ಫ್ರೀ ಕರೆಂಟ್! ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಶಾಕಿಂಗ್ ವಿಚಾರ, ಸರ್ಕಾರದ ಹೊಸ ನಿರ್ಧಾರ

ಜನರು ಈಗಾಗಲೇ ಗೃಹಜ್ಯೋತಿ ಯೋಜನೆಯ ಶೂನ್ಯ ಬಿಲ್ ಪಡೆದಿದ್ದಾರೆ. ಇದರಿಂದ ಜನರಿಗೆ ಬಹಳ ಸಂತೋಷ ಆಗಿದ್ದೇನೋ ನಿಜ, ಇನ್ನುಮುಂದೆ ಉಚಿತ ವಿದ್ಯುತ್ ಪಡೆಯಬಹುದು ಎಂದು ಸಂತೋಷಪಟ್ಟಿದ್ದರು.

ಕಾಂಗ್ರೆಸ್ ಸರ್ಕಾರವು ಈಗ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳ ಪೈಕಿ, ಮುಖ್ಯವಾದ ಯೋಜನೆಗಳಲ್ಲಿ ಒಂದು ಗೃಹಜ್ಯೋತಿ ಯೋಜನೆ (Gruha Jyothi Scheme) ಆಗಿದೆ. ಈ ಯೋಜೆನೆಯ ಮೂಲಕ ರಾಜ್ಯದ ಎಲ್ಲಾ ಜನರ ಮನೆಗೆ 200 ಯೂನಿಟ್ ವರೆಗು ಉಚಿತ ವಿದ್ಯುತ್ (Free Electricity) ಕೊಡುವುದಾಗಿ ಭರವಸೆ ನೀಡಿತ್ತು.

ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿ, ಜುಲೈ ನಲ್ಲೇ ಅರ್ಜಿ ಸಲ್ಲಿಸಿರುವವರಿಗೆ ಆಗಸ್ಟ್ ಇಂದ ಉಚಿತ ವಿದ್ಯುತ್ ಬಿಲ್ (Free Electricity Bill) ಬರುತ್ತದೆ ಎಂದು ಹೇಳಲಾಗಿತ್ತು.

ಹಲವು ಜನರು ಈಗಾಗಲೇ ಗೃಹಜ್ಯೋತಿ ಯೋಜನೆಯ ಶೂನ್ಯ ಬಿಲ್ (Zero Bill) ಪಡೆದಿದ್ದಾರೆ. ಇದರಿಂದ ಜನರಿಗೆ ಬಹಳ ಸಂತೋಷ ಆಗಿದ್ದೇನೋ ನಿಜ, ಇನ್ನುಮುಂದೆ ಉಚಿತ ವಿದ್ಯುತ್ ಪಡೆಯಬಹುದು ಎಂದು ಸಂತೋಷಪಟ್ಟಿದ್ದರು.

ಫ್ರೀ ಕರೆಂಟ್! ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಶಾಕಿಂಗ್ ವಿಚಾರ, ಸರ್ಕಾರದ ಹೊಸ ನಿರ್ಧಾರ - Kannada News

ಅನ್ನಭಾಗ್ಯ ಯೋಜನೆ ವಿಷಯದಲ್ಲಿ ಸರ್ಕಾರದಿಂದ ಬಿಗ್ ಅಪ್ಡೇಟ್! ಅಕ್ಕಿ ವಿಚಾರದಲ್ಲಿ ಮಹತ್ವದ ನಿರ್ಧಾರ

ಆದರೆ ಜಿ ಪರಮೇಶ್ವರ್ ಅವರು ಈಗ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದ ಹಾಗೆ ಒಂದು ಶಾಕಿಂಗ್ ವಿಚಾರ ನೀಡಿದ್ದಾರೆ. ರಾಜ್ಯದ ಎಲ್ಲಾ ಜನರ ಮನೆಗೆ ಉಚಿತ ವಿದ್ಯುತ್ ನೀಡುವುದರಿಂದ, ಇದು ಸರ್ಕಾರದ ಮೇಲೆ ಹೆಚ್ಚು ಹೊರೆ ಆಗಲಿದ್ದು, ಇಂಥ ಸಮಯದಲ್ಲಿ ಲೋಡ್ ಶೆಡ್ಡಿಂಗ್ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

ನಮಗೆಲ್ಲ ಗೊತ್ತಿರುವ ಹಾಗೆ ಈ ವರ್ಷ ಮಳೆಗಾಲದಲ್ಲಿ ಸರಿಯಾಗಿ ಮಳೆ ಬಂದಿಲ್ಲ. ಹಾಗಾಗಿ ವಿದ್ಯುತ್ ಉತ್ಪಾದನೆ ಕೂಡ ಅಂದುಕೊಂಡ ಹಾಗೆ ನಡೆದಿಲ್ಲ, ಕಡಿಮೆ ವಿದ್ಯುತ್ ಉತ್ಪಾದನೆ ಆಗಿದೆ, ಹಾಗಾಗಿ ಲೋಡ್ ಶೆಡ್ಡಿಂಗ್ ಮಾಡಬೇಕಾಗಿ ಬರಬಹುದು ಎಂದು ಜಿ ಪರಮೇಶ್ವರ್ ಅವರು ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ತುಮಕೂರು ಬಂದಿದ್ದ ಪರಮೇಶ್ವರ್ ಅವರು, ವಿದ್ಯುತ್ ಉತ್ಪಾದನೆ ಕಡಿಮೆ ಆಗಿರುವುದರಿಂದ, ಲೋಡ್ ಶೆಡ್ಡಿಂಗ್ ಮಾಡಬೇಕಾಗಿ ಬರಬಹುದು ಎಂದಿದ್ದಾರೆ.

Gruha Jyothi Schemeಮಳೆ ಕಡಿಮೆ ಆಗಿ ವಿದ್ಯುತ್ ಉತ್ಪಾದನೆ ಕಡಿಮೆ ಆಗಿದೆ, ರಾಜ್ಯದ 11 ಜಿಲ್ಲೆಗಳಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆಗಿದೆ..ಹಾಗಾಗಿ ಜನರಿಗೆ ಉಚಿತ ವಿದ್ಯುತ್ ನೀಡಬೇಕು ಎಂದರೆ ಲೋಡ್ ಶೆಡ್ಡಿಂಗ್ ಮಾಡುವುದು ಅವಶ್ಯಕವಾಗಿದೆ.

ಮಳೆ ಅತಿ ಕಡಿಮೆ ಇರುವ ಊರುಗಳನ್ನು ಬರಪೀಡಿತ ಪ್ರದೇಶ ಎಂದು ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ. ಪ್ರಸ್ತುತ ತುಮಕೂರಿನಲ್ಲಿ ಕೂಡ 35% ರೈತರು ಬಿತ್ತನೆ ಕೆಲಸ ಶುರು ಮಾಡಿದ್ದಾರೆ. ಇನ್ನುಳಿದ ರೈತರು ಮಾಡಿಲ್ಲ. ಕಾರಣ ಮಳೆಯ ಅಭಾವ ಆಗಿದೆ.

ಹಾಗಾಗಿ ತುಮಕೂರನ್ನು ಬರಪೀಡಿತ ಪ್ರದೇಶ ಎಂದು ಗುರುತಿಸಲಾಗುವುದು, ಜೊತೆಗೆ ಬೇರೆ ಊರುಗಳಲ್ಲಿ ಮಳೆ ಪ್ರಮಾಣ ನೋಡಿ ಬರ ಪೀಡಿತ ಪ್ರದೇಶ ಎಂದು ಗುರುತಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ವರದಿಗಳ ಮೂಲಕ ಗೊತ್ತಾಗಿರುವುದು ಏನು ಎಂದರೆ ನಮ್ಮ ರಾಜ್ಯದ 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯವಾಗಿ ಮಳೆ ಉಂಟಾಗಿದೆ. 2022ರಲ್ಲಿ ನಮ್ಮ ರಾಜ್ಯದ ಡ್ಯಾಮ್ ಗಳಲ್ಲಿ ಹೆಚ್ಚು ನೀರು ತುಂಬಿತ್ತು.

ಆದರೆ ಈ ವರ್ಷ ಕೆ.ಆರ್.ಎಸ್ ಮತ್ತು ಕಬಿನಿ ಡ್ಯಾಮ್ ಗಳಲ್ಲಿ ನೀರು ಅರ್ಧಕ್ಕಿಂತ ಕಡಿಮೆ ಆಗಿದೆ ಎಂದು ಆಗಸ್ಟ್ 11ರಂದು ಮಾಹಿತಿ ಸಿಕ್ಕಿದೆ. ಈ ಕಾರಣಕ್ಕೆ ವಿದ್ಯುತ್ ಉತ್ಪಾದನೆ ಕಡಿಮೆ ಆಗಿ, ಲೋಡ್ ಶೆಡ್ಡಿಂಗ್ ಮಾಡಬೇಕಾಗುತ್ತದೆ ಎಂದು ಸಚಿವರಾದ ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.

ಇನ್ನು ರಾಜ್ಯ ಸರ್ಕಾರ ತಂದಿರುವ ಈ ಎಲ್ಲಾ ಗ್ಯಾರೆಂಟಿ ಯೋಜನೆಗಳಿಂದ ಪ್ರತಿ ವರ್ಷ ಸರ್ಕಾರಕ್ಕೆ ₹52,000 ಕೋಟಿ ಖರ್ಚು ಬೀಳುತ್ತದೆ ಎಂದು ತಿಳಿಸಿದ್ದಾರೆ.

Big Update for Gruha Jyothi Yojana beneficiaries

Follow us On

FaceBook Google News

Big Update for Gruha Jyothi Yojana beneficiaries