ದಿನ ಭವಿಷ್ಯ 5-6-2025: ಈ ರಾಶಿಗಳ ಜ್ಯೋತಿಷ್ಯದಲ್ಲಿದೆ ಗುರು ಬಲ ಯೋಗ! ಶುಭ ಕಾಲ

ನಾಳೆಯ ದಿನ ಭವಿಷ್ಯ 5-6-2025 ಗುರುವಾರ ಈ ರಾಶಿಗಳಿಗೆ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ - Daily Horoscope - Naleya Dina Bhavishya 5 June 2025

ದಿನ ಭವಿಷ್ಯ 5 ಜೂನ್ 2025

ಮೇಷ ರಾಶಿ (Aries): ಈ ದಿನ ಹಣದ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ, ಅದು ನಿಮಗೆ ಪ್ರಯೋಜನಕಾರಿಯೂ ಆಗಿರುತ್ತದೆ. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಅವಕಾಶ ಸಿಗಬಹುದು. ಹೊಸ ಆಲೋಚನೆಗಳು ಮನಸ್ಸಿನಲ್ಲಿ ಹುಟ್ಟಬಹುದು. ಆರೋಗ್ಯದ ಕಡೆ ಗಮನ ಹರಿಸಿ.

ವೃಷಭ ರಾಶಿ (Taurus): ಉದ್ಯೋಗದಲ್ಲಿ ಉನ್ನತಿ ಕುರಿತು ಈ ದಿನ ಮಾತುಕತೆ ಸಾಧ್ಯ. ಹಳೆಯ ಗೆಳೆಯರಿಂದ ಸಂದೇಶ ಬರಬಹುದು. ಹಣಕಾಸು ಸ್ಥಿತಿ ಸಮರ್ಪಕವಾಗಿರುತ್ತದೆ. ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ಫಲ ಸಿಗುವುದು ಖಚಿತ. ಕುಟುಂಬದವರು ನಿಮ್ಮ ಅಭಿಪ್ರಾಯಕ್ಕೆ ಬೆಂಬಲ ನೀಡುತ್ತಾರೆ. ದಿನದ ಬಹುತೇಕ ಯೋಜನೆ ನೆರವೇರುತ್ತದೆ. ವ್ಯಾಪಾರ ಸುಧಾರಿಸುತ್ತದೆ

ಮಿಥುನ ರಾಶಿ (Gemini): ಇಂದಿನ ದಿನ ಬೇಡದ ವಿಚಾರದಲ್ಲಿ ಕೈಹಾಕಬೇಡಿ. ಹೊಸ ಸಂಪರ್ಕಗಳಿಂದ ಉತ್ಸಾಹ ಹೆಚ್ಚಾಗುತ್ತದೆ. ಹಳೆಯ ಕೆಲಸಕ್ಕೆ ಈಗ ಫಲ ಸಿಗಬಹುದು. ಮನಸ್ಸು ಸ್ವಲ್ಪ ಚಂಚಲವಾಗಿರಬಹುದು, ಧೈರ್ಯದಿಂದ ನಿಯಂತ್ರಿಸಿ. ಹಣಕಾಸು ವಿಚಾರದಲ್ಲಿ ಚುರುಕಾಗಿರಿ. ಮನೆಯ ಹಿರಿಯರ ಸಲಹೆ ಕೇಳಿ ನಿರ್ಧಾರ ತೆಗೆದುಕೊಳ್ಳಿ. ಆರೋಗ್ಯ ಸದ್ಯಕ್ಕೆ ಉತ್ತಮವಾಗಿರುತ್ತದೆ.

ಕಟಕ ರಾಶಿ (Cancer): ನಿಮಗೆ ನಿರೀಕ್ಷೆಗಿಂತ ಹೆಚ್ಚು ಕೆಲಸ ಇರುವ ದಿನ. ದಿನದ ಆರಂಭದಲ್ಲಿ ಸ್ವಲ್ಪ ಆತಂಕ ಇರಬಹುದು. ಮಧ್ಯಾಹ್ನದ ನಂತರ ಪರಿಸ್ಥಿತಿ ಸುಧಾರಣೆಯತ್ತ ಹೋಗುತ್ತದೆ. ಹಣಕಾಸು ನಿರ್ವಹಣೆ ಜಾಣ್ಮೆಯಿಂದ ಮಾಡಿ. ಕುಟುಂಬದಲ್ಲಿ ಸಣ್ಣ ವಿಚಾರಕ್ಕೆ ಗದ್ದಲ ಆಗದಂತೆ ಗಮನ ಕೊಡಿ. ತಾಳ್ಮೆಯಿಂದ ನಡೆದರೆ ಎಲ್ಲಾ ಸರಿಯಾಗುತ್ತದೆ. ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುವ ನಿರ್ಧಾರಗಳು ಪ್ರಯೋಜನಕಾರಿಯಾಗುತ್ತವೆ.

ಸಿಂಹ ರಾಶಿ (Leo): ಇಂದು ನೀವು ಬಹಳ ಚುರುಕಾಗಿರುತ್ತೀರಿ. ಕೆಲಸದ ಸ್ಥಳದಲ್ಲಿ ನಿಮಗೆ ಹೊಸ ಜವಾಬ್ದಾರಿ ಒಪ್ಪಿಸಲಾಗಬಹುದು. ಅನಾವಶ್ಯಕ ಖರ್ಚುಗಳಿಂದ ದೂರವಿರಿ. ಮನೆ ಕಾರ್ಯಗಳಲ್ಲಿ ಭಾಗವಹಿಸಿದರೆ ಮನೆಯವರು ಸಂತೋಷಪಡುವರು. ನಿಮ್ಮ ಆತ್ಮವಿಶ್ವಾಸ ಇತರರಿಗೆ ಪ್ರೇರಣೆ ಆಗುತ್ತದೆ. ನವೀನ ಕಲಿಕೆಗಳಲ್ಲಿ ಆಸಕ್ತಿ ಮೂಡಬಹುದು. ದಿನದ ಕೊನೆಯಲ್ಲಿ ನೆಮ್ಮದಿಯ ಅನುಭವ. ಆರೋಗ್ಯ ಸಾಮಾನ್ಯವಾಗಿರುತ್ತದೆ.

ಕನ್ಯಾ ರಾಶಿ (Virgo): ಇದು ಅನೇಕ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದ ದಿನ. ವ್ಯಾಪಾರ, ಕೆಲಸದ ಮಟ್ಟಿಗೆ ನಿಮಗೆ ಬೆಂಬಲ ಸಿಗಬಹುದು. ಸಹೋದ್ಯೋಗಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಿ. ಹಣದ ಲೆಕ್ಕಾಚಾರದಲ್ಲಿ ಜಾಣ್ಮೆ ತೋರಿಸಿ. ಮಿತ್ರರಿಂದ ಉತ್ತಮ ಸುದ್ದಿ ಬರಬಹುದು. ಮನೆಯವರು ನಿಮ್ಮ ಸಲಹೆ ಗೌರವಿಸುತ್ತಾರೆ. ಹೊಸ ವ್ಯವಹಾರ ಆರಂಭಿಸಲು ಇದು ಉತ್ತಮ ಸಮಯ.

Daily Horoscope for 5 June 2025

ತುಲಾ ರಾಶಿ (Libra): ಇಂದು ನಿಮ್ಮ ಧೈರ್ಯದಿಂದಲೇ ಸಂಕಷ್ಟಗಳು ದೂರವಾಗಬಹುದು. ಹಳೆಯ ಸಮಸ್ಯೆಗಳಿಗೆ ಪರಿಹಾರ ಕಂಡುಬರುತ್ತದೆ. ಉದ್ಯೋಗದಲ್ಲಿ ಉತ್ತಮ ವಾತಾವರಣ. ಹಣಕಾಸಿನಲ್ಲಿ ಸ್ಥಿರತೆ ನಿರೀಕ್ಷಿಸಬಹುದು. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ. ಆರೋಗ್ಯ ಚೆನ್ನಾಗಿರುತ್ತದೆ, ಆದರೆ ಆಹಾರದಲ್ಲಿ ಎಚ್ಚರಿಕೆ ಇರಲಿ. ನಿಮ್ಮ ಬುದ್ಧಿವಂತಿಕೆ ಉಪಯೋಗಕ್ಕೆ ಬರುತ್ತದೆ.

ವೃಶ್ಚಿಕ ರಾಶಿ (Scorpio): ಒತ್ತಡದ ನಡುವೆ ಸಹನೆ ಕಳೆದುಕೊಳ್ಳಬೇಡಿ. ಕೆಲಸದ ಸ್ಥಳದಲ್ಲಿ ಶಾಂತವಾಗಿರಿ. ಸಂಗಾತಿಯ ಸಹಾಯದಿಂದ ಸಮಸ್ಯೆ ಬಗೆಹರಿಯಬಹುದು. ಇಂದು ನೀವು ಹೊಸ ಪರಿಚಯಗಳನ್ನು ಮಾಡಬಹುದು. ಮನಸ್ಸಿಗೆ ನೆಮ್ಮದಿ ಬೇಕಾದರೆ ಸ್ವಲ್ಪ ಸಮಯ ತಮಗಾಗಿ ಮೀಸಲಿಡಿ, ಪುಸ್ತಕಗಳನ್ನು ಓದಿ. ಮಕ್ಕಳಿಂದ ನಿಮಗೆ ಬೆಂಬಲ ಸಿಗುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.

