ಕೇಂದ್ರದಿಂದ ಇನ್ನೊಂದು ಹೊಸ ಯೋಜನೆ! ಅನ್ನಭಾಗ್ಯ ಯೋಜನೆ ಜೊತೆಗೆ ಮತ್ತೆ 5 ಕೆಜಿ ಅಕ್ಕಿ ಉಚಿತ
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ರೇಷನ್ ಕೊಡಲಾಗುತ್ತದೆ ಎನ್ನುವುದು ಗೊತ್ತಿರುವ ವಿಚಾರ. ನಮ್ಮ ರಾಜ್ಯದಲ್ಲೇ ಈಗ ಕಾಂಗ್ರೆಸ್ ಸರ್ಕಾರವು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರಿಗಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ
ನಮ್ಮ ದೇಶದಲ್ಲಿ ಬಡತನದ ರೇಖೆಗಿಂತ ಕಡಿಮೆ ಇರುವ ಜನರಿಗೆ, ಕಷ್ಟದಲ್ಲಿ ಇರುವವರಿಗೆ ಸಾಕಷ್ಟು ಯೋಜನೆಗಳನ್ನು (Govt Schemes) ಜಾರಿಗೆ ತರಲಾಗುತ್ತಿದೆ. ಈ ಯೋಜನೆಗಳ ಮೂಲಕ ಅವರಿಗೆ ಸಹಾಯ ಮಾಡಲಾಗುತ್ತದೆ.
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ರೇಷನ್ ಕೊಡಲಾಗುತ್ತದೆ ಎನ್ನುವುದು ಗೊತ್ತಿರುವ ವಿಚಾರ. ನಮ್ಮ ರಾಜ್ಯದಲ್ಲೇ ಈಗ ಕಾಂಗ್ರೆಸ್ ಸರ್ಕಾರವು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರಿಗಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ
ಈ ಯೋಜನೆಯಲ್ಲಿ ಈ ಎರಡು ಕಾರ್ಡ್ ಗಳನ್ನು ಹೊಂದಿರುವ ಮನೆಯ ಸದಸ್ಯರಿಗೆ, ಪ್ರತಿ ವ್ಯಕ್ತಿಗೆ 5ಕೆಜಿ ಅಕ್ಕಿ ಜೊತೆಗೆ 5ಕೆಜಿ ಅಕ್ಕಿಯ ಹಣವನ್ನು ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಪೆನ್ಶನ್ ಕ್ಯಾನ್ಸಲ್! ಸುಳ್ಳು ಮಾಹಿತಿ, ತಪ್ಪು ದಾಖಲೆ ನೀಡಿದ್ದ ಇಂತಹವರ ಪಿಂಚಣಿ ರದ್ದು ಮಾಡಿದ ಸರ್ಕಾರ
ಇದು ರಾಜ್ಯ ಸರ್ಕಾರದಿಂದ ಜನರಿಗೆ ಸಿಗುತ್ತಿರುವ ಸೌಲಭ್ಯ. ಆದರೆ ಕೇಂದ್ರ ಸರ್ಕಾರದಿಂದ ಕೂಡ ಜನರಿಗಾಗಿ ವಿಶೇಷ ಸೌಲಭ್ಯ ಇದೆ, ಅದರಿಂದ ಉಚಿತವಾಗಿ ಪಡಿತರ ಸಿಗುತ್ತದೆ ಎನ್ನುವುದು ಹಲವರಿಗೆ ಗೊತ್ತಿಲ್ಲದೆ ಇರುವ ವಿಚಾರ ಆಗಿದೆ.
ಕೇಂದ್ರ ಸರ್ಕಾರವು ಬಡವರ ಪರವಾಗಿದೆ ಎಂದು ನಮಗೆಲ್ಲ ಗೊತ್ತೇ ಇದೆ. 2020ರಲ್ಲಿ ಕೋವಿಡ್ ಸೋಂಕು ದೇಶಕ್ಕೆ ಅಪ್ಪಳಿಸಿದಾಗ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ಇಡೀ ದೇಶಕ್ಕೆ ಲಾಕ್ ಡೌನ್ ವಿಧಿಸಿ ಯಾರು ಕೂಡ ಮನೆಯಿಂದ ಹೊರಗಡೆ ಬರದೆ ಇರುವ ಹಾಗೆ ಘೋಷಿಸಿದರು.
ಪ್ರತಿಯೊಬ್ಬರು ಮನೆಯಲ್ಲೇ ಉಳಿದು, ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಹೋದಾಗ ಜನರಿಗೆ ಪ್ರತಿತಿಂಗಳು ಬೇಕಾಗುವ ಆಹಾರ ಪದಾರ್ಥಗಳನ್ನು ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿತು. ಆ ವೇಳೆ ಜನರಿಗೆ ಉಚಿತ ಅಕ್ಕಿ ಯೋಜನೆಯನ್ನು ಸಹ ಘೋಷಿಸಿತ್ತು. ಈ ಯೋಜನೆಯ ಹೆಸರು ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ..
ಲಾಕ್ ಡೌನ್ ವೇಳೆ ಶುರುವಾದ ಈ ಯೋಜನೆ ಇಂದ ಮೋದಿ ಅವರ ಸರ್ಕಾರವು ಜನರಿಗೆ 5ಕೆಜಿ ಉಚಿತ ನೀಡುವುದಾಗಿ ಘೋಷಿಸಿ, ಈ ಅಕ್ಕಿಯನ್ನು ದೇಶದ ಮನೆ ಮನೆಗೆಳಿಗೆ ಒದಗಿಸಲಾಗಿತ್ತು. ಸುಮಾರು 80 ಕೋಟಿ ಜನರಿಗೆ ಪ್ರಧಾನ ಮಂತ್ರಿ ಅವರ ಈ ಅಕ್ಕಿ ಯೋಜನೆ ಇಂದ ಪ್ರಯೋಜನ ಸಿಕ್ಕಿತ್ತು, ಈ ಯೋಜನೆಯು ಆ ವೇಳೆಯಲ್ಲಿ ಸಾಕಷ್ಟು ಜನರ ಬದುಕನ್ನು ಕಾಪಾಡಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ (Pradhan Mantri Garib Kalyan Yojana) ಮೂಲಕ ಕಷ್ಟದಲ್ಲಿ ಇರುವ ಜನರಿಗೆ ಉಚಿತವಾಗಿ ಅಕ್ಕಿಯನ್ನು ನೀಡುತ್ತಾ ಬರುತ್ತಿದೆ ಕೇಂದ್ರ ಸರ್ಕಾರ. ಕಳೆದ 3 ವರ್ಷದಿಂದ ದೇಶದಲ್ಲಿರುವ ಬಡವರಿಗೆ ಫ್ರೀಯಾಗಿ ಅಕ್ಕಿ ಕೊಡುತ್ತಾ ಬರಲಾಗುತ್ತಿದೆ.
ದೇಶದ ಯಾವ ಪ್ರಜೆಗೂ ಕೂಡ ಮೋಸ ಆಗಬಾರದು ಎಂದು ಪ್ರಧಾನ ಮಂತ್ರಿ ಗಳು ಒಂದು ದೇಶ ಒಂದು ರೇಶನ್ ಕಾರ್ಡ್ ಯೋಜನೆಯನ್ನು ಜಾರಿಗೆ ತರುವ ಮೂಲಕ, ನಮ್ಮ ದೇಶದಲ್ಲಿ ಕಷ್ಟದಲ್ಲಿ ಇರುವವರಿಗೆ ಯಾವುದೇ ತೊಂದರೆ ಆಗಬಾರದು ಎಂದು, ಈ ಯೋಜನೆಯ ಸೌಲಭ್ಯ ಎಲ್ಲರಿಗು ಸರಿಯಾಗಿ ಸಿಗಬೇಕು ಎಂದು ಮೋದಿ ಅವರು ನಿರ್ಧರಿಸಿದ್ದರು.
ಈ ದಿನಕ್ಕೂ ಸಹ ಈ ಯೋಜನೆಯ ಮೂಲಕ ಬಡಜನರಿಗೆ ಉಚಿತ ಅಕ್ಕಿ ಕೊಡಲಾಗುತ್ತಿದೆ. ಇನ್ನು ಈ ಯೋಜನೆಯ ವಿಸ್ತರಣೆ ಬಗ್ಗೆ ಚರ್ಚಿಸಲಾಗುತ್ತಿದ್ದು ಇನ್ನು ಮುಂದೆಯೂ ಯೋಜನೆಯನ್ನು ವಿಸ್ತರಿಸುವ ಆಲೋಚನೆಯನ್ನು ಮಾಡಲಾಗುತ್ತಿದೆ. ಇದರಿಂದ ನಾನಾ ಕುಟುಂಬಗಳಿಗೆ ಸಹಾಯವಾಗಲಿದೆ
5 kg rice free again with Pradhan Mantri Garib Kalyan Yojana