ಪಾನಿಪುರಿ ತಿಂದ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥ!

ಅಂಗಡಿಯೊಂದರಲ್ಲಿ ಪಾನಿಪುರಿ ತಿಂದ ಹಲವಾರು ಮಂದಿ ಅಸ್ವಸ್ಥರಾಗಿದ್ದಾರೆ. ಅವರಲ್ಲಿ ಅತಿಸಾರದ ಲಕ್ಷಣಗಳು ಕಂಡುಬಂದಿವೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಲುಷಿತ ಆಹಾರ ಸೇವಿಸಿ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಸುಗಂಧ ಗ್ರಾಮದ ಡೊಗಾಚಿಯಾ ಪ್ರದೇಶದ ಅಂಗಡಿಯೊಂದರಲ್ಲಿ ಪಾನಿಪುರಿ ತಿಂದ ಹಲವಾರು ಮಂದಿ ಅಸ್ವಸ್ಥರಾಗಿದ್ದಾರೆ. ಅವರಲ್ಲಿ ಅತಿಸಾರದ ಲಕ್ಷಣಗಳು ಕಂಡುಬಂದಿವೆ.

ಪಾನಿಪುರಿ ತಿಂದವರಿಗೆಲ್ಲ ವಾಂತಿ, ಬೇಧಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಘಟನೆ ಕುರಿತು ಮಾಹಿತಿ ಪಡೆದ ನಂತರ ಆರೋಗ್ಯ ಇಲಾಖೆಯ ವಿಶೇಷ ತಂಡಗಳನ್ನು ಕಳುಹಿಸಿ ರೋಗಿಗಳಿಗೆ ಔಷಧಗಳನ್ನು ನೀಡಲಾಯಿತು. ತೀವ್ರ ಅಸ್ವಸ್ಥರಾಗಿದ್ದವರನ್ನು ತಂಡ ಗುರುತಿಸಿ ಆಸ್ಪತ್ರೆಗೆ ದಾಖಲಿಸಿದೆ.

ರಸ್ತೆಯ ಅಂಗಡಿಯಲ್ಲಿ ಪಾನಿಪುರಿ ತಿಂದು ಅಸ್ವಸ್ಥರಾದವರಲ್ಲಿ ಡೊಗಾಚಿಯಾ, ಬಹಿರ್ ರಣಗಾಚಾ ಮತ್ತು ಮಕಲ್ತಾಲ್ ಪ್ರದೇಶಗಳಿಗೆ ಸೇರಿದವರು ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ.

100 people fall sick after eating pani puri