ದಿನ ಭವಿಷ್ಯ 6-6-2025: ಇದು ವರ್ಷಕ್ಕೆ ಬರುವ ಅದೃಷ್ಟದ ದಿನ! ಹೆಜ್ಜೆ ಹೆಜ್ಜೆಗೂ ಲಕ್

ನಾಳೆಯ ದಿನ ಭವಿಷ್ಯ 6-6-2025 ಶುಕ್ರವಾರ ಈ ರಾಶಿಗಳಿಗೆ ಆದಾಯ ಚೆನ್ನಾಗಿರುತ್ತದೆ, ಪರಿಸ್ಥಿತಿ ಸುಧಾರಿಸುತ್ತದೆ - Daily Horoscope - Naleya Dina Bhavishya 6 June 2025

ದಿನ ಭವಿಷ್ಯ 6 ಜೂನ್ 2025

ಮೇಷ ರಾಶಿ (Aries): ಈ ದಿನ ಖರ್ಚು ಹೆಚ್ಚು ಆಗುವ ಸಾಧ್ಯತೆ ಇದೆ. ಪರಿವಾರದಲ್ಲಿ ಸಾಮರಸ್ಯ ಬೆಳೆಸುವ ಸಮಯ ಇದು. ಸ್ನೇಹಿತರಿಂದ ಆಗಬಹುದಾದ ಸಹಾಯ ನಿಮಗೆ ಧೈರ್ಯ ತುಂಬಬಹುದು. ವಿಶ್ರಾಂತಿ ಅನಿವಾರ್ಯ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂವಹನ ಅಗತ್ಯ. ಹಳೆಯ ಗೊಂದಲಗಳು ಬಗೆಹರಿಯುವ ಸೂಚನೆ ಇದೆ. ಸಾಯಂಕಾಲ ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ಶಾಂತಿ ಸಿಗಲಿದೆ.

ವೃಷಭ ರಾಶಿ (Taurus): ನಿಮಗೆ ಇಂದಿನ ದಿನ ಆರ್ಥಿಕವಾಗಿ ಲಾಭದ ಸೂಚನೆ ಇದೆ. ಸೂಕ್ಷ್ಮವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಚಿಂತನೆಯನ್ನು ಮಾಡುವುದು ಉತ್ತಮ. ವ್ಯವಸ್ಥಿತ ಯೋಜನೆಯೊಂದಿಗೆ ಹೋದರೆ ಯಶಸ್ಸು ನಿಮ್ಮದು. ಹೊಸ ಒಪ್ಪಂದಗಳಿಗೆ ಅನುಕೂಲಕರ ಸಮಯ. ಆರೋಗ್ಯ ಸದೃಢವಾಗಿದೆ ಆದರೆ ಆಹಾರದಲ್ಲಿ ನಿಯಮ ಅಗತ್ಯ.
ವಿಚಾರಗಳಿಗೆ ಸ್ಪಷ್ಟತೆ ಬರುತ್ತದೆ, ಮನಸ್ಸು ಹಗುರವಾಗುತ್ತದೆ.

ಮಿಥುನ ರಾಶಿ (Gemini): ಸಂಗಾತಿಯ ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಾಗುವ ದಿನ. ಖರ್ಚು ಮಾಡುವಾಗ ನಿಮ್ಮ ಬಜೆಟ್ ಅನ್ನು ಮನಸ್ಸಿನಲ್ಲಿಟ್ಟುಕೊಳ್ಳಿ, ಇಲ್ಲದಿದ್ದರೆ ನೀವು ನಂತರ ವಿಷಾದಿಸಬೇಕಾಗಬಹುದು. ಮಧ್ಯಾಹ್ನದ ನಂತರ ಪರಿಸ್ಥಿತಿಗಳು ಸ್ವಲ್ಪ ಕಷ್ಟಕರವಾಗಬಹುದು. ಕೆಲವು ಕೆಲಸಗಳಲ್ಲಿ ಅಡಚಣೆ ಉಂಟಾಗಬಹುದು. ಮಾಡುತ್ತಿರುವ ಕೆಲಸದ ಮೇಲೆ ಗಮನಹರಿಸಿ.

ಕಟಕ ರಾಶಿ (Cancer): ಇಂದಿನ ದಿನ ಆರ್ಥಿಕವಾಗಿ ಸ್ಥಿತಿಗತಿ ಸುಧಾರಣೆಯಾಗುವ ಲಕ್ಷಣ. ಹೊಸ ಪ್ರಾಜೆಕ್ಟ್ ಆರಂಭಿಸಲು ಸೂಕ್ತ ಸಮಯ. ಹೆಚ್ಚು ನಿರೀಕ್ಷೆ ಇಟ್ಟರೆ ನಿರಾಶೆಯ ಸಾಧ್ಯತೆ, ನೈಜತೆಯೊಂದಿಗೆ ನಡೆಯಿರಿ. ಮಿತ ಆಹಾರ, ಮಿತ ನಿದ್ರೆ ಆರೋಗ್ಯದ ಕೀಲಿಕೈ. ಪರಿಚಯವೊಂದು ಹೊಸ ಸ್ನೇಹಕ್ಕೆ ದಾರಿ ತೋರಬಹುದು. ವ್ಯವಹಾರದಲ್ಲಿ ಕಠಿಣ ಪರಿಶ್ರಮದ ನಂತರವೂ, ಫಲಿತಾಂಶಗಳು ಬರಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

