ಮೊಡವೆ ರಹಿತ ಮುಖಕ್ಕೆ ಇಲ್ಲಿದೆ ಟಿಪ್ಸ್

Here are the tips for acne-free face ( treatment for Pimples)

ಮೊಡವೆ ರಹಿತ ಮುಖಕ್ಕೆ ಇಲ್ಲಿದೆ ಟಿಪ್ಸ್

ಸಾಮಾನ್ಯವಾಗಿ ಹದಿ ಹರಿಯುವ ಸರ್ವೇ ಸಾಮಾನ್ಯ ಸಮಸ್ಯೆ ಈ ಮೊಡವೆ. ಕಾಂತಿಯುಕ್ತ ಮುಖದ ಸೌಂದರ್ಯ ಯಾರು ಬಯಸುವುದಿಲ್ಲ ಹೇಳಿ. ಎಲ್ಲರಿಗಿಂತ ನಮ್ಮ ಮುಖ ಸುಂದರವಾಗಿ ಕಾಣಬೇಕು ಎಂಬುವ ಆಸೆ ಎಲ್ಲರಲ್ಲೂ ಇದ್ದೆ ಇರುತ್ತದೆ. ಆದರೆ ಈ ವಯಸ್ಸಿನಲ್ಲಿ ಹುಡುಗ ಹುಡುಗಿಯರನ್ನು ಕಾಡುವ ದೊಡ್ಡ ಸಮಸ್ಯೆ ಮೊಡವೆಗಳು.

ಕೆಲವೊಮ್ಮೆ ಇವೆ ನಮ್ಮ ಮುಖ ಸೌಂದರ್ಯಕ್ಕೆ ದಕ್ಕೆ ತಂದು ಬಿಡುತ್ತವೆ, ಎಲ್ಲರಲ್ಲಿ ಒಬ್ಬರಾಗಿ ಬೆರೆಯದಂತೆ ನಮ್ಮಲ್ಲಿ ಜಿಗುಪ್ಸೆ ತರುತ್ತವೆ. ಅಲ್ಲದೆ ಈ ಮೊಡವೆಗಳನ್ನು ತಡೆಯಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಹಲವಾರು ಕ್ರಮಗಳನ್ನೂ ಸಹ ಮಾಡುತ್ತಾರೆ, ಆದರೆ ಅವು ಯಾವುವು ಉತ್ತಮ ಫಲಿತಾಂಶ ನೀಡಿರುವುದಿಲ್ಲ.

ನಿಮ್ಮನ್ನು ಕಾಡುತ್ತಿರುವ ಮೊಡವೆಗಳ ಸಮಸ್ಯೆಗೆ ಈ ಕೆಲವು ಸರಳ ಕ್ರಮಗಳನ್ನು ಅನುಸರಿಸಿ.

ಮೊಟ್ಟೆಯ ಹಳದಿ, ಮಾಂಸ, ಜಂಕ್ ಫುಡ್, ಕರೆದ ಪದಾರ್ಥ, ಸಿಹಿತಿಂಡಿಗಳ ಸೇವನೆ ಕಡಿಮೆ ಮಾಡಿ, ಇಲ್ಲವೇ ಪೂರ್ಣ ನಿರ್ಬಂಧಿಸಿ. ಟಮೋಟ ಪ್ರತಿನಿತ್ಯ ನಿಮ್ಮ ಮುಖಕ್ಕೆ ಮೃದುವಾಗಿ ತಿಕ್ಕಿ ಮಸಾಜ್ ಮಾಡುವುದರಿಂದ ಮುಖವು ಹೊಳೆಯುವುದಲ್ಲದೆ ಮೊಡವೆಗಳನ್ನೂ ಸಹ ತಡೆಯಬಹುದು.

ಮೊಡವೆ ರಹಿತ ಮುಖಕ್ಕೆ ಇಲ್ಲಿದೆ ಟಿಪ್ಸ್ - Kannada News

ಪುದಿನ ರಸ ಅಥವಾ ತುಳಸಿ ರಸವನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚುವುದರಿಂದ ಮುಖವು ಕಾಂತಿ ಪಡೆಯುತ್ತದೆ, ಹಾಗೂ ಮೊಡವೆಗಳು, ಕಲೆಗಳು ಕ್ರಮೇಣ ಕಡಿಮೆಯಾಗುತ್ತವೆ.

ಪರಂಗಿ ( ಪಪಾಯಿ ) ರಸವನ್ನು ಹಚ್ಚುವುದರಿಂದಲೂ ಸಹ ಮೊಡವೆಗಳ ಸಮಸ್ಯೆ ನಿವಾರಣೆಯಾಗುತ್ತದೆ. ಎರಡು ದಿನಗಳಿಗೊಮ್ಮೆ ಈ ರಸವನ್ನು ಮುಖಕ್ಕೆ ಹಚ್ಚಿ, ಹತ್ತು ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.

ತುಳಸಿ ಎಲೆಗಳಿಗೂ ಸಹ ಈ ಮೊಡವೆ ಸಮಸ್ಯೆಯನ್ನು ನಿವಾರಿಸಿವ ಶಕ್ತಿ ಇದೆ, ಹೌದು, ಒಂದಿಷ್ಟು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ, ಕುದಿಸಿದ ನೀರು ಉಗುರುಬೆಚ್ಚಗೆ ಇರುವಾಗ ಆ ನೀರಿನಲ್ಲಿ ಮುಖವನ್ನು ತೊಳೆಯಿರಿ. ಕೆಲವು ದಿನಗಳು ಈ ರೀತಿ ಮಾಡುವುದರಿಂದ ನಿಮ್ಮ ಮೊಡವೆ ಸಮಸ್ಯೆ ಸಂಪೂರ್ಣ ಮಾಯವಾಗುತ್ತದೆ.

ಒಂದು ದೊಡ್ಡ ಚಮಚ ಸೌತೆಕಾಯಿ ರಸಕ್ಕೆ ಅರ್ಧ ಚಮಚ ನಿಂಬೆರಸ ಹಾಗೂ ನಾಲ್ಕೈದು ಹನಿ ಪನ್ನೀರು ಸೇರಿಸಿ ಮುಖಕ್ಕೆ ಸವರಿ, ಹತ್ತು ಹದಿನೈದು ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ, ಇದರಿಂದ ಮೊಡವೆ ಸಮಸ್ಯೆಗೆ ಗುಡ್ ಬೈ ಹೇಳಿ ಕಾಂತಿಯುಕ್ತ ಮುಖ ಸೌಂದರ್ಯ ಪಡೆಯಬಹುದು.

ಜೊತೆಗೆ , ಇವೆಲ್ಲದರ ನಡುವೆ ಯಾವುದೇ ಕಾರಣಕ್ಕೂ ಮೊಡವೆಗಳನ್ನು ಚಿವುಟಿಕೊಳ್ಳಬಾರದು, ಇದರಿಂದ ಸಮಸ್ಯೆ ಹೆಚ್ಚಾಗುವುದಲ್ಲದೆ, ಕಲೆಗಳು ಉಂಟಾಗುತ್ತವೆ.////

Web Title : Here are the tips for acne-free face ( treatment for Pimples)
Read Latest Kannada News including Special Reports at kannadanews.today

Follow us On

FaceBook Google News

Read More News Today