ದಿನ ಭವಿಷ್ಯ 4-3-2025: ಮಧ್ಯಾಹ್ನದ ವೇಳೆಗೆ ಅದೃಷ್ಟ, ಈ ರಾಶಿಗಳಿಗೆ ಪ್ರಗತಿ ಸಾಧ್ಯ
ನಾಳೆಯ ದಿನ ಭವಿಷ್ಯ 4-3-2025 ಮಂಗಳವಾರ ಈ ರಾಶಿಗಳಿಗೆ ಸಂಜೆ ಹೆಚ್ಚಿನ ಕೆಲಸದ ಹೊರೆ ಇರುತ್ತದೆ - Daily Horoscope - Naleya Dina Bhavishya 4 March 2025

ದಿನ ಭವಿಷ್ಯ 4 ಮಾರ್ಚ್ 2025
ಮೇಷ ರಾಶಿ (Aries): ಈ ದಿನ ಕಳೆದ ಕೆಲವು ದಿನಗಳ ಒತ್ತಡ ಪರಿಹಾರವಾಗಬಹುದು. ಉದ್ಯೋಗ ಅಥವಾ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಇಲ್ಲದಿರುವ ಸಾಧ್ಯತೆ ಇದೆ, ಆದ್ದರಿಂದ ಶ್ರದ್ಧೆಯಿಂದ ಕಾರ್ಯನಿರ್ವಹಿಸಿ. ಹಣಕಾಸು ವ್ಯವಹಾರಗಳಲ್ಲಿ ಸಾವಧಾನ ಮುಖ್ಯ. ಕುಟುಂಬದೊಂದಿಗೆ ಸುಂದರವಾದ ಸಮಯ ಕಳೆಯಬಹುದು, ಅದರಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗಿರಲಿದೆ.
ವೃಷಭ ರಾಶಿ (Taurus): ಇಂದಿನ ದಿನ ನಿಮ್ಮ ಸಹನೆ ಪರೀಕ್ಷೆಗೆ ಒಳಗಾಗಬಹುದು. ಅದ್ದರಿಂದ ತಾಳ್ಮೆಯಿಂದ ಮುಂದೆ ಸಾಗುವುದು ಉತ್ತಮ. ಉದ್ಯೋಗದಲ್ಲಿ ಹಿರಿಯರ ಸಹಕಾರದಿಂದ ಹೊಸ ಅವಕಾಶಗಳು ಸಿಗಬಹುದು. ಅನಗತ್ಯ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ, ಆದ್ದರಿಂದ ಹಣಕಾಸಿನಲ್ಲಿ ನಿಯಂತ್ರಣ ಇರಿಸಿ. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆದರೆ, ಮನಸ್ಸಿಗೆ ನೆಮ್ಮದಿ ಸಿಗಬಹುದು.
ಮಿಥುನ ರಾಶಿ (Gemini): ನಿಮ್ಮ ಮನಸ್ಸಿನಲ್ಲಿ ಈ ದಿನ ಸಂಶಯಗಳು ಹೆಚ್ಚಾಗಬಹುದು. ಆದರೆ ಆತ್ಮಸ್ಥೈರ್ಯದಿಂದ ಇರುವುದು ಮುಖ್ಯ. ಆರ್ಥಿಕ ವ್ಯವಹಾರಗಳಲ್ಲಿ ಸಾವಧಾನವಾಗಿ ನಿರ್ಧಾರ ಮಾಡುವುದು ಉತ್ತಮ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬದ ಬೆಂಬಲ ದೊರಕಬಹುದು, ನಿಮ್ಮ ಚಿಂತೆಗಳನ್ನು ಅವರೊಂದಿಗೆ ಹಂಚಿಕೊಳ್ಳುವುದು ಉತ್ತಮ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮನಸ್ಸಿಗೆ ನೆಮ್ಮದಿ ತರುತ್ತದೆ.
ಕಟಕ ರಾಶಿ (Cancer): ಸಮಸ್ಯೆಗಳಿಗೆ ತಾಳ್ಮೆಯಿಂದ ಸಮಾಧಾನ ಹುಡುಕುವ ದಿನ. ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ಸಮಯ ಸರಿಯಾಗಿ ನಿಭಾಯಿಸಿದರೆ ಎಲ್ಲವೂ ಸರಿಯಾಗಲಿದೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಅನುಕೂಲಕರ ಗ್ರಹ ಸ್ಥಾನಗಳು ಮುಂದುವರಿಯುತ್ತವೆ. ನೀವು ನಿಮ್ಮ ಸಮಯ ಮತ್ತು ಶಕ್ತಿಯನ್ನು ನಿರ್ವಹಿಸಬೇಕಾಗಿದೆ. ಉಳಿತಾಯದ ಬಗ್ಗೆ ಹೆಚ್ಚಿನ ಗಮನ ಹರಿಸುವಿರಿ.
ಸಿಂಹ ರಾಶಿ (Leo): ನಿಮ್ಮ ಮಾನಸಿಕ ಸ್ಥಿತಿಯು ಸ್ಥಿರವಾಗಿರಬೇಕಾದ ದಿನ. ಬೇಸರ, ಕೋಪ, ಅಥವಾ ಅನುಮಾನಗಳು ನಿಮ್ಮ ನಿರ್ಧಾರಗಳಿಗೆ ಹಾನಿ ಮಾಡಬಹುದು. ಆದ್ದರಿಂದ ಶಾಂತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಒಬ್ಬರ ಮಾತನ್ನು ಇನ್ನೊಬ್ಬರಿಗೆ ಹೇಳುವುದರಿಂದ ಸಂಬಂಧಗಳಲ್ಲಿ ಸಮಸ್ಯೆ ಉಂಟಾಗಬಹುದು, ಅದ್ದರಿಂದ ವಾಕ್ಸಂಯಮದೊಂದಿಗೆ ವರ್ತನೆ ಮಾಡುವುದು ಉತ್ತಮ. ಆರ್ಥಿಕವಾಗಿ ಲಾಭದ ಅವಕಾಶ ಲಭ್ಯವಿದೆ.
ಕನ್ಯಾ ರಾಶಿ (Virgo): ಒತ್ತಡದ ಮಧ್ಯೆ ಆರೋಗ್ಯವನ್ನು ನೋಡಿಕೊಳ್ಳುವುದು ಅತ್ಯವಶ್ಯಕ. ವೃತ್ತಿಜೀವನದಲ್ಲಿ ನೀವು ಹೊಸ ಹೊಣೆಗಾರಿಕೆಗಳನ್ನು ತೆಗೆದುಕೊಳ್ಳಬಹುದು, ಇದರಿಂದ ಮುಂದಿನ ದಿನಗಳಲ್ಲಿ ನಿಮಗೆ ಲಾಭವಾಗಬಹುದು. ಆರ್ಥಿಕ ಸ್ಥಿತಿ ಸ್ಥಿರವಾಗಿರಬಹುದು, ಆದರೆ ಹೊಸ ಹೂಡಿಕೆಗಳ ಬಗ್ಗೆ ಯೋಚಿಸದೆ ನಿರ್ಧಾರ ಮಾಡಬೇಡಿ. ಅನುಭವಗಳಿಂದ ಕಲಿಯುವ ಮೂಲಕ ಮುಂದುವರಿಯುವುದು ಪ್ರಯೋಜನಕಾರಿಯಾಗುತ್ತದೆ.

ವೃಶ್ಚಿಕ ರಾಶಿ (Scorpio): ನಿಮ್ಮ ಆತ್ಮವಿಶ್ವಾಸದಲ್ಲಿ ಸ್ವಲ್ಪ ಕುಸಿತ ಕಂಡುಬರುವ ಸಾಧ್ಯತೆ ಇದೆ, ಆದ್ದರಿಂದ ಹೆಚ್ಚು ಆತ್ಮಸ್ಥೈರ್ಯದಿಂದ ಕಾರ್ಯನಿರ್ವಹಿಸುವುದು ಉತ್ತಮ. ಸಮಾನ್ಯವಾಗಿ ಮಾತನಾಡುವ ಶೈಲಿ ಸಂಯಮಿತವಾಗಿರಲಿ, ಏಕೆಂದರೆ ಅದರಿಂದ ಸಂಬಂಧಗಳಲ್ಲಿ ಹಾನಿ ಆಗಬಹುದು. ಶೈಕ್ಷಣಿಕ ಕಾರ್ಯಗಳಲ್ಲಿ ಯಶಸ್ಸು ದೊರಕಬಹುದು. ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಅವಶ್ಯಕತೆ ಇರುತ್ತದೆ. ಮಾನಸಿಕವಾಗಿ ಹಗುರವಾಗಿರಲು ವಿಶ್ರಾಂತಿ ಪಡೆಯಿರಿ.
ಧನು ರಾಶಿ (Sagittarius): ಈ ದಿನ ಕೆಲವು ಹೊಸ ಹೊಣೆಗಾರಿಕೆಗಳು ನಿಮ್ಮ ಮೇಲೆ ಬೀಳಬಹುದು. ಉದ್ಯೋಗದಲ್ಲಿ ಮೇಲಧಿಕಾರಿಗಳ ಬೆಂಬಲ ದೊರಕಬಹುದು, ಆದರೆ ಶ್ರಮ ಹೆಚ್ಚಾಗಲಿದೆ. ಆದರೆ ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗಿ ಬೆಳೆಯಲು ಅವಕಾಶ ಸಿಗುತ್ತದೆ. ಧೈರ್ಯದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಸಂಬಳ ಹೆಚ್ಚಳದ ಸಾಧ್ಯತೆ ಇದೆ. ಸಹೋದ್ಯೋಗಿಗಳಿಂದ ಹೆಚ್ಚು ನಿರೀಕ್ಷಿಸಬೇಡಿ.
ಮಕರ ರಾಶಿ (Capricorn): ನಿಮ್ಮ ತಾಳ್ಮೆ ಮತ್ತು ಆತ್ಮವಿಶ್ವಾಸಕ್ಕೆ ಪರೀಕ್ಷೆಯ ದಿನ. ತುರ್ತು ನಿರ್ಧಾರ ತೆಗೆದುಕೊಳ್ಳುವ ಮುನ್ನ ಅದರ ಪರಿಣಾಮಗಳ ಬಗ್ಗೆ ಆಲೋಚಿಸಿ. ವ್ಯಾಪಾರ-ಉದ್ಯಮದಲ್ಲಿ ನಿಮ್ಮ ಹೊಣೆಗಾರಿಕೆ ಹೆಚ್ಚಾಗಬಹುದು. ನೀವು ಬೇಸರಗೊಂಡಿದ್ದರೆ, ಸ್ನೇಹಿತರೊಂದಿಗೆ ಸಮಯ ಕಳೆದರೆ ನೆಮ್ಮದಿ ಸಿಗಬಹುದು. ನಿಮ್ಮ ಆರೋಗ್ಯದ ಕಡೆಗೂ ಗಮನ ಹರಿಸಿ. ಸಂಬಂಧಗಳಲ್ಲಿ ನಂಬಿಕೆ ಇರುವುದು ಮುಖ್ಯ.
ಕುಂಭ ರಾಶಿ (Aquarius): ನಿಮ್ಮ ಬುದ್ಧಿವಂತಿಕೆ ಮತ್ತು ಚಾತುರ್ಯವನ್ನು ಉತ್ತಮ ರೀತಿಯಲ್ಲಿ ಬಳಸಿ. ಈ ದಿನ ಹೊಸ ಆರ್ಥಿಕ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸೂಕ್ತ. ಉದ್ಯೋಗ ಕ್ಷೇತ್ರದಲ್ಲಿ ಪರಿವರ್ತನೆಗಳ ಅವಕಾಶ ದೊರಕಬಹುದು. ಆರೋಗ್ಯದ ಬಗ್ಗೆ ಗಮನಹರಿಸಿ, ಏಕೆಂದರೆ ಅತಿಯಾದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅನಗತ್ಯ ಕೆಲಸಗಳಲ್ಲಿ ಸಮಯ ವ್ಯರ್ಥಮಾಡಬೇಡಿ.
ಮೀನ ರಾಶಿ (Pisces): ಇಂದು ಹೊಸ ಉದ್ಯೋಗ ಅಥವಾ ಹೊಸ ವ್ಯವಹಾರ ಆರಂಭಿಸುವ ಯೋಚನೆ ಉಂಟಾಗಬಹುದು. ಕುಟುಂಬದಿಂದ ಆರ್ಥಿಕ ಸಹಾಯ ದೊರಕಬಹುದು. ಆದರೆ ಖರ್ಚುಗಳು ನಿಯಂತ್ರಣವಿಲ್ಲದಂತೆ ಹೆಚ್ಚುವ ಸಂಭವ ಇದೆ, ಆದ್ದರಿಂದ ಮಿತ ವ್ಯಯದಿಂದ ಕಾರ್ಯನಿರ್ವಹಿಸಿ. ಶುಭಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗಬಹುದು. ಮಧ್ಯಾಹ್ನದ ವೇಳೆಗೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ
- ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ.
- ಯಾವುದೇ ಜ್ಯೋತಿಷಿಗಳಿಂದ ಸರಿಯಾದ ಸಮಾಧಾನ ಸಿಗದಿದ್ದರೆ, ಇಲ್ಲಿ ಖಚಿತ ಪರಿಹಾರ.
ದೈವಜ್ಞ ಪಂಡಿತ್ ಕೃಷ್ಣ ಭಟ್
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠಂ
ದೂರವಾಣಿ : 9535156490
ಕರ್ನಾಟಕ ವಾತಾವರಣ ಏರುಪೇರು! ಒಂದೆಡೆ ಮಳೆ, ಮತ್ತೊಂದೆಡೆ ಚಳಿ; ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಮುನ್ಸೂಚನೆ
Read the story
ದಿನ ಭವಿಷ್ಯ 30 ಅಕ್ಟೋಬರ್ 2026, ಶುಕ್ರವಾರ
Read the story
ಕರ್ನಾಟಕ ರೈತರಿಗೆ ಮೊದಲ ಕಂತು 2500 ರೂ ಬರ ಪರಿಹಾರ ಬಿಡುಗಡೆ! ಅರ್ಜಿ ಸಲ್ಲಿಸಬೇಕಾ? ಇಲ್ಲಿದೆ ಮಾಹಿತಿ
Read the story
ಗೃಹಲಕ್ಷ್ಮಿ ಯೋಜನೆಯ ಹೊಸ ಲಿಸ್ಟ್ ಸಿದ್ದ; ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸಿಗುತ್ತೆ ಹಣ!
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
10 ಲಕ್ಷ ಮಂದಿ ರೈತರಿಗೆ ಪಿಎಂ ಕಿಸಾನ್ ಯೋಜನೆ ಹಣ ಸ್ಥಗಿತ! ಕೇಂದ್ರದ ಶಾಕಿಂಗ್ ನಿರ್ಧಾರ
Read the story
ಕರ್ನಾಟಕ SSLC ವಿದ್ಯಾರ್ಥಿಗಳು ಹಾಗೂ ಶಾಲೆಗಳಿಗೆ KSEAB ಮಹತ್ವದ ಸೂಚನೆ! ತಪ್ಪದೇ ಗಮನಿಸಿ
Read the story




