ಗೃಹಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಸರ್ಕಾರದಿಂದ ಮತ್ತೊಂದು ಹೊಸ ಸೂಚನೆ! ಇನ್ನೂ ಅರ್ಜಿ ಹಾಕದವರಿಗೂ ಇದೆ ಗುಡ್ ನ್ಯೂಸ್

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಎಂದರೆ, ನೀವು ಆತಂಕ ಪಡುವ ಅಗತ್ಯವಿಲ್ಲ. ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ಇನ್ನು ನಿಗದಿ ಮಾಡಿಲ್ಲ, ಹಾಗಾಗಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು ಸಮಯ ಇದೆ.

ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರವು ನೀಡಿದ್ದ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಈಗ ಒಂದೊಂದಾಗಿ ಜಾರಿಗೆ ತರುತ್ತಿದೆ. ಈ ಯೋಜನೆಗಳು ಹೆಚ್ಚಾಗಿ ಹೆಣ್ಣುಮಕ್ಕಳ ಪರವಾಗಿ ಇರುವುದು ಮತ್ತೊಂದು ವಿಶೇಷತೆ ಆಗಿದೆ.

ಹೆಣ್ಣುಮಕ್ಕಳಿಗೆ ಉಚಿತ ಬಸ್ ಪ್ರಯಾಣ (Free Bus Facility Scheme) ಮಾಡುವ ಅವಕಾಶ ನೀಡಿ, ರಾಜ್ಯದ ಎಲ್ಲಾ ಹೆಣ್ಣುಮಕ್ಕಳಿಗೆ ಶಕ್ತಿ ಯೋಜನೆಯನ್ನು (Shakti Scheme) ಜಾರಿಗೆ ತರಲಾಗಿದೆ. ಜೊತೆಗೆ ರಾಜ್ಯದ ಎಲ್ಲಾ ಹೆಣ್ಣುಮಕ್ಕಳಿಗೆ ಅಂದರೆ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ಕೊಡುವ ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Scheme) ಕೂಡ ಪರಿಚಯಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಈಗಾಗಲೇ ಕೋಟ್ಯಾಂತರ ಹೆಣ್ಣುಮಕ್ಕಳು ಈ ಯೋಜನೆಗೆ ಅರ್ಜಿ ಸಲ್ಲಿಸಿ, ಗೃಹಲಕ್ಷ್ಮಿ ಯೋಜನೆಯ ₹2000 ಹಣ ತಮ್ಮ ಖಾತೆಗೆ (Bank Account) ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ.

ಗೃಹಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಸರ್ಕಾರದಿಂದ ಮತ್ತೊಂದು ಹೊಸ ಸೂಚನೆ! ಇನ್ನೂ ಅರ್ಜಿ ಹಾಕದವರಿಗೂ ಇದೆ ಗುಡ್ ನ್ಯೂಸ್ - Kannada News

ಮನೆಯಲ್ಲೇ ಕುಳಿತು ಬಿಪಿಎಲ್ ಕಾರ್ಡ್ ಅಪ್ಲೈ ಮಾಡಲು ಅವಕಾಶ ಕೊಟ್ಟ ಸರ್ಕಾರ! ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ

ಈ ಯೋಜನೆ ಶೀಘ್ರದಲ್ಲೇ ಲಾಂಚ್ ಆಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಸರ್ಕಾರದಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಗೃಹಲಕ್ಷ್ಮಿ ಯೋಜನೆ ಲಾಂಚ್ ಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ.

ಇದೇ ತಿಂಗಳು, ಆಗಸ್ಟ್ 27ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಮಾಹಿತಿ ನೀಡಿದ್ದಾರೆ. ಇನ್ನು ರಾಜ್ಯದಲ್ಲಿ ಒಟ್ಟು 11,0000 ಕೇಂದ್ರಗಳಲ್ಲಿ ಏಕಕಾಲಕ್ಕೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ. ನಗರ ಸಭೆ, ಪುರಸಭೆ, ಗ್ರಾಮ ಪಂಚಾಯ್ತಿ ಈ ಎಲ್ಲಾ ಕಡೆಗಳಲ್ಲಿ ಉದ್ಘಾಟನೆ ನಡೆಯಲಿದೆ.

