ನಿಮ್ಮ ವಿದ್ಯುತ್ ಬಿಲ್ ಜೀರೋ ಬಂದಿಲ್ವಾ? ಎಷ್ಟು ಅರ್ಜಿ ರಿಜೆಕ್ಟ್ ಆಗಿದೆ ಗೊತ್ತಾ? ಗೃಹಜ್ಯೋತಿ ಯೋಜನೆ ಬಗ್ಗೆ ಮತ್ತೊಂದು ಮುಖ್ಯ ವರದಿ ತಂದ ರಾಜ್ಯ ಸರ್ಕಾರ

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸಮಯ ಶುರುವಾಗಿ 1 ತಿಂಗಳು ಕಳೆದಿದೆ. ಬಹಳಷ್ಟು ಜನರು ಈಗಾಗಲೇ ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದು, ಹಲವು ಜನರಿಗೆ ಜೀರೋ ವಿದ್ಯುತ್ ಬಿಲ್ ಬಂದಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಂದಿರುವ ಮುಖ್ಯವಾದ ಯೋಜನೆಗಳಲ್ಲಿ ಒಂದು ಗೃಹಜ್ಯೋತಿ ಯೋಜನೆ (Gruha Jyothi Scheme) ಆಗಿದೆ. ಈ ಯೋಜನೆಯ ಮೂಲಕ ರಾಜ್ಯದ ಜನರಿಗೆ ಉಚಿತ ವಿದ್ಯುತ್ (Free Electricity) ಸೌಲಭ್ಯ ಕೊಡುವ ಯೋಜನೆ ಇದಾಗಿದೆ.

ಗೃಹಜ್ಯೋತಿ ಯೋಜನೆಗೆ ಅರ್ಜಿ (Apply Gruha Jyothi Yojane) ಸಲ್ಲಿಸಲು ಸಮಯ ಶುರುವಾಗಿ 1 ತಿಂಗಳು ಕಳೆದಿದೆ. ಬಹಳಷ್ಟು ಜನರು ಈಗಾಗಲೇ ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದು, ಹಲವು ಜನರಿಗೆ ಜೀರೋ ವಿದ್ಯುತ್ ಬಿಲ್ (Zero Electricity Bill) ಬಂದಿದೆ.

ರೇಷನ್ ಕಾರ್ಡ್ ಬಗ್ಗೆ ಸರ್ಕಾರದಿಂದ ಮತ್ತೊಂದು ಮುಖ್ಯ ಘೋಷಣೆ! ಧಿಡೀರ್ ನಿರ್ಧಾರಕ್ಕೆ ಜನತೆಯೇ ಶಾಕ್

ನಿಮ್ಮ ವಿದ್ಯುತ್ ಬಿಲ್ ಜೀರೋ ಬಂದಿಲ್ವಾ? ಎಷ್ಟು ಅರ್ಜಿ ರಿಜೆಕ್ಟ್ ಆಗಿದೆ ಗೊತ್ತಾ? ಗೃಹಜ್ಯೋತಿ ಯೋಜನೆ ಬಗ್ಗೆ ಮತ್ತೊಂದು ಮುಖ್ಯ ವರದಿ ತಂದ ರಾಜ್ಯ ಸರ್ಕಾರ - Kannada News

ಅವರೆಲ್ಲ ವಿದ್ಯುತ್ ಗೆ ಹಣಕೊಡುವ ಅಗತ್ಯವಿಲ್ಲ. ಆದರೆ, ಕೆಲವು ಜನರ ಗೃಹಜ್ಯೋತಿ ಯೋಜನೆ ಅರ್ಜಿ ರಿಜೆಕ್ಟ್ ಆಗಿರುವುದರಿಂದ ಅವರಿಗೆ ನೋವಾಗಿದೆ. ಸಾಕಷ್ಟು ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ಸಿಕ್ಕಿಲ್ಲ, ಹಾಗೆಯೇ ಒಂದಷ್ಟು ಜನರು ಲಿಮಿಟ್ ಇಲ್ಲದೆ ಮಿತಿ ಮೀರಿ ವಿದ್ಯುತ್ ಬಳಸುತ್ತಿದ್ದಾರೆ ಎಂದು ಅವರಿಗು ಉಚಿತ ವಿದ್ಯುತ್ ಪ್ರಯೋಜನ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಸರ್ಕಾರದಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಗೃಹಜ್ಯೋತಿ ಯೋಜನೆಗೆ ಸುಮಾರು ಜನರು 1,41,30,320 ಜನರು ಅರ್ಜಿ ಸಲ್ಲಿಸಿದ್ದಾರೆ.

