Free Scheme: ಫ್ರೀ ಅನ್ನಪೂರ್ಣ ಫುಡ್ ಸ್ಕೀಮ್! ಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಸೇರಿದಂತೆ ಎಲ್ಲವೂ ಉಚಿತ
ಕೇಂದ್ರ ಸರ್ಕಾರವು ಜನರ ಒಳಿತಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿ ವಿವಿಧ ರಾಜ್ಯಗಳ ರಾಜ್ಯ ಸರ್ಕಾರವು ಕೂಡ ಬಹಳಷ್ಟು ಯೋಜನೆಗಳನ್ನು (Schemes) ಜಾರಿಗೆ ತರುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ಮಾಡುತ್ತಿದೆ, ಹಾಗೆಯೇ ಸಾಕಷ್ಟು ಸೇವೆಗಳನ್ನು ಕೂಡ ಜನರಿಗಾಗಿ ಜಾರಿಗೆ ತರುತ್ತಿದೆ.
ಇದೇ ನಿಟ್ಟಿನಲ್ಲಿ ಜನರಿಗೆ ಸಹಾಯ ಆಗುವ ಹಾಗೆ ರಾಜಸ್ಥಾನದ ಸರ್ಕಾರವು ಹೊಸದೊಂದು ಯೋಜನೆಯನ್ನು (New Scheme) ಜಾರಿಗೆ ತಂದಿದ್ದು, ಯೋಜನೆಯ ಹೆಸರು ಉಚಿತ ಅನ್ನಪೂರ್ಣ ಆಹಾರ ಕಿಟ್ ಯೋಜನೆ ಆಗಿದೆ.
ಈ ಯೋಜನೆಯನ್ನು ಆಗಸ್ಟ್ 15ರಿಂದ ಶುರು ಮಾಡಲಾಗುತ್ತಿದೆ. ರಾಜ್ಯದ ಜನರಿಗೆ ಮತ್ತು ಬಡವರಿಗೆ ಇದು ಉತ್ತಮವಾಗಿ ಸಹಾಯ ಆಗುತ್ತಿರುವ ಯೋಜನೆ ಆಗಿದೆ. ಹೊಸ ಯೋಜನೆಯನ್ನು ಸ್ವಾತಂತ್ರ್ಯ ದಿನಾಚರಣೆಯ ದಿವಸ ಲಾಂಚ್ ಮಾಡಿ, 1.4 ಕೋಟಿ ಕುಟುಂಬಗಳಿಗೆ ವಿಶೇಷ ಉಡುಗೊರೆ ನೀಡಿದೆ.
ಆಗಸ್ಟ್ 15 ರಿಂದ ಶುರು ಆಗಿರುವ ಈ ಯೋಜನೆಯ ಮೂಲಕ ಇನ್ಮೇಲೆ ಪ್ರತಿ ತಿಂಗಳು ಜನರಿಗೆ ಉಚಿತ ಅನ್ನಪೂರ್ಣ ಕಿಟ್ ಸರ್ಕಾರದ ಕಡೆಯಿಂದ ಸಿಗಲಿದೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಅವರು ಅನ್ನಪೂರ್ಣ ಕಿಟ್ ಯೋಜನೆ (Free Annapurna Food Scheme) ಶುರುವಾಗುವ ಬಗ್ಗೆ ಮಾಹಿತಿ ನೀಡಿದ್ದು, ಈ ಯೋಜನೆಯಿಂದ ತಮ್ಮ ರಾಜ್ಯದ 1.04 ಕುಟುಂಬಗಳಿಗೆ ಸಹಾಯ ಆಗಲಿದೆ, ಎಲ್ಲಾ ಕುಟುಂಗಗಳು ಈ ಯೋಜನೆಯ ಸೌಲಭ್ಯ ಪಡೆಯುತ್ತಾರೆ. ಅನ್ನಪೂರ್ಣ ಕಿಟ್ ಮೂಲಕ ಉಪ್ಪು, ಬೇಳೆಕಾಳುಗಳು, ಸಕ್ಕರೆ, ಅಡುಗೆ ಎಣ್ಣೆ, ಕೊತ್ತಂಬರಿ ಸೊಪ್ಪು, ಅರಿಶಿನ ಇದೆಲ್ಲವೂ ಸೇರುತ್ತದೆ ಎಂದು ತಿಳಿಸಿದ್ದಾರೆ.