ಧನು ರಾಶಿ (Sagittarius): ನಿಮ್ಮ ಕ್ರಿಯಾತ್ಮಕ ಚಿಂತನೆ ಬಹಳ ಮೌಲ್ಯದ್ದಾಗಿರುತ್ತದೆ. ಹೊಸ ಪ್ರಯತ್ನದಲ್ಲಿ ಯಶಸ್ಸು ಸಿಗುವ ಸೂಚನೆ ಇದೆ. ಹಣದ ವಿಚಾರದಲ್ಲಿ ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳಿ. ಸಂಬಂಧದಲ್ಲಿ ಸ್ನೇಹ, ವಿಶ್ವಾಸ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂಭ್ರಮದ ವಾತಾವರಣ. ನಿಮ್ಮ ಉದ್ಯೋಗದಲ್ಲಿ ನಿಮ್ಮ ಗುರಿಗಳನ್ನು ಸಾಧಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ವ್ಯವಹಾರವು ಉತ್ತಮವಾಗಿರುತ್ತದೆ.

ಮಕರ ರಾಶಿ (Capricorn): ಕೆಲಸದಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬರುತ್ತದೆ. ಹಣಕಾಸು ವ್ಯವಹಾರಗಳಲ್ಲಿ ಎಚ್ಚರಬೇಕು. ಮನೆಯಲ್ಲಿ ಹಿರಿಯರ ಮಾತು ಕೇಳುವುದು ಒಳ್ಳೆಯದು. ಮನಸ್ಸಿನಲ್ಲಿ ಇರುವ ಕಳವಳಗಳಿಗೆ ಪರಿಹಾರ ಸಿಗುತ್ತದೆ. ಶ್ರದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ನಿಶ್ಚಿತ. ಸ್ನೇಹಿತರು ಬೆಂಬಲ ನೀಡುತ್ತಾರೆ. ಆರೋಗ್ಯದ ಕಡೆಗೆ ಜಾಗರೂಕತೆ ಇರಲಿ.

ಕುಂಭ ರಾಶಿ (Aquarius): ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಹಣಕಾಸಿನಲ್ಲಿ ನಿರೀಕ್ಷಿತ ಬೆಳವಣಿಗೆ. ಹಳೆಯ ಬಾಕಿಗಳನ್ನು ಕ್ಲಿಯರ್ ಮಾಡುವ ಅವಕಾಶ. ಹೊಸ ತಂತ್ರಜ್ಞಾನಗಳನ್ನು ಕಲಿಯುವ ಆಸಕ್ತಿ ಮೂಡುತ್ತದೆ. ಆರೋಗ್ಯ ಉತ್ತಮವಾಗಿದೆ. ನೀವು ಹಣವನ್ನು ಗಳಿಸುವಿರಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಸಂಜೆಯ ಸಮಯವೂ ಅನುಕೂಲಕರವಾಗಿರುತ್ತದೆ.

ಮೀನ ರಾಶಿ (Pisces): ಇಂದು ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಬಯಕೆ ಹುಟ್ಟಬಹುದು. ಕೆಲಸದ ಸ್ಥಳದಲ್ಲಿ ಹೊಸ ಆವಕಾಶ ದೊರಕಬಹುದು. ಹಣಕಾಸು ನಿರ್ವಹಣೆ ಸರಾಗವಾಗಿ ನಡೆಯುತ್ತದೆ. ನಿಮ್ಮ ಶ್ರದ್ಧೆ ಎಲ್ಲರ ಗಮನ ಸೆಳೆಯುತ್ತದೆ. ಮನೆಯವರಿಂದ ಬೆಂಬಲ ಸಿಗುತ್ತದೆ. ವ್ಯವಹಾರ ಚೆನ್ನಾಗಿರುತ್ತದೆ. ಉದ್ಯೋಗದಲ್ಲಿ ಸುಧಾರಣೆ ಇರುತ್ತದೆ.

About Author:

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ…🔸ಇನ್ನಷ್ಟು ಓದಿ »

Related Stories