ಇವರಿಗೆಲ್ಲಾ ಸಿಗಲ್ಲ ಗೃಹಲಕ್ಷ್ಮಿ ಯೋಜನೆ ಹಣ, ಅನರ್ಹರ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ! ಪಟ್ಟಿ ಚೆಕ್ ಮಾಡಲು ಡೈರೆಕ್ಟ್ ಲಿಂಕ್
ಆಹಾರ ಇಲಾಖೆಯ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅನರ್ಹರ ಪಟ್ಟಿಯನ್ನು ಕೂಡ ಚೆಕ್ ಮಾಡಬಹುದು. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ, ಹೆಸರು ಇಲ್ಲ ಎಂದರೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬಹುದು.
ನಮಗೆಲ್ಲ ಗೊತ್ತಿರುವ ಹಾಗೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Scheme) ಜಾರಿಗೆ ತರುತ್ತಿರುವುದು ಮನೆಯ ಮಹಾಲಕ್ಷ್ಮಿಗಾಗಿ. ಮನೆಯನ್ನು ನಡೆಸುವ ಹೆಣ್ಣುಮಕ್ಕಳ ಬ್ಯಾಂಕ್ ಖಾತೆಗೆ (Bank Account) ತಿಂಗಳಿಗೆ ₹2000 ರೂಪಾಯಿಗಳನ್ನು ಸರ್ಕಾರ ಹಾಕಲಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೆಲವು ದಿನಗಳ ಹಿಂದೆ ಶುರುವಾಗಿ, 1.5 ಕೋಟಿಗಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ (Gruha Lakshmi Yojana) ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ಕೂಡ ಶೀಘ್ರದಲ್ಲೇ ಈ ಯೋಜನೆಯನ್ನು ಅಧಿಕೃತವಾಗಿ ಲಾಂಚ್ ಮಾಡಲಿದೆ.
ಇತ್ತ ಮಹಿಳೆಯರು ಯೋಜನೆಗೆ ಅಪ್ಲೈ ಮಾಡಿ, ತಮ್ಮ ಬ್ಯಾಂಕ್ ಅಕೌಂಟ್ ಗೆ ಯಾವಾಗ ಹಣ ಬರುತ್ತದೆ ಎಂದು ಕಾಯುತ್ತಿದ್ದಾರೆ. ಸರ್ಕಾರ ಈಗ ಹೆಣ್ಣುಮಕ್ಕಳ ಅಕೌಂಟ್ ಗೆ ಹಣ ವರ್ಗಾವಣೆ ಆಗುವ ವಿಚಾರದಲ್ಲಿ ಇನ್ನು ಸ್ವಲ್ಪ ಸಮಯ ನಿಧಾನ ಮಾಡಿದೆ.
ಇದರಿಂದ ಹೆಣ್ಣುಮಕ್ಕಳು ಕಾಯುತ್ತಾ ಕುಳಿದಿದ್ದು, ಗೃಹಲಕ್ಷ್ಮಿ ಯೋಜನೆಗೆ ಅರ್ಹತೆ ಹೊಂದಿರುವ ಮಹಿಳೆಯರ ಪಟ್ಟಿ ಬಿಡುಗಡೆ ಆಗುವುದರ ಜೊತೆಗೆ ಈಗ ಅನರ್ಹರ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಬೇಕಾಗಿದೆ..ಇದರ ಬಗ್ಗೆ ನೀವು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.
ಅನ್ನಭಾಗ್ಯ ಯೋಜನೆ ವಿಷಯದಲ್ಲಿ ಸರ್ಕಾರದಿಂದ ಬಿಗ್ ಅಪ್ಡೇಟ್! ಅಕ್ಕಿ ವಿಚಾರದಲ್ಲಿ ಮಹತ್ವದ ನಿರ್ಧಾರ
ರಾಜ್ಯ ಸರ್ಕಾರ ಈ ಮೊದಲೇ ತಿಳಿಸಿದ್ದು ಏನು ಎಂದರೆ, ಸ್ವಾತಂತ್ರ್ಯ ದಿನಾಚರಣೆಯ ಮರುದಿನ ಆಗಸ್ಟ್ 16ರಂದು ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿ, ಆಗಸ್ಟ್ 16ರ ಒಳಗೆ ಎಲ್ಲಾ ಹೆಣ್ಣುಮಕ್ಕಳ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂದು ತಿಳಿಸಿದ್ದರು.
