ಮನೆಯಲ್ಲೇ ಕುಳಿತು ಬಿಪಿಎಲ್ ಕಾರ್ಡ್ ಅಪ್ಲೈ ಮಾಡಲು ಅವಕಾಶ ಕೊಟ್ಟ ಸರ್ಕಾರ! ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ

Story Highlights

ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಹಾಕಬಹುದು. http://ahara.kar.nic.in ಇದು ರಾಜ್ಯ ಸರ್ಕಾರದ ವೆಬ್ಸೈಟ್ ಆಗಿದೆ. ಈ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ, ನೀವು ಹೊಸ ರೇಷನ್ ಕಾರ್ಡ್ ಅನ್ನು ಬಹಳ ಬೇಗ ಪಡೆಯಬಹುದು.

ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ಬಳಿಕ ಅನ್ನಭಾಗ್ಯ ಯೋಜನೆಯನ್ನು (Annabhagya Scheme) ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆಯ ಮೂಲಕ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಮತ್ತು ಅಂತ್ಯೋದಯ ಕಾರ್ಡ್ ಇರುವವರಿಗೆ, ಕಾರ್ಡ್ ನಲ್ಲಿರುವ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುವ ನಿರ್ಧಾರವನ್ನು ಸರ್ಕಾರ ತಿಳಿಸಿತ್ತು.

ಆದರೆ 10ಕೆಜಿ ಅಕ್ಕಿ ಕೊಡಲು ಸಾಧ್ಯವಾಗದೆ, 5ಕೆಜಿ ಅಕ್ಕಿ ಮತ್ತು ಇನ್ನು 5ಕೆಜಿ ಅಕ್ಕಿಯ ಬದಲಾಗಿ ಹಣ ಕೊಡುವ ನಿರ್ಧಾರ ಮಾಡಿತು.

ಸರ್ಕಾರ ಈ ಥರದ ಆಫರ್ ಕೊಟ್ಟ ಕಾರಣ, ಜನರು ಕೂಡ ಈ ಯೋಜನೆಯ (Govt Scheme) ಲಾಭ ಪಡೆಯುವುದಕ್ಕೆ ಮುಂದಾಗುತ್ತಿದ್ದಾರೆ. ರೇಷನ್ ಕಾರ್ಡ್ ನಲ್ಲಿ ಹೆಚ್ಚು ಜನರ ಹೆಸರು ಸೇರಿಸುವುದಕ್ಕೆ ಮುಂದಾಗಿದ್ದಾರೆ.

ವಿದ್ಯುತ್ ಫ್ರೀ ಅಂತ ಬೇಕಾಬಿಟ್ಟಿ ಬಳಕೆ ಮಾಡಿರುವವರಿಗೆ ಸರ್ಕಾರದಿಂದ ಬಿಗ್ ಶಾಕ್! ಹೊಸ ರೂಲ್ಸ್ ಜಾರಿಗೆ

ರಾಜ್ಯದಲ್ಲಿ ಎಲೆಕ್ಷನ್ ಇದ್ದ ಕಾರಣ ಚುನಾವಣೆ ನೀತಿ ಸಂಹಿತೆಯ ಕಾರಣ, ರೇಷನ್ ಕಾರ್ಡ್ ಗೆ ಹೊಸದಾಗಿ ಅರ್ಜಿ ಸಲ್ಲಿಸಲು, ಅರ್ಜಿ ಸಲ್ಲಿಸಿರುವವರಿಗೆ ಹೊಸದಾಗಿ ರೇಷನ್ ಕಾರ್ಡ್ ವಿತರಣೆ ಮಾಡುವುದು, ರೇಶನ್ ಕಾರ್ಡ್ ತಿದ್ದುಪಡಿ ಮಾಡುವುದು ಈ ಎಲ್ಲಾ ಕೆಲಸಗಳಿಗು ಕೂಡ ಬ್ರೇಕ್ ಹಾಕಲಾಗಿತ್ತು.

