ದಿನ ಭವಿಷ್ಯ 30-5-2025: ಶುಭ ಶುಕ್ರವಾರ, ಈ ರಾಶಿಗಳ ಮನೆಯಂಗಳಕ್ಕೆ ಲಕ್ಷ್ಮಿ ಪ್ರವೇಶ

ನಾಳೆಯ ದಿನ ಭವಿಷ್ಯ 30-5-2025 ಶುಕ್ರವಾರ ಈ ರಾಶಿಗಳಿಗೆ ವ್ಯಾಪಾರದಲ್ಲಿ ಲಾಭ ಇರುತ್ತದೆ - Daily Horoscope - Naleya Dina Bhavishya 30 May 2025

ದಿನ ಭವಿಷ್ಯ 30 ಮೇ 2025

ಮೇಷ ರಾಶಿ (Aries): ಈ ದಿನ ಮಾತುಗಳಿಂದ ಬೇರೆಯವರನ್ನು ಪ್ರಭಾವಿತ ಮಾಡಬಲ್ಲಿರಿ. ಕೆಲಸದಲ್ಲಿ ಚುರುಕು, ಮನಸ್ಸು ಉತ್ಸಾಹದಿಂದ ತುಂಬಿರುತ್ತದೆ. ನೂತನ ಯೋಜನೆಗೆ ಚಾಲನೆ ನೀಡುವದು ಲಾಭದಾಯಕವಾಗಲಿದೆ. ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ. ಹಣಕಾಸು ವಿಚಾರದಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ. ಹಳೆಯ ಸಾಲ ತೀರಿಸುವ ಯೋಗವಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಬಹುದು.

ವೃಷಭ ರಾಶಿ (Taurus): ಇಂದು ನಿಮಗೆ ಹೊಸ ಶಕ್ತಿ ತುಂಬುವ ದಿನ. ಇಂದು ನಿರ್ಣಯಗಳಲ್ಲಿ ಧೈರ್ಯದಿಂದ ಮುನ್ನಡೆಯಬೇಕು. ಹಣಕಾಸಿನಲ್ಲಿ ಸ್ಥಿರತೆ ಬರಲಿದೆ. ಹಳೆಯ ಸ್ನೇಹಿತರಿಂದ ಸಂಪರ್ಕ ಬರಬಹುದು. ಮನೆಗೆ ಸಂಬಂಧಿಸಿದ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಮಯ. ಮಕ್ಕಳ ಜೊತೆ ಸಮಯ ಕಳೆಯುವಿರಿ. ಕೆಲಸದಲ್ಲಿ ಹೊಸ ಜವಾಬ್ದಾರಿ. ಆರೋಗ್ಯ ಸುಧಾರಿಸುತ್ತದೆ.

ಮಿಥುನ ರಾಶಿ (Gemini): ಆಲೋಚನೆಗೆ ಈ ದಿನ ಸಮಯ ಕೊಡಬೇಕಾಗುತ್ತದೆ. ತುರ್ತು ನಿರ್ಧಾರ ತಪ್ಪುಗಳಿಗೆ ಕಾರಣವಾಗಬಹುದು. ಕೆಲಸದ ಒತ್ತಡ ಹೆಚ್ಚು ಕಾಣಬಹುದು. ನಿಮಗೆ ಹೊಸ ಸಂಪರ್ಕಗಳು ನೆರವಾಗಬಹುದು. ವ್ಯಾಪಾರಿಗಳಿಗೆ ಸಾಧಾರಣ ಲಾಭ. ವ್ಯರ್ಥದ ವಾದವಿವಾದಗಳಿಂದ ದೂರ ಇರಿ. ಮನಃಸ್ಥಿತಿ ಆರಾಮವಾಗಿರುತ್ತದೆ. ಸಂಜೆ ಸಮಯ ಶಾಂತವಾಗಿರಲಿದೆ.

ಕಟಕ ರಾಶಿ (Cancer): ಈ ದಿನ ಆರ್ಥಿಕ ಲಾಭದ ಸಮಯ ಆರಂಭದ ಸೂಚನೆ. ಇತ್ತೀಚೆಗೆ ಮಾಡಿದ ಹೂಡಿಕೆಗೆ ಫಲ ಕಾಣುವ ಸೂಚನೆ. ಉದ್ಯೋಗದಲ್ಲಿ ನಿಮಗೆ ಗೌರವ ಸಿಗಬಹದು. ಹಿರಿಯರ ಸಲಹೆಗೆ ಬೆಲೆ ಕೊಡಿ. ಕುಟುಂಬದಲ್ಲಿ ಸೌಹಾರ್ದತೆ ಇರುವುದು. ಆರೋಗ್ಯದಲ್ಲಿ ಚಿಂತೆ ಇಲ್ಲ. ವಿದೇಶ ಸಂಪರ್ಕದ ಮೂಲಕ ನವೀನ ಅವಕಾಶ. ಪ್ರಯಾಣ ಅನುಕೂಲಕರ.

ಸಿಂಹ ರಾಶಿ (Leo): ನಿಮ್ಮ ನಿರ್ಧಾರಗಳ ಮೇಲೆ ಧೈರ್ಯವಿರಲಿ. ಇಂದಿನ ದಿನದಲ್ಲಿ ಸ್ವಲ್ಪ ಗೊಂದಲಗಳಿದ್ದರೂ ನಿರ್ವಹಿಸಬಲ್ಲಿರಿ. ಕೆಲಸದ ಕಡೆ ಒತ್ತಡ. ಆದರೆ ನಿಮ್ಮ ಸಮರ್ಥತೆಯಿಂದ ಸಮಸ್ಯೆ ಬಗೆಹರಿಸಬಹುದು. ಕುಟುಂಬದವರಿಂದ ಬೆಂಬಲ ದೊರೆಯಲಿದೆ. ಹಣಕಾಸು ಪರಿಸ್ಥಿತಿಯಲ್ಲಿ ತಾತ್ಕಾಲಿಕ ಅಸ್ಥಿರತೆ. ಆರೋಗ್ಯದಲ್ಲಿ ಜಾಗ್ರತೆ ವಹಿಸಿರಿ. ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ.

ಕನ್ಯಾ ರಾಶಿ (Virgo): ದಿನಚರಿಯಲ್ಲಿಂದು ನಿಖರತೆ ಮುಖ್ಯ. ನೀವು ಮಾಡಿದ ಯತ್ನ ಫಲ ನೀಡುತ್ತದೆ. ಸಹೋದ್ಯೋಗಿಗಳ ಜೊತೆ ಸಮನ್ವಯ ಇರಲಿ. ಶುಭ ಸುದ್ದಿಗೆ ಸಾಧ್ಯತೆ ಇದೆ. ಶಿಕ್ಷಣ ಕ್ಷೇತ್ರದವರಿಗೆ ಉತ್ತಮ ಸಮಯ. ಮನೆಗೆ ಸಂಬಂಧಿಸಿದ ಖರ್ಚು ಹೆಚ್ಚಾಗಬಹುದು. ನಿಮ್ಮ ಮಾತಿಗೆ ಗಂಭೀರತೆ ಇರಲಿ. ಜನರೊಂದಿಗೆ ಇರುವುದು ನಿಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ.

Daily Horoscope for 30 May 2025

ತುಲಾ ರಾಶಿ (Libra): ಮಿತಭಾಷೆಯ ಅವಶ್ಯಕತೆ ಇರುತ್ತದೆ. ದಿನದ ಮೊದಲ ಭಾಗದಲ್ಲಿ ನಿಮ್ಮ ಪ್ರತಿಭೆಯನ್ನು ಗುರುತಿಸುವ ಯೋಗ. ಕುಟುಂಬದವರ ಬೆಂಬಲ ಸಂತೋಷ ನೀಡುತ್ತದೆ. ಮಕ್ಕಳಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಯೋಚಿಸಿದ ನಂತರ ತೆಗೆದುಕೊಳ್ಳಿ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ ಮತ್ತು ಯೋಚಿಸದೆ ಹೂಡಿಕೆ ಮಾಡಬೇಡಿ.

ವೃಶ್ಚಿಕ ರಾಶಿ (Scorpio): ಇಂದು ನಿಮ್ಮ ನಿರ್ಧಾರಗಳು ನಿಮಗೆ ಮೌಲ್ಯ ನೀಡಬಲ್ಲವು. ಕೆಲಸದಲ್ಲಿ ಸ್ಥಿರತೆಯ ದಿನ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸೂಕ್ತ ಸಮಯ. ಆರ್ಥಿಕ ಲಾಭದ ದಾರಿ ತೆರೆಯಬಹುದು. ಹಿರಿಯರ ಸಲಹೆ ಅಮೂಲ್ಯ. ಮನಸ್ಸಿನಲ್ಲಿ ಆತ್ಮವಿಶ್ವಾಸ ಹೆಚ್ಚುವುದು. ಸ್ನೇಹಿತರಿಂದ ಸಹಕಾರ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಬಹುದು. ಒಟ್ಟಾರೆ ಇಂದು ನಿಮ್ಮ ದಿನ.

ಧನು ರಾಶಿ (Sagittarius): ಪ್ರಯತ್ನಗಳು ಫಲ ಕೊಡುತ್ತವೆ. ಆದರೆ ಧೈರ್ಯದೊಂದಿಗೆ ನಿರ್ಧಾರ ಅಗತ್ಯ. ಉದ್ಯೋಗದಲ್ಲಿ ಹೊಸ ಅವಕಾಶ. ನಿಮ್ಮ ಕೆಲಸಗಳು ಮೆಚ್ಚುಗೆಗೆ ಪಾತ್ರವಾಗಲಿದೆ. ನಿಮ್ಮ ಉದಾರತೆ ಇತರರ ಪ್ರೇರಣೆಯಾಗುತ್ತದೆ. ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆ ಇಲ್ಲ. ಪ್ರಭಾವ ಹೆಚ್ಚಾಗುತ್ತದೆ. ಯೋಜನೆಗಳು ಯಶಸ್ವಿಯಾಗುತ್ತವೆ ಮತ್ತು ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ.

ಮಕರ ರಾಶಿ (Capricorn): ದಿನದ ಕಾರ್ಯಚಟುವಟಿಕೆಯಲ್ಲಿ ತಾತ್ಕಾಲಿಕ ವಿಳಂಬವಿದ್ದರೂ ತೊಂದರೆ ಇಲ್ಲ. ನಿಮ್ಮ ಪರಿಶ್ರಮ ಸಾರ್ಥಕವಾಗಲಿದೆ. ಹಣಕಾಸಿನಲ್ಲಿ ಮುಕ್ತವಾಗಿ ಖರ್ಚು ಮಾಡದಿರಿ. ಹಿರಿಯರ ಮಾತು ಕೇಳಿ ನಡೆಯಿರಿ. ಕುಟುಂಬದ ಜವಾಬ್ದಾರಿಯು ಹೆಚ್ಚಾಗಬಹುದು. ಮಧ್ಯಾಹ್ನ ಮತ್ತು ಸಂಜೆ ಸಮಯವು ಎಲ್ಲಾ ರೀತಿಯಲ್ಲೂ ಅನುಕೂಲಕರವಾಗಿರುತ್ತದೆ. ಯಾವುದೇ ರೀತಿಯ ಸಮಸ್ಯೆ ಉಂಟಾಗುವ ಸಾಧ್ಯತೆಯಿಲ್ಲ.

ಕುಂಭ ರಾಶಿ (Aquarius): ಬದಲಾವಣೆಯ ದಿನವಿದು. ಹಳೆಯ ಅಭ್ಯಾಸಗಳನ್ನು ಬದಲಿಸುವ ಅಗತ್ಯವಿದೆ. ಕೆಲಸದಲ್ಲಿ ಹೊಸ ತಿರುವು. ಸ್ನೇಹಿತರಿಂದ ಆಶ್ಚರ್ಯಕರ ಸಹಾಯ. ಹಣಕಾಸಿನಲ್ಲಿ ಜಾಣತನವಿರಲಿ. ಜೀವನದಲ್ಲಿ ಹೊಸ ಶಕ್ತಿ. ಮನಸ್ಸು ಶಾಂತವಾಗಿರುತ್ತದೆ. ಆರೋಗ್ಯ ಚೇತರಿಕೆಯಾಗಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ನಿಮ್ಮ ಮಕ್ಕಳಿಂದ ನಿಮಗೆ ಬೆಂಬಲ ಸಿಗುತ್ತದೆ.

ಮೀನ ರಾಶಿ (Pisces): ಹಳೆಯ ಗೆಳೆಯರ ಸಂಪರ್ಕದಿಂದ ಸಂತೋಷ. ಕೆಲಸದಲ್ಲಿ ಪ್ರಗತಿಯ ಸೂಚನೆ. ಹಣಕಾಸಿನಲ್ಲಿ ಸ್ಥಿರತೆ. ವಿಶೇಷವಾಗಿ ಹಣಕಾಸಿನ ವಿಷಯಗಳಲ್ಲಿ ಹೆಚ್ಚಿನ ಲಾಭದ ಲಕ್ಷಣಗಳಿವೆ. ಸ್ಥಗಿತಗೊಂಡ ಕೆಲಸವು ವೇಗವನ್ನು ಪಡೆಯುತ್ತದೆ. ಯೋಜನೆಗಳು ಯಶಸ್ವಿಯಾಗುತ್ತವೆ ಮತ್ತು ವಿರೋಧಿಗಳು ಸೋಲುತ್ತಾರೆ. ಕುಟುಂಬ ಸದಸ್ಯರಿಂದ ಬೆಂಬಲ ಮತ್ತು ಸಂತೋಷವನ್ನು ಪಡೆಯುತ್ತೀರಿ.

TRENDING ARTICLES1 / 8

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories