ಬಡವರಿಗೆ ಮನೆ, ಪಿಎಂ ಆವಾಸ್ ಯೋಜನೆ! 9 ರಾಜ್ಯಗಳಲ್ಲಿ 40 ಲಕ್ಷ ಮನೆಗಳಿಗೆ ಅನುಮೋದನೆ
ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ (PMAY-G) ಅಡಿಯಲ್ಲಿ ಡಿಸೆಂಬರ್ 2024 ಮತ್ತು ಜನವರಿ 2025ರ ಅವಧಿಯಲ್ಲಿ ಒಂಬತ್ತು ರಾಜ್ಯಗಳಲ್ಲಿ 46.56 ಲಕ್ಷ ಮನೆಗಳ ಗುರಿ ಇಡಲಾಗಿತ್ತು, ಈ ಪೈಕಿ 39.82 ಲಕ್ಷ ಮನೆಗಳಿಗೆ ಅನುಮೋದನೆ ನೀಡಲಾಗಿದೆ.
- 2024-25ರಲ್ಲಿ 84.37 ಲಕ್ಷ ಮನೆಗಳ ಗುರಿ
- 9 ರಾಜ್ಯಗಳಲ್ಲಿ 40 ಲಕ್ಷ ಮನೆಗಳಿಗೆ ಅನುಮೋದನೆ
- 3.37 ಕೋಟಿ ಮನೆಗಳಿಗೆ ಒಟ್ಟು ಮಂಜೂರಾತಿ
Pradhan Mantri Gramin Awas Yojana : ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ (PMAY-G) ಅಡಿ 2024-25ನೇ ಆರ್ಥಿಕ ವರ್ಷದಲ್ಲಿ ಒಟ್ಟು 84,37,139 ಮನೆಗಳ ಗುರಿ ಇಡಲಾಗಿತ್ತು. ಈ ಯೋಜನೆ ಅಡಿ ಕರ್ನಾಟಕ ಸೇರಿದಂತೆ 18 ರಾಜ್ಯಗಳಲ್ಲಿ ಮನೆ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಲಾಗಿದೆ.
ಇದರಲ್ಲಿ ತಮಿಳುನಾಡು, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ರಾಜಸ್ಥಾನ, ಒಡಿಶಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ, ಬಿಹಾರ್, ಛತ್ತೀಸ್‌ಗಢ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಡಿಸೆಂಬರ್ 2024 ಮತ್ತು ಜನವರಿ 2025ರ ಅವಧಿಯಲ್ಲಿ ಒಂಬತ್ತು ರಾಜ್ಯಗಳಲ್ಲಿ 46.56 ಲಕ್ಷ ಮನೆಗಳ ಗುರಿ ನಿಗದಿಯಾಗಿತ್ತು. ಆದರೆ, ಇದರಲ್ಲಿ 39.82 ಲಕ್ಷ ಮನೆಗಳಿಗೆ ಅನುಮೋದನೆ ದೊರಕಿದೆ. ಈ ರಾಜ್ಯಗಳಲ್ಲಿ ಕರ್ನಾಟಕ, ತಮಿಳುನಾಡು, ಅಸ್ಸಾಂ, ಬಿಹಾರ್, ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನ್ ಸೇರಿವೆ.
ಪಿಎಂ ಆವಾಸ್ ಯೋಜನೆಯ ಮಹತ್ವ:
ಈ ಯೋಜನೆ ಬಡವರಿಗಾಗಿ ಕೇಂದ್ರ ಸರ್ಕಾರ ಆರಂಭಿಸಿದ ಮಹತ್ವದ ಯೋಜನೆಯಾಗಿದೆ. 2015ರಲ್ಲಿ ಪ್ರಾರಂಭವಾದ ಈ ಯೋಜನೆಯು, ನಗರ ಮತ್ತು ಗ್ರಾಮೀಣ ಭಾಗದ ಬಡವರಿಗೆ ಮನೆ ನಿರ್ಮಾಣದ ಸಹಾಯವನ್ನು ನೀಡುತ್ತಿದೆ.
ಸರ್ಕಾರ ಫಲಾನುಭವಿಗಳಿಗೆ ಹಣಕಾಸಿನ ನೆರವು ನೀಡುವುದರೊಂದಿಗೆ, ಈಗಾಗಲೇ ನಗರ ಪ್ರದೇಶದಲ್ಲಿ 1.18 ಲಕ್ಷ ಮನೆಗಳನ್ನು ಮಂಜೂರು ಮಾಡಿದೆ, 90 ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣ ಪೂರ್ಣಗೊಂಡಿದೆ.
ಗ್ರಾಮೀಣ ಆವಾಸ್ ಯೋಜನೆಯಡಿಯಲ್ಲಿ 3.37 ಕೋಟಿ ಮನೆಗಳಿಗೆ ಮಂಜೂರಾತಿ ನೀಡಲಾಗಿದ್ದು, 2.69 ಕೋಟಿ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಇದಕ್ಕಾಗಿ 3.49 ಲಕ್ಷ ಕೋಟಿ ರೂ. ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ.
40 Lakh Houses Approved Under PMAY-G in Nine States
Our Whatsapp Channel is Live Now 👇