India News
ಅಪಾರ್ಟ್‌ಮೆಂಟ್‌ನಲ್ಲಿ 100 ಕೆಜಿ ಚಿನ್ನ ಮತ್ತು ಹಣದ ಬಂಡಲ್‌ಗಳು ಪತ್ತೆ
ಅಹ್ಮದಾಬಾದ್‌ನ ಪಲ್ಡಿ ಪ್ರದೇಶದ ಅಪಾರ್ಟ್‌ಮೆಂಟ್ ಒಂದರಲ್ಲಿ ಗುಪ್ತ ಮಾಹಿತಿ ಮೇರೆಗೆ ನಡೆದ ದಾಳಿಯಲ್ಲಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಫ್ಲಾಟ್‌ನಲ್ಲಿ 95 ಕಿಲೋ ಬಂಗಾರ ಮತ್ತು ಲಕ್ಷಾಂತರ ನಗದು ವಶಪಡಿಸಿಕೊಂಡಿದ್ದು, ಪ್ರಕರಣ ದೊಡ್ಡ ಮಟ್ಟದ ದಂಧೆಯ ಸುಳಿವು ನೀಡಿದೆ.
- ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ 100 ಕಿಲೋ ಚಿನ್ನ ಪತ್ತೆ
- ಅಪಾರ್ಟ್‌ಮೆಂಟ್‌ನಲ್ಲಿ ನಗದು, ಚಿನ್ನ ವಶ
- ಮಹೇಂದ್ರ ಶಾ, ಮೇಖ ಶಾ ಎಂಬ ಇಬ್ಬರು ಪರಾರಿ, ಹುಡುಕಾಟ
ಗುಜರಾತ್‌ನಲ್ಲಿ ಭಾರೀ ಚಿನ್ನದ ದಂಧೆ ಪತ್ತೆ!
Gold Seized : ಗುಜರಾತ್ ಪೊಲೀಸರು ಅಹ್ಮದಾಬಾದ್‌ನ ಪಲ್ಡಿ ಪ್ರದೇಶದ ಆವಿಷ್ಕಾರ್ ಅಪಾರ್ಟ್‌ಮೆಂಟ್‌ನಲ್ಲಿ ಶೋಧ ನಡೆಸಿದಾಗ, ಅಂದಾಜು 95.5 ಕಿಲೋ ಬಂಗಾರ (Gold) ಮತ್ತು ₹60-70 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಇದು ಅಕ್ರಮ ಚಿನ್ನದ ವಹಿವಾಟಿನ ದೊಡ್ಡ ಭಾಗವಾಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: AI Newspaper: ವಿಶ್ವದ ಮೊದಲ ಎಐ ಚಾಲಿತ ನ್ಯೂಸ್ ಪೇಪರ್ ಬಿಡುಗಡೆ!
ಈ ದಾಳಿಯಲ್ಲಿ, ಮಹೇಂದ್ರ ಶಾ ಮತ್ತು ಮೇಖ ಶಾ ಎಂಬ ಇಬ್ಬರನ್ನು ಪ್ರಾಥಮಿಕ ಆರೋಪಿಗಳೆಂದು ಗುರುತಿಸಲಾಗಿದೆ. ಆದರೆ ಅಧಿಕಾರಿಗಳು ಫ್ಲಾಟ್‌ಗೆ ಆಗಮಿಸುವ ಮುನ್ನವೇ ಅವರು ಪರಾರಿಯಾಗಿದ್ದಾರೆ. ಅವರಿಗಾಗಿ ಪೊಲೀಸ್ ಮತ್ತು ಆಂಟಿ ಟೆರರಿಸ್ಟ್ ಸ್ಕ್ವಾಡ್ (ATS) ಶೋಧ ಮುಂದುವರೆಸಿದೆ.
ಅಧಿಕಾರಿಗಳ ಪ್ರಕಾರ, ಈ ಚಿನ್ನದ ಮೂಲ ಪತ್ತೆ ಮಾಡುವ ಕೆಲಸ ಪ್ರಗತಿಯಲ್ಲಿದ್ದು, ಇದು ಅಂತರಾಷ್ಟ್ರೀಯ ಬಂಗಾರ ದಂಧೆ (Gold Smuggling) ಯ ಒಂದು ಭಾಗವಾಗಿರಬಹುದು ಎಂದು ಅನುಮಾನಿಸಲಾಗಿದೆ. ಈ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ.
100 Kg Gold Seized in Gujarat
English Summary▼