15,000 ಅಮರನಾಥ ಯಾತ್ರಿಕರು ಸುರಕ್ಷಿತ !

ಪ್ರವಾಹ ದುರಂತದಿಂದ 15,000 ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ

Bengaluru, Karnataka, India
Edited By: Satish Raj Goravigere

ಶ್ರೀನಗರ: ನಿನ್ನೆ ಸಂಜೆ ಅಮರನಾಥ ಗುಹೆಯಲ್ಲಿ ಪ್ರವಾಹ ಅವಾಂತರ ಸೃಷ್ಟಿಸಿದ್ದು ಗೊತ್ತೇ ಇದೆ. ಇದರಿಂದ ಗುಹೆ ಪ್ರದೇಶದ ಬಳಿ ಹಲವು ಯಾತ್ರಾರ್ಥಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಐಟಿಬಿಪಿ ಯೋಧರು ತಿಳಿಸಿದ್ದಾರೆ. ಪ್ರವಾಹ ದುರಂತದಿಂದ 15,000 ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅವರು ಹೇಳಿದರು. ಎಲ್ಲಾ ಯಾತ್ರಾರ್ಥಿಗಳನ್ನ ಸ್ಥಳಾಂತರಿಸಲಾಗಿದೆ. ಗುಹೆಯಿಂದ ಪಂಜತರ್ನಿಯವರೆಗೆ ಐಟಿಬಿಪಿ ಯೋಧರು ಭದ್ರತೆ ಒದಗಿಸಿದ್ದಾರೆ. ಇದುವರೆಗೆ 15 ಮಂದಿ ಸಜೀವ ಸಮಾಧಿಯಾಗಿದ್ದು, ಹತ್ತಾರು ಯಾತ್ರಾರ್ಥಿಗಳು ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಐಟಿಬಿಪಿ ಮತ್ತು ಎನ್‌ಡಿಆರ್‌ಎಫ್ ಪಡೆಗಳು ಶನಿವಾರ ಬೆಳಗ್ಗೆಯಿಂದಲೇ ಜಂಟಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಸೇನಾ ಹೆಲಿಕಾಪ್ಟರ್‌ಗಳು ಅಮರನಾಥ ಯಾತ್ರಾರ್ಥಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿವೆ.

15,000 ಅಮರನಾಥ ಯಾತ್ರಿಕರು ಸುರಕ್ಷಿತ !

ಇಂದು ಬೆಳಗ್ಗೆ ಹೆಲಿಕಾಪ್ಟರ್‌ನಲ್ಲಿ ಆರು ಯಾತ್ರಾರ್ಥಿಗಳನ್ನು ನೀಲಗ್ರಾರ್ ಹೆಲಿಪ್ಯಾಡ್‌ಗೆ ಕರೆತರಲಾಯಿತು. ಅಲ್ಲಿ ವೈದ್ಯಕೀಯ ತಂಡಗಳು ಚಿಕಿತ್ಸೆ ನೀಡುತ್ತಿವೆ. ನಾಪತ್ತೆಯಾದವರ ಪತ್ತೆಗಾಗಿ ಪರ್ವತ ರಕ್ಷಣಾ ತಂಡಗಳು ತನಿಖೆ ನಡೆಸುತ್ತಿವೆ. ಅಮರನಾಥ ಗುಹೆಯಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಎರಡು ರಕ್ಷಣಾ ನಾಯಿಗಳನ್ನು ಹೆಲಿಕಾಪ್ಟರ್‌ನಲ್ಲಿ ಕರೆದೊಯ್ಯಲಾಗಿದೆ