ದಿನ ಭವಿಷ್ಯ 8-6-2025: ಗುರುಗ್ರಹದ ಪ್ರಭಾವದಿಂದ ಈ ರಾಶಿಗಳಿಗೆ ಸಿಕ್ಕಾಪಟ್ಟೆ ಲಾಭ!
ನಾಳೆಯ ದಿನ ಭವಿಷ್ಯ 8-6-2025 ಭಾನುವಾರ ಈ ರಾಶಿಗಳಿಗೆ ದಿನವು ಅರ್ಥಪೂರ್ಣವಾಗಿರುತ್ತದೆ - Daily Horoscope - Naleya Dina Bhavishya 8 June 2025
Publisher: Kannada News Today (Digital Media)
ದಿನ ಭವಿಷ್ಯ 8 ಜೂನ್ 2025
ಮೇಷ ರಾಶಿ (Aries): ಈ ದಿನ ಹಣಕಾಸು ಪರಿಸ್ಥಿತಿ ಸ್ಥಿರವಾಗಿರಲಿದೆ. ವ್ಯಾಪಾರಿಗಳಿಗೆ ಒಳ್ಳೆಯ ಲಾಭದ ಸೂಚನೆ. ಸಂಗಾತಿಯಿಂದ ಸಮಸ್ಯೆ ಪರಿಹಾರವಾಗಬಹುದು. ಸ್ನೇಹಿತರಿಂದ ಒಳ್ಳೆಯ ಸಹಕಾರ ದೊರೆಯಲಿದೆ. ದೂರದ ಸಂಬಂಧಿಕರಿಂದ ಶುಭವಾರ್ತೆ ಕೇಳಿಬರಬಹುದು. ಸಂತೋಷದ ವಾತಾವರಣ. ಒಟ್ಟಾರೆಯಾಗಿ, ಇಂದು ಆರಾಮದಾಯಕ ದಿನವಾಗಿರುತ್ತದೆ.
ವೃಷಭ ರಾಶಿ (Taurus): ಸಮಯದ ಬಳಕೆ ಚೆನ್ನಾಗಿದ್ದರೆ ಈ ದಿನ ಯಶಸ್ಸು ನಿಮ್ಮದು. ವೃತ್ತಿಜೀವನದಲ್ಲಿ ಹೊಸ ಅವಕಾಶ ಎದುರಾಗಬಹುದು. ಒತ್ತಡಗಳಿದ್ದರೂ ತಾಳ್ಮೆಯಿಂದ ನಿಭಾಯಿಸಬಹುದು. ವಾಹನ ಸಂಚಾರದಲ್ಲಿ ಎಚ್ಚರಿಕೆಯಿಂದಿರಿ. ಸಂಜೆಯ ವೇಳೆಗೆ ಶುಭ ಸುದ್ದಿ ಕೇಳಿಬರುವ ಸಾಧ್ಯತೆ. ಮಿತಭಕ್ಷಣೆ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಿ. ಕುಟುಂಬದವರೊಂದಿಗೆ ಸಮಯ ಕಳೆಯುವುದರಿಂದ ಮನಸ್ಸು ಶಾಂತವಾಗುತ್ತದೆ.
ಮಿಥುನ ರಾಶಿ (Gemini): ಇಂದಿನ ದಿನ ಕಾರ್ಯೋನ್ಮುಖವಾಗಿರುತ್ತದೆ. ಬುದ್ಧಿವಂತಿಕೆಯಿಂದ ನಿಮ್ಮ ಸಮಸ್ಯೆಗಳನ್ನು ಪರಿಹರಿಸಬಹುದು. ಇತರರ ಸಲಹೆ ಕೇಳಿ ಮುಂದೆ ಹೆಜ್ಜೆ ಇಡಿ. ನಿರ್ಧಿಷ್ಟ ಗುರಿಗೆ ಹೋಗಲು ಸಣ್ಣ ಸವಾಲುಗಳನ್ನು ಎದುರಿಸಬೇಕಾಗಬಹುದು. ಮನೆಯ ವಾತಾವರಣವು ಪ್ರೀತಿ ಮತ್ತು ಸಾಮರಸ್ಯದಿಂದ ತುಂಬಿರುತ್ತದೆ. ಸಂತೋಷ ಮತ್ತು ಶಾಂತಿಯ ಸಮಯ.
ಕಟಕ ರಾಶಿ (Cancer): ಹಣ ವ್ಯವಹಾರಗಳಲ್ಲಿ ಚುರುಕು ತೋರಿಸಬೇಕಾದ ದಿನ. ಇಂದು ಮಾತಿನಲ್ಲಿ ನಿಯಂತ್ರಣವಿರಲಿ, ಮನೆಗೆ ಸಂಬಂಧಿಸಿದ ಖರ್ಚು ನಿರೀಕ್ಷಿತಕ್ಕಿಂತ ಹೆಚ್ಚು ಆಗಬಹುದು. ಮಕ್ಕಳ ಆರೋಗ್ಯದಲ್ಲಿ ಚಿಕ್ಕ ಸಮಸ್ಯೆ ಉಂಟಾಗಬಹುದು. ಹಳೆಯ ಕೆಲಸಗಳನ್ನು ಪೂರ್ಣಗೊಳಿಸಲು ಅನುಕೂಲ. ಮಧ್ಯಾಹ್ನದ ವೇಳೆಗೆ ಕಾನೂನು ವಿಷಯಗಳಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ನಿಮಗೆ ಬೆಂಬಲ ಸಿಗುತ್ತದೆ.