ಆದರೆ ಈಗ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು (Apply Ration Card Online) ಮತ್ತು ತಿದ್ದುಪಡಿ ಮಾಡಿಸಲು ಸರ್ಕಾರ ಮತ್ತೆ ಅವಕಾಶ ನೀಡಿದ್ದು, ಈ ಬಗ್ಗೆ ಮುಖ್ಯವಾದ ಮಾಹಿತಿ ಒಂದನ್ನು ಸರ್ಕಾರ ನೀಡಿದೆ. ರೇಷನ್ ಕಾರ್ಡ್ ಗೆ ಹೊಸ ಸದಸ್ಯರ ಹೆಸರು ಸೇರಿಸುವುದಕ್ಕೆ ಸಾಕಷ್ಟು ಅರ್ಜಿಗಳು ಬರುತ್ತಿದೆ, ಹಾಗಾಗಿ ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ, ಸರ್ಕಾರ ಒಂದು ಹೊಸ ಪರಿಹಾರವನ್ನು ಕಂಡು ಹಿಡಿದಿದೆ.

ರೇಶನ್ ಕಾರ್ಡ್ ಗೆ ಹೊಸ ಸದಸ್ಯರ ಹೆಸರು ಸೇರಿಸುವುದು, ಇನಿಷಿಯಲ್ ಬದಲಾಯಿಸುವುದು, ಮಕ್ಕಳ ಹೆಸರು ಸೇರಿಸುವುದು, ಮನೆಯ ಯಜಮಾನಿಯ ಹೆಸರಿನ ಬದಲಾವಣೆ, ಅಥವಾ ಸದಸ್ಯರ ಹೆಸರನ್ನು ತೆಗೆದು ಹಾಕುವುದು.. ಇದೆಲ್ಲವನ್ನು ಅಪ್ಡೇಟ್ ಮಾಡುವುದು (Ration Corrections)..

ಹೊಸ BPL ರೇಷನ್ ಕಾರ್ಡ್ ಪಡೆಯಲು ಈ 6 ರೂಲ್ಸ್ ಪಾಲಿಸುವುದು ಕಡ್ಡಾಯ! ಹೊಸ ನಿಯಮಗಳನ್ನು ತಿಳಿಯಿರಿ

ಈ ಎಲ್ಲಾ ಸೇರ್ಪಡೆಯನ್ನು ನೀವು ಮನೆಯಲ್ಲೇ ಕುಳಿತು ತಿದ್ದುಪಡಿ ಮಾಡಬಹುದು. ನೀವು ಈ ಕೆಲಸ ಮಾಡಬೇಕು ಎಂದರೆ, ನಿಮಗಾಗಿ ಉಪಯುಕ್ತ ಮಾಹಿತಿ ತಿಳಿಸುತ್ತೇವೆ ನೋಡಿ. ಪ್ರಸ್ತುತ ನೀವು ಗ್ರಾಮ ಒನ್, ಬೆಂಗಳೂರು ಒನ್, ಸೈಬರ್ ಸೆಂಟರ್ ಇಲ್ಲಿಗೆ ಭೇಟಿ ನೀಡಿ ಹೊಸ ಸದಸ್ಯರ ಹೆಸರುಗಳನ್ನು ಸಹ ಸೇರಿಸಬಹುದು.

BPL Ration Cardಅಷ್ಟೇ ಅಲ್ಲದೆ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಹಾಕಬಹುದು. http://ahara.kar.nic.in ಇದು ರಾಜ್ಯ ಸರ್ಕಾರದ ವೆಬ್ಸೈಟ್ ಆಗಿದೆ. ಈ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ, ನೀವು ಹೊಸ ರೇಷನ್ ಕಾರ್ಡ್ ಅನ್ನು ಬಹಳ ಬೇಗ ಪಡೆಯಬಹುದು.

ಇದಕ್ಕಾಗಿ ಯಾವ್ಯಾವ ದಾಖಲೆಗಳು ಬೇಕಾಗುತ್ತದೆ ಎಂದು ನೋಡುವುದಾದರೆ.. 6 ವರ್ಷದ ಒಳಗಿನ ಮಕ್ಕಳು, ಪುಟ್ಟ ಮಕ್ಕಳ ಹೆಸರನ್ನು ಸೇರಿಸಬೇಕು ಎಂದರೆ, ಆಧಾರ್ ಕಾರ್ಡ್ ಮತ್ತು ಬರ್ತ್ ಸರ್ಟಿಫಿಕೇಟ್ ಮತ್ತು ಮೊಬೈಲ್ ನಂಬರ್ ಬೇಕಾಗುತ್ತದೆ.