ಅನ್ನಪೂರ್ಣ ಯೋಜನೆಯ ಅಡಿಯಲ್ಲಿ ಈ ಎಲ್ಲಾ ವಸ್ತುಗಳನ್ನು ಒಂದು ಪ್ಯಾಕೆಟ್ ಮೂಲಕ 1.04 ಕೋಟಿ ಕುಟುಂಬಗಳಿಗೆ ಒದಗಿಸಲಾಗುತ್ತದೆ ಎಂದು ರಾಜಸ್ಥಾನದ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಹಾಗೆಯೇ ತಮ್ಮ ರಾಜ್ಯಸರ್ಕಾರ ಸಾಮಾನ್ಯ ಜನರಿಗಾಗಿ ಈ ಥರದ ಯೋಜನೆಗಳನ್ನು ನೀಡುತ್ತದೆ ಎಂದು ಕೂಡ ತಿಳಿಸಿದ್ದಾರೆ. ಇದರಿಂದ ಜನರಿಗೂ ಉಪಯೋಗ ಆಗಲಿದೆ. ಉಚಿತ ಅನ್ನಪೂರ್ಣ ಆಹಾರ ಪ್ಯಾಕೆಟ್ ನಲ್ಲಿ 1ಕೆಜಿ ಕಡಲೆ, ಸಕ್ಕರೆ, ಅಯೋಡೈಸ್ಡ್ ಉಪ್ಪು, 1 ಲೀಟರ್ ಸೋಯಾಬೀನ್ ಎಣ್ಣೆ, 100 ಗ್ರಾಮ್ ಮೆಣಸಿನಕಾಯಿ ಖಾರದ ಪುಡಿ, 50ಗ್ರಾಮ್ ಅರಿಶಿನ ಪುಡಿ ಇದಿಷ್ಟು ಜನರಿಗೆ ಸಿಗುತ್ತದೆ.
ಬಡ ಕಾರ್ಮಿಕರಿಗೆ ಸರ್ಕಾರದಿಂದ 2 ಲಕ್ಷ ಸಹಾಯಧನ, 48 ಗಂಟೆಗಳೊಳಗೆ ಹಣ ಮಂಜೂರು! ಈ ರೀತಿ ಅರ್ಜಿ ಹಾಕಿ
ಇನ್ನು ಪಡಿತರ ವಿತರಣೆ ಮಾಡುವ ವಿತರಕರ ಕಮಿಷನ್ ಜಾಸ್ತಿ ಮಾಡಬೇಕು ಎನ್ನುವ ವಿಚಾರಕ್ಕೆ ಕೇಂದ್ರ ಸರ್ಕಾರಕ್ಕೆ ರಾಜಸ್ತಾನ್ ಮುಖ್ಯಮಂತ್ರಿಗಳು ಒತ್ತಡ ಹೇರಿದ್ದಾರೆ. ರೇಷನ್ ಅನ್ನು 6 ತಿಂಗಳವರೆಗು ವಿಸ್ತರಣೆ ಮಾಡುವುದಕ್ಕಿಂತ ನಿಯಮಿತವಾಗಿ ಜಾರಿಗೆ ತರುವುದು ಉತ್ತಮ ಎಂದು ತಿಳಿಸಿದ್ದಾರೆ.
ಈ ಅನ್ನಪೂರ್ಣ ಫುಡ್ ಪ್ಯಾಕೆಟ್ ಗಳನ್ನು ವಿತರಿಸುವವರಿಗೆ ಕಮಿಷನ್ ಹಣವನ್ನು ಏರಿಸಲಾಗಿದ್ದು, ಒಂದು ಪ್ಯಾಕೆಟ್ ಗೆ 4 ರೂಪಾಯಿ ಇಂದ 10 ರೂಪಾಯಿಗೆ ಏರಿಸಲಾಗಿದೆ.
Ashok Gehlot Government Launched Free Annapurna Food Kit Scheme