ಜನ್ ಧನ್ ಅಕೌಂಟ್ ಹೊಂದಿರುವವರಿಗೆ ಕೇಂದ್ರದಿಂದ ಬಿಗ್ ಅಪ್ಡೇಟ್! ಸಿಗಲಿದೆ ನಿಮಗೆ ಸುಲಭ ಸಾಲ ಸೌಲಭ್ಯ
ಜನ್ ಧನ್ ಅಕೌಂಟ್ ಅನ್ನು ನೀವು ಭಾರತದ ಯಾವುದೇ ಬ್ಯಾಂಕ್ ನಲ್ಲಿ ಓಪನ್ ಮಾಡಿದರು, 6 ತಿಂಗಳ ನಂತರ 5000 ರೂಪಾಯಿಯವರೆಗು ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದು.
ನಮ್ಮ ದೇಶದಲ್ಲಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಜನರಿಗೆ ಅನುಕೂಲ ಆಗುವ ಹಾಗೆ ಸಾಕಷ್ಟು ಯೋಜನೆಗಳನ್ನು (Govt Scheme) ಜಾರಿಗೆ ತರುತ್ತಿದೆ. ಅದರಲ್ಲೂ ಬಡತನದಲ್ಲಿರುವ, ಹಿಂದುಳಿದ ವರ್ಗದ ಜನರಿಗಾಗಿ ಭಾರತ ಸರ್ಕಾರವು ಸಾಕಷ್ಟು ಅನುಕೂಲಕರ ಯೋಜನೆಗಳನ್ನು ಜಾರಿಗೆ ತರುತ್ತಿದೆ.
ಇದೇ ಥರ ಬಡವರಿಗೆ ಸಹಾಯ ಆಗಲಿ ಎಂದು ಸರ್ಕಾರ ಶುರುಮಾಡಿರುವ ಒಂದು ಯೋಜನೆ ಜನ್ ಧನ್ ಖಾತೆ ಆಗಿದೆ. ಈಗಾಗಲೇ ದೇಶದ 50ಕೋಟಿಗಿಂತ ಹೆಚ್ಚು ಜನರು ಜನ್ ಧನ್ ಖಾತೆ (Jan Dhan Bank Account) ಓಪನ್ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ಈ ಯೋಜನೆ ಶುರುವಾಗಿದ್ದು ನರೇಂದ್ರ ಮೋದಿ ಅವರು ಮೊದಲ ಸಾರಿ ಪ್ರೈಮ್ ಮಿನಿಸ್ಟರ್ ಆಗಿ ಅಧಿಕಾರಕ್ಕೆ ಬಂದಾಗ, 2014ರ ಆಗಸ್ಟ್ 28ರಂದು. ಪ್ರಸ್ತುತ ಸಿಕ್ಕಿರುವ ಮಾಹಿತಿ ಪ್ರಕಾರ, ಜನ್ ಧನ್ ಖಾತೆ ತೆರೆದಿರುವ ಕೋಟಿಗಟ್ಟಲೆ ಜನರ ಪೈಕಿ 56% ಮಹಿಳೆಯರ ಖಾತೆ (Bank Account) ಇದೆ ಎನ್ನಲಾಗಿದೆ.
Free Scheme: ಫ್ರೀ ಅನ್ನಪೂರ್ಣ ಫುಡ್ ಸ್ಕೀಮ್! ಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಸೇರಿದಂತೆ ಎಲ್ಲವೂ ಉಚಿತ
67% ಜನ್ ಧನ್ ಖಾತೆಯನ್ನು ಹಳ್ಳಿಗಳಲ್ಲಿ ಮತ್ತು ಅರ್ಧ ನಗರ ಪ್ರದೇಶಗಳಲ್ಲಿ ಕೂಡ ಜನರು ಜನ್ ಧನ್ ಅಕೌಂಟ್ ತೆರೆದಿದ್ದಾರೆ. ದೇಶದ ಎಲ್ಲಾ ಸಾಮಾನ್ಯ ಜನರು ಬ್ಯಾಂಕಿಂಗ್ ಸೌಲಭ್ಯ ಪಡೆಯಬೇಕು ಎನ್ನುವುದು ಸರ್ಕಾರದ ಮುಖ್ಯ ಉದ್ದೇಶ ಆಗಿತ್ತು..
ಹಾಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಅದೇ ರೀತಿ ಈಗ 50ಕೋಟಿ ಜನರು ಜನ್ ಧನ್ ಖಾತೆ ತೆರೆದಿರುವುದು ಸರ್ಕಾರದ ಯೋಜನೆಯನ್ನು ಪೂರ್ತಿಗೊಳಿಸಿದ ಹಾಗೆ ತೋರುತ್ತಿದೆ. ಈ ಯೋಜನೆಯ ಹಿಂದಿನ ಉದ್ದೇಶ ಏನು ಎಂದರೆ, ನಮ್ಮ ದೇಶದಲ್ಲಿ ಅತಿ ಸಾಮಾನ್ಯ ಜನರು ಕೂಡ, ತಮ್ಮ ಬಳಿ ಇರುವ ದಾಖಲೆಗಳನ್ನು ನೀಡಿ ಬ್ಯಾಂಕ್ ಅಕೌಂಟ್ ತೆರೆಯಬಹುದು, ಹಾಗೆಯೇ ಜನ್ ಧನ್ ಖಾತೆಯಲ್ಲಿ ನೀವು ಇಷ್ಟು ಹಣ ಮಿನಿಮಮ್ ಬ್ಯಾಲೆನ್ಸ್ ಇಡಬೇಕು ಎನ್ನುವ ನಿಯಮವಿಲ್ಲ. ಇದು ಜೀರೋ ಅಕೌಂಟ್ (Zero Bank Account) ಆಗಿದ್ದು, ಈ ಯೋಜನೆಯಲ್ಲಿ ಅಕೌಂಟ್ ತೆರೆದರೆ, ಚೆಕ್ ಬುಕ್, ಡೆಬಿಟ್ ಕಾರ್ಡ್ ಕೂಡ ಸಿಗುತ್ತದೆ.
ಬಡ ಕಾರ್ಮಿಕರಿಗೆ ಸರ್ಕಾರದಿಂದ 2 ಲಕ್ಷ ಸಹಾಯಧನ, 48 ಗಂಟೆಗಳೊಳಗೆ ಹಣ ಮಂಜೂರು! ಈ ರೀತಿ ಅರ್ಜಿ ಹಾಕಿ
2015ರಲ್ಲಿ ಜನ್ ಧನ್ ಅಕೌಂಟ್ ತೆರೆದಿರುವ ಎಲ್ಲರಿಗೂ ಕೂಡ ಕೆಲವು ನಿಯಮಗಳ ಜೊತೆಗೆ ಲೈಫ್ ಇನ್ಷುರೆನ್ಸ್ ನೀಡಲಾಗುತ್ತಿದೆ. ಇಷ್ಟೇ ಅಲ್ಲದೆ, ಸಾಮಾನ್ಯ ಜನರು ಈ ಅಕೌಂಟ್ ತೆರೆದು, 6 ತಿಂಗಳ ನಂತರ 5000 ರೂಪಾಯಿಯವರೆಗು ಓವರ್ ಡ್ರಾಫ್ಟ್ ಸಹ ಸಿಗುತ್ತದೆ.
5 ಗ್ಯಾರಂಟಿ ಯೋಜನೆಗಳ ಬೆನ್ನಲ್ಲೇ ಮತ್ತೊಂದು ಹೊಸ ಯೋಜನೆಗೆ ಮುಂದಾದ ಸರ್ಕಾರ, ಜನರು ಫುಲ್ ಖುಷ್
ಅಕೌಂಟ್ ಓಪನ್ ಮಾಡಿರುವವರು ತಮಗೆ ಅವಶ್ಯಕತೆ ಬಿದ್ದಾಗ ಈ ಹಣವನ್ನು ಉಪಯೋಗಿಸಿಕೊಳ್ಳಬಹುದು. ಜನ್ ಧನ್ ಅಕೌಂಟ್ ಅನ್ನು ನೀವು ಭಾರತದ ಯಾವುದೇ ಬ್ಯಾಂಕ್ ನಲ್ಲಿ ಓಪನ್ ಮಾಡಿದರು, 6 ತಿಂಗಳ ನಂತರ 5000 ರೂಪಾಯಿಯವರೆಗು ಸಾಲ ಸೌಲಭ್ಯವನ್ನು (Loan) ಕೂಡ ಪಡೆಯಬಹುದು. ಬಡತನದ ರೇಖೆಗಿಂತ ಕಡಿಮೆ ಇರುವ ಕಷ್ಟದಲ್ಲಿರುವ ಜನರು ಈ ಯೋಜನೆಯ ಸೌಲಭ್ಯ ಪಡೆಯಬೇಕು ಎನ್ನುವುದು ಸರ್ಕಾರದ ಮೂಲ ಉದ್ದೇಶ. ಜನ್ ಧನ್ ಖಾತೆಯಲ್ಲಿ ನೀವು ಮೊಬೈಲ್ ಬ್ಯಾಂಕಿಂಗ್ (Mobile Banking) ಸೌಲಭ್ಯ ಕೂಡ ಪಡೆಯುತ್ತೀರಿ.
Big update from Central Government for Jan Dhan account holders
Follow us On
Google News |