ದಿನ ಭವಿಷ್ಯ 26-5-2025: ಈ 6 ರಾಶಿಗಳ ಜೀವನಕ್ಕೆ ಹೊಸ ಹುರುಪು! ಅಚ್ಚರಿ ಕ್ಷಣ

ನಾಳೆಯ ದಿನ ಭವಿಷ್ಯ 26-5-2025 ಸೋಮವಾರ ಈ ರಾಶಿಗಳ ಶ್ರಮಕ್ಕೆ ಒಳ್ಳೆಯ ಪ್ರತಿಫಲ - Daily Horoscope - Naleya Dina Bhavishya 26 May 2025

ದಿನ ಭವಿಷ್ಯ 26 ಮೇ 2025

ಮೇಷ ರಾಶಿ (Aries): ಈ ದಿನ ಕೆಲಸದ ಒತ್ತಡ ಜಾಸ್ತಿಯಾಗಬಹುದು, ಆದರೂ ನಂಬಿಕೆಯೊಂದಿಗೆ ಮುಂದುವರೆಯಿರಿ. ಆರ್ಥಿಕವಾಗಿ ನಷ್ಟಗಳಾಗದಂತೆ ಜಾಗರೂಕರಾಗಿರಿ. ಮಿತ್ರರಿಂದ ಲಾಭದ ಸಾಧ್ಯತೆ ಇದೆ. ಹೊಸ ನಿರ್ಧಾರಗಳ ಬಗ್ಗೆ ಮನಸ್ಸು ಗೊಂದಲದಲ್ಲಿರಬಹುದು. ಆರೋಗ್ಯದಲ್ಲಿ ಸ್ವಲ್ಪ ಅಸಹಜತೆ ಕಾಣಿಸಬಹುದು. ಮನಸ್ಸಿಗೆ ಶಾಂತಿ ನೀಡುವಂತಹ ಕೆಲಸಗಳನ್ನು ಮಾಡಿ.

ವೃಷಭ ರಾಶಿ (Taurus): ಹಳೆಯ ಸ್ನೇಹಿತರಿಂದ ಉತ್ತಮ ಸುದ್ದಿ ಬರುವ ದಿನ. ಇಂದು ನಿಮ್ಮ ಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗಲಿದೆ. ಧೈರ್ಯ ಹಾಗೂ ನಂಬಿಕೆಯಿಂದ ಕಾರ್ಯಗಳಲ್ಲಿ ಯಶಸ್ಸು ಕಾಣಬಹುದು. ವ್ಯವಸ್ಥಿತ ಜೀವನ ಶೈಲಿ ನಿಮಗೆ ಹೆಚ್ಚು ಶಕ್ತಿ ನೀಡುತ್ತದೆ. ಹಣಕಾಸಿನಲ್ಲಿ ಸುಧಾರಣೆ ಕಂಡುಬರಲಿದೆ. ಆರೋಗ್ಯದಲ್ಲಿ ಸಣ್ಣ ಸಮಸ್ಯೆಗಳು ಉಂಟಾಗಬಹುದು, ವಿಶೇಷ ಜಾಗೃತಿ ಅಗತ್ಯ.

ಮಿಥುನ ರಾಶಿ (Gemini): ನಿಮಗೆ ಹೊಸ ಅವಕಾಶಗಳು ಈ ದಿನ ಕಾಣಿಸಬಹುದು. ಬಹುತೇಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ಹಳೆಯ ಹೂಡಿಕೆಗೆ ಲಾಭ ದೊರೆಯಬಹುದು. ಉದ್ಯೋಗದಲ್ಲಿ ನಿಮ್ಮ ಪ್ರತಿಭೆ ಗುರುತಿಸಲಾಗುತ್ತದೆ. ದೈಹಿಕ ಶ್ರಮ ಹೆಚ್ಚು ಆಗಬಹುದು, ವಿಶ್ರಾಂತಿಗೆ ಹೆಚ್ಚು ಒತ್ತು ನೀಡಿ. ಸಮಯಪಾಲನೆಯಿಂದಾಗಿ ಹೆಚ್ಚು ಕಾರ್ಯ ಸಫಲವಾಗಲಿದೆ.

ಕಟಕ ರಾಶಿ (Cancer): ಇಂದಿನ ದಿನ ಸ್ನೇಹಿತರ ಸಹಾಯದಿಂದ ಸಮಸ್ಯೆ ಸುಲಭ. ಆದರೆ ಇಂದು ಕೆಲ ನಿರ್ಧಾರಗಳಲ್ಲಿ ಆತ್ಮವಿಶ್ವಾಸ ಕಡಿಮೆಯಾಗಬಹುದು. ಕೌಟುಂಬಿಕ ವಿಚಾರದಲ್ಲಿ ನಿಮ್ಮ ಧೈರ್ಯ ಮುಖ್ಯ ಪಾತ್ರ ವಹಿಸುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳ ಸೂಚನೆ ಇದೆ. ಹೃದಯ ಸಂಬಂಧಿತ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಿ.