ಸಿಂಹ ರಾಶಿ (Leo): ನಿಮ್ಮ ಮೇಲೆ ನೀವು ನಂಬಿಕೆ ಇಟ್ಟುಕೊಂಡರೆ ಇಂದು ನೀವು ಗೆಲ್ಲುತ್ತೀರಿ. ಉದ್ಯೋಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ಸಿಗಲಿದೆ. ಆರೋಗ್ಯದಲ್ಲಿ ಚಿಂತೆಪಡಬೇಕಾದಂತಹುದು ಏನೂ ಇಲ್ಲ. ಮನಸ್ಸಿಗೆ ನೆಮ್ಮದಿಯ ದಿನ. ಸಂಜೆ, ಆದಾಯವು ಸುಧಾರಿಸುತ್ತದೆ, ಜೀವನಶೈಲಿಯಲ್ಲೂ ಬದಲಾವಣೆ ಇರುತ್ತದೆ. ಯೋಜನೆಗಳು ಯಶಸ್ವಿಯಾಗುತ್ತವೆ.
ಕನ್ಯಾ ರಾಶಿ (Virgo): ಇಂದು ಬಹುತೇಕ ಕೆಲಸಗಳು ಸುಲಭವಾಗಿ ನಡೆಯಲಿವೆ. ವ್ಯಾಪಾರಿಗಳಿಗೆ ಉತ್ತಮ ಅವಕಾಶಗಳು ದೊರೆಯುವ ಕಾಲ. ಮನೆಗೆ ಸಂಬಂಧಿಸಿದ ತೀರ್ಮಾನಗಳಲ್ಲಿ ಮುನ್ನೋಟ ಇರಲಿ. ಚಿಕ್ಕ ಪ್ರಯಾಣ ಸಂಭವಿಸಬಹುದು.
ಆದಾಯ ಚೆನ್ನಾಗಿರುತ್ತದೆ ಮತ್ತು ಅಡೆತಡೆಗಳು ಕೊನೆಗೊಳ್ಳುತ್ತವೆ. ತೊಡಕುಗಳಿಂದ ಮುಕ್ತಿ ಸಿಗುತ್ತದೆ. ಉದ್ಯೋಗದಲ್ಲಿ ನಿಮ್ಮ ಗುರಿಗಳನ್ನು ಸಾಧಿಸುವಿರಿ.
ತುಲಾ ರಾಶಿ (Libra): ಇಂದಿನ ದಿನ ದೈವಭಕ್ತಿಗೆ ಸಮಯ ಕೊಡಲು ಯೋಗ್ಯ. ಸ್ನೇಹಿತರಿಂದ ಸಂತಸದ ಸಂದೇಶಗಳು ಬರುತ್ತವೆ. ಆರ್ಥಿಕವಾಗಿ ಚಿಕ್ಕ ಲಾಭಗಳು ಕಂಡುಬರುತ್ತವೆ. ಮಾತಿನಲ್ಲಿ ಶಿಸ್ತು ಇರಲಿ, ಸಂಬಂಧ ಉಳಿಯುತ್ತದೆ. ಉದ್ಯೋಗದಲ್ಲಿ ಹೆಚ್ಚು ಹೊರೆ ಇದ್ದರೂ ಸಂತೋಷ ನೀಡುತ್ತದೆ. ದಿನದ ಎರಡನೇ ಅರ್ಧದಲ್ಲಿ ಶುಭಕಾರ್ಯಗಳಿಗೆ ಕಾಲ ಉತ್ಕೃಷ್ಟ. ವಿಧ್ಯಾರ್ಥಿಗಳಿಗೆ ಉತ್ತೇಜನದ ದಿನ.
ವೃಶ್ಚಿಕ ರಾಶಿ (Scorpio): ಸಹನೆ ಮತ್ತು ವಿವೇಕ ಇಂದು ಮುಖ್ಯ. ಅನಿರೀಕ್ಷಿತ ಖರ್ಚು ಚಿಂತೆ ಉಂಟುಮಾಡಬಹುದು.
ವ್ಯಾಪಾರ ಸಂಬಂಧಿ ವಿಚಾರಗಳಲ್ಲಿ ತಜ್ಞರ ಸಲಹೆ ಅವಶ್ಯಕ. ಕೋಪದಿಂದ ದೂರವಿರಿ, ವ್ಯರ್ಥ ಮಾತುಗಳಿಂದ ನಷ್ಟವಾದೀತು. ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಸಾಯಂಕಾಲದ ನಂತರ ಮಾನಸಿಕ ಶಾಂತಿ ಇರುತ್ತದೆ.