ದೊಡ್ಡವರಾದರೆ ಅವರ ಇನ್ಕಮ್ ಸರ್ಟಿಫಿಕೇಟ್ ಬೇಕಾಗುತ್ತದೆ. ಮೊಬೈಲ್ ನಂಬರ್ ಗೆ ಲಿಂಕ್ ಆಗಿರುವ ಆಧಾರ್ ಕಾರ್ಡ್ ಕೂಡ ಕಡ್ಡಾಯವಾಗಿ ಬೇಕಾಗುತ್ತದೆ. ಹೊಸ ಸದಸ್ಯರ ಹೆಸರನ್ನು ಸೇರಿಸಬೇಕು ಎಂದರೆ, ನಿಮ್ಮ ಮನೆಯ ಸದಸ್ಯರ ಹೆಸರು ಇರುವ ರೇಶನ್ ಕಾರ್ಡ್ ಬೇಕಾಗುತ್ತದೆ.

ಇನ್ನು ನೀವು ಯಾವುದೇ ಕೇಂದ್ರಕ್ಕೆ, ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡದೆ ಮನೆಯಲ್ಲೇ ಕುಳಿತು ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು. http://ahara.kar.nic.in ಈ ವೆಬ್ಸೈಟ್ ಗೆ ಲಾಗಿನ್ ಮಾಡಬಹುದು.

ಇವರಿಗೆಲ್ಲಾ ಸಿಗಲ್ಲ ಗೃಹಲಕ್ಷ್ಮಿ ಯೋಜನೆ ಹಣ, ಅನರ್ಹರ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ! ಪಟ್ಟಿ ಚೆಕ್ ಮಾಡಲು ಡೈರೆಕ್ಟ್ ಲಿಂಕ್

ಇಲ್ಲಿ ನೀವು ಇ ಸೇವೆಯನ್ನು ಆಯ್ಕೆ ಮಾಡಿ, ಅದರ ಮೂಲಕ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಬಹುದು. ಇಲ್ಲಿ ನೀವು ಕೇಳುವ ಎಲ್ಲಾ ಮಾಹಿತಿಗಳನ್ನು ಫಿಲ್ ಮಾಡಿ, ಬಳಿಕ ನೀವು ಸಲ್ಲಿಸಬೇಕಾದ ಎಲ್ಲಾ ಡಾಕ್ಯುಮೆಂಟ್ ಗಳನ್ನು ಸ್ಕ್ಯಾನ್ ಮಾಡಿ..

ಬಳಿಕ ಫಾರ್ಮ್ ಸಬ್ಮಿಟ್ ಮಾಡಿ.. ನೀವು ಸಲ್ಲಿಸುವ ಎಲ್ಲಾ ದಾಖಲೆಗಳ ಪರಿಶೀಲನೆ ನಡೆದ ಬಳಿಕ, ನಿಮ್ಮ ಮನೆಯ ಅಡ್ರೆಸ್ ಗೆ ಪೋಸ್ಟ್ ಮುಖಾಂತರ ಹೊಸ ರೇಷನ್ ಕಾರ್ಡ್ ಬರುತ್ತದೆ.

ಈ ರೀತಿ ಸುಲಭ ವಿಧಾನ ಆಗಿರುವುದರಿಂದ, ನೀವು ಮನೆಯಲ್ಲೇ ಕುಳಿತು ಸುಲಭವಾಗಿ ಅಂತ್ಯೋದಯ, ಬಿಪಿಎಲ್, ಎಪಿಎಲ್ ಕಾರ್ಡ್ ಗಳಲ್ಲಿ ಸುಲಭವಾಗಿ ತಿದ್ದುಪಡಿ ಮಾಡಬಹುದು. ಆಫೀಸ್ ಗಳಿಗೆ, ಕೇಂದ್ರಗಳಿಗೆ ಪದೇ ಪದೇ ಓಡಾಡದೆ, ಸುಲಭವಾಗಿ ಈ ಕೆಲ್ಸ್ ಮಾಡಿಕೊಳ್ಳಿ.

Here is the link to apply BPL New Ration card By Online

Update : ಮತ್ತೆ ತಾತ್ಕಾಲಿಕವಾಗಿ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಶೀಘ್ರವೇ ಮತ್ತೆ ಸೇವೆ ಪ್ರಾರಂಭವಾಗಲಿದೆ.

Related Stories