ಸಿಂಹ ರಾಶಿ (Leo): ಬುಧಿವಂತಿಕೆ ಉಪಯೋಗಿಸಿದರೆ ಬಿಕ್ಕಟ್ಟು ದೂರವಾಗಬಹುದು. ಉತ್ಸಾಹ ಹಾಗೂ ಹೊಸ ಚಟುವಟಿಕೆಗಳಿಗೆ ಆದರ್ಶ ದಿನ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗಬಹುದು. ಹಣಕಾಸು ಸ್ಥಿತಿಯಲ್ಲಿ ನೆಮ್ಮದಿ ಕಾಣುವಿರಿ. ಸ್ನೇಹಿತರ ಜೊತೆ ಹೊಸ ಯೋಜನೆಗಳ ಚರ್ಚೆ ನಡೆಯಬಹುದು. ಸಂಗಾತಿಗೆ ಸಮಯ ನೀಡುವುದು ಸಂಬಂಧ ಬಲಪಡಿಸುತ್ತದೆ.

ಕನ್ಯಾ ರಾಶಿ (Virgo): ಅಪರಿಚಿತ ವ್ಯಕ್ತಿಗಳೊಂದಿಗೆ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಹೊತ್ತಿನ ಯೋಗಾಭ್ಯಾಸ ಮನಸ್ಸಿಗೆ ಶಾಂತಿ ನೀಡುತ್ತದೆ. ಹಣಕಾಸಿನಲ್ಲಿ ನಿರೀಕ್ಷಿತ ಲಾಭ ಸಾಧ್ಯ. ಪೂರ್ವಾಪರ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಸ್ನೇಹಿತರಿಂದ ಸಣ್ಣ ಸಹಾಯ ದೊರೆಯಬಹುದು. ಪ್ರಶಂಸೆಯ ಜೊತೆಗೆ ಹೊಗಳಿಕೆಯೂ ಸಿಗುವ ದಿನ. ಬುದ್ಧಿವಂತಿಕೆ ಮತ್ತು ಶಾಂತಿಯು ನಿಮ್ಮ ಶಕ್ತಿ ಆಗಿರಲಿ.

Daily Horoscope for 26 May 2025

ತುಲಾ ರಾಶಿ (Libra): ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಚಟುವಟಿಕೆಗಳು ಮುಂದುವರಿಯುತ್ತವೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಇಂದು, ನಿಮ್ಮ ಮಗುವಿನ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಪರಿಹರಿಸುವ ಮೂಲಕ ನಿಮಗೆ ಅಪಾರ ಪರಿಹಾರ ಸಿಗುತ್ತದೆ. ಸ್ನೇಹಿತ ಅಥವಾ ಸಂಬಂಧಿಕರೊಂದಿಗಿನ ಹಳೆಯ ಭಿನ್ನಾಭಿಪ್ರಾಯಗಳನ್ನು ಸಹ ಪರಿಹರಿಸಬಹುದು.

ವೃಶ್ಚಿಕ ರಾಶಿ (Scorpio): ಇಂದು ಗುರಿ ತಲುಪಲು ನಿಖರ ಯೋಜನೆ ಅಗತ್ಯ. ವ್ಯವಹಾರದಲ್ಲಿ ಲಾಭದ ಸೂಚನೆಗಳು ಸ್ಪಷ್ಟ.
ಇತ್ತೀಚೆಗೆ ನಡೆದ ಗೊಂದಲಕ್ಕೆ ಪರಿಹಾರ ಸಿಗಬಹುದು. ಮನೆಮಂದಿ ಜೊತೆ ಸಂತೋಷದ ಕ್ಷಣಗಳು. ದೀರ್ಘಕಾಲದ ಯೋಜನೆಗಳು ಫಲ ಕೊಡುತ್ತವೆ. ಹಠ ಅಥವಾ ಕೋಪದಿಂದ ದೂರವಿರಿ. ಆರ್ಥಿಕವಾಗಿ ಹೊಸ ಮಾರ್ಗಗಳು ತೆರೆಯಬಹುದು. ವಿಶ್ವಾಸದಿಂದ ಹೆಜ್ಜೆ ಹಾಕಿ, ಯಶಸ್ಸು ನಿಮ್ಮದೇ.

ಧನು ರಾಶಿ (Sagittarius): ಇಂದು ಪ್ರಯತ್ನಗಳಿಗೆ ಸ್ಪಷ್ಟ ಫಲಿತಾಂಶ ಸಿಗಬಹುದು. ಪ್ರವಾಸಕ್ಕೆ ಯೋಜನೆ ಇದ್ದರೆ, ಶುಭ ಕಾಲ. ಅವಕಾಶಗಳನ್ನು ಚುಟುಕು ಸಮಯದಲ್ಲಿ ಹಿಡಿಯಬೇಕು. ಹಠ ಅಥವಾ ಅಹಂಕಾರದಿಂದ ದೂರವಿರಿ. ಹಳೆಯ ಗೆಳೆಯರ ಭೇಟಿ ನೆನಪಿನ ಕ್ಷಣ ತರಬಹುದು. ನಿಮ್ಮ ಸ್ವಭಾವದಲ್ಲಿ ಸರಾಗತೆ ಮತ್ತು ತಾಳ್ಮೆಯನ್ನು ಕಾಪಾಡಿಕೊಳ್ಳಿ. ಕೆಲವೊಮ್ಮೆ ಅತಿಯಾದ ಆತ್ಮವಿಶ್ವಾಸವು ನಿಮಗೆ ಹಾನಿಕಾರಕ ಪರಿಸ್ಥಿತಿಯನ್ನು ಸೃಷ್ಟಿಸಬಹುದು.

ಮಕರ ರಾಶಿ (Capricorn): ಅನಗತ್ಯ ಖರ್ಚುಗಳನ್ನು ತಪ್ಪಿಸಿ ಮತ್ತು ನಿಮ್ಮ ಬಜೆಟ್ ಅನ್ನು ನೋಡಿಕೊಳ್ಳಿ. ಕುಟುಂಬದ ಜವಾಬ್ದಾರಿಗಳ ಬಗ್ಗೆಯೂ ಗಮನ ಕೊಡಿ. ಇಂದು ಕಾರ್ಯಗಳಲ್ಲಿ ನಿಗದಿತ ಗುರಿ ತಲುಪಲು ಸಾಧ್ಯ. ಹಣಕಾಸಿನಲ್ಲಿ ಜಾಗರೂಕತೆ ತಾಳಿದರೆ ಲಾಭವಾಗಲಿದೆ. ಮಾತಿನಲ್ಲಿ ಸ್ಪಷ್ಟತೆ ಇರಲಿ, ತಪ್ಪು ಅರ್ಥದ ಅವಕಾಶ ಇರಬಾರದು.
ಕುಟುಂಬದೊಂದಿಗೆ ನಿರ್ಣಯಗಳು ಹಂಚಿಕೊಳ್ಳಿ.

ಕುಂಭ ರಾಶಿ (Aquarius): ಮಿತವ್ಯಯ ಮತ್ತು ಶಿಸ್ತು ನಿಮ್ಮ ತಂತ್ರವಾಗಲಿ. ಇಂದು ನಿಮ್ಮ ಉತ್ಸಾಹದಿಂದ ಇತರರಿಗೂ ಪ್ರೇರಣೆ ಸಿಗಬಹುದು. ವ್ಯಾಪಾರ-ವ್ಯವಸ್ಥೆಯಲ್ಲಿ ಚುರುಕು ವೃದ್ಧಿಯಾಗಲಿದೆ. ಅನುಭವದಿಂದ ನಿರ್ಧಾರ ತೆಗೆದುಕೊಳ್ಳಿ. ಹಳೆಯ ಸ್ನೇಹಿತರಿಂದ ಹೊಸ ಅವಕಾಶಗಳು ಬರಬಹುದು. ಎಲ್ಲರೊಂದಿಗೂ ಪ್ರೀತಿಯಿಂದ ಮಾತಾಡಿ ಬಾಂಧವ್ಯ ಬಲಪಡಿಸಿ.

ಮೀನ ರಾಶಿ (Pisces): ಹಣಕಾಸಿನಲ್ಲಿ ನಿರೀಕ್ಷಿತ ಲಾಭ ಕಂಡುಬರಲಿದೆ. ಹೊಸ ಪರಿಚಯಗಳು ಮುಂದಿನ ದಿನಗಳಲ್ಲಿ ಲಾಭಕಾರಿ. ಪರಿಶ್ರಮದ ಫಲ ಇಂದು ಕೈಗೆ ಬರುವ ಸಾಧ್ಯತೆ. ಗೌರವ ಮತ್ತು ಇಮೇಜ್ ಬೆಳೆಸುವ ಸಮಯ. ಕುಟುಂಬದೊಂದಿಗೆ ಸಾನ್ನಿಧ್ಯ ಸಂತೋಷ ನೀಡುತ್ತದೆ. ಮನೆಯಲ್ಲಿ ಕೆಲವು ಶುಭ ಸಂದರ್ಭ ಅಥವಾ ಧಾರ್ಮಿಕ ಕಾರ್ಯಕ್ರಮವನ್ನು ಯೋಜಿಸಬಹುದು.

Related Stories