ಬಡ ಕಾರ್ಮಿಕರಿಗೆ ಸರ್ಕಾರದಿಂದ 2 ಲಕ್ಷ ಸಹಾಯಧನ, 48 ಗಂಟೆಗಳೊಳಗೆ ಹಣ ಮಂಜೂರು! ಈ ರೀತಿ ಅರ್ಜಿ ಹಾಕಿ

ಸರ್ಕಾರಗಳು ಕೂಡ ಕಾರ್ಮಿಕರು, ಕಟ್ಟಡ ಕಾರ್ಮಿಕರಿಗಾಗಿ ಬಹಳಷ್ಟು ಇನ್ಷುರೆನ್ಸ್ ಯೋಜನೆ, ಆರೋಗ್ಯ ಸೌಲಭ್ಯ, ಸಹಾಯಧನ, ಇದೆಲ್ಲವನ್ನು ಹಿಂದಿನಿಂದಲೂ ಕೊಡುತ್ತಾ ಬರುತ್ತಿದೆ.

ರಾಜ್ಯ ಮತ್ತು ಕೇಂದ್ರದಲ್ಲಿ ಯಾವ ಪಕ್ಷ ಆಡಳಿತ ನಡೆಸುತ್ತಿದ್ದರು ಕೂಡ ದೇಶದ ಕಾರ್ಮಿಕ ವರ್ಗದ ಜನರಿಗೆ ಅನುಕೂಲ ಆಗುವ ಹಾಗೆ ಯೋಜನೆಗಳನ್ನು ಜಾರಿಗೆ ತರಲೇಬೇಕು ಎನ್ನುವುದು ವಾಡಿಕೆ ಆಗಿದೆ. ಇಲ್ಲದೆ ಹೋದರೆ, ಸರ್ಕಾರಕ್ಕೆ ತೊಂದರೆ ಆಗುವುದು ಖಚಿತ.

ಹಾಗಾಗಿ ಎಲ್ಲ ಸರ್ಕಾರಗಳು ಕೂಡ ಕಾರ್ಮಿಕರು, ಕಟ್ಟಡ ಕಾರ್ಮಿಕರಿಗಾಗಿ ಬಹಳಷ್ಟು ಇನ್ಷುರೆನ್ಸ್ ಯೋಜನೆ (Insurance Scheme), ಆರೋಗ್ಯ ಸೌಲಭ್ಯ (health care facility), ಸಹಾಯಧನ, ಇದೆಲ್ಲವನ್ನು ಹಿಂದಿನಿಂದಲೂ ಕೊಡುತ್ತಾ ಬರುತ್ತಿದೆ. ಆದರೆ ಈಗ ಇದರಲ್ಲಿ ಮತ್ತೊಮ್ಮೆ ಪರಿಷ್ಕರಣೆ ಮಾಡಲಾಗಿದೆ.

ಕಟ್ಟಡ ಕಾರ್ಮಿಕರಿಗಾಗಿ ಸಾಕಷ್ಟು ಯೋಜನೆಗಳು (Govt Schemes) ಜಾರಿಗೆ ಬಂದಿವೆ. ಇಷ್ಟು ದಿವಾಸಗಳ ಕಟ್ಟಡ ಕಾರ್ಮಿಕರಿಗೆ ಅಪಘಾತ ಅಥವಾ ಇನ್ನಿತರ ಕಾರಣಗಳಿಂದ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಅವರಿಗೆ ಉಚಿತ ಆರೋಗ್ಯ ಸೌಲಭ್ಯ ಎಲ್ಲಾ ಆಸ್ಪತ್ರೆಗಳಲ್ಲಿ ಸಿಗುತ್ತಿರಲಿಲ್ಲ.

ಬಡ ಕಾರ್ಮಿಕರಿಗೆ ಸರ್ಕಾರದಿಂದ 2 ಲಕ್ಷ ಸಹಾಯಧನ, 48 ಗಂಟೆಗಳೊಳಗೆ ಹಣ ಮಂಜೂರು! ಈ ರೀತಿ ಅರ್ಜಿ ಹಾಕಿ - Kannada News

5 ಗ್ಯಾರಂಟಿ ಯೋಜನೆಗಳ ಬೆನ್ನಲ್ಲೇ ಮತ್ತೊಂದು ಹೊಸ ಯೋಜನೆಗೆ ಮುಂದಾದ ಸರ್ಕಾರ, ಜನರು ಫುಲ್ ಖುಷ್

ಆದರೆ ಇನ್ನುಮುಂದೆ ಆ ರೀತಿ ಆಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಈ ಬಗ್ಗೆ ಮಂಡಳಿಯ ಕಾರ್ಯದರ್ಶಿಗಳು ಅಥವಾ ಮಂಡಳಿಯ ಪರವಾಗಿ ಇರುವ ಅಧಿಕಾರಿಗಳು ಮಾಹಿತಿ ನೀಡಿದ್ದು, ಕಟ್ಟಡ ಕಾರ್ಮಿಕರಿಗೆ 1963 ಶೆಡ್ಯೂಲ್ 1 ಆಧಾರದ ಪ್ರಕಾರ ಆಸ್ಪತ್ರೆಗೆ ಅಡ್ಮಿಟ್ ಆದ ನಂತರ ಅವರಿಗೆ ಆರೋಗ್ಯಕ್ಕಾಗಿ ಸಹಾಯ ಧನ ಕೊಡಲಾಗುತ್ತದೆ ಎಂದು ಸೂಚನೆ ನೀಡಿದ್ದು, ಕಾರ್ಮಿಕ ವರ್ಗದ ಜನರಿಗೆ ಇದರಿಂದ ಸಂತೋಷವಾಗಿದೆ.

ಇದಕ್ಕಾಗಿ ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂದು ನೋಡುವುದಾದರೆ.. ಕಾರ್ಮಿಕರ ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್, ಕೆಲಸ ದೃಢೀಕರಣ ಆಗಿರುವ ಪತ್ರ, ಸ್ಮಾರ್ಟ್ ಕಾರ್ಡ್, ಆಸ್ಪತ್ರೆಗೆ ಅಡ್ಮಿಟ್ ಆಗಿರುವ ದಾಖಲೆ, ಅಡ್ಮಿಟ್ ಕಾರ್ಡ್, ಡಿಸ್ಚಾರ್ಜ್ ಕಾರ್ಡ್, ಚಿಕಿತ್ಸೆಗೆ ಆಗಿರುವ ಖರ್ಚಿನ ಮೊತ್ತದ ಬಿಲ್ ಇದೆಲ್ಲವು ಇರಬೇಕಾಗುತ್ತದೆ.

Govt Scheme

ಈ ಯೋಜೆನೆಯ ಸೌಲಭ್ಯ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು ಯಾವ ದಿನವನ್ನು ಹೇಳಲಾಗಿಲ್ಲ.

ನಿಮ್ಮ ವಿದ್ಯುತ್ ಬಿಲ್ ಜೀರೋ ಬಂದಿಲ್ವಾ? ಎಷ್ಟು ಅರ್ಜಿ ರಿಜೆಕ್ಟ್ ಆಗಿದೆ ಗೊತ್ತಾ? ಗೃಹಜ್ಯೋತಿ ಯೋಜನೆ ಬಗ್ಗೆ ಮತ್ತೊಂದು ಮುಖ್ಯ ವರದಿ ತಂದ ರಾಜ್ಯ ಸರ್ಕಾರ

ಏಕೆಂದರೆ ಅನಾರೋಗ್ಯ ಅಥವಾ ಅಪಘಾತ ಯಾವಾಗ ಸಂಭವಿಸುತ್ತದೆ ಎಂದು ಹೇಳಲಾಗದು. ಹಾಗಾಗಿ ನೀವು ಆಸ್ಪತ್ರೆಗೆ ಸೇರಿ, ಚಿಕಿತ್ಸೆ ಪಡೆದ ಬಳಿಕ, 6 ತಿಂಗಳ ಒಳಗಾಗಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

6 ತಿಂಗಳ ಸಮಯದ ಗಡಿ ದಾಟಿದರೆ ಈ ಯೋಜನೆಯ ಸೌಲಭ್ಯ ಸಿಗದೆ ಹೋಗುವ ಸಾಧ್ಯತೆ ಕೂಡ ಇರುತ್ತದೆ. ಅರ್ಜಿಯನ್ನು ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಸಲ್ಲಿಸಬಹುದು. ಮೊದಲಿಗೆ ನೀವು ಅರ್ಜಿ ಸಲ್ಲಿಸಿದ ಬಳಿಕ ನೀವು ನೀಡುವ ಎಲ್ಲಾ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ.

ಹಿರಿಯ ಕಾರ್ಮಿಕ ನಿರೀಕ್ಷಕರು, ನೋಂದಣಿ ಅಧಿಕಾರಿಗಳು, ಕಾರ್ಮಿಕ ಅಧಿಕಾರಿಗಳು ಎಲ್ಲವನ್ನು ಚೆಕ್ ಮಾಡಿದ ನಂತರ ನಿಮಗೆ ಹಣ ಮಂಜೂರಾಗುತ್ತದೆ. ಕಾರ್ಮಿಕರು 48 ಗಂಟೆಗಳು ಅಂದರೆ 2 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರೆ, ಮಿನಿಮಮ್ ಟ್ರೀಟ್ಮೆಂಟ್ ಚಾರ್ಜ್ ಜೊತೆಗೆ ಮ್ಯಾಕ್ಸಿಮಮ್ 2ಲಕ್ಷದವರೆಗು ಸರ್ಕಾರದ ಸಹಾಯಧನ ಪಡೆಯಬಹುದು. ಬಡ ಕಾರ್ಮಿಕರಿಗೆ ಇದರಿಂದ ಹೆಚ್ಚು ಉಪಯೋಗ ಆಗುತ್ತದೆ.

ರೇಷನ್ ಕಾರ್ಡ್ ಬಗ್ಗೆ ಸರ್ಕಾರದಿಂದ ಮತ್ತೊಂದು ಮುಖ್ಯ ಘೋಷಣೆ! ಧಿಡೀರ್ ನಿರ್ಧಾರಕ್ಕೆ ಜನತೆಯೇ ಶಾಕ್

2 lakh free health care facility for poor laborers from Govt

Follow us On

FaceBook Google News

2 lakh free health care facility for poor laborers from Govt