ಪೆನ್ಶನ್ ಕ್ಯಾನ್ಸಲ್! ಸುಳ್ಳು ಮಾಹಿತಿ, ತಪ್ಪು ದಾಖಲೆ ನೀಡಿದ್ದ ಇಂತಹವರ ಪಿಂಚಣಿ ರದ್ದು ಮಾಡಿದ ಸರ್ಕಾರ

Story Highlights

ಸುಳ್ಳು ಮಾಹಿತಿ ನೀಡಿ ಪೆನ್ಶನ್ ಪಡೆಯುತ್ತಿರುವ ಜನರ ಪೆನ್ಶನ್ ಅನ್ನು ಕ್ಯಾನ್ಸಲ್ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ವಿಚಾರದ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಜನರಿಗಾಗಿ ಹಲವು ಉತ್ತಮವಾದ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಿರಿಯ ನಾಗರೀಕರಿಗೆ ಹೊಸದೊಂದು ಪೆನ್ಶನ್ ಯೋಜನೆಯನ್ನು (Pension Scheme) ಜಾರಿಗೆ ತಂದಿದೆ.

ಇದರಿಂದ ಬಡತನದಲ್ಲಿರುವ ಹಿರಿಯ ನಾಗರೀಕರಿಗೆ ಆರ್ಥಿಕವಾಗಿ ಸಹಾಯ ಮಾಡುವ ಸಲುವಾಗಿ ಈ ಒಂದು ಹೊಸ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಕೇಂದ್ರ ಸರ್ಕಾರ ಈಗ ವಿವಿಧ ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಕೆಲವು ಜನರು ತಮಗೆ ಅರ್ಹತೆ ಇಲ್ಲದೆ ಇದ್ದರು ಕೂಡ ಈ ಯೋಜನೆಯ ಮೂಲಕ ಪೆನ್ಶನ್ ಪಡೆಯುತ್ತಿದ್ದಾರೆ. ಈ ರೀತಿ ಸುಳ್ಳು ಮಾಹಿತಿ ನೀಡಿ ಪೆನ್ಶನ್ ಪಡೆಯುತ್ತಿರುವ ಜನರ ಪೆನ್ಶನ್ ಅನ್ನು ಕ್ಯಾನ್ಸಲ್ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ವಿಚಾರದ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

ಜನ್ ಧನ್ ಅಕೌಂಟ್ ಹೊಂದಿರುವವರಿಗೆ ಕೇಂದ್ರದಿಂದ ಬಿಗ್ ಅಪ್ಡೇಟ್! ಸಿಗಲಿದೆ ನಿಮಗೆ ಸುಲಭ ಸಾಲ ಸೌಲಭ್ಯ

ಸಾಕಷ್ಟು ಜನರು ತಮಗೆ ಅರ್ಹತೆ ಇಲ್ಲದೆ ಇದ್ದರು ಕೂಡ ಸರ್ಕಾರದ ಈ ಯೋಜನೆಯ ಮೂಲಕ ಪೆನ್ಶನ್ ಪಡೆಯುತ್ತಿದ್ದಾರೆ. ಈ ವಿಚಾರದ ಬಗ್ಗೆ ಹಲವು ದೂರುಗಳು ಸಹ ಕೇಳಿಬರುತ್ತಿದೆ. ಈ ಬಗ್ಗೆ ತೆರಿಗೆ ಇಲಾಖೆಯು 2022ರ ಸೆಪ್ಟೆಂಬರ್ ಇಂದಲೇ ಕ್ರಮ ತೆಗೆದುಕೊಂಡು ಪರಿಶೀಲನೆಯನ್ನು ಕೂಡ ನಡೆಸುವುದಕ್ಕೆ ಶುರು ಮಾಡಿದೆ. ಅರ್ಹತೆ ಇಲ್ಲದೆ ಪೆನ್ಶನ್ ಪಡೆಯುತ್ತಿರುವವರ ಸೌಲಭ್ಯವನ್ನು ಕ್ಯಾನ್ಸಲ್ ಮಾಡುತ್ತಿದೆ.

