕೊಳ್ಳುತ್ತವೆ. ನಿಮ್ಮ ಕೆಲಸದಲ್ಲಿ ನಿಮಗೆ ಹೊಸ ಜವಾಬ್ದಾರಿ ಸಿಗಬಹುದು ಅಥವಾ ನಿಮ್ಮ ಯೋಜನೆಯಲ್ಲಿ ಯಶಸ್ಸು ಸಿಗುತ್ತದೆ.
ಸಿಂಹ ರಾಶಿ (Leo): ನೀವು ಯಾವಾಗಲೂ ಶಕ್ತಿಶಾಲಿ ವ್ಯಕ್ತಿ, ಆದರೆ ಇಂದು ನೀವು ನಿಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕಾಗಬಹುದು. ಕೆಲಸದಲ್ಲಿ ಒತ್ತಡ ಜಾಸ್ತಿಯೇ ಇರಬಹುದು, ಆದರೆ ಆ ಶ್ರಮವೆ ನಾಳೆಯ ಫಲ. ನಿಮ್ಮ ಮಾತುಗಳು ಇಂದಿಗೆ ಬಹಳ ಪ್ರಭಾವ ಬೀರುತ್ತವೆ, ಸಡಿಲವಾಗಿ ಮಾತನಾಡಬೇಡಿ. ಹಣದ ವಿಷಯದಲ್ಲಿ ಕೊಂಚ ನಿರೀಕ್ಷೆ ಮುರಿಯಬಹುದು, ಆದರೆ ತಾಳ್ಮೆ ಇಡಿ.
ಕನ್ಯಾ ರಾಶಿ (Virgo): ಕೆಲಸದ ಸ್ಥಳದಲ್ಲಿ ನಿಮ್ಮ ಶಿಸ್ತಿಗೆ ಮೆಚ್ಚುಗೆ ಸಿಗಬಹುದು. ಆದರೆ ಎಲ್ಲವನ್ನೂ ನೀವು ಒಂದೇ ದಿನ ನಿರ್ವಹಿಸಲು ಯತ್ನಿಸಬೇಡಿ. ಹಣಕಾಸಿನಲ್ಲಿ ಸಣ್ಣ ಜಯ ಸಂಭವಿಸಬಹುದು. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ, ಹಳೆಯ ಸಮಸ್ಯೆ ಮರಳಿ ತೊಂದರೆ ಕೊಡಬಹುದು. ದಿನದ ಕೊನೆಗೆ ಸಮಯ ನಿಮ್ಮ ಪರವಾಗಿರುತ್ತದೆ. ತಾಳ್ಮೆಯಿಂದ ಮುಂದುವರೆಯಿರಿ.
ತುಲಾ ರಾಶಿ (Libra): ನಿಮ್ಮ ನಿರ್ಧಾರಗಳನ್ನು ಇತರರ ಮಾತು ಕೇಳಿದ ಮೇಲೆ ತೆಗೆದುಕೊಳ್ಳುವುದು ಉತ್ತಮ. ಕೆಲಸದಲ್ಲಿ ನಿಮ್ಮ ಶ್ರದ್ಧೆ ಎಲ್ಲರಿಗೂ ಸ್ಪಷ್ಟವಾಗಲಿದೆ. ಹಣದ ವ್ಯವಹಾರಗಳಲ್ಲಿ ಸೋಮಾರಿತನದಿಂದ ದೂರವಿರಿ. ಸ್ನೇಹಿತನೊಬ್ಬನ ಸಹಾಯ ನಿಮ್ಮ ಸಮಸ್ಯೆಗೆ ಪರಿಹಾರ ತರುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ಶಕ್ತಿ ಹೆಚ್ಚಾಗುತ್ತದೆ. ಕೆಲವು ಲಾಭಗಳು ಸಾಧ್ಯ.
ವೃಶ್ಚಿಕ ರಾಶಿ (Scorpio): ನಿಮ್ಮೊಳಗಿನ ಗಂಭೀರತೆ ಇಂದಿನ ಉತ್ತಮ ಶಸ್ತ್ರವಾಗಿದೆ. ಇಂದಿನ ದಿನ ವ್ಯವಹಾರಗಳಲ್ಲಿ ಹೆಚ್ಚು ಯೋಚನೆ ಮಾಡಿ ಹೆಜ್ಜೆ ಇಡಿ. ನಿರ್ಧಾರಗಳನ್ನು ತುರ್ತಾಗಿ ತೆಗೆದುಕೊಳ್ಳಬೇಡಿ, ನಷ್ಟಕ್ಕೆ ಒಳಗಾಗಬಹುದು. ಸಾಲ ಪಡೆಯುವುದನ್ನು ತಪ್ಪಿಸಿ. ಅಡೆತಡೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿ ಲಾಭ ಮತ್ತು ವ್ಯಾಪಾರ ಸಮಸ್ಯೆಗಳು ದೂರವಾಗುತ್ತವೆ.
