ಈ ವಾರ ಗ್ರಹಗಳ ಬಲ ಬದಲಾಗಿದೆ! ಇಲ್ಲಿದೆ 12 ರಾಶಿಗಳ ಸಂಪೂರ್ಣ ಭವಿಷ್ಯ

Vara Bhavishya : ಈ ವಾರ ನಕ್ಷತ್ರಗಳ ವಿಶೇಷ ಕೃಪೆ ಈ ರಾಶಿಗಳ ಮೇಲೆ ಇದೆ, ನಿಮ್ಮ ಭವಿಷ್ಯ (Weekly Horoscope) ನೋಡಿ. ಯಾರಿಗೆ ದೊಡ್ಡ ಅವಕಾಶ? ಇಲ್ಲಿದೆ ಸಂಪೂರ್ಣ ಜ್ಯೋತಿಷ್ಯ ಫಲ

ವಾರ ಭವಿಷ್ಯ (ಡಿಸೆಂಬರ್ 7, 2025 ರಿಂದ ಡಿಸೆಂಬರ್ 13, 2025)

ಮೇಷ : ಈ ವಾರ ನೀವು ಅನುಭವಿಸುವ ಚುರುಕು ಮನಸ್ಥಿತಿ ಹೊಸ ಕಾರ್ಯಗಳಿಗೆ ಪ್ರೇರಣೆ ನೀಡುತ್ತದೆ. ಹಳೆಯ ಸಮಸ್ಯೆಗಳನ್ನು ಬೇರೆಯ ದೃಷ್ಟಿಯಿಂದ ನೋಡುವ ಅವಕಾಶ ಸಿಗುತ್ತದೆ. ಕೆಲಸದಲ್ಲಿ ಸಹೋದ್ಯೋಗಿಗಳ ಬೆಂಬಲ ಹೆಚ್ಚಾಗಬಹುದು. ಹಣಕಾಸಿನ ವಿಷಯದಲ್ಲಿ ಸಮತೋಲನ ಕಾಪಾಡುವುದು ಉತ್ತಮ. ಕುಟುಂಬದಲ್ಲಿ ಒಂದು ಸಣ್ಣ ಮಾತುಕತೆ ಹರ್ಷ ತರುತ್ತದೆ.

ವೃಷಭ : ಬಹುತೇಕ ಈ ವಾರ ಮನಸ್ಸಿನಲ್ಲಿ ನೆಮ್ಮದಿ ಹೆಚ್ಚಾಗುತ್ತದೆ ಮತ್ತು ನಿರ್ಧಾರಗಳ ಸ್ಪಷ್ಟತೆ ಕಾಣಿಸುತ್ತದೆ. ಆರ್ಥಿಕ ಲಾಭದ ಕಡೆಗೆ ಹೊಸ ಮಾರ್ಗಗಳು ತೆರೆದುಕೊಳ್ಳುವ ಸೂಚನೆ ಇದೆ. ಉದ್ಯೋಗದಲ್ಲಿ ನಿಮಗೆ ನಂಬಿಕೆ ಇಡುವವರು ಹೆಚ್ಚಾಗಬಹುದು. ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಸಂತೋಷ ಹೆಚ್ಚುತ್ತದೆ. ಹಳೆಯ ಗೆಳೆಯರಿಂದ ಒಂದು ಮಾತು ಇಂದು ನಿಮ್ಮ ಮನಸ್ಸನ್ನು ಸ್ಪರ್ಶಿಸಬಹುದು.

ಮಿಥುನ : ನಿಮ್ಮ ಆಲೋಚನೆಗಳು ವೇಗವಾಗಿ ಹರಿದು ಹೊಸ ಕಲ್ಪನೆಗಳು ಮೂಡಬಹುದು. ಮಾತಿನ ಜಾಗ್ರತೆ ಅಗತ್ಯ, ಏಕೆಂದರೆ ಸಣ್ಣ ವಿಷಯವೂ ದೊಡ್ಡದಾಗಿ ತೋರುವ ಸಾಧ್ಯತೆ ಇದೆ. ಕೆಲಸದಲ್ಲಿ ಅನಿರೀಕ್ಷಿತ ಬದಲಾವಣೆಗಳು ಚಿಂತೆಯನ್ನೂ ಉಂಟುಮಾಡಬಹುದು ಆದರೆ ಅಂತಿಮ ಫಲ ಒಳ್ಳೆಯದು. ಸ್ನೇಹಿತರ ಭೇಟಿ ಹರ್ಷ ತರುತ್ತದೆ. ಆನ್‌ಲೈನ್ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ.

