ಆಟವಾಡುವಾಗ ವಿಕ್ಸ್ ಮುಚ್ಚಳ ನುಂಗಿ 14 ತಿಂಗಳ ಹೆಣ್ಣು ಮಗು ಸಾವು

ರಾಜಸ್ಥಾನದಲ್ಲಿ ದುರಂತ ಘಟನೆ ನಡೆದಿದೆ, ಆಟವಾಡುತ್ತಿದ್ದಾಗ ವಿಕ್ಸ್ ಮುಚ್ಚಳ ನುಂಗಿ 14 ತಿಂಗಳ ಮಗು ಸಾವನ್ನಪ್ಪಿದೆ.

- - - - - - - - - - - - - Story - - - - - - - - - - - - -

14-Month-Old Toddler Dies : ಆಟವಾಡುತ್ತಿದ್ದಾಗ ವಿಕ್ಸ್ ಮುಚ್ಚಳ ನುಂಗಿ (Swallowing Vicks Cap) ಮಗು ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ (Rajasthan) ನಡೆದಿದೆ. 14 ತಿಂಗಳ ಮಗು ಆಟವಾಡುತ್ತಿರುವುದನ್ನು ಪೋಷಕರು ಗಮನಿಸಿರಲಿಲ್ಲ. ವಿಕ್ಸ್ ನುಂಗಿದ ಕೂಡಲೇ ಮಗುವಿನ ಮನೆಯವರು ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲದ ಕಾರಣ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ನಂತರ, ಕುಟುಂಬ ಸದಸ್ಯರು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ಈ ವೇಳೆ ಮಾರ್ಗಮಧ್ಯೆ ಮಗು ಮೃತಪಟ್ಟಿದೆ.

ಮಗು ಸಾವನ್ನಪ್ಪಿದ ಬಳಿಕ ಕುಟುಂಬಸ್ಥರು ಮತ್ತೆ ಆಸ್ಪತ್ರೆಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ವೈದ್ಯರ ಕೊರತೆಯಿಂದ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಮಗು ಪ್ರಾಣ ಕಳೆದುಕೊಂಡಿದೆ ಎಂದು ಆರೋಪಿಸಿದರು. ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆಯ ಗೇಟ್‌ಗೆ ಬೀಗ ಜಡಿದು ವೈದ್ಯಕೀಯ ಇಲಾಖೆ ವಿರುದ್ಧ ಘೋಷಣೆ ಕೂಗಿದರು.

ಆಟವಾಡುವಾಗ ವಿಕ್ಸ್ ಮುಚ್ಚಳ ನುಂಗಿ 14 ತಿಂಗಳ ಹೆಣ್ಣು ಮಗು ಸಾವು

ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸಿಬ್ಬಂದಿ ಕೊರತೆ ಬಗ್ಗೆ ಅಸಹನೆ ವ್ಯಕ್ತಪಡಿಸಿದರು. ಮಗುವಿನ ಸಾವಿನಿಂದ ಕುಟುಂಬ ತೀವ್ರ ದುಃಖದಲ್ಲಿದೆ.

14-Month-Old Toddler Dies After Swallowing Vicks Cap in Rajasthan

Related Stories