ಮಕ್ಕಳಿಗೆ ಮೊಬೈಲ್ ಕೊಟ್ಟು ಊಟ ಮಾಡಿಸೋ ತಂದೆ-ತಾಯಿಗೆ ಎಚ್ಚರಿಕೆ! ಏನೆಲ್ಲಾ ಎಫೆಕ್ಟ್ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು (children) ಪ್ರತಿದಿನ ಐದು ಗಂಟೆಗಿಂತಲೂ ಹೆಚ್ಚು ಸಮಯ ಮೊಬೈಲ್ (mobile) ನಲ್ಲಿ ಕಳೆಯುತ್ತಾರೆ ಅಂದ್ರೆ ಇದು ಖಂಡಿತವಾಗಿಯೂ ಅಪಾಯದ ಮುನ್ಸೂಚನೆ ಎನ್ನಬಹುದು.

Bengaluru, Karnataka, India
Edited By: Satish Raj Goravigere

“ಅದೇನಿದ್ರೂ ನಮ್ಮ ಕಾಲವೇ ಚಂದ” ಅಂತ ಅದೆಷ್ಟೋ ಅಜ್ಜ ಅಜ್ಜಿಯಂದಿರು ಅಥವಾ ಹಿರಿಯರು ಮಾತನಾಡಿಕೊಂಡಿದ್ದನ್ನ ನೀವು ಕೇಳಿರಬಹುದು. ಇದಕ್ಕೆ ಮುಖ್ಯವಾದ ಕಾರಣ ಅಂದಿನ ಜನರು ಬದುಕುತ್ತಿದ್ದ ರೀತಿ.

ತಾಂತ್ರಿಕವಾಗಿ (technically) ವೈದ್ಯಕೀಯವಾಗಿ (medical) ಎಲ್ಲಾ ರೀತಿಯಿಂದಲೂ ನಾವು ಮುಂದುವರೆದಿದ್ದೇವೆ ನಿಜ, ಎಷ್ಟರಮಟ್ಟಿಗೆ ಅಂದ್ರೆ ಇಂದಿನ ಚಿಕ್ಕ ಮಕ್ಕಳು ಕೂಡ ಡಿಜಿಟಲ್ ಲೈಫ್ (digital life) ನಿಂದ ಹೊರಗೆ ಬಂದು ಜೀವನ ಮಾಡಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ!

Warning to parents who give mobile phones to their children

ಹೌದು ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು (children) ಪ್ರತಿದಿನ ಐದು ಗಂಟೆಗಿಂತಲೂ ಹೆಚ್ಚು ಸಮಯ ಮೊಬೈಲ್ (mobile) ನಲ್ಲಿ ಕಳೆಯುತ್ತಾರೆ ಅಂದ್ರೆ ಇದು ಖಂಡಿತವಾಗಿಯೂ ಅಪಾಯದ ಮುನ್ಸೂಚನೆ ಎನ್ನಬಹುದು.

ಪ್ಲಾಸ್ಟಿಕ್ ವಾಟರ್ ಕ್ಯಾನ್‌ಗಳ ನೀರನ್ನು ಕುಡಿದರೆ ಗಂಡಸ್ತನಕ್ಕೆ ಕುತ್ತು! ಬೆಚ್ಚಿಬೀಳುವ ಸತ್ಯ ಬಹಿರಂಗ

ಇಂದು ಪುಟ್ಟ ಮಕ್ಕಳಿಗೆ ಕಥೆ ಹೇಳುವುದು ಚಂದಮಾಮನನ್ನು ತೋರಿಸುವುದು ಈ ಎಲ್ಲದರ ರಿಪ್ಲೇಸ್ಮೆಂಟ್ (replacement) ಮೊಬೈಲ್ ಆಗಿದೆ. ಮಕ್ಕಳು ಹಠ ಮಾಡಿದಾಗ, ಅತ್ತಾಗ ಅವರನ್ನು ಸುಮ್ಮನಿರಿಸಲು ಸುಲಭವಾಗಿ ಮೊಬೈಲ್ ಕೊಟ್ಟು ಸುಮ್ಮನಾಗಿಸುತ್ತೇವೆ. ಇದರಿಂದ ಮಕ್ಕಳ ಮೇಲೆ ಮಾನಸಿಕವಾಗಿ (mentally) ಹಾಗೂ ದೈಹಿಕವಾಗಿ (physically) ಅಪಾಯಕಾರಿ ಪರಿಣಾಮ ಬೀರುತ್ತಿದೆ.

ಇದಕ್ಕೆ ಸಾಕಷ್ಟು ಸಂಶೋಧನೆಗಳು (research) ಕೂಡ ನಡೆಯುತ್ತಿದೆ, ಪ್ರತಿದಿನ ಮಕ್ಕಳು ಕೂಡ ಐದು ಗಂಟೆಗಿಂತಲೂ ಹೆಚ್ಚು ಮೊಬೈಲ್ ಬಳಕೆ (Smartphone) ಮಾಡಿದರೆ ಅಂತ ಮಕ್ಕಳಲ್ಲಿ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ, ಜೊತೆಗೆ ದೈಹಿಕ ಕಾಯಿಲೆಗಳು ಕೂಡ ಆರಂಭವಾಗುತ್ತವೆ.

ಭಾವನಾತ್ಮಕವಾಗಿ ಹಾಗೂ ಸಾಮಾಜಿಕವಾಗಿ ಯಾರೊಂದಿಗೂ ಬೆರೆಯಲು ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಅಂತಹ ಮಕ್ಕಳಲ್ಲಿ ಕೌಶಲ್ಯದ ಕೊರತೆ ಎದ್ದು ಕಾಣಿಸುತ್ತದೆ.

ಮತ್ತೆ ಮತ್ತೆ ಟೀ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ! ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?

ಪಾಲಕರೆ ಎಚ್ಚೆತ್ತುಕೊಳ್ಳಿ!

kids Using Mobile Phone while eatingನಾವು ಊಟ ಮಾಡುವ ಒಂದೊಂದು ಅಗುಳನ್ನು ಕೂಡ ಅನುಭವಿಸಿ ತಿನ್ನಬೇಕು. ಆಗ ಮಾತ್ರ ಅದು ಸುಲಭವಾಗಿ ಜೀರ್ಣವಾಗಲು (food digestion) ಸಾಧ್ಯ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಊಟ ಮಾಡಿಸುವುದರ ಪರಿಣಾಮ ಮಕ್ಕಳಿಗೆ ತಾವು ಇದನ್ನು ತಿನ್ನುತ್ತಿದ್ದೇವೆ ಎನ್ನುವ ಪರಿವೆ ಕೂಡ ಇರುವುದಿಲ್ಲ. ಹಾಗಾಗಿ ಮಕ್ಕಳಲ್ಲಿ ಜೀರ್ಣ ಕ್ರಿಯೆಯ ಸಮಸ್ಯೆ ಕೂಡ ಉಂಟಾಗುತ್ತದೆ.

ಮೊಬೈಲ್ ಚಟ ಅಪಾಯಕಾರಿ!

ಮೊಬೈಲ್ ಅನ್ನು ಮಕ್ಕಳಿಗೆ ಕೊಡುವುದರ ಮೂಲಕ ಹಂತ ಹಂತವಾಗಿ ಅವರಲ್ಲಿ ಮೊಬೈಲ್ ಚಟವನ್ನು ಬೆಳೆಸುತ್ತಿದ್ದೇವೆ. ಇದರಿಂದಾಗಿ ಮಕ್ಕಳ ಮಾನಸಿಕ ಬೆಳವಣಿಗೆ ಆಗುವುದಿಲ್ಲ, ಸಂವಹನ (communication) ಕೌಶಲ್ಯ ಬೆಳೆಯುವುದಿಲ್ಲ.

ಬ್ಯುಟಿಫುಲ್ ತ್ವಚೆಗೆ ಹೊಳಪನ್ನು ನೀಡಲು ದಾಸವಾಳದ ಹೂವು ವರದಾನ! ಈ ರೀತಿ ಬಳಸಿ

ಮೊಬೈಲ್ ಬಳಕೆ ಮಾಡುವುದು ದೊಡ್ಡ ಅಪಾಯಕಾರಿ ಮುನ್ಸೂಚನೆಯಾಗಿದೆ. ಚಿಕ್ಕ ಮಕ್ಕಳ ಕೈಯಲ್ಲಿ ಬಣ್ಣ ಬಣ್ಣದ ಪೆನ್ಸಿಲ್ ಇರಬೇಕೇ ಹೊರತು ಅಪಾಯವನ್ನು ತಂದೊಡ್ಡುವಂತಹ ಮೊಬೈಲ್ ಫೋನ್ ಅಲ್ಲ.

ಪಾಲಕರು ಎಚ್ಚೆತ್ತುಕೊಳ್ಳದೆ ಇದ್ದಲ್ಲಿ ಖಂಡಿತವಾಗಿಯೂ ನಿಮ್ಮ ಕಣ್ಣ ಎದುರೇ ನಿಮ್ಮ ಮಗು ಅಪಾಯದಲ್ಲಿ ಸಿಲುಕಿ ಕೊಳ್ಳುವುದನ್ನು ನೋಡಬೇಕಾದೀತು. ಮಕ್ಕಳು ಹಟ ಮಾಡಿದರೆ ಅವರನ್ನು ಬೇರೆ ರೀತಿ ಗಮನ ಸೆಳೆಯಲು ಪ್ರಯತ್ನಿಸಿ, ಅದರ ಬದಲು ಮೊಬೈಲ್ ಕೊಟ್ಟು ಅವರ ಬಾಯಿ ಮುಚ್ಚಿಸಬೇಡಿ. ಇದರಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯ ಮೇಲೆ ಬಹಳ ದೊಡ್ಡ ಹಾಗೂ ಕೆಟ್ಟ ಪರಿಣಾಮ ಬೀರಬಹುದು.

Warning to parents who give mobile phones to their children