ಕಟಕ : ಮನಸ್ಸಿಗೆ ಶಾಂತಿ ನೀಡುವ ಕೆಲಸಗಳನ್ನು ಮಾಡಲು ಇಚ್ಛೆ ಹೆಚ್ಚುತ್ತದೆ. ಕುಟುಂಬದವರೊಂದಿಗೆ ಕಳೆಯುವ ಸಮಯ ನಿಮಗೆ ಆತ್ಮಸ್ಥೈರ್ಯ ನೀಡುತ್ತದೆ. ಕೆಲಸದ ಒತ್ತಡ ಕಡಿಮೆಯಾಗುತ್ತಿದ್ದು ಸ್ವಲ್ಪ ವಿಶ್ರಾಂತಿ ದೊರೆಯಲಿದೆ. ಹಣಕಾಸಿನಲ್ಲಿ ಯೋಜನೆ ಮಾಡಿದರೆ ಮುಂದಿನ ದಿನಗಳಲ್ಲಿ ಲಾಭ. ಒಳ್ಳೆಯ ವಿಷಯಗಳ ಬಗ್ಗೆ ಚರ್ಚೆ ಮಾಡುವ ಅವಕಾಶ ಬರುತ್ತದೆ. ಆರೋಗ್ಯದಲ್ಲಿ ಪ್ರಗತಿ ಕಾಣಬಹುದು.

ಸಿಂಹ : ನಿಮ್ಮ ನಾಯಕತ್ವ ಗುಣ ಸ್ಪಷ್ಟವಾಗಿ ಕಾಣಿಸುತ್ತದೆ. ಕೆಲಸದಲ್ಲಿ ನೀವು ಹೇಳಿದ ಮಾತಿಗೆ ಇತರರಿಂದ ಒಪ್ಪಿಗೆ ಸಿಗುತ್ತದೆ. ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ಬರುತ್ತದೆ ಆದರೆ ಆತುರ ಬೇಡ. ಹಣಕಾಸಿನ ವಿಷಯದಲ್ಲಿ ಖರ್ಚು ತಪ್ಪಿಸಲಾಗದಂತೆ ಕಾಣುತ್ತದೆ. ಸಂಭಂಧಗಳಲ್ಲಿ ಪ್ರಾಮಾಣಿಕ ಸಂಭಾಷಣೆ ಮುಖ್ಯ. ದೈಹಿಕ ಶಕ್ತಿಯನ್ನು ಕಾಪಾಡಲು ಆಹಾರದಲ್ಲಿ ಕಟ್ಟುನಿಟ್ಟಿನ ಅವಶ್ಯಕತೆ.

ಕನ್ಯಾ : ಸಣ್ಣ ವಿಷಯಗಳನ್ನೂ ಗಂಭೀರವಾಗಿ ನೋಡುವ ಸ್ವಭಾವ ಹೆಚ್ಚಾಗಬಹುದು. ಕೆಲಸದಲ್ಲಿ ನಿಮಗೆ ನೀಡಲಾದ ಜವಾಬ್ದಾರಿಗಳು ಉತ್ತಮ ಫಲ ತರುತ್ತವೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸ ಪೂರ್ಣಗೊಳ್ಳಬಹುದು. ಹಣಕಾಸಿನಲ್ಲಿ ಚಿಕ್ಕ ಲಾಭದ ಸೂಚನೆ ಇದೆ. ಸ್ನೇಹಿತರಿಂದ ಒಬ್ಬರಿಂದ ಆಶ್ಚರ್ಯ ಸುದ್ದಿಯ ನಿರೀಕ್ಷೆ. ಆರೋಗ್ಯದಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಜಾಗರೂಕತೆ ಅಗತ್ಯ. ಒಟ್ಟಾರೆ ಈ ವಾರ ಮನಸ್ಸಿಗೆ ಸ್ವಲ್ಪ ನೆಮ್ಮದಿ ದೊರೆಯುತ್ತದೆ.

ತುಲಾ : ನಿಮ್ಮ ಮೃದು ಗುಣ ನಿಮಗೆ ನಿಜವಾದ ಸಹಾಯಕ. ಕುಟುಂಬ ಮತ್ತು ಕೆಲಸ ಎರಡೂ ಕಡೆ ನೀವು ಸುಲಭವಾಗಿ ಹೊಂದಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ಹೊಸ ಅವಕಾಶ ಕಂಡುಬರುವುದು.. ಸ್ನೇಹಿತರಿಂದ ಒಂದು ಒಳ್ಳೆಯ ಕೆಲಸಕ್ಕೆ ಸಹಕಾರ ಬರಬಹುದು. ಆರೋಗ್ಯದಲ್ಲಿ ಸ್ವಲ್ಪ ದಣಿವು ಇದ್ದರೂ ಗಮನಕೊಟ್ಟರೆ ಸರಿಯಾಗುತ್ತದೆ. ಸಂಭಂಧಗಳಲ್ಲಿ ನಂಬಿಕೆ ಹೆಚ್ಚಾಗುತ್ತದೆ.

ವೃಶ್ಚಿಕ : ನಿಮ್ಮೊಳಗಿನ ದೃಢತೆ ಹೆಚ್ಚಾಗುತ್ತದೆ. ಯಾವುದಾದರೂ ಒತ್ತಡ ಇದ್ದರೂ ನೀವು ಅದನ್ನು ಸುಲಭವಾಗಿ ನಿಭಾಯಿಸಬಲ್ಲಿರಿ. ಕೆಲಸದಲ್ಲಿ ಹೊಗಳಿಕೆ ಸಿಗಬಹುದು. ಹಣಕಾಸಿನಲ್ಲಿ ಜಾಗರೂಕತೆಯಿಂದ ಮುಂದೆ ಸಾಗಿರಿ. ಕುಟುಂಬದಲ್ಲಿ ಹಳೆಯ ವಿಷಯ ಮತ್ತೆ ಚರ್ಚೆಗೆ ಬರಬಹುದು ಆದರೆ ಪರಿಹಾರ ಸಾಧ್ಯ. ಆರೋಗ್ಯದಲ್ಲಿ ನಿದ್ರೆ ಮುಖ್ಯ. ಒಂದು ಮಹತ್ವದ ಯೋಜನೆಗೆ ಮೊದಲ ಹೆಜ್ಜೆ ಇಡಬಹುದು.

ಧನು : ಹೊಸ ವಿಚಾರಗಳಿಗೆ ಮನಸ್ಸು ತೆರೆದಿರುತ್ತದೆ. ಪ್ರಯಾಣ ಯೋಜನೆ ಇದ್ದರೆ ಸಾಧಕ. ಕೆಲಸದಲ್ಲಿ ನಿಮ್ಮ ಅಭಿಪ್ರಾಯಕ್ಕೆ ಮೌಲ್ಯ ಸಿಗುತ್ತದೆ. ಹಣಕಾಸಿನಲ್ಲಿ ಉತ್ತಮ ಸ್ಥಿತಿ ಇರಬಹುದು. ಮನೆಯವರೊಂದಿಗೆ ಪ್ರಯಾಣಕ್ಕೆ ಮುಂದಾಗಬಹುದು. ಆರೋಗ್ಯದಲ್ಲಿ ಉತ್ಸಾಹ ಹೆಚ್ಚುತ್ತದೆ. ಸ್ನೇಹಿತರಿಂದ ಸಹಕಾರ, ಜೊತೆಗೆ ಈ ವಾರದ ಕೊನೆಯಲ್ಲಿ ಬೆಳವಣಿಗೆ ಸೂಚಿಸುವಂತಿರುತ್ತದೆ.

ಮಕರ : ಯೋಜನೆಯಂತೆ ಕೆಲಸಗಳು ನಿಧಾನವಾಗಿ ಸಾಗಬಹುದು. ತಾಳ್ಮೆ ಮುಖ್ಯ. ಕೆಲಸದಲ್ಲಿ ಕೆಲವು ಅಡ್ಡಿಗಳು ಆಗಿದ್ದರೂ ನಂತರದ ಪ್ರಯತ್ನ ಯಶಸ್ವಿಯಾಗುತ್ತದೆ. ಹಣಕಾಸಿನಲ್ಲಿ ಯೋಜಿತ ಕ್ರಮದ ಫಲ ಸಿಗುತ್ತದೆ. ಮನೆಯಲ್ಲಿ ಒಬ್ಬರೊಂದಿಗೆ ಚಿಕ್ಕ ಮಾತುಕತೆ ಭಿನ್ನಾಭಿಪ್ರಾಯ ತರುತ್ತದೆ. ಒತ್ತಡ ಕಡಿಮೆ ಮಾಡಲು ಧ್ಯಾನ ಸಹಾಯಕ. ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ಒಟ್ಟಾರೆ ಈ ವಾರ ನಿಮಗೆ ಉತ್ತಮವಾಗುತ್ತದೆ.

ಕುಂಭ : ನಿಮ್ಮ ಆಲೋಚನೆಗಳು ವಿಭಿನ್ನ ದಿಕ್ಕಿನಲ್ಲಿ ಹರಿದು ಹೊಸ ಸಾಧ್ಯತೆಗಳನ್ನು ತರುತ್ತವೆ. ಹಣಕಾಸಿನಲ್ಲಿ ಯೋಜಿತ ನಿರ್ಧಾರಗಳು ಅಗತ್ಯ. ಕುಟುಂಬದಲ್ಲಿ ಸಣ್ಣ ವಿಚಾರ ಸಂತೋಷ ತರಬಹುದು. ಆರೋಗ್ಯದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಹಳೆಯ ಸ್ನೇಹಿತರಿಂದ ಉತ್ತಮ ಸಂದೇಶ ಬರಬಹುದು. ಈ ವಾರ ವ್ಯಪಾರಕ್ಕೆ ಪ್ರಯಾಣ ಮಾಡಬೇಕಾಗಬಹುದು. ವಾರದ ಕೊನೆಯಲ್ಲಿ ಆರೋಗ್ಯ ಏರುಪೇರಾದಂತೆ ಕಾಣುತ್ತದೆ.

ಮೀನ : ಜೀವನದಲ್ಲಿ ಸುತ್ತಮುತ್ತಲವರ ಬೆಂಬಲ ಸಿಗುತ್ತದೆ. ಕೆಲಸದಲ್ಲಿ ನಿಧಾನಗತಿ ಇದ್ದರೂ ವಾರದ ಮದ್ಯದಲ್ಲಿ ಉತ್ತಮವಾಗಿರುತ್ತದೆ. ಹಣಕಾಸಿನಲ್ಲಿ ಅನಗತ್ಯ ಖರ್ಚು ತಪ್ಪಿಸುವುದು ಒಳಿತು. ಸಂಭಂಧಗಳಲ್ಲಿ ಪ್ರಾಮಾಣಿಕತೆ ಮುಖ್ಯ. ಆರೋಗ್ಯದಲ್ಲಿ ನೀರಿನ ಸೇವನೆಗೆ ಗಮನಕೊಡಿ. ಕುಟುಂಬದ ಜೊತೆ ಸಮಯ ಕಳೆಯುವುದು ಸಂತೋಷ ನೀಡುತ್ತದೆ. ವಾರದ ಮಧ್ಯಭಾಗದಲ್ಲಿ ಸ್ವಲ್ಪ ಖರ್ಚು ಹೆಚ್ಚಾಗಿದೆ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories