Tomorrow HoroscopeDaily Horoscopeದಿನ ಭವಿಷ್ಯ 2025

ದಿನ ಭವಿಷ್ಯ 24-6-2025: ಈ ದಿನ ಶಕುನ ಏನು ಹೇಳುತ್ತೆ? ಭವಿಷ್ಯ ತಂದಿದೆ ಸರ್ಪ್ರೈಸ್

ನಾಳೆಯ ದಿನ ಭವಿಷ್ಯ 24-6-2025 ಮಂಗಳವಾರ ಈ ರಾಶಿಗಳಿಗೆ ಆರ್ಥಿಕ ನೆಲೆ ಬಲವಾಗಿರುತ್ತದೆ - Daily Horoscope - Naleya Dina Bhavishya 24 June 2025

Publisher: Kannada News Today (Digital Media)

ದಿನ ಭವಿಷ್ಯ 24 ಜೂನ್ 2025

ಮೇಷ ರಾಶಿ (Aries): ಈ ದಿನ ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆ ಬರಬಹುದು. ಅತೀವ ವಿಶ್ವಾಸದಿಂದ ಎಲ್ಲರ ಗಮನ ಸೆಳೆಯುವಿರಿ. ಹಣಕಾಸು ವಿಚಾರದಲ್ಲಿ ಎಚ್ಚರಿಕೆ ಅಗತ್ಯವಿದೆ. ಹಳೆಯ ಸ್ನೇಹಿತರಿಂದ ಬೆಂಬಲ ಸಿಗಬಹುದು. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಬಹುದು. ಪ್ರಯಾಣದ ಯೋಗವಿದೆ. ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಉಂಟಾಗಬಹುದು. ಧೈರ್ಯದಿಂದ ಎಲ್ಲ ಸಮಸ್ಯೆ ಪರಿಹರಿಸಬಹುದು.

ವೃಷಭ ರಾಶಿ (Taurus): ನೀವು ಈ ದಿನ ಶಾಂತಿಯುತ ಮನಸ್ಥಿತಿಯಲ್ಲಿ ಇರುತ್ತೀರಿ. ಹೊಸ ಯೋಜನೆಗಳನ್ನು ರೂಪಿಸಬಹುದು. ವೃತ್ತಿಜೀವನದಲ್ಲಿ ಪ್ರಗತಿ ಕಾಣಬಹುದು. ಮನೆ ಖರೀದಿಗೆ ಯೋಚಿಸುವಿರಿ. ಬಂಧುಮಿತ್ರರಿಂದ ಸಂತಸದ ಸುದ್ದಿ ಬರುತ್ತದೆ. ಜೀವನ ಸಂಗಾತಿಯೊಂದಿಗೆ ಅನುಕೂಲಕರ ಸಂಭಾಷಣೆ ನಡೆಯುತ್ತದೆ. ಮಕ್ಕಳ ವಿಚಾರದಲ್ಲಿ ಸಂತೋಷ. ಧನಲಾಭವಿಲ್ಲದಿದ್ದರೂ ಸ್ಥಿರತೆ ಇರುತ್ತದೆ.

ಮಿಥುನ ರಾಶಿ (Gemini): ಬಹುತೇಕ ವಿಚಾರಗಳಲ್ಲಿ ಇಂದು ಚಂಚಲತೆಯ ದಿನ. ನಿರ್ಧಾರ ಕೈಗೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ. ವ್ಯಾಪಾರದಲ್ಲಿ ಹೊಸ ಅವಕಾಶ ಕಾಣಬಹುದು. ಉದ್ಯೋಗದಲ್ಲಿನ ಒತ್ತಡ ಇಳಿಯಬಹುದು. ಕುಟುಂಬದಲ್ಲಿ ಸಣ್ಣ ಮನಸ್ಥಾಪ ಸಂಭವಿಸಬಹುದು. ಸಂಯಮದಿಂದ ಸಮಸ್ಯೆ ಪರಿಹಾರವಾಗುತ್ತದೆ. ಸ್ನೇಹಿತರಿಂದ ಉತ್ತಮ ಸಹಕಾರ. ದಿನದ ಕೊನೆಯತ್ತ ಶುಭವಾದ ಬೆಳವಣಿಗೆ.

ಕಟಕ ರಾಶಿ (Cancer): ಇಂದಿನ ದಿನ ಮನಃಸ್ಥಿತಿ ನಿಶ್ಚಿತವಾಗಿರುವುದಿಲ್ಲ. ಕೆಲಸಗಳಲ್ಲಿ ತೊಂದರೆ ಉಂಟಾಗಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಕಡಿಮೆಯಾಗಬಹುದು. ಮನೆಯಲ್ಲೂ ಒತ್ತಡದ ವಾತಾವರಣ. ಧೈರ್ಯದಿಂದ ಮುಂದುವರಿಯಬೇಕು. ಹಣಕಾಸಿನ ಬಗ್ಗೆ ಎಚ್ಚರಿಕೆ ಅಗತ್ಯವಿದೆ. ಮಕ್ಕಳ ಚಟುವಟಿಕೆಗಳು ಸಂತಸ ನೀಡಬಹುದು. ಧ್ಯಾನದಿಂದ ನೆಮ್ಮದಿ ಪಡೆಯಿರಿ.

ಸಿಂಹ ರಾಶಿ (Leo): ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸ ಮೆಚ್ಚುಗೆ ಪಡೆಯಲಿದೆ. ಹಿರಿಯರಿಂದ ಪ್ರೋತ್ಸಾಹ ಸಿಗಬಹುದು. ಹೊಸ ಅವಕಾಶಗಳು ಕಂಡುಬರುತ್ತವೆ. ಆರ್ಥಿಕವಾಗಿ ಲಾಭ. ಕುಟುಂಬದಲ್ಲಿ ಶುಭಘಟನೆ ಸಂಭವಿಸಬಹುದು. ಸ್ನೇಹಿತರ ಜೊತೆ ಮಾತುಕತೆ ಇಂದು ಫಲ ನೀಡಬಹುದು. ಸಾಯಂಕಾಲದ ನಂತರ ವಿಶ್ರಾಂತಿ ಬೇಕಾಗುತ್ತದೆ.

ಕನ್ಯಾ ರಾಶಿ (Virgo): ಇಂದು ಎಲ್ಲರ ಗಮನ ಸೆಳೆಯುವಿರಿ. ಕೆಲಸದಲ್ಲಿ ನಿಮ್ಮ ಶಿಸ್ತಿನಿಂದ ಸದುಪಯೋಗವಾಗಬಹುದು. ವ್ಯಾಪಾರ ವೃದ್ಧಿಯ ಯೋಗ. ಹಣಕಾಸಿನಲ್ಲಿ ಸ್ಥಿರತೆ. ತಂದೆ-ತಾಯಿಯೊಂದಿಗೆ ಸಮಯ ಕಳೆಯುವುದು ಸಂತಸ ನೀಡುತ್ತದೆ. ಹಳೆಯ ಕೆಲಸಕ್ಕೆ ಫಲಿತಾಂಶ ದೊರೆಯಲಿದೆ. ನಿಮ್ಮ ಶ್ರದ್ಧೆ ಮತ್ತು ಶ್ರಮಕ್ಕೆ ಇವತ್ತು ಬೆಲೆ ಸಿಗಲಿದೆ. ಆರೋಗ್ಯವೂ ಉತ್ತಮವಾಗಿರುತ್ತದೆ.

Daily Horoscope for 24 June 2025

ತುಲಾ ರಾಶಿ (Libra): ಇಂದು ನಿಮ್ಮ ಸಂಬಂಧಗಳಲ್ಲಿ ಸಮತೋಲನ ಅಗತ್ಯ. ಸ್ನೇಹಿತ ಅಥವಾ ಕುಟುಂಬದ ಸದಸ್ಯರ ಜೊತೆ ಮನಸ್ತಾಪ ಆಗದಂತೆ ನೋಡಿಕೊಳ್ಳಿ. ಉದ್ಯೋಗದಲ್ಲಿ ನಿರೀಕ್ಷಿತ ಫಲ ಸಿಗಬಹುದು. ಹಣಕಾಸು ವ್ಯವಹಾರಗಳಲ್ಲಿ ಸುಧಾರಣೆ ಕಾಣಬಹುದು. ಹೊಸ ಶಕ್ತಿ ನಿಮ್ಮೊಳಗೆ ಪ್ರೇರಣೆ ನೀಡಬಹುದು. ಭಾವೋದ್ವೇಗದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಶಾಂತ ಮನಸ್ಸಿನಿಂದ ದಿನ ಮುಗಿಯುತ್ತದೆ.

ವೃಶ್ಚಿಕ ರಾಶಿ (Scorpio): ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡುವುದು ಮುಖ್ಯ. ನಂಬಿಕಸ್ಥರ ಸಲಹೆ ಆಲಿಸುವುದು ಒಳಿತು. ವ್ಯಾಪಾರಕ್ಕೆ ಉತ್ತಮ ಸಮಯ. ಹಳೆಯ ಸಾಲವೊಂದನ್ನು ತೀರಿಸಬಹುದಾದ ಯೋಗವಿದೆ. ಆರೋಗ್ಯದಲ್ಲಿ ತುಸು ಎಚ್ಚರಿಕೆ ಅಗತ್ಯ. ಕುಟುಂಬಕ್ಕೆ ನಿಮ್ಮ ಅವಶ್ಯಕತೆ ಇದೆ, ಅವರಿಗಾಗಿ ಸಮಯ ನೀಡಿ. ಸಾಯಂಕಾಲದ ನಂತರ ಶಾಂತಿ ಪಡೆಯಬಹುದು.