ಇಷ್ಟು ಅರ್ಜಿಗಳ ಪೈಕಿ 74,08,769 ಅರ್ಜಿಗಳ ಕುಟುಂಬಕ್ಕೆ ಮಾತ್ರ ವಿದ್ಯುತ್ ಬಿಲ್ ಜೀರೋ ಬಂದಿದೆ. 45,29,633 ಕುಟುಂಬಗಳ ಅರ್ಜಿಗಳು 200 ಯೂನಿಟ್ ಗಿಂತ ಜಾಸ್ತಿ ವಿದ್ಯುತ್ ಬಳಸಿರುವುದರಿಂದ ಅವರಿಗೆಲ್ಲಾ ಉಚಿತ ವಿದ್ಯುತ್ ಸೌಲಭ್ಯ ಸಿಕ್ಕಿಲ್ಲ ಎಂದು ಸರ್ಕಾರ ತಿಳಿಸಿದೆ.

ಗೃಹಲಕ್ಷ್ಮಿ ಯೋಜನೆ ಹಣಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ಬಿಗ್ ಅಪ್ಡೇಟ್! ಹಣ ಬರುವ ದಿನ ಇನ್ನಷ್ಟು ಮುಂದೂಡಿಕೆ

Gruha jyothi schemeಹೀಗೆ ಬೇಕಾಬಿಟ್ಟಿಯಾಗಿ ಹೆಚ್ಜು ವಿದ್ಯುತ್ ಬಳಕೆ ಮಾಡಿರುವವರ ಸಂಖ್ಯೆ ಸುಮಾರು 21 ಲಕ್ಷ ಜನರಾಗಿದ್ದು, ಅವರ್ಯಾರಿಗೂ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಿಕ್ಕಿಲ್ಲ.

ಪ್ರಸ್ತುತ ರಾಜ್ಯದ 1.19 ಕೋಟಿ ಜನರಿಗೆ ವಿದ್ಯುತ್ ಬಿಲ್ ಗಳನ್ನು ಕೊಡಲಾಗಿದೆ. ಇವುಗಳ ಪೈಕಿ 62.06% ಅಂದರೆ 74,08,000 ಕುಟುಂಬಗಳು 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿದೆ. ಈ ಮೂಲಕ ಇವರಿಗೆಲ್ಲಾ ಉಚಿತ ವಿದ್ಯುತ್ ಪ್ರಯೋಜನ ಸಿಕ್ಕಿದೆ.

ಗೃಹಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಸರ್ಕಾರದಿಂದ ಮತ್ತೊಂದು ಹೊಸ ಸೂಚನೆ! ಇನ್ನೂ ಅರ್ಜಿ ಹಾಕದವರಿಗೂ ಇದೆ ಗುಡ್ ನ್ಯೂಸ್

ರಾಜ್ಯದ ಜನರಿಗೆ ಉಚಿತ ವಿದ್ಯುತ್ ನೀಡಲು, ರಾಜ್ಯ ಸರ್ಕಾರವು ಬೆಸ್ಕಾಮ್ ಗೆ 650 ಕೋಟಿ ರೂಪಾಯಿ ಶುಲ್ಕ ನೀಡಿದೆ ಎಂದು ಮಾಹಿತಿ ಸಿಕ್ಕಿದೆ. ಇನ್ನು ಆಗಸ್ಟ್ ನಲ್ಲಿ ಯಾರಿಗೆಲ್ಲಾ ವಿದ್ಯುತ್ ಬಿಲ್ ಜೀರೋ ಇರುತ್ತದೆ, ಯಾರೆಲ್ಲಾ ಗೃಹಜ್ಯೋತಿ ಯೋಜನೆಯ ಸೌಲಭ್ಯದಿಂದ ವಂಚಿತರಾಗುತ್ತಾರೆ ಎಂದು ಕಾದು ನೋಡಬೇಕಿದೆ.

The state government brought another major report on Gruha Jyothi Yojana

Follow us On

FaceBook Google News

The state government brought another major report on Gruha Jyothi Yojana