ಆದರೆ ಈ ಯೋಜನೆಯನ್ನು ಲಾಂಚ್ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರನ್ನು ಕರೆಸಬೇಕು ಎಂದುಕೊಂಡಿರುವುದರಿಂದ, ಹೆಂಗಸರಿಗೆ ಯೋಜನೆಯ ಹಣ ತಲುಪುವುದು ತಡ ಆಗಲಿದೆ. ಆಗಸ್ಟ್ 28 ಅಥವಾ ಆಗಸ್ಟ್ 29ರಂದು ಈ ಯೋಜನೆಯ ಹಣವು DBT ಮೂಲಕ ಹೆಂಗಸರ ಬ್ಯಾಂಕ್ ಖಾತೆ (Bank Account) ತಲುಪುತ್ತದೆ.
ರಾಜ್ಯ ಸರ್ಕಾರವು ಹೆಣ್ಣುಮಕ್ಕಳಿಗಾಗಿ ತಂದಿರುವ ಈ ಯೋಜನೆಗೆ ಕೋಟ್ಯಾಂತರ ಹೆಣ್ಣುಮಕ್ಕಳು ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುವ ಮಹಿಳೆಯರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿತು, ಈ ಪಟ್ಟಿಯನ್ನು ರಾಜ್ಯದ ಆಹಾರ ಇಲಾಖೆಯ ಅಧಿಕೃತ ವೆಬ್ಸ್ಸೈಟ್ ನಲ್ಲಿ ನೋಡಿ, ಅರ್ಹತೆ ಹೊಂದಿರುವ ಮಹಿಳೆಯರು ಯಾರ್ಯಾರು ಎನ್ನುವುದನ್ನು ತಿಳಿದುಕೊಳ್ಳಬಹುದಿತ್ತು.
ಫ್ರೀ ಕರೆಂಟ್! ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಶಾಕಿಂಗ್ ವಿಚಾರ, ಸರ್ಕಾರದ ಹೊಸ ನಿರ್ಧಾರ
ಇದೀಗ ಸರ್ಕಾರವು ಅನರ್ಹ ಮಹಿಳೆಯರ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಈ ಪಟ್ಟಿಯನ್ನು ಕೂಡ https://ahara.kar.nic.in/Home/EServices ಆಹಾರ ಇಲಾಖೆಯ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅನರ್ಹರ ಪಟ್ಟಿಯನ್ನು ಕೂಡ ಚೆಕ್ ಮಾಡಬಹುದು. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ, ಹೆಸರು ಇಲ್ಲ ಎಂದರೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬಹುದು.
ಒಂದು ವೇಳೆ ಅನರ್ಹರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ, ನಿಮ್ಮ ಅಪ್ಲಿಕೇಶನ್ ನಲ್ಲಿ ಅಥವಾ ನೀವು ಕೊಟ್ಟಿರುವ ಮಾಹಿತಿಯಲ್ಲಿ ಏನೋ ತಪ್ಪಾಗಿದೆ ಎಂದು ಅರ್ಥ. ಒಂದು ವೇಳೆ ಈ ರೀತಿ ಆದರೆ ತಪ್ಪು ಸರಿಪಡಿಸಿಕೊಂಡು, ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯಲು ಮಹಿಳೆಯರು ಏನು ಮಾಡಬೇಕು ಎನ್ನುವುದರ ಬಗ್ಗೆ ಸರ್ಕಾರ ತಿಳಿಸಬೇಕಿದೆ.
Government has released the list of ineligibles of Gruha Lakshmi Scheme