ಧನು ರಾಶಿ (Sagittarius): ಶುಭಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶ. ಉದ್ಯೋಗದಲ್ಲಿ ದೊಡ್ಡ ಅವಕಾಶ. ಭರವಸೆಯ ಸುದ್ದಿ ಬರುತ್ತದೆ. ಆತ್ಮಸ್ಥೈರ್ಯದಿಂದ ಇಂದು ಯಶಸ್ಸು ಸಾಧಿಸಬಹುದು. ನಿಮ್ಮೊಳಗೆ ಆತ್ಮವಿಶ್ವಾಸ ಮತ್ತು ಹೊಸ ಶಕ್ತಿ ಮೂಡುತ್ತದೆ. ನೀವು ಕುಟುಂಬದೊಂದಿಗೆ ಪ್ರಯಾಣಿಸಬಹುದು. ಮಂಗಳ ಕಾರ್ಯಕ್ಕೆ ಸಂಬಂಧಿಸಿದ ಯೋಜನೆಯನ್ನು ಸಹ ನೀವು ಮಾಡುತ್ತೀರಿ.

ಮಕರ ರಾಶಿ (Capricorn): ಇಂದು ನಿಮ್ಮ ಯೋಜನೆಗಳಿಗೆ ಪ್ರಾಯೋಗಿಕ ಆಲೋಚನೆ ಬೇಕಾಗುತ್ತದೆ. ಆದಾಯದಲ್ಲಿ ಲಘು ಇಳಿಕೆ ಸಾಧ್ಯ. ಸಹೋದ್ಯೋಗಿಗಳ ಜೊತೆ ವಾದವಿವಾದ ತಪ್ಪಿಸಲು ಯತ್ನಿಸಿ. ಗೃಹ ಕಾರ್ಯಗಳಲ್ಲಿ ಹೆಚ್ಚು ಸಮಯ ಹೋಗಲಿದೆ. ಕುಟುಂಬದಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ. ಮಕ್ಕಳ ಶಿಕ್ಷಣಕ್ಕೆ ಹಣ ವ್ಯವಸ್ಥೆ ಮಾಡಬೇಕಾಗಬಹುದು. ಬುದ್ದಿವಂತಿಕೆಯಿಂದ ದಿನ ಮುಗಿಸಲು ಪ್ರಯತ್ನಿಸಿ.

ಕುಂಭ ರಾಶಿ (Aquarius): ಇಂದು ನಿಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶ. ಉದ್ಯೋಗ ಬದಲಾವಣೆಗೆ ಅನೂಕೂಲ ಸಮಯ. ಧನಲಾಭದ ಸೂಚನೆ. ಅಲ್ಪ ಮಟ್ಟಿನ ಆರೋಗ್ಯ ತೊಂದರೆ ಇರಬಹುದು. ಪ್ರವಾಸದ ಯೋಜನೆ ಸಾಧ್ಯ. ನಿರ್ಧಾರದಲ್ಲಿ ತಾರತಮ್ಯ ಬೇಡ. ಮನಃಸ್ಥಿತಿ ಉತ್ತಮವಾಗಿರಲು ಧ್ಯಾನ ಸಹಾಯ ಮಾಡುತ್ತದೆ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಸಿಗುತ್ತವೆ.

ಮೀನ ರಾಶಿ (Pisces): ಇಂದು ನಿಮ್ಮ ಕ್ರಿಯಾತ್ಮಕ ಶಕ್ತಿ ಹೆಚ್ಚಾಗಲಿದೆ. ಹೊಸ ಕಲಿಕೆಗಳು ನಿಮಗೆ ಅವಕಾಶ ತರುತ್ತವೆ. ಉದ್ಯೋಗದಲ್ಲಿ ಮೆಚ್ಚುಗೆ ಸಿಗುತ್ತದೆ. ಹಣಕಾಸಿನಲ್ಲಿ ಲಾಭ. ಕುಟುಂಬದಲ್ಲಿ ಸಂತಸದ ವಾತಾವರಣ. ಸ್ನೇಹಿತರ ಜೊತೆಗೆ ಸಮಯ ಕಳೆಯುವುದು ಆನಂದದಾಯಕ. ಅನಿವಾರ್ಯ ಖರ್ಚು ಸಂಭವಿಸಬಹುದು. ದಿನದ ಕೊನೆಯಲ್ಲಿ ಯಶಸ್ಸು ನಿಮ್ಮದಾಗಲಿದೆ.

Related Stories