ಧನು ರಾಶಿ (Sagittarius): ಈ ದಿನ ಶ್ರನಿಮ್ಮ ಮ ವ್ಯರ್ಥವಾಗದು. ಹಣದ ವಿಚಾರದಲ್ಲಿ ದೊಡ್ಡ ಬದಲಾವಣೆ ನಿಮ್ಮ ಪರವಾಗಿರಬಹುದು. ಸ್ನೇಹಿತರ ಮಾತುಗಳು ನಿಮಗೆ ಹೊಸ ಉತ್ಸಾಹ ನೀಡುತ್ತವೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದಾಯ ಹೆಚ್ಚಾಗುತ್ತದೆ ಮತ್ತು ಸಂತೋಷ ಸಿಗುತ್ತದೆ. ಸ್ಥಗಿತಗೊಂಡ ಕೆಲಸವು ವೇಗವನ್ನು ಪಡೆಯುತ್ತದೆ. ದಿನದ ಅಂತ್ಯದಲ್ಲಿ ಸಿಹಿ ಸುದ್ದಿ ನಿರೀಕ್ಷೆ ಇದೆ.
ಮಕರ ರಾಶಿ (Capricorn): ನಿಮ್ಮ ದಿನ ಇಂದಿಗೆ ಗಂಭೀರ ವಿಷಯಗಳಿಂದ ತುಂಬಿರಬಹುದು, ಆದರೆ ನಿಮ್ಮ ಬುದ್ಧಿವಂತಿಕೆಯೇ ನಿಜವಾದ ಶಕ್ತಿ. ಇತ್ತೀಚಿನ ಕೆಲವು ನಿರ್ಧಾರಗಳ ಪರಿಣಾಮ ಇಂದು ಕಾಣಿಸಿಕೊಳ್ಳಬಹುದು. ಕೆಲಸದಲ್ಲಿ ಕೆಲವೊಂದು ನಗ್ನ ಸತ್ಯಗಳು ಎದುರಾಗಬಹುದು. ಹಣಕಾಸಿನಲ್ಲಿ ಹೊಸ ಪರಿಹಾರ ಕಂಡುಬರಬಹುದು, ಆದರೆ ಹೆಚ್ಚು ಉತ್ಸಾಹಕ್ಕೆ ಒಳಗಾಗಬೇಡಿ.
ಕುಂಭ ರಾಶಿ (Aquarius): ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ ಮತ್ತು ಆಸ್ತಿಯಿಂದ ಲಾಭವಾಗುವ ಸಾಧ್ಯತೆ ಇರುತ್ತದೆ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಸಿಗಲಿವೆ. ಸಲಹೆ ಇಲ್ಲದೆ ಯಾವುದೇ ಕೆಲಸ ಮಾಡಬೇಡಿ. ಮಧ್ಯಾಹ್ನದ ವೇಳೆ ವಿಶೇಷ ಕಾಳಜಿ ವಹಿಸಿ. ಬಹಳಷ್ಟು ಕೆಲಸ ಇರುತ್ತದೆ, ಆದರೆ ಸಂಜೆಯ ವೇಳೆಗೆ ಪರಿಸ್ಥಿತಿ ಸುಧಾರಿಸುತ್ತದೆ. ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಬಹುದು.
ಮೀನ ರಾಶಿ (Pisces): ಇಂದಿನ ದಿನ ನಿಮಗೆ ಭಾವನೆಗಳಿಂದ ತುಂಬಿರಬಹುದು, ಕೆಲಸದ ಸ್ಥಳದಲ್ಲಿ ನಿಮ್ಮ ಶ್ರದ್ಧೆ ಗುರುತಿಸಬಹುದು. ಹೊಸ ಜನರ ಭೇಟಿಯಿಂದ ಪ್ರಯೋಜನವಾಗುತ್ತದೆ. ಆದಾಯ ಹೆಚ್ಚಾಗುತ್ತದೆ. ಸಂಜೆ ಸಮಯವು ಆದಾಯಕ್ಕೆ ವಿಶೇಷವಾಗಿ ಶುಭವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶ. ತಾಳ್ಮೆ ಮತ್ತು ಭರವಸೆ – ಇವತ್ತಿನ ದಾರಿದೀಪಗಳು.