ಧನು ರಾಶಿ (Sagittarius): ಇಂದು ಕೆಲಸಗಳಲ್ಲೆಲ್ಲಾ ಸ್ಪಷ್ಟತೆಯಿಂದ ನಡೆದುಕೊಳ್ಳಿ. ಆರ್ಥಿಕವಾಗಿ ಲಾಭದ ಸೂಚನೆಗಳಿವೆ.
ಸಂಗಾತಿಯಿಂದ ಆಶಯದ ಬೆಂಬಲ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳ ಸುಳಿವು ಸಿಗಬಹುದು. ಜೀವನದಲ್ಲಿ ನಂಬಿಕೆಯಿಂದ ಹೆಜ್ಜೆ ಇಡಿ. ಪ್ರಯತ್ನಿಸಿದರೆ ಎಲ್ಲವೂ ಸಾಧ್ಯ, ಮರೆಯಬೇಡಿ. ಅಪರಿಚಿತರಿಂದ ದೂರವಿರುವುದು ಒಳ್ಳೆಯದು.
ಮಕರ ರಾಶಿ (Capricorn): ಇಂದು ವೈಯಕ್ತಿಕ ವಿಷಯಗಳಲ್ಲಿ ತಾಳ್ಮೆ ಅಗತ್ಯ. ಹಳೆ ಸಮಸ್ಯೆಗಳಿಗೆ ಪರಿಹಾರಗಳು ಕಂಡುಬರುತ್ತವೆ. ನಿಮ್ಮ ಕೆಲಸಕ್ಕೆ ತಕ್ಕ ಫಲ ಇಂದೇ ಸಿಗಬಹುದು. ನಿರ್ಧಿಷ್ಟ ಗುರಿ ಸಾಧಿಸಲು ನೆರವು ಸಿಗುತ್ತದೆ. ವಿಧ್ಯಾರ್ಥಿಗಳಿಗೆ ಸಕಾರಾತ್ಮಕ ಸಮಯ. ಮನಸ್ಸಿಗೆ ಶಾಂತಿ ನೀಡುವ ಕ್ಷಣಗಳಿವೆ. ಸಂಜೆ ಕೆಲವು ಸಮಸ್ಯೆಗಳು ಉದ್ಭವಿಸಬಹುದು, ಜಾಗರೂಕರಾಗಿರಿ. ಶೀಘ್ರದಲ್ಲೇ ಪರಿಸ್ಥಿತಿ ಮತ್ತೆ ಸುಧಾರಿಸುತ್ತದೆ.
ಕುಂಭ ರಾಶಿ (Aquarius): ನಿಮ್ಮ ಪ್ರತಿಭೆ ಇತರರನ್ನು ಆಕರ್ಷಿಸಲಿದೆ. ಇಂದು ತೆಗೆದುಕೊಳ್ಳುವ ತೀರ್ಮಾನಗಳು ಭವಿಷ್ಯ ರೂಪಿಸಬಹುದು. ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ. ಹೊಸ ಯೋಚನೆಗಳಿಗೆ ಅನುಕೂಲ. ಆದಾಯದಲ್ಲಿ ಸುಧಾರಣೆ ಇರುತ್ತದೆ. ಕುಟುಂಬದಿಂದ ಸಂತೋಷ ಸಿಗುತ್ತದೆ ಮತ್ತು ಹೊಸ ಕೆಲಸಗಳು ಸಾಧ್ಯ. ವಿವಾದಾತ್ಮಕ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.
ಮೀನ ರಾಶಿ (Pisces): ಇಂದು ನಿಮ್ಮ ಕನಸುಗಳನ್ನು ಚಿಂತನೆಗೆ ತರಲು ಸೂಕ್ತ ದಿನ. ಧೈರ್ಯ ಮತ್ತು ನಂಬಿಕೆ ನಿಮ್ಮ ಶಕ್ತಿಯಾಗಿರಲಿ. ಆರ್ಥಿಕವಾಗಿ ಚಿಕ್ಕ ನಷ್ಟ ಸಂಭವಿಸಬಹುದು – ಜಾಗ್ರತೆ ಇರಲಿ. ಮಾತು ತಪ್ಪಿದರೆ ಸಂಬಂಧ ದೂರವಾಗಬಹುದು. ಹೆಚ್ಚು ಕೆಲಸದ ಒತ್ತಡ ಇದ್ದರೂ ತಾಳ್ಮೆಯಿಂದ ಮುನ್ನಡೆಯಿರಿ. ಹಳೆಯ ಪರಿಚಯ ಒಳ್ಳೆಯ ಅವಕಾಶಕ್ಕೆ ದಾರಿ ಮಾಡಬಹುದು.