ಸರ್ಕಾರದಿಂದ ಹೊಸ ಸೂಚನೆ

Gruha Lakshmi Yojaneಒಂದು ವೇಳೆ ನೀವು ಇನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಎಂದರೆ, ನೀವು ಆತಂಕ ಪಡುವ ಅಗತ್ಯವಿಲ್ಲ. ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ಇನ್ನು ನಿಗದಿ ಮಾಡಿಲ್ಲ, ಹಾಗಾಗಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು ಸಮಯ ಇದೆ.

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕು ಎನ್ನುವುದಾದರೆ, ಹೊಸದಾಗಿ ರೇಷನ್ ಕಾರ್ಡ್ (Ration Card) ಪಡೆಯಬೇಕು ಎಂದರೆ, ಆರಾಮಾಗಿ ಎಲ್ಲವನ್ನು ಮಾಡಿಸಿಕೊಂಡು ನಂತರ ಅರ್ಜಿ ಸಲ್ಲಿಸಬಹುದು.

ಹೆಣ್ಣುಮಕ್ಕಳು ಅರ್ಜಿ ಸಲ್ಲಿಸುವುದಕ್ಕೆ ಸುಲಭವಾದ ವಿಧಾನಗಳು ಇದೆ. ನೀವು ಅರ್ಜಿ ಸಲ್ಲಿಸುವ ಬಗ್ಗೆ ನಿಗದಿತ ದಿನಾಂಕ ಮತ್ತು ಸ್ಥಳದ ಮಾಹಿತಿ ಪಡೆಯುವುದು ಬಹಳ ಸುಲಭ ಆಗಿದೆ, 1902 ನಂಬರ್ ಗೆ ಕಾಲ್ ಮಾಡಿ ಈ ಬಗ್ಗೆ ಮಾಹಿತಿ ಪಡೆಯಬಹುದು.

ವಿದ್ಯುತ್ ಫ್ರೀ ಅಂತ ಬೇಕಾಬಿಟ್ಟಿ ಬಳಕೆ ಮಾಡಿರುವವರಿಗೆ ಸರ್ಕಾರದಿಂದ ಬಿಗ್ ಶಾಕ್! ಹೊಸ ರೂಲ್ಸ್ ಜಾರಿಗೆ

ಅಥವಾ 8147500500 ಈ ನಂಬರ್ ಗೆ SMS ಮಾಡುವ ಮೂಲಕ ಮಾಹಿತಿ ಪಡೆಯಬಹುದು. ಜೊತೆಗೆ ಸೇವಾ ಕೇಂದ್ರಗಳಿಗೆ ಹೋಗಿಯೂ ಅರ್ಜಿ ಸಲ್ಲಿಸಬಹುದು.

ಸರ್ಕಾರದ ಎಲ್ಲಾ ಯೋಜನೆಗಳ (Govt Schemes) ಲಾಭ ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ ಬಹಳ ಮುಖ್ಯ. ರೇಷನ್ ಕಾರ್ಡ್ ಕಡ್ಡಾಯ ಸಹ ಆಗಿದೆ. ಹಾಗಾಗಿ ಹಲವು ಜನರು ಈಗ ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಸಿದ್ದು, ಅವರಿಗೆಲ್ಲಾ ಬೇಗ ಹೊಸ ರೇಷನ್ ಕಾರ್ಡ್ ವಿತರಿಸುವುದಾಗಿ ಸರ್ಕಾರ ಮಾಹಿತಿ ನೀಡಿದೆ.

new notification from Govt to all those who have applied for Gruha Lakshmi Yojana

Follow us On

FaceBook Google News

new notification from Govt to all those who have applied for Gruha Lakshmi Yojana