ಪಿಎಂ ಕಿಸಾನ್ ಯೋಜನೆಯಿಂದ 35 ಲಕ್ಷ ರೈತರ ಹೆಸರು ಡಿಲೀಟ್! ಕಾರಣ ಏನು ಗೊತ್ತಾ?

ಪಿಎಂ ಕಿಸಾನ್ ಯೋಜನೆಯ 21ನೇ ಹಂತದ ಹಣ ಬಿಡುಗಡೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಅರ್ಹರಲ್ಲದವರ ಹೆಸರುಗಳ ಅಳಿಕೆಯೊಂದಿಗೆ, ಸರ್ಕಾರ ಹೊಸ ಪರಿಶೀಲನೆ ಪ್ರಕ್ರಿಯೆ ಆರಂಭಿಸಿದೆ.

  • 35 ಲಕ್ಷ ರೈತರು ಪಿಎಂ ಕಿಸಾನ್ ಪಟ್ಟಿಯಿಂದ ಡಿಲೀಟ್
  • ಇ-ಕೆವೈಸಿ (e-KYC) ಅಪ್‌ಡೇಟ್ ಕಡ್ಡಾಯ
  • ಅರ್ಹರಿಗೆ ಮುಂದಿನ ಹಂತದಲ್ಲಿ ಹಣ ಬಿಡುಗಡೆ

PM Kisan Scheme: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 21ನೇ ಹಂತದ ಹಣಕ್ಕಾಗಿ ದೇಶದಾದ್ಯಂತ ರೈತರು ಕಾಯುತ್ತಿದ್ದಾರೆ. ಆದರೆ ಈ ಬಾರಿ ಹಣದ ಬಿಡುಗಡೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕಾರಣ, ಸರ್ಕಾರ ಪಿಎಂ ಕಿಸಾನ್ ಪಟ್ಟಿಯಲ್ಲಿನ ಅರ್ಹರಲ್ಲದವರನ್ನು ಗುರುತಿಸಿ ಅಳಿಸುವ ಪ್ರಕ್ರಿಯೆ ಆರಂಭಿಸಿದೆ.

ಕೇಂದ್ರ ಸರ್ಕಾರದ ವರದಿ ಪ್ರಕಾರ, ಕೆಲವರು ಯೋಜನೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಪಿಎಮ್ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ “ಕ್ಲೀನ್ ಅಪ್ ಡ್ರೈವ್” ಹೆಸರಿನಲ್ಲಿ ರಾಷ್ಟ್ರವ್ಯಾಪಕ ತನಿಖೆ ಪ್ರಾರಂಭವಾಗಿದೆ. ಈ ತನಿಖೆಯಿಂದ ಈಗಾಗಲೇ 35.44 ಲಕ್ಷಕ್ಕೂ ಹೆಚ್ಚು ರೈತರ ಹೆಸರುಗಳು ಪಟ್ಟಿಯಿಂದ ಅಳಿಸಲಾಗಿದೆ.

ಅನೇಕ ಸಂದರ್ಭಗಳಲ್ಲಿ, ಒಂದು ಕುಟುಂಬದ ಸದಸ್ಯರು ಒಟ್ಟಿಗೆ ಹಲವರು ಲಾಭ ಪಡೆಯುತ್ತಿರುವುದು ಪತ್ತೆಯಾಗಿದೆ. ಸರ್ಕಾರದ ನಿಯಮದ ಪ್ರಕಾರ, ಪತಿ, ಪತ್ನಿ ಮತ್ತು ಅಪ್ರಾಪ್ತ ಮಕ್ಕಳು ಸೇರಿ ಒಂದೇ ಲಾಭದಾಯಕ ಘಟಕವಾಗಿ ಪರಿಗಣಿಸಲಾಗುತ್ತದೆ. ಆದರೆ ಕೆಲವರು ಭೂಮಿ ಖರೀದಿಯ ನಂತರವೂ ಪಿಎಂ ಕಿಸಾನ್ ಹಣ ಪಡೆಯುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: ಮೋದಿಜಿಯಿಂದ ರೈತರಿಗೆ ಬಂಪರ್ ಸುದ್ದಿ, ₹3 ಲಕ್ಷ ಸಾಲ ಸೌಲಭ್ಯ! ಆನ್‌ಲೈನ್‌ನಲ್ಲೇ ಅರ್ಜಿ ಹಾಕಿ

ಸರ್ಕಾರ ಈ ಪ್ರಕರಣಗಳನ್ನು ಕಠಿಣವಾಗಿ ಪರಿಗಣಿಸಿ ಕ್ರಮ ಕೈಗೊಂಡಿದೆ. ಆದರೂ ಸಹ, ಅರ್ಹ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಅವರ ಹೆಸರು ತಪ್ಪಾಗಿ ಅಳಿಸಲ್ಪಟ್ಟಿದ್ದರೆ, ಮುಂದಿನ ಹಂತದಲ್ಲಿ ಮರುಸೇರಿಸಿ ಎರಡು ಹಂತದ ಹಣವನ್ನು ಒಟ್ಟಿಗೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದೆ.

ಪ್ರಸ್ತುತ, ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ನಂತರವೇ 21ನೇ ಹಂತದ ಹಣ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸರ್ಕಾರ ಇನ್ನೂ ಅಧಿಕೃತ ದಿನಾಂಕ ಘೋಷಿಸದಿದ್ದರೂ, ಈ ತಿಂಗಳ ಅಂತ್ಯದೊಳಗೆ ಹಣ ರೈತರ ಖಾತೆಗೆ (Bank Account) ಬರಬಹುದು ಎಂಬ ಅಂದಾಜು ವ್ಯಕ್ತವಾಗಿದೆ.

ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣದಿದ್ದರೆ, ಮೊದಲು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ನಿಮ್ಮ ಸ್ಥಿತಿ ಪರಿಶೀಲಿಸಿ. ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ತಕ್ಷಣ ಮಾಡಬೇಕು. ಆಧಾರ್ ನಂಬರನ್ನು ನಮೂದಿಸಿ OTP ಮೂಲಕ ದೃಢೀಕರಣ ಮಾಡಬಹುದು. ಅಗತ್ಯವಿದ್ದರೆ ಸಮೀಪದ ಕಾಮನ್ ಸರ್ವಿಸ್ ಸೆಂಟರ್‌ನಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಬ್ಯಾಂಕ್ ಖಾತೆ ಮತ್ತು ಆಧಾರ್ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಎಲ್ಲ ಮಾಹಿತಿ ಸರಿಯಾಗಿದ್ದರೆ ಮುಂದಿನ ಹಂತದಲ್ಲಿ ನಿಮ್ಮ ಖಾತೆಗೆ ಹಣ ಜಮೆಯಾಗುವ ಸಾಧ್ಯತೆ ಖಚಿತ.

35 Lakh Farmers Removed from PM Kisan List

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories