ದಿನ ಭವಿಷ್ಯ 5-8-2025: ಈ ದಿನ ಕಂಡ ಕನಸು ನಿಜವಾಗುತ್ತೆ! ಅದ್ಬುತ ಭವಿಷ್ಯ ಇವತ್ತು - Horoscope Today
ನಾಳೆಯ ದಿನ ಭವಿಷ್ಯ 5 ಆಗಸ್ಟ್ 2025 ಮಂಗಳವಾರ ಈ ರಾಶಿಗಳಿಗೆ ದೈರ್ಯದಿಂದ ಯಶಸ್ಸು ಸಿಗುತ್ತದೆ - Daily Horoscope, Naleya Dina Bhavishya 5 August 2025

ದಿನ ಭವಿಷ್ಯ 5 ಆಗಸ್ಟ್ 2025
ಮೇಷ ರಾಶಿ (Aries): ಈ ದಿನ ನಿಮ್ಮ ಕೆಲಸದ ನಿಷ್ಠೆಗೆ ಮೆಚ್ಚುಗೆ ಲಭ್ಯವಾಗಲಿದೆ. ಆರ್ಥಿಕವಾಗಿ ಸ್ವಲ್ಪ ಒತ್ತಡ ಉಂಟಾಗಬಹುದು, ಆದರೆ ಹೊಸ ಆಯ್ಕೆಗಳ ಮೂಲಕ ಸುಧಾರಣೆ ಇದೆ. ವ್ಯಾಪಾರಿಗಳಿಗೆ ಹೊಸ ಸಂಪರ್ಕ ಲಾಭದಾಯಕವಾಗಲಿದೆ. ಆರೋಗ್ಯದ ಬಗ್ಗೆ ಅಲಕ್ಷ್ಯ ಮಾಡುವಂತಿಲ್ಲ. ತಲೆನೋವು ಅಥವಾ ಮಲಬದ್ಧತೆ ತೊಂದರೆ ಮಾಡಬಹುದು. ಪತ್ನಿಯೊಂದಿಗೆ ಭಿನ್ನಾಭಿಪ್ರಾಯ ತಪ್ಪಿಸುವ ಪ್ರಯತ್ನ ಮಾಡಿ.
ವೃಷಭ ರಾಶಿ (Taurus): ಇಂದಿನ ದಿನ ಏಕಾಗ್ರತೆಯೊಂದಿಗೆ ಕೆಲಸ ಮಾಡಿ. ಫಲಿತಾಂಶಗಳು ಉತ್ತಮವಾಗಬಹುದು. ವ್ಯವಹಾರದಲ್ಲಿ ಹೊಸ ಅವಕಾಶ ಸಿಗಬಹುದು. ಹಳೆಯ ಸಾಲದ ಒತ್ತಡ ಕಂಗೆಡಿಸಬಹುದು. ಕುಟುಂಬದಲ್ಲಿ ತಂದೆಯ ಆರೋಗ್ಯದ ಬಗ್ಗೆ ಚಿಂತೆಯಿರಬಹುದು. ವಿದ್ಯಾರ್ಥಿಗಳಿಗೆ ಸಾಧನೆಯ ದಿನ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶ್ರೇಷ್ಠ ಸಾಧನೆ ಸಾಧ್ಯ. ನಿಮ್ಮ ಮಾತುಗಳು ಇತರರ ಮನಸ್ಸನ್ನು ಮುಟ್ಟುವಂತೆ ಇರುತ್ತದೆ.
ಮಿಥುನ ರಾಶಿ (Gemini): ತ್ವರಿತ ನಿರ್ಧಾರಗಳು ಈ ದಿನ ನಿಮಗೆ ಲಾಭ ತರುತ್ತವೆ. ವ್ಯವಹಾರದಲ್ಲಿನ ನೂತನ ಐಡಿಯಾಗಳು ಯಶಸ್ಸಿಗೆ ದಾರಿ ಮಾಡಿಕೊಡುತ್ತವೆ. ಸಂಬಂಧದಲ್ಲಿ ನಂಬಿಕೆ ಉಳಿಸಿಕೊಂಡರೆ ಒಳ್ಳೆಯದು. ಪ್ರಯಾಣದ ಸಮಯದಲ್ಲಿ ಜಾಗರೂಕತೆಯ ಅಗತ್ಯವಿದೆ. ಹಣಕಾಸಿನಲ್ಲಿ ಸ್ಥಿರತೆ ಬಯಸಿದರೆ ಖರ್ಚಿನ ಮೇಲ್ವಿಚಾರಣೆಯಿರಲಿ. ಪೋಷಕರೊಂದಿಗೆ ಸಮಾಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ.
ಕಟಕ ರಾಶಿ (Cancer): ಹಳೆಯ ಕೆಲಸಗಳನ್ನು ಮುಗಿಸುವ ಒತ್ತಡದ ದಿನ. ನೆನೆಸಿದಷ್ಟು ಕೆಲಸವಿಲ್ಲದಿದ್ದರೂ ಮನಸ್ಸು ಖುಷಿಯಾಗಿರದು. ನಿಮ್ಮ ವೈಯಕ್ತಿಕ ಸಂಬಂಧಗಳಲ್ಲಿ ಇಂದು ಗಂಭೀರ ಚರ್ಚೆಗಳು ನಡೆಯಬಹುದು. ಕುಟುಂಬದ ಒಗ್ಗಟ್ಟಿಗಾಗಿ ತಾಳ್ಮೆ ಅನಿವಾರ್ಯ. ಉದ್ಯೋಗ ಕ್ಷೇತ್ರದಲ್ಲಿ ಸಣ್ಣ ಲಾಭಗಳು ಸಂತೋಷ ನೀಡುತ್ತವೆ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ.
ಸಿಂಹ ರಾಶಿ (Leo): ಇಂದು ನಿಮ್ಮ ವ್ಯಕ್ತಿತ್ವ ಪ್ರಭಾವ ಬೀರುತ್ತದೆ. ಹೊಸ ಬಂಡವಾಳ ಹೂಡಿಕೆಗೆ ಸೂಕ್ತ ದಿನ. ನಿಮ್ಮ ಆಲೋಚನೆಗಳು ಪ್ರಾಯೋಗಿಕವಾಗುತ್ತವೆ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಿ. ದಾಂಪತ್ಯ ಜೀವನದಲ್ಲಿ ನವಚೈತನ್ಯ ಮೂಡಬಹುದು. ಸ್ನೇಹಿತರಿಂದ ಸಕಾರಾತ್ಮಕ ಶಕ್ತಿಯ ದೆಸೆ ಸಿಗುತ್ತದೆ. ಮಕ್ಕಳೊಂದಿಗೆ ಸಮಯ ಕಳೆಯಿರಿ, ಅದು ನಿಮ್ಮ ದೈನಂದಿನ ಒತ್ತಡವನ್ನು ತಗ್ಗಿಸುತ್ತದೆ.
ಕನ್ಯಾ ರಾಶಿ (Virgo): ಭವಿಷ್ಯದ ಯೋಜನೆಗಳಿಗೆ ಪ್ರಾರಂಭದ ದಿನವಾಗಿ ಇಂದನ್ನು ಉಪಯೋಗಿಸಿಕೊಳ್ಳಿ. ಮಾತಿನಲ್ಲಿ ಕಠಿಣತೆ ಹೆಚ್ಚಾದರೆ ಸಂಬಂಧಗಳು ಹದಗೆಡಬಹುದು. ಕೆಲಸದಲ್ಲಿ ಹೆಚ್ಚಿನ ಹೊರೆ ಅನುಭವವಾಗಬಹುದು. ಹಿರಿಯರ ಸಲಹೆ ಪಡೆಯುವುದು ಒಳ್ಳೆಯದು. ಹಣಕಾಸಿನಲ್ಲಿ ಇಳಿಮುಖ ಇರುತ್ತದೆ, ಖರ್ಚು ಕಡಿಮೆ ಮಾಡಿ. ಧ್ಯಾನ ಅಥವಾ ಯೋಗದ ಮೂಲಕ ಮನಸ್ಸನ್ನು ಶಾಂತಗೊಳಿಸಿ.
ತುಲಾ ರಾಶಿ (Libra): ಇಂದು ನಿಮ್ಮ ಮನಸ್ಸು ಹೊಸ ಉತ್ಸಾಹದಿಂದ ತುಂಬಿರುತ್ತದೆ. ಹಿರಿಯರ ಮಾರ್ಗದರ್ಶನದಿಂದ ಹೊಸ ಅವಕಾಶ ಸಿಗಬಹುದು. ಹಣಕಾಸಿನಲ್ಲಿ ಸುಧಾರಣೆ, ಆದರೆ ಹೊಸ ಸಾಲ ತೆಗೆದುಕೊಳ್ಳುವುದು ತಡೆಯಿರಿ. ಮಿತ್ರರೊಡನೆ ಭಾವನೆ ಹಂಚಿಕೊಳ್ಳುವ ಸಂದರ್ಭ ಸಿಗುತ್ತದೆ. ಆರೋಗ್ಯದಲ್ಲಿ ಶಕ್ತಿಯೂ, ಚುರುಕುತನವೂ ಇರುತ್ತದೆ. ಕುಟುಂಬದ ಸಮಸ್ಯೆಗಳಿಗೆ ಸರಳ ಪರಿಹಾರ ಸಿಗಬಹುದು.
ವೃಶ್ಚಿಕ ರಾಶಿ (Scorpio): ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಆತ್ಮವಿಶ್ವಾಸ ತಾಳಿರಿ. ಹಣಕಾಸಿನಲ್ಲಿ ಬದಲಾವಣೆಗಳಾಗುತ್ತವೆ, ಆದಾಯವು ಉತ್ತಮವಾಗಿರುತ್ತದೆ. ಹಳೆಯ ಸಾಲ ಅಥವಾ ಸಾಲದ ಒತ್ತಡ ಕಡಿಮೆಯಾಗಬಹುದು. ಸಂಗಾತಿಯೊಂದಿಗೆ ಸಮಾಲೋಚನೆಯಿಂದ ಸಮಸ್ಯೆ ನಿವಾರಣೆಯಾಗಲಿದೆ. ಉದ್ಯೋಗದಲ್ಲಿ ಸ್ಥಳಾಂತರ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ತಗ್ಗುತ್ತದೆ.
ಧನು ರಾಶಿ (Sagittarius): ಹಣಕಾಸಿನಲ್ಲಿ ಆಕಸ್ಮಿಕ ಲಾಭ ಸಾಧ್ಯ. ಕುಟುಂಬದಲ್ಲಿ ಹಿರಿಯರ ಆಶೀರ್ವಾದದಿಂದ ಶುಭ ಕಾರ್ಯ ನಡೆಯಬಹುದು. ಸ್ನೇಹಿತರಿಂದ ಸಹಕಾರ ಸಿಗುತ್ತದೆ. ಆಧ್ಯಾತ್ಮದ ಕಡೆ ಹೆಚ್ಚು ಆಕರ್ಷಣೆ ಉಂಟಾಗುತ್ತದೆ. ಮನಸ್ಸಿನಲ್ಲಿ ಹೊಸ ಉತ್ಸಾಹ, ಉದ್ದೇಶ ಸ್ಪಷ್ಟವಾಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮತೆ ಕಂಡುಬರುತ್ತದೆ. ದಿನದ ಕೊನೆಯಲ್ಲಿ ಸಂತೋಷದ ಸುದ್ದಿ ನಿರೀಕ್ಷಿಸಿ.
ಮಕರ ರಾಶಿ (Capricorn): ಇಂದು ನಿರ್ಣಯ ತೆಗೆದುಕೊಳ್ಳುವ ಸಮಯ ಬದಲಾವಣೆಗೆ ದಾರಿ ಮಾಡಬಹುದು. ಕೆಲಸದಲ್ಲಿ ಹೊಸ ಹೊಣೆಗಾರಿಕೆಗಳು ಬರುತ್ತವೆ. ಹಣಕಾಸು ವ್ಯವಹಾರಗಳಲ್ಲಿ ಲಾಭದ ಅವಕಾಶವಿದೆ. ಹಳೆಯ ಗೆಳೆಯರಿಂದ ಶುಭ ಸುದ್ದಿಗಳು ಸಿಗಬಹುದು. ಮಕ್ಕಳ ನಡವಳಿಕೆಯಲ್ಲಿ ಸುಧಾರಣೆ ಕಂಡುಬರುತ್ತದೆ. ಧೈರ್ಯದಿಂದ ಮುನ್ನಡೆಯಿರಿ, ಯಶಸ್ಸು ಸಿಗುವುದು ಖಚಿತ.
ಕುಂಭ ರಾಶಿ (Aquarius): ಇಂದು ನಿಮ್ಮ ಕಾರ್ಯದಿಂದ ಇತರರ ಗಮನ ಸೆಳೆಯುವಿರಿ. ಸ್ನೇಹಿತರು ಅಥವಾ ಸಹೋದ್ಯೋಗಿಗಳಿಂದ ಹೊಸ ಅವಕಾಶಗಳ ಬಗ್ಗೆ ಮಾಹಿತಿ ಸಿಗಬಹುದು. ಹಣಕಾಸಿನಲ್ಲಿ ನೆಮ್ಮದಿಯ ದಿನ. ಕೆಲಸದಲ್ಲಿ ತಾಳ್ಮೆ ಯಶಸ್ಸಿಗೆ ಕಾರಣವಾಗುತ್ತವೆ. ಕುಟುಂಬದ ಒಳಿತಿಗಾಗಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಶ್ಲಾಘನೀಯ. ಅಂತ್ಯದಲ್ಲಿ ನವೋತ್ಸಾಹದ ಅನುಭವ.
ಮೀನ ರಾಶಿ (Pisces): ವ್ಯವಹಾರ ಅಥವಾ ಉದ್ಯೋಗದಲ್ಲಿ ನಿಮಗೆ ಅವಕಾಶ ದೊರೆಯಬಹುದು. ಹಣಕಾಸಿನಲ್ಲಿ ವ್ಯವಹಾರ ಬದ್ಲಾವಣೆಗೆ ಇದು ಸೂಕ್ತ ಸಮಯ. ಕುಟುಂಬದ ಒಡನಾಟ ಸಂತೋಷ ತರುತ್ತದೆ. ಸಂಗಾತಿಯೊಂದಿಗೆ ಭಾವನಾತ್ಮಕ ಸಂಪರ್ಕ ಉತ್ತಮವಾಗುತ್ತದೆ. ಮಕ್ಕಳ ಸಂಬಂಧಿ ವಿಷಯದಲ್ಲಿ ಚಿಂತೆ ಇರುತ್ತದೆ. ತ್ವರಿತ ನಿರ್ಧಾರ ತೆಗೆದುಕೊಳ್ಳದಿರಿ, ಪರಿಶೀಲಿಸಿ ಮುಂದೆ ಹೋಗಿ.
ನಿತ್ಯದ ಅಪ್‌ಡೇಟ್ಸ್‌ಗಾಗಿ ಯಾವಾಗಲೂ Kannada News Today ತಪ್ಪದೆ ವೀಕ್ಷಿಸಿ.