ಸಿಂಹ ರಾಶಿ (Leo): ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಇಂದಿನ ದಿನ ಶುಭವಾಗಲಿದೆ. ಸಹೋದ್ಯೋಗಿಗಳಿಂದ ಬೆಂಬಲ ಲಭ್ಯ, ಆದರೆ ನಿರ್ಲಕ್ಷ್ಯ ಬೇಡ. ವ್ಯವಹಾರದಲ್ಲಿ ಲಾಭದ ಅವಕಾಶವಿದೆ, ಮುನ್ನೆಚ್ಚರಿಕೆ ಅಗತ್ಯ. ಬಾಹ್ಯ ಪ್ರಭಾವದಿಂದ ದೂರವಿರಲು ಯತ್ನಿಸಿ. ಪ್ರೀತಿಯಿಂದ ಮಾಡಿದ ಕೆಲಸ ಫಲ ನೀಡಲಿದೆ. ಆತ್ಮೀಯರೊಂದಿಗೆ ಸಮಯ ಕಳೆಯುವುದು ಸಂತೋಷದಾಯಕ. ಸಾಧನೆಯ ದಾರಿ ತೆರೆದುಕೊಳ್ಳುತ್ತದೆ.

ಕನ್ಯಾ ರಾಶಿ (Virgo): ಸಮಯ ಬಳಕೆ ಸರಿಯಾಗಿದ್ದರೆ ಇಂದಿನ ದಿನ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಮನಸ್ಸಿನಲ್ಲಿರುವ ಒತ್ತಡಗಳಿಗೆ ವಿಶ್ರಾಂತಿ ದಾರಿ ತೋರಬಹುದು. ಆರ್ಥಿಕವಾಗಿ ನೂತನ ಆದಾಯದ ಮಾರ್ಗ ಕಾಣಬಹುದು. ಕುಟುಂಬ ಸದಸ್ಯರೊಂದಿಗೆ ಸಣ್ಣಸುದ್ದಿ ಹಂಚಿಕೊಳ್ಳಲು ಅವಕಾಶ. ಚಿಂತೆಯನ್ನು ಶಮನಗೊಳಿಸಲು ಧ್ಯಾನ ಸಹಾಯಕ. ಹಳೆಯ ಸ್ನೇಹಿತರ ಭೇಟಿ ಆಗಬಹುದು.

Daily Horoscope for 6 june 2025

ತುಲಾ ರಾಶಿ (Libra): ಬುದ್ಧಿವಂತಿಕೆಯಿಂದ ಆಲೋಚಿಸಿದರೆ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಒಳ್ಳೆಯ ಮಾತುಗಳಿಂದ ಎಲ್ಲರ ಮನಸ್ಸು ಗೆಲ್ಲಬಹುದು. ಪ್ರೀತಿಯಿಂದ ಮುರಿದ ಸಂಬಂಧ ಪುನಃ ಕಟ್ಟಬಹುದು. ಆರೋಗ್ಯ ಕಡೆ ಗಮನವಿಡುವುದು ಅಗತ್ಯ. ಹಣಕಾಸಿನ ವಿಷಯದಲ್ಲಿ ಹೊಸ ಕಲ್ಪನೆ ಬರಬಹುದು. ನಿಮ್ಮ ಕಲ್ಪನೆಗಳು ತೊಂದರೆಯಲ್ಲೇ ಪರಿಹಾರವನ್ನೂ ಕೊಡಬಹುದು. ಇಂದು ನಿಮ್ಮ ಶ್ರದ್ಧೆ ನಿಮ್ಮ ಶಕ್ತಿ.

ವೃಶ್ಚಿಕ ರಾಶಿ (Scorpio): ವ್ಯಕ್ತಿತ್ವಕ್ಕೆ ಹೊಸ ಬೆಳಕು, ಹೊಸ ಪರಿಚಯ. ಸಾಹಸಮಯ ಕಾರ್ಯಗಳ ಕಡೆ ಒಲವು ಹೆಚ್ಚಾಗಬಹುದು. ಆತ್ಮಪರಿಶೀಲನೆ ಅಗತ್ಯವಿರುವ ದಿನ. ಹಿರಿಯರ ಸಲಹೆಗೆ ಮೌಲ್ಯ ನೀಡಿ. ಆರ್ಥಿಕ ನಿರ್ಧಾರಗಳನ್ನು ಶಾಂತ ಮನಸ್ಸಿನಿಂದ ತೆಗೆದುಕೊಳ್ಳಿ. ಜೀವನ ಸಂಗಾತಿಯಿಂದ ಅರ್ಥಪೂರ್ಣ ಸಂಭಾಷಣೆ ಸಾಧ್ಯ. ಸಂಜೆಯ ಸಮಯ ಶಾಂತಿಯುತವಾಗಿರಲಿದೆ.

ಧನು ರಾಶಿ (Sagittarius): ಹೊಸ ಕಲಿಕೆ ಶುರು ಮಾಡುವ ದಿನ. ದಿನಚರ್ಯೆ ಸರಿಯಾಗಿ ರೂಪಿಸಿಕೊಳ್ಳಿ, ಸಮಯ ಉಳಿಯುತ್ತದೆ. ಭಾವನಾತ್ಮಕ ನಿಲುವುಗಳು ನಿಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತವೆ. ನಿಮ್ಮ ಕೆಲಸದ ತಕ್ಷಣದ ಫಲಿತಾಂಶಗಳು ನಿಮಗೆ ಸಿಗುವುದಿಲ್ಲ, ಆದರೆ ಸ್ಥಿರತೆ ಇರುತ್ತದೆ. ಹೊಸ ಅವಕಾಶಕ್ಕಾಗಿ ತಾಳ್ಮೆಯಿಂದ ಕಾಯಿರಿ. ತಾಳ್ಮೆ ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಮಕರ ರಾಶಿ (Capricorn): ಉದ್ಯೋಗದಲ್ಲಿ ಬದಲಾವಣೆಗಳ ಲಕ್ಷಣ. ಆರ್ಥಿಕ ಲಾಭವಿಲ್ಲದ ಹಳೆಯ ಯೋಜನೆ ಬದಲಾಯಿಸುವ ಸಮಯ. ಜೀವನದಲ್ಲಿ ಹೊಸ ಉತ್ಸಾಹ, ಹೊಸ ಚಟುವಟಿಕೆ. ವೈಯಕ್ತಿಕ ಬದುಕು ಸುಧಾರಿಸಲು ಕಾಲನುಕೂಲ. ಆದಾಯದ ಹೊಸ ಮಾರ್ಗಗಳ ಅನುಭವ. ಸ್ನೇಹಿತರಿಂದ ಆಗುವ ಬೆಂಬಲ ಸಂತೋಷ ತರುತ್ತದೆ. ಒಟ್ಟಾರೆ ಯಾವುದೇ ಸಮಸ್ಯೆ ಇಲ್ಲ.

ಕುಂಭ ರಾಶಿ (Aquarius): ಇಂದು ನಿಮ್ಮ ಕಲ್ಪನೆಯು ನಿಮ್ಮ ಬಲವಾಗಬಹುದು. ಒಳ್ಳೆಯ ಸಂಭಾಷಣೆಯಿಂದ ಬಾಂಧವ್ಯ ಬಲಗೊಳ್ಳುತ್ತದೆ. ಹೊಸ ಮಾರ್ಗಗಳಿಗೆ ಹಾರುವ ಮನಸ್ಥಿತಿಯಲ್ಲಿ ಇರುತ್ತೀರಿ. ಆರೋಗ್ಯದ ಕಡೆ ಪ್ರಾಮುಖ್ಯತೆ ನೀಡುವುದು ಉತ್ತಮ. ಅಪೂರ್ಣ ಕೆಲಸಗಳನ್ನು ಮುಗಿಸಲು ಚತುರತೆ ಅಗತ್ಯ. ವೃತ್ತಿಪರ ನಿರ್ಧಾರಗಳಲ್ಲಿ ಸಮಯ ತೆಗೆದುಕೊಳ್ಳಿ. ತಾಳ್ಮೆ ಮತ್ತು ತಿಳುವಳಿಕೆ ಅಗತ್ಯ.

ಮೀನ ರಾಶಿ (Pisces): ಆರ್ಥಿಕ ವಿಷಯಗಳಲ್ಲಿ ಸನ್ನಿಹಿತರ ಸಲಹೆ ಕೇಳಿ. ಕಲಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ನಿಮ್ಮ ಹಾಸ್ಯ ಭಾವನೆ ಇಂದಿನ ಶಕ್ತಿಯಾಗಿದೆ. ಆಪ್ತರಿಂದ ಸಿಹಿ ಸುದ್ದಿ ಸಿಗಬಹುದೆಂಬ ನಿರೀಕ್ಷೆ. ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಅಡೆತಡೆಗಳು ಕೊನೆಗೊಳ್ಳುತ್ತವೆ. ಆದಾಯ ಹೆಚ್ಚಾಗುತ್ತದೆ ಮತ್ತು ಸಹಕಾರವೂ ಸಿಗುತ್ತದೆ. ವ್ಯವಹಾರದಲ್ಲಿ ಸುಧಾರಣೆ ಕಂಡುಬರಲಿದೆ

Related Stories