ಕೇಂದ್ರ ಸರ್ಕಾರ ಈಗ ಸರಿಯಾದ ದಾಖಲೆ ಕೊಡದೆ ಇರುವವರ, ಸುಳ್ಳು ದಾಖಲೆ (Fake Documents) ನೀಡಿರುವವರ, ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವವರ ಪೆನ್ಶನ್ ಕ್ಯಾನ್ಸಲ್ ಮಾಡಿದೆ. ಈ ನಿಟ್ಟಿನಲ್ಲಿ 3 ಕೋಟಿ ಹಣವನ್ನು ಕೂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ.

Free Scheme: ಫ್ರೀ ಅನ್ನಪೂರ್ಣ ಫುಡ್ ಸ್ಕೀಮ್! ಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಸೇರಿದಂತೆ ಎಲ್ಲವೂ ಉಚಿತ

Pension Schemeಪೆನ್ಶನ್ ಗಾಗಿ ಫೇಕ್ ಮಾಹಿತಿ ನೀಡುತ್ತಿರುವ ಜನರ ಸಂಖ್ಯೆ ಜಾಸ್ತಿ ಆಗುತ್ತಿರುವುದರಿಂದ ನವೋದಯ ಮೊಬೈಲ್ ಆಧಾರಿತ ಸಮಗ್ರ ವಾರ್ಷಿಕ ಪರಿಶೀಲನೆಯ ಕಾರ್ಯ ಶುರುಮಾಡಲಾಗಿದೆ, ಈ ಪರಿಶೀಲನೆಯ ಸತ್ಯಹೊರಬಂದಿದ್ದು 83,565 ಜನರ ಪೆನ್ಶನ್ ಕ್ಯಾನ್ಸಲ್ ಮಾಡಲಾಗಿದೆ..

ಆಧಾರ್ ಕಾರ್ಡ್ ಲಿಂಕ್ (Aadhaar Card Link) ಆಗದೆ ಇರುವವರ ಪೆನ್ಶನ್ ಕೂಡ ಕ್ಯಾನ್ಸಲ್ ಮಾಡಲಾಗಿದೆ. ಹಾಗೆಯೇ ಸುಮಾರು 35,204 ಅಷ್ಟು ಜನರ ಪೆನ್ಶನ್ ಅನ್ನು ಅರ್ಹತೆ ಇಲ್ಲದ ಕಾರಣ ಕ್ಯಾನ್ಸಲ್ ಮಾಡಲಾಗಿದೆ. ಈ ಪರಿಶೀಲನೆಯಲ್ಲಿ ಸಾಕಷ್ಟು ವಿಚಾರಗಳು ಬೆಳಕಿಗೆ ಬಂದಿದ್ದು, ಕೆಲವು ಜನರು 2 ಪೆನ್ಶನ್ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ, ಇನ್ನು ಕೆಲವರು 60 ವರ್ಷದ ದಾಟಿಲ್ಲದೆ ಇದ್ದರು ಕೂಡ ಪೆನ್ಶನ್ ಪಡೆಯುತ್ತಿದ್ದಾರೆ.

ಇನ್ನು ಕೆಲವು ಜನರು ಸಂಧ್ಯಾ ಸುರಕ್ಷಾ ಯೋಜನೆಯ ಮೂಲಕ ಕೂಡ ಹಣ ಪಡೆಯುತ್ತಿದ್ದಾರೆ. ಈ ರೀತಿಯ ಸುಮಾರು 30,000 ಜನರ ಪೆನ್ಶನ್ ಕೂಡ ಕ್ಯಾನ್ಸಲ್ ಮಾಡಲಾಗಿದೆ. ಈ ರೀತಿ ಪರಿಶೀಲನೆ ನಡೆಸಿ, ಅರ್ಹತೆ ಇರುವವರಿಗೆ ಮಾತ್ರ ಪೆನ್ಶನ್ ಕೊಡಲಾಗುತ್ತಿದೆ.

The government canceled the pension of such people