ತಮಿಳುನಾಡಿನಲ್ಲಿ ಜಲ್ಲಿಕಟ್ಟು ದುರಂತ, 14 ವರ್ಷದ ಬಾಲಕ ಸಾವು
Jallikattu Tragedy (Kannada News): ತಮಿಳುನಾಡಿನ (Tamil Nadu) ಜಲ್ಲಿಕಟ್ಟು ವೇಳೆ ಮತ್ತೊಂದು ದುರಂತ ಸಾವು ದಾಖಲಾಗಿದೆ. ಈ ವೇಳೆ 14 ವರ್ಷದ ಬಾಲಕ ಮೃತಪಟ್ಟಿದ್ದಾನೆ (14 Years Old Boy Dies). ಆತ ಹೇಗೆ ಸತ್ತಿದ್ದಾನೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಾಲಕನ ಸಾವಿನೊಂದಿಗೆ ಜಲ್ಲಿಕಟ್ಟು ಸಾವಿನ ಸಂಖ್ಯೆ ಆರಕ್ಕೇರಿದೆ. ಪೊಂಗಲ್ ಹಬ್ಬದ ಅಂಗವಾಗಿ ತಮಿಳುನಾಡಿನ ಧರ್ಮಪುರಿಯಲ್ಲಿ ಈ ಜಲ್ಲಿಕಟ್ಟು ಕಾರ್ಯಕ್ರಮ ಸಂಪ್ರದಾಯವಾಗಿ ನಡೆಯುತ್ತಿದೆ.
ಧರ್ಮಪುರಿಯಲ್ಲಿ ನಡೆದ ಜಲ್ಲಿಕಟ್ಟು ವೀಕ್ಷಿಸಲು 14 ವರ್ಷದ ಗೋಕುಲ್ (Gokul) ಎಂಬ ಬಾಲಕ ತನ್ನ ಸಂಬಂಧಿಕರೊಂದಿಗೆ ಬಂದಿದ್ದ. ಬಾಲಕನಿಗೆ ಗೂಳಿಯೊಂದು ಗುದ್ದಿದ್ದರಿಂದ ಹೊಟ್ಟೆಗೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಪೊಲೀಸರು ಜಲ್ಲಿಕಟ್ಟು ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದು, ಗೂಳಿ ಹಿಡಿಯುವ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಬಾಲಕನಿಗೆ ಗೂಳಿ ಹೇಗೆ ಗುದ್ದಿದೆ ಎಂದು ತನಿಖೆ ನಡೆಸುತ್ತಿದ್ದಾರೆ. ಗೋಕುಲ್‌ನೊಂದಿಗೆ ಜಲ್ಲಿಕಟ್ಟು ಸಾವಿನ ಸಂಖ್ಯೆ ಆರಕ್ಕೆ ತಲುಪಿದೆ.
ಈ ಆಟವನ್ನು ಪೊಂಗಲ್ ಹಬ್ಬದ ಅಂಗವಾಗಿ ನಡೆಸಲಾಗುತ್ತದೆ. ಜಲ್ಲಿಕಟ್ಟು ಒಂದು ಗೂಳಿಯನ್ನು ಗುಂಪಿನೊಳಗೆ ಬಿಡುವ ಮತ್ತು ಅದನ್ನು ಹಿಡಿಯಲು ಪ್ರಯತ್ನಿಸುವ ಆಟ. ಜಲ್ಲಿಕಟ್ಟು ಸ್ಪರ್ಧೆಯಲ್ಲಿ 300 ಹೋರಿಗಳು ಮತ್ತು 150 ಪ್ರೇಕ್ಷಕರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದರೆ, ಸುಮಾರು 10,000 ಗೂಳಿಗಳು ಮತ್ತು 5,400 ಗೂಳಿ ಪಳಗಿಸುವವರು ನೋಂದಣಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, 800 ಗೂಳಿಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಆರು ಜನ ಮೃತಪಟ್ಟಿದ್ದಾರೆ.
14 Years Old Boy Dies During Jallikattu In Tamil Nadu