ದಿನ ಭವಿಷ್ಯ 4-6-2025: ಈ ರಾಶಿಗಳ ಬದುಕಿನಲ್ಲಿ ಮಾಯಾಜಾಲ! ಶುಭ ಸುದ್ದಿ ಬರ್ತಿದೆ
ನಾಳೆಯ ದಿನ ಭವಿಷ್ಯ 4-6-2025 ಬುಧವಾರ ಈ ರಾಶಿಗಳಿಗೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ - Daily Horoscope - Naleya Dina Bhavishya 4 June 2025
Publisher: Kannada News Today (Digital Media)
ದಿನ ಭವಿಷ್ಯ 4 ಜೂನ್ 2025
ಮೇಷ ರಾಶಿ (Aries): ಈ ದಿನ ಕುಟುಂಬದಲ್ಲಿ ಹಳೆಯ ಬಿಕ್ಕಟ್ಟು ಪರಿಹಾರ. ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಅವಕಾಶ ಸಿಗಲಿದೆ. ಹೊಸ ಉದ್ಯೋಗ ಅಥವಾ ಕೆಲಸದಲ್ಲಿ ಪ್ರಗತಿಗೆ ಶಕುನುಗಳು ಉತ್ತಮವಾಗಿವೆ. ಹಣಕಾಸಿನಲ್ಲಿ ಯಥಾಸ್ಥಿತಿ, ಖರ್ಚು ನಿಯಂತ್ರಣ ಅಗತ್ಯ. ಆತ್ಮೀಯರ ಸಲಹೆ ನಿಮ್ಮ ಮುಂದಿನ ಮಾರ್ಗದರ್ಶನವಾಗಬಹುದು.
ವೃಷಭ ರಾಶಿ (Taurus): ನಿಮ್ಮ ತಾಳ್ಮೆ ಈ ದಿನ ಪರೀಕ್ಷೆಗೆ ಒಳಗಾಗಬಹುದು. ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ವಿರಾಮದ ಸಾಧ್ಯತೆ. ನಿಮ್ಮ ಕೆಲಸಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಹಣಕಾಸು ಸ್ವಲ್ಪ ಒತ್ತಡದ ಸ್ಥಿತಿಯಲ್ಲಿರಬಹುದು. ಹಳೆಯ ಸಾಲ ಅಥವಾ ಬಾಕಿ ವಾಪಸ್ ನೀಡುವ ಚಿಂತೆಯಿರಬಹುದು. ಭವಿಷ್ಯದ ಬಗ್ಗೆ ಹೆಚ್ಚು ಯೋಚನೆ ಮಾಡುವ ಬದಲು ಇಂದಿನ ದಿನವನ್ನೇ ಸುಧಾರಿಸಿಕೊಳ್ಳಿ.
ಮಿಥುನ ರಾಶಿ (Gemini): ಇಂದಿನ ದಿನ ಮನಸ್ಸು ಸ್ಥಿರವಾಗಿದ್ದರೆ ಸಕಾರಾತ್ಮಕ ಬೆಳವಣಿಗೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವಿದೆ. ಸ್ನೇಹಿತರೊಂದಿಗೆ ಸಮಯ ಕಳೆಯುವುದು ನೆಮ್ಮದಿಯ ಅನುಭವ ನೀಡಲಿದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಪ್ರಶಂಸೆ ಸಿಗಬಹುದು. ಹಣಕಾಸಿನಲ್ಲಿ ಸಣ್ಣ ಲಾಭದ ಸಂಭವ. ನಿಮ್ಮ ನಗು, ಇಂದು ಎಲ್ಲರನ್ನೂ ಸೆಳೆಯುತ್ತದೆ.
ಕಟಕ ರಾಶಿ (Cancer): ಇದು ನಿಮಗೆ ಶಾಂತಿಯಿಂದ ನಡೆದುಕೊಳ್ಳಬೇಕಾದ ದಿನ. ನಿಮ್ಮ ಮಾತುಗಳ ಪ್ರಭಾವ ಇತರರ ಮೇಲೆ ಬಲವಾಗಿ ಬೀರುವ ಸಾಧ್ಯತೆ. ಮನೆಮಂದಿಯೊಂದಿಗೆ ಸಮಯ ಕಳೆಯಲು ಉತ್ತಮ ದಿನ. ಹಣಕಾಸು ವಿಷಯಗಳಲ್ಲಿ ವ್ಯವಹಾರಿಕ ಚಾತುರ್ಯ ಬಳಸಬೇಕು. ನಿಮ್ಮ ಜವಾಬ್ದಾರಿಗಳನ್ನು ಶ್ರದ್ಧೆಯಿಂದ ನಿಭಾಯಿಸಿ. ಕೆಟ್ಟ ಆಲೋಚನೆಗಳು ಬರಲು ಬಿಡಬೇಡಿ.
ಸಿಂಹ ರಾಶಿ (Leo): ನೀವು ಕೈಹಾಕಿದ ಕೆಲಸಗಳಲ್ಲಿ ಯಶಸ್ಸು ದೊರೆಯುವ ಸಾಧ್ಯತೆ. ಹಣಕಾಸಿನಲ್ಲಿ ಲಾಭ, ಹಳೆಯ ಬಂಡವಾಳದಿಂದ ಆದಾಯ. ಆರೋಗ್ಯದಲ್ಲಿ ಚುರುಕಾಗಿರುತ್ತೀರಿ, ಸ್ನೇಹಿತರಿಂದ ಇಂದು ಹೊಸ ಶಕ್ತಿಯ ಪ್ರೇರಣೆ ಸಿಗಬಹುದು. ಜಾಸ್ತಿ ಆತ್ಮವಿಶ್ವಾಸ ನಿಮ್ಮ ನಡೆಗೆ ತೊಂದರೆ ತರುವದಿಲ್ಲವೇ ಎಂಬುದನ್ನು ಪರಿಶೀಲಿಸಿ. ಮಾನಸಿಕ ಶಾಂತಿಯೂ ನಿಮ್ಮ ಗೆಲುವಿಗೆ ದಾರಿ ಮಾಡುತ್ತದೆ.
ಕನ್ಯಾ ರಾಶಿ (Virgo): ನಿಮ್ಮ ಒಳಜ್ಞಾನ ನಿಮಗೆ ಸಹಾಯ ಮಾಡಲಿದೆ. ಸಮಸ್ಯೆಗಳ ಪರಿಹಾರಕ್ಕೆ ಸರಿಯಾದ ಮಾರ್ಗ ಕಂಡುಕೊಳ್ಳುವ ಸಾಧ್ಯತೆ. ಕೆಲಸದಲ್ಲಿ ನಿಖರತೆಯಿಂದ ಕಾರ್ಯನಿರ್ವಹಿಸಿ. ಹಣಕಾಸಿನ ವಿಚಾರದಲ್ಲಿ ಅತಿಯಾದ ನಿರೀಕ್ಷೆ ಬೇಡ. ಹಿಂದಿನ ತಪ್ಪುಗಳಿಂದ ಪಾಠ ಕಲಿತರೆ ಮುಂದಿನದು ಸುಗಮ. ಮನೆಯವರ ಸಲಹೆ ನಿಮಗೆ ಸಹಕಾರಿಯಾಗಲಿದೆ. ಜೀವನ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ತರಲು ಯೋಚಿಸಿ.
ತುಲಾ ರಾಶಿ (Libra): ಇಂದು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಮನಸ್ಸುಕಲಾತ್ಮಕ ದಿಕ್ಕಿನಲ್ಲಿ ಸಾಗುತ್ತದೆ. ಸಂಗಾತಿಯೊಂದಿಗೆ ಹೊಂದಾಣಿಕೆ ಉತ್ತಮವಾಗಿರುತ್ತದೆ. ಹಣಕಾಸಿನಲ್ಲಿ ವ್ಯವಹಾರಿಕ ಬದಲಾವಣೆ ಸಾಧ್ಯ. ಹಳೆಯ ಸಾಲ ಅಥವಾ ಸಾಲದ ಒತ್ತಡ ಪರಿಹಾರವಾಗಬಹುದು. ಉದ್ಯೋಗದಲ್ಲಿ ನಿಮ್ಮ ನಿಷ್ಠೆ ಪರಿಕ್ಷೆಗೆ ಒಳಗಾಗಬಹುದು. ಹೆಚ್ಚು ಯೋಚಿಸುವ ಬದಲು, ಕ್ರಿಯಾಶೀಲವಾಗಿರಿ.
ವೃಶ್ಚಿಕ ರಾಶಿ (Scorpio): ಇಂದಿನ ದಿನ ವೈಯಕ್ತಿಕ ಬದುಕಿನಲ್ಲಿ ಸ್ಪಷ್ಟತೆ ತರಲು ಸೂಕ್ತ. ಕೆಲಸದಲ್ಲಿ ಏರುಪೇರಿನ ಸಂಭವವಿದೆ. ಹಣಕಾಸಿನಲ್ಲಿ ಹೆಚ್ಚು ಖರ್ಚಾಗುವ ಸಾಧ್ಯತೆ, ಆದರೂ ಮುಂಗಡ ತಯಾರಿ ಇದ್ದರೆ ಸಮಸ್ಯೆ ಇಲ್ಲ. ಆರೋಗ್ಯದಲ್ಲಿ ಹೊಟ್ಟೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಕಂಡುಬರುವ ಸಾಧ್ಯತೆ. ಆತ್ಮಸ್ಥೈರ್ಯ ನಿಮ್ಮ ಶಕ್ತಿಯ ಮೂಲ. ಸಂಗಾತಿಯೊಂದಿಗೆ ಮುಕ್ತ ಸಂಭಾಷಣೆ ಇರಲಿ.
ಧನು ರಾಶಿ (Sagittarius): ಈ ದಿನ ಯೋಜನೆ ರೂಪಿಸಲು ಉತ್ತಮ ಸಮಯ. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಮಾರ್ಗ ಕಾಣಬಹುದು. ಆದರೆ ಹಣಕಾಸಿನಲ್ಲಿ ಹೆಚ್ಚು ಲಾಭದ ನಿರೀಕ್ಷೆ ಬೇಡ, ಆದರೆ ಸ್ಥಿರತೆ ಸಿಗಲಿದೆ. ಆರೋಗ್ಯ ಚುರುಕಾಗಿ ಇರಬಹುದು, ದಿನದ ಮೊದಲಾರ್ಧದಲ್ಲಿ ಉತ್ತಮ ಶಕ್ತಿ ಇರುತ್ತದೆ. ಹಿಂದಿನ ಬಿಕ್ಕಟ್ಟಿನ ಪರಿಹಾರಕ್ಕೆ ಇಂದು ಮುನ್ನುಡಿ ಬರೆಯಬಹುದು. ಸಣ್ಣ ಪ್ರಯತ್ನವೂ ಭವಿಷ್ಯಕ್ಕೆ ದಾರಿ ತೋರಿಸಬಹುದು.
ಮಕರ ರಾಶಿ (Capricorn): ಇಂದು ನಿಮ್ಮ ಕೆಲಸದ ಶೈಲಿ ಶ್ಲಾಘನೆಯಾಗಬಹುದು. ಸಹೋದ್ಯೋಗಿಗಳು ನಿಮ್ಮ ತಾಳ್ಮೆಗೆ ಮೆಚ್ಚುಗೆ ಸೂಚಿಸಬಹುದು. ಹಣಕಾಸಿನ ಪ್ಲಾನಿಂಗ್ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ. ಹೊಸ ಕಲಿಕೆಯ ಅವಕಾಶಗಳು ಎದುರಾಗಬಹುದು. ಶ್ರದ್ಧೆಯಿಂದ ಕೆಲಸ ಮಾಡಿದರೆ ಫಲಿತಾಂಶ ಇಂದು ಸಿಕ್ಕೇ ಸಿಗುತ್ತದೆ. ಸಂಯಮ ಉಳಿಸಿಕೊಳ್ಳಿ. ಉದ್ಯೋಗ ಬದಲಾವಣೆಗೆ ಅವಕಾಶಗಳು ಇರಬಹುದು.
ಕುಂಭ ರಾಶಿ (Aquarius): ಸಮಯವು ಉತ್ತಮ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಸಮಯ ಚೆನ್ನಾಗಿರುತ್ತದೆ ಮತ್ತು ಯಾವುದೇ ಸಮಸ್ಯೆಯ ಸಾಧ್ಯತೆ ಇರುವುದಿಲ್ಲ. ಮನಸ್ಸು ಸಂತೋಷವಾಗಿರುತ್ತದೆ. ಹೊಸ ಹವ್ಯಾಸಗಳು ಸಂತೋಷ ನೀಡಬಹುದು. ನಿಮ್ಮ ಆಂತರಿಕ ಶಕ್ತಿ ಬೆಳಗಲಿದೆ. ಪ್ರಮುಖ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಕುಟುಂಬದ ಬೆಂಬಲ ಸಿಗುತ್ತದೆ.
ಮೀನ ರಾಶಿ (Pisces): ಈ ದಿನ ಕಲಿಕೆಯ ಬಗ್ಗೆ ಹೆಚ್ಚು ಆಸಕ್ತಿ ಮೂಡಬಹುದು. ಹೊಸ ವಿಷಯ ಅರಿಯುವ ಹವ್ಯಾಸ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯುವ ಸಮಯ. ಹಣಕಾಸಿನಲ್ಲಿ ಯಥಾಸ್ಥಿತಿಯ ದಿನ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಬಹುದು. ಆರೋಗ್ಯ ಉತ್ತಮವಾಗಿದೆ. ಕಲಾತ್ಮಕ ಚಟುವಟಿಕೆಗಳು ನಿಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಬದುಕಿಗೆ ಹೊಸ ಉತ್ಸಾಹದ